ಜುಲೈ, ಅಕ್ಟೋಬರ್ 27: ಅಕ್ಟೋಬರ್ ತಿಂಗಳಿನಲ್ಲಿ ಭರ್ಜರಿ ರಜಾದಿನಗಳನ್ನು (ಬ್ಯಾಂಕ್ ರಜಾದಿನಗಳು) ಕಂಡ ಬ್ಯಾಂಕುಗಳಿಗೆ ನವೆಂಬರ್ ನಲ್ಲಿ ಹೆಚ್ಚಿನ ರಜೆಗಳಿಲ್ಲ. ಆರ್ಬಿಐ (ಆರ್‌ಬಿಐ) ಕ್ಯಾಲೆಂಡರ್ ಪ್ರಕಾರ ನವೆಂಬರ್ 11 ರಂದು ಬ್ಯಾಂಕುಗಳಿಗೆ ರಜೆ ಇದೆ. ಶನಿವಾರ ಮತ್ತು ಭಾನುವಾರದ ರಜೆಗಳೂ ಸೇರಿವೆ. ಪ್ರಾದೇಶಿಕ ವಿಶೇಷ ರಜೆಗಳೂ ಇವೆ. ಗುರುನಾನಕ್ ಜಯಂತಿ, ಕನ್ನಡ ರಾಜ್ಯೋತ್ಸವ, ಕನಕದಾಸ ಜಯಂತಿ ಇತ್ಯಾದಿ ಹಬ್ಬ, ಹರಿದಿನ, ಉತ್ಸವಗಳು ನವೆಂಬರ್ ನಲ್ಲಿ ಇವೆ. ನವೆಂಬರ್‌ನಲ್ಲಿ ಐದು ಶನಿವಾರ ಮತ್ತು ಐದು ಭಾನುವಾರಗಳಿವೆ. ಈ ಎರಡು ಶನಿವಾರಗಳು ಬ್ಯಾಂಕುಗಳಿಗೆ ರಜೆ ಇವೆ.
2025ರ ನವೆಂಬರ್ ತಿಂಗಳಿನಲ್ಲಿ ಬ್ಯಾಂಕ್ ರಜಾದಿನಗಳು
- ನ. 1, ಶನಿವಾರ: ಕನ್ನಡ ರಾಜ್ಯೋತ್ಸವ/ ಹರ್ಯಾಣ ದಿನ / ಪುದುಚೇರಿ ದಿನ / ಕುತ್ (ಕರ್ನಾಟಕ, ಹರಿಯಾಣ, ಪುದುಚೇರಿ, ಮಣಿಪುರ ರಾಜ್ಯಗಳಿಗೆ ರಜೆ)
- ನ. 2: ಭಾನುವಾರದ ರಜೆ
- ನ. 5, ಬುಧವಾರ: ಕಾರ್ತಿಕ ಪೂರ್ಣಿಮಾ/ ಗುರುನಾನಕ್ ಜಯಂತಿ (ಹೆಚ್ಚಿನ ರಾಜ್ಯಗಳಿಗೆ ರಜೆ)
- ನ. 7, ಶುಕ್ರವಾರ: ವಂಗಲಾ ಹಬ್ಬ (ಮೇಘಾಲಯದಲ್ಲಿ ರಜೆ)
- ನ. 8, ಶನಿವಾರ: ಕನಕದಾಸ ಜಯಂತಿ ಹಾಗೂ ಎರಡನೇ ಶನಿವಾರ
- ನ. 9: ಭಾನುವಾರದ ರಜೆ
- ನ. 11, ಮಂಗಳವಾರ: ಲಹಬಾಬ್ ಡುಚೆನ್ ಹಬ್ಬ (ಸಿಕ್ಕಿಂನಲ್ಲಿ ರಜೆ)
- ನ. 16: ಭಾನುವಾರದ ರಜೆ
- ನ. 22: ನಾಲ್ಕನೇ ಶನಿವಾರ
- ನ. 23: ಭಾನುವಾರದ ರಜೆ
- ನ. 30: ಭಾನುವಾರದ ರಜೆ
ಇದನ್ನೂ ಓದಿ: ನಿಮ್ಮನ್ನು ಬೇಡ ಎನ್ನುವ ಜಾಗದಲ್ಲಿ ಯಾಕಿರುತ್ತೀರಿ, ಭಾರತಕ್ಕೆ ಬನ್ನಿ: ಅನಿವಾಸಿ ಭಾರತೀಯರಿಗೆ ಶ್ರೀಧರ್ ವೆಂಬು ಕರೆ
ಕರ್ನಾಟಕದಲ್ಲಿ ನವೆಂಬರ್ನಲ್ಲಿ ಬ್ಯಾಂಕ್ ರಜಾದಿನಗಳು
ಕರ್ನಾಟಕದಲ್ಲಿ ಏಳು ಭಾನುವಾರ ಮತ್ತು ಶನಿವಾರಗಳನ್ನು ಸೇರಿಸಿ ಒಟ್ಟು 9 ದಿನಗಳು ರಜೆ ಇವೆ. ನವೆಂಬರ್ 1 ರಂದು ರಾಜ್ಯೋತ್ಸವ ನಿಮಿತ್ತ ರಜೆ ಇದೆ. ನವೆಂಬರ್ 5, ಬುಧವಾರ ಗುರುನಾನಕ ಜಯಂತಿ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
- ನ. 1, ಶನಿವಾರ: ಕನ್ನಡ ರಾಜ್ಯೋತ್ಸವ
- ನ. 2: ಭಾನುವಾರದ ರಜೆ
- ನ. 5, ಬುಧವಾರ: ಗುರುನಾನಕ್ ಜಯಂತಿ
- ನ. 8: ಎರಡನೇ ಶನಿವಾರ
- ನ. 9: ಭಾನುವಾರದ ರಜೆ
- ನ. 16: ಭಾನುವಾರದ ರಜೆ
- ನ. 22: ನಾಲ್ಕನೇ ಶನಿವಾರ
- ನ. 23: ಭಾನುವಾರದ ರಜೆ
- ನ. 30: ಭಾನುವಾರದ ರಜೆ
ಇದನ್ನೂ ಓದಿ: ಬೆಂಗಳೂರಿಗೆ ಹೋಗಿ ಬಂದಾಗೆಲ್ಲಾ ಉತ್ಸಾಹ ಇಮ್ಮಡಿಸುತ್ತೆ: ಮರ್ಸಿಡಸ್ ಬೆಂಜ್ ಸಿಐಒ ಓಲಾ ಕ್ಯಾಲೆನಿಯಸ್
ಬ್ಯಾಂಕುಗಳಿಗೆ ರಜೆ ಇದ್ದರೂ ಆನ್‌ಲೈನ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಸೇವೆಗಳು ಅಬಾಧಿತವಾಗಿ ಮುಂದುವರಿಯುತ್ತವೆ. ಎಟಿಎಂಗಳೂ ಕೂಡ ತೆರೆದಿರುತ್ತದೆ. ರಜಾ ದಿನಗಳಲ್ಲಿ ಬ್ಯಾಂಕ್ ಕಚೇರಿ ಮಾತ್ರ ಬಂದ್ ಆಗಿರುತ್ತದೆ. ಹೆಚ್ಚಿನ ಬ್ಯಾಂಕ್ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ. ಕ್ಯಾಷ್ ಡೆಪಾಸಿಟ್, ಆರ್ ಟಿಜಿಎಸ್ ಟ್ರಾನ್ಸ್ಫರ್, ಅಕೌಂಟ್ ಓಪನಿಂಗ್ ಇತ್ಯಾದಿ ಕಾರ್ಯಗಳಿಗೆ ಬ್ಯಾಂಕ್ ಕಚೇರಿ ತೆರೆಯುವವರೆಗೂ ಕಾಯಬೇಕಾಗಬಹುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ