Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ ಮಾಸಭವಿಷ್ಯ 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ ಮಾಸಭವಿಷ್ಯ 


ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗುತ್ತದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಗ್ರಹಿಕೆಯಲ್ಲಿ ಬದಲಾವಣೆಗಳನ್ನು ಕಾಣುತ್ತೀರಿ. ಇಷ್ಟು ಸಮಯ ಕಾಯ್ದು ಮುನ್ನಡೆಯೋಣ ಎಂದುಕೊಳ್ಳುತ್ತಿರುವವರಿದ್ದಲ್ಲಿ ಆ ನಿಲುವು- ಧೋರಣೆಯಲ್ಲಿ ಬದಲಾವಣೆ ಆಗಲಿದೆ. ಹಲವು ವಿಚಾರಗಳಲ್ಲಿ ನಿಮಗೆ ಸ್ಪಷ್ಟತೆ ದೊರೆಯಲಿದೆ. ಈ ಹಿಂದಿನ ಕಹಿ ಅನುಭವಗಳು, ಸೋಲುಗಳನ್ನು ಮರೆತು ಮುನ್ನುಗ್ಗಿ ಕೆಲಸ- ಕಾರ್ಯಗಳನ್ನು ಮಾಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಆಗಬೇಕಿರುವ ಕೆಲಸ- ಕಾರ್ಯಗಳನ್ನು ಮುಗಿಸಿಕೊಳ್ಳುವುದಕ್ಕೆ ನಿಮ್ಮ ಆಪ್ತರ ಅಥವಾ ಸ್ನೇಹಿತರ ಸಹಾಯಕ್ಕೆ ಬರಲಿದ್ದಾರೆ. ಇದ್ದರೆ ನಿಮಗೆ ಆದಾಯ ತರುವ ಮಾರ್ಗಗಳನ್ನು ಹುಡುಕಲಾಗಿದೆ. ನಿಮ್ಮ ಉದ್ಯೋಗ, ವೃತ್ತಿ ಅಥವಾ ವ್ಯಾಪಾರ- ವ್ಯವಹಾರಗಳಲ್ಲಿ ಇಷ್ಟು ಸಮಯ ನಿಮಗೇನಾದರೂ ಅಳುಕು ಅಥವಾ ಅನುಮಾನಗಳು ಕಾಡುತ್ತಿದ್ದವು. ಟ್ಯಾಕ್ಸ್ ರೀಫಂಡ್, ಜಿಎಸ್ ಟಿ ಫೈಲಿಂಗ್ ಈ ರೀತಿಯ ಕೆಲಸಗಳನ್ನು ಸಾಮಾನ್ಯಕ್ಕಿಂತ ಹೆಚ್ಚಿನ ಶ್ರದ್ಧೆಯಿಂದ ಮಾಡಿರಿ. ನಿಮ್ಮೊಂದಿಗೆ ಕೆಲಸ ಮಾಡುವವರ ಜೊತೆಗೋ ಅಥವಾ ಕೈ ಕೆಳಗೆ ಕೆಲಸ ಮಾಡುವವರ ಜೊತೆಗೋ ಅಭಿಪ್ರಾಯ ಭೇದಗಳು ಅಥವಾ ನಿಮಗೇನಾದರೂ ಆಕ್ಷೇಪಗಳು ಇದ್ದಲ್ಲಿ ಅವು ನಿವಾರಣೆ ಆಗಲಿವೆ. ಮುಖ್ಯವಾಗಿ ನೀವು ಬಹಳ ಚಟುವಟಿಕೆಯಿಂದ ಇರಲಿದ್ದೀರಿ. ಆಗಬೇಕಾದ ಕೆಲಸಗಳನ್ನು ನೀವೇ ಮುಂದೆ ನಿಂತು ಪೂರ್ಣಗೊಳಿಸಿದ್ದೀರಿ. ಈ ತಿಂಗಳಿನಲ್ಲಿ ನೀವೇ ವಹಿಸಿಕೊಂಡ ಕೆಲಸಗಳನ್ನು ಗಡುವಿನೊಳಗೆ ಮುಗಿಸುವುದು ಎಷ್ಟು ಅಗತ್ಯ ಎಂಬುದು ಬಲವಾಗಿ ಅರಿವಿಗೆ ಬರಲಿದೆ. ಚಿನ್ನದ ಮೇಲೆ ಹೂಡ

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ದೇವಿಯ ವಿಗ್ರಹ ಅಥವಾ ಫೋಟೋ ಮುಂದೆ ಸಕ್ಕರೆಯೋ ದ್ರಾಕ್ಷಿ- ಗೋಡಂಬಿ, ಬಾದಾಮಿಯ ನೈವೇದ್ಯವನ್ನು ಮಾಡಿ. ಪ್ರಮುಖ ದೇವಾಲಯಗಳ ಪಾರುಪತ್ತೆದಾರರಿಗೆ ಬಹಳ ಮುಖ್ಯವಾದ ಅವಧಿ ಇದಾಗಿದೆ. ಈ ಹಿಂದೆ ಪಟ್ಟ ಶ್ರಮದ ಫಲಿತಾಂಶವು ಈಗ ದೊರೆಯಲಿದೆ. ನಿಮ್ಮಲ್ಲಿ ಯಾರಿಗೆ ವಿಲಾಸಿ ಕಾರು ಖರೀದಿ ಮಾಡಬೇಕು ಎಂದು ಪ್ರಯತ್ನ ಇರುತ್ತದೋ ಅಂಥವರಿಗೆ ಖರೀದಿ ಮಾಡುವ ಯೋಗ ಇದೆ. ಒಂದು ವೇಳೆ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅಡೆತಡೆ ಆಗುತ್ತಿದೆ ಎಂದಾದಲ್ಲಿ ಅದು ನಿವಾರಣೆ ಆಗಲಿದೆ. ಎಟ್ ಹೊಟ್ಟೆ ಕಿಚ್ಚು ಪಡುವಷ್ಟರ ಮಟ್ಟಿಗಿನ ಕೆಲವು ಅವಕಾಶಗಳು ಹುಡುಕಿಕೊಂಡು ಬರಲಿವೆ. ಅದು ಉದ್ಯೋಗವೇ ಇರಬಹುದು, ಮದುವೆಯೇ ಇರಬಹುದು ಅಥವಾ ಸೈಟು- ಜಮೀನು ಖರೀದಿ ವಿಚಾರವಾದರೂ ಸರಿಯೇ ನಿಮಗೆ ಸಿಕ್ಕಂಥದ್ದರ ಬಗ್ಗೆ “ಅಯ್ಯೋ ನಮಗೆ ಇಂಥ ಚಾನ್ಸ್ ಸಿಗಲಿಲ್ಲವೇ?” ಎಂದು ಕರುಬಿದ್ದಾರೆ. ಈ ಕಾರಣಕ್ಕೆ ನಿಮಗೆ ದೃಷ್ಟಿ ದೋಷ ತಗುಲಬಹುದು. ಕಪ್ಪು ಬಟ್ಟೆ ಧರಿಸಬೇಡಿ. ನಿಮಗೆ ಹೆಮ್ಮೆ, ಖುಷಿ ಅಂತೆನಿಸಿದರೂ ಕೆಲವು ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಹೋಗಬೇಡಿ. ಇದನ್ನು ಮೀರಿಯೂ ನೀವೇನಾದರೂ ಹೇಳಿಕೊಂಡು ಬಂದರೆ ಅದರ ನಕಾರಾತ್ಮಕ ಫಲಿತಾಂಶವನ್ನು ಕಾಣಬಹುದಾಗಿದೆ. ನಿಮ್ಮಲ್ಲಿ ಕೆಲವು ಬ್ಯಾಂಕ್ ನಿಂದ ಚಿನ್ನದ ಮೇಲಿನ ಸಾಲ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಕಟ್ಟಿಸಿದ ಮನೆಯಲ್ಲಿ ಅದಕ್ಕೆ ಬೇಕಾದ ಇಂಟಿರಿಯರ್ ಡ

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಆರ್ಥಿಕ ಒತ್ತಡದಿಂದ ಬಳಲುತ್ತಿರುವವರಿಗೆ ಅದರಿಂದ ಹೊರಬರುವಂಥ ಮಾರ್ಗೋಪಾಯಗಳು ಗೋಚರವಾಗಲಿವೆ. ಇನ್ನು ನಿಮ್ಮಲ್ಲಿ ಉಪನ್ಯಾಸಕರು ಇದ್ದು, ಟ್ಯೂಷನ್ ಗಳನ್ನು ದೊಡ್ಡ ಮಟ್ಟದಲ್ಲಿ ನಡೆಸುತ್ತಿರುವವಿರೋ ಅಂಥವರು ಪ್ರಮುಖವಾದ ತೀರ್ಮಾನ ತೆಗೆದುಕೊಳ್ಳುವಂಥ ಸಾಧ್ಯತೆ ಇದೆ. ನನಗೆ ಮಾತ್ರ ಸೇರಿದ್ದು ಎಂದು ಇಷ್ಟು ಸಮಯ ನೀವು ಅಂದುಕೊಂಡಿದ್ದ ಆಸ್ತಿಯೋ ಅಥವಾ ಒಡವೆಯನ್ನೋ ಮತ್ತೊಬ್ಬರ ಜೊತೆಗೆ ಹಂಚಿಕೆ ಮಾಡಿಕೊಳ್ಳಬೇಕು ಎಂಬ ಸುದ್ದಿಯನ್ನು ನೀವು ಕೇಳಿಸಿಕೊಳ್ಳಬಹುದು. ಅಥವಾ ಅಂಥದ್ದೊಂದು ಸನ್ನಿವೇಶ ನಿರ್ಮಾಣ ಆಗಬಹುದು. ಕೆಲವು ದಿನಗಳ ಕಾಲ ರಜಾ ತೆಗೆದುಕೊಂಡರು, ಸ್ನೇಹಿತರು, ಸಂಬಂಧಿಗಳ ಮನೆಯ ಕಾರ್ಯಕ್ರಮಗಳಲ್ಲಿ ಭಾಗೀ ಆಗಿದ್ದರು. ನಿಮ್ಮಲ್ಲಿ ಯಾರ ಆಸ್ತಿ ವ್ಯವಹಾರಗಳು ಪೂರ್ಣಗೊಳ್ಳುವುದಕ್ಕೆ ನಿರೀಕ್ಷೆಯಿದೆ ಅಂಥವರಿಗೆ ಅದು ಅಂದುಕೊಂಡಂತೆಯೇ ಮುಗಿಯಲಿದೆ. ಸಂಗ್ರಹಣೆ ಅಥವಾ ಹೂಡಿಕೆ ಇದ್ದಲ್ಲಿ ಅದನ್ನು ತೆಗೆದು, ತಿಂಗಳ ನಿಶ್ಚಿತವಾದ ಆದಾಯ ಬರುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಸೈನ್ಯದಲ್ಲಿ ಇರುವವರಿಗೆ, ಪೊಲೀಸ್ ಉದ್ಯೋಗದಲ್ಲಿರುವವರಿಗೆ ಮನಸ್ಸಿಗೆ ಬೇಸರ ಆಗುವಂಥ ಕೆಲವು ಬೆಳವಣಿಗೆಗಳು ನಡೆಯಬಹುದು. ಈ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಆಗಬಹುದು. ತಂದೆ- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಬೇರೆ ಕೆಲಸಗಳಿವೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಅವರ ಆರೋಗ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಯೋಜನೆ ಮೇಲೆ ಹೊಸದಾಗಿ ಕೆಲವು ಮುಖ್ಯ ಕರ್ತವ್ಯಗಳನ್ನು ನಿಮಗೆ ನೀಡುವ ಸಾಧ್ಯತೆಗಳಿವೆ. ಅದರಲ್ಲಿಯೂ ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಹೆಚ್ಚುವರಿಯಾಗಿ ಜವಾಬ್ದಾರಿಯನ್ನು ವಹಿಸುವ ಸಾಧ್ಯತೆಗಳಿವೆ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಮಿಡ್ಲ್ ಮ್ಯಾನೇಜ್ ಮೆಂಟ್ ಹಂತದಲ್ಲಿ ಕೆಲಸ ಮಾಡುವವರಿಗೆ ಬಡ್ತಿಯ ನಿರೀಕ್ಷೆಯಲ್ಲಿಯೂ ಇದ್ದೀರಿ ಹಾಗೂ ಆ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಅಂತಾ ಅಂದುಕೊಂಡಂತೆ ಉತ್ತಮ ಬೆಳವಣಿಗೆ ಆಗಲಿದೆ. ಮನೆಯಲ್ಲಿ ಚಿನ್ನದ ಒಡವೆಗಳು- ಬೆಳ್ಳಿ ವಸ್ತುಗಳನ್ನು ಸರಿಯಾಗಿ ಪರಿಶೀಲಿಸುವುದು ಕ್ಷೇಮ. ಇನ್ನು ನೀವೇನಾದರೂ ಮನೆ ನಿರ್ಮಾಣದ ಕಾಂಟ್ರಾಕ್ಟ್ ಗಳನ್ನು ಕೆಲಸ ಮಾಡುವಲ್ಲಿ ಹೊಸದಾಗಿ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರಲಿವೆ. ನೀವು ಸಹ ಹೊಸ ಹುಮ್ಮಸ್ಸಿನಿಂದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೀರಿ. ಇನ್ನು ಈ ವೇಳೆ ಕೊಟ್ಟಿರುವ ಸರ್ಕಾರದ ಗುತ್ತಿಗೆ ಕೆಲಸಕ್ಕೆ ಆದಾಯ ಬರುವುದು ತಡವಾಗುತ್ತದೆ ಅಂತಾದರೆ ಅದನ್ನು ಕೂಡ ಈ ತಿಂಗಳಿನಲ್ಲಿ ಪಡೆದುಕೊಳ್ಳುವ ಸಾಧ್ಯತೆ ಇದೆ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ನಿಮ್ಮ ಬಳಿ ಇರುವ ಸೈಟು ಅಥವಾ ಜಮೀನು ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ನೀವು ಮಾರಾಟಕ್ಕೆ ಇಟ್ಟ ತಕ್ಷಣ ಅದರ ಖರೀದಿಗೆ ಗ್ರಾಹಕರು ದೊರೆಯಲಿದ್ದಾರೆ. ಅದರ ಜೊತೆಗೆ ನಿರೀಕ್ಷೆಯಂತೆಯೇ ಬೆಲೆ ಸಹ ದೊರೆಯಲಿದೆ. ಕುಟುಂಬದ ಸದಸ್ಯ

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ತಿಂಗಳ ಅವಧಿ ಹೆಚ್ಚಾಗಲಿದೆ. ನಿಮ್ಮದು ಆದಷ್ಟು ಇತರರ ಕೆಲಸಕ್ಕಾಗಿ ಸಹ ಸಮಯ, ಶ್ರಮ, ಹಣವನ್ನು ಮೀಸಲಿಟ್ಟು ಓಡಾಟ ನಡೆಸಬೇಕಾದ ಸನ್ನಿವೇಶ ಬರಲಿದೆ. ಅತ್ತೆ ಅಥವಾ ನಾದಿನಿ ಜೊತೆಗೆ ಅಭಿಪ್ರಾಯ ಭೇದಗಳು, ಮನಸ್ತಾಪಗಳು ಇದ್ದಲ್ಲಿ ಅದು ನಿವಾರಣೆ ಮಾಡಿಕೊಳ್ಳುವುದಕ್ಕೆ ಬೇಕಾದ ವೇದಿಕೆ ದೊರೆಯಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಗೌರವ- ಸನ್ಮಾನಗಳು ದೊರೆಯುವ ಯೋಗವಿದೆ. ಇನ್ನು ಬಹಳ ಸಮಯದಿಂದ ಸಂತಾನಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಈ ತಿಂಗಳ ಶುಭ ಸುದ್ದಿ ಕೇಳುವ ಯೋಗವಿದೆ. ಒಂದು ವೇಳೆ ಐವಿಎಫ್ ಮೂಲಕ ಪ್ರಯತ್ನ ಮಾಡುವುದರಿಂದ ಇಲ್ಲಿಯವರೆಗೆ ಏನಾದರೂ ಆರೋಗ್ಯಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ಅನುಭವಿಸುತ್ತಿದ್ದರೆ ಅಂತಾದರೆ ನಿವಾರಣೆ ಆಗಲಿದೆ. ಪಿತ್ರಾರ್ಜಿತವಾಗಿ ಬರಬೇಕಾದ ಆಸ್ತಿಗಳು ಏನಾದರೂ ಕೋರ್ಟ್- ಕಚೇರಿ ಮೆಟ್ಟಿಲೇರಿದ್ದಲ್ಲಿ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ಸಿದ್ಧ ಪಡಿಸಿದರು. ಇನ್ನು ದೀರ್ಘ ಕಾಲದಿಂದ ಪ್ರೀತಿ- ಪ್ರೇಮದಲ್ಲದ್ದು, ಅದನ್ನು ಮದುವೆಯ ಹಂತಕ್ಕೆ ಒಯ್ಯುವ ಸಲುವಾಗಿ ಮನೆಯಲ್ಲಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದುಕೊಳ್ಳುತ್ತಿದ್ದರೆ ಈ ತಿಂಗಳು ಸಾಧ್ಯವಾಗಲಿದೆ. ಆದರೆ ಸಣ್ಣ ಮಟ್ಟದ ವಿರೋಧವನ್ನು ಎದುರಿಸಬೇಕಾದೀತು. ಆದರೆ ತೀರ ಆಗುವುದೇ ಇಲ್ಲ ಎಂಬಂಥ ಸನ್ನಿವೇಶವೇನೂ ಸೃಷ್ಟಿ ಆಗುವುದಿಲ್ಲ. ಚಾರ್ಟರ್ಡ್ ಅಕೌಂಟೆಂಟ್, ವಕೀಲರು, ವೈದ್ಯರಾಗಿ ವೃತ್ತಿ

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕಾರ್ಯಕ್ರಮಗಳ ಯೋಜನೆಯೋ ಅಥವಾ ಭವಿಷ್ಯದ ಯೋಜನೆಗಳೋ ಒಬ್ಬರೇ ತೀರ್ಮಾನ ತೆಗೆದುಕೊಳ್ಳಬೇಡಿ. ದಂಪತಿಗಳು ಅಥವಾ ಪ್ರೇಮಿಗಳ ಮಧ್ಯೆ ಜಗಳ- ಸಿಟ್ಟು ಕಾಣಿಸಿಕೊಳ್ಳಬಹುದು. ಈ ಸನ್ನಿವೇಶದಲ್ಲಿ ಹಿಂದೆ ನಿಮಗೆ ಇದ್ದ ಸಿಟ್ಟು, ಬೇಸರ ಎಲ್ಲವನ್ನೂ ಹೊರಗೆ ಹಾಕುವಂತೆ ಆಗುತ್ತದೆ. ಆದ್ದರಿಂದ ಮಾನಸಿಕ ನಿಯಂತ್ರಣ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಜೊತೆಗೆ ಉದ್ಯೋಗ ಸ್ಥಳದಲ್ಲಿ ಬಡ್ತಿ, ವೇತನಕ್ಕಾಗಿ ಮೇಲಧಿಕಾರಿಗಳೊಂದಿಗೆ ಅಥವಾ ಎಚ್‌ಆರ್‌ ಅಧಿಕಾರಿಗಳೊಂದಿಗೆ ಜೋರು ಧ್ವನಿಯಲ್ಲಿ ಮಾತುಕತೆ ಆಗುವ ಸಾಧ್ಯತೆಯಿದೆ. ನಿಮ್ಮ ಪರವಾಗಿ ಏನು ಹೇಳಬೇಕು ಅಂದುಕೊಂಡಿದ್ದೀರೋ ಅದನ್ನು ಸಮಾಧಾನದ ಧ್ವನಿಯಲ್ಲಿ ಹೇಳಲು ಪ್ರಯತ್ನಿಸಿ. ನಿಮಗೆ ಅನಿಸಿದ್ದನ್ನು ಒಂದು ಪಟ್ಟಿ ಮಾಡಿಕೊಂಡು, ಅದರ ಪ್ರಕಾರವೇ ಸಂಬಂಧಪಟ್ಟವರಿಗೆ ದಾಟಿಸಲು ಪ್ರಯತ್ನಿಸಿ. ನಿಮ್ಮ ತಕ್ಷಣದ ಉದ್ವೇಗ, ನೀವು ಬಳಸುವ ಪದಗಳು ನೆಗೆಟಿವ್ ಆದ ಪರಿಣಾಮ ಬೀರದಂತೆ ಎಚ್ಚರಿಕೆ ನೀಡಲಾಗಿದೆ. ಇನ್ನು ಸಾಯಿಕ್ಲಿಂಗ್, ಕ್ರಿಕೆಟ್ ಸೇರಿ ಮತ್ಯಾವುದಾದರೂ ಕ್ರೀಡೆಯನ್ನೋ ಅಥವಾ ಹವ್ಯಾಸವನ್ನೋ ಮಾಡಿಕೊಂಡಿದ್ದಲ್ಲಿ ಸಣ್ಣದಾದರೂ ದೈಹಿಕ ಸಮಸ್ಯೆ ಎದುರಾಗಬಹುದು. ಅತಿ ಉತ್ಸಾಹದಲ್ಲಿಯೋ ಅಥವಾ ಸ್ನೇಹಿತರ ಮಾತುಗಳಿಂದ ಉತ್ತೇಜಿತರಾಗಿ ಸಾಮಾನ್ಯ ಸಂದರ್ಭಕ್ಕಿಂತ ಹೆಚ್ಚಿನದು ಏನನ್ನೋ ಮಾಡುವುದಕ್ಕೆ ಹೋಗಬೇಡಿ. ಮೊಳಕೈ ಅಥವಾ ಭುಜದ ಮೂಳೆ ನೋವಿನಿಂದ ಬಹಳ ಸಂಕಟ ಪಡುವಂತೆ ಆಗಬಹುದು. ನಿರ್ಧಾರಗಳನ್ನು

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಬೆನ್ನು ನೋವು, ಕಾಲು ನೋವು ಅಥವಾ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಮುಂಜಾಗ್ರತೆ ತೆಗೆದುಕೊಳ್ಳಬೇಕು. ಈ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿ, ಅದರ ಫಾಲೋ ಪರೀಕ್ಷೆ ಮಾಡದೆ ಬಿಟ್ಟಿದ್ದಲ್ಲಿ ಅಥವಾ ವೈದ್ಯರು ನೀಡಿದ ಸೂಚನೆಯಂತೆ ನಡೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿರುವವರಿಗೆ ಹಳೇ ಆರೋಗ್ಯ ಸಮಸ್ಯೆಗಳು ಮರುಕಳಿಸುವ ಸಾಧ್ಯತೆಗಳಿವೆ. ಅದಕ್ಕಾಗಿ ಕೈ ಮೀರಿ ಖರ್ಚಾಗಲಿದೆ. ಇನ್ನು ಆಹಾರ ಪಥ್ಯದಲ್ಲೂ ಸರಿಯಾಗಿ ಇರುವುದು ತುಂಬ ಮುಖ್ಯ. ಇನ್ನು ಯಾವುದಾದರೂ ಕಾರ್ಯಕ್ರಮದಲ್ಲಿ ಅಥವಾ ಸಮಾರಂಭದಲ್ಲಿ ನೀವು ತುಂಬ ಸಹಜವಾಗಿ ಹೇಳಿದ ವಿಚಾರದಲ್ಲಿ ಮುಂದೆ ಮಾಡಿಕೊಂಡರು, ಕೆಲವರು ಕಟ್ಟಿಕೊಂಡು ಬಂದು, ಆ ಅಭಿಪ್ರಾಯ ಅಥವಾ ಧ್ವನಿಗೆ ಆಕ್ಷೇಪವನ್ನು ವ್ಯಕ್ತಪಡಿಸುವ ಬೆದರಿಕೆ ಒಡ್ಡಬಹುದು. ತಮ್ಮ ಮಾತಿನಂತೆಯೇ ನಡೆದುಕೊಳ್ಳಬೇಕು ಎಂದು ನಿಮ್ಮ ಮೇಲೆ ಒತ್ತಡ ಹಾಕುತ್ತಾರೆ, ಯಾವುದೇ ಉದ್ಯೋಗ ಸ್ಥಳದಲ್ಲಿ ಈ ಸಮಸ್ಯೆ ವಿಪರೀತವಾಗಬಹುದು. ರಂಗಭೂಮಿ, ಸಿನಿಮಾ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದಲ್ಲ ಒಂದು ವಿವಾದ ಮೈಮೇಲೆ ಬರುವಂತಹ ಸಾಧ್ಯತೆಗಳಿವೆ. ಆದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡಲಾಗುತ್ತಿದೆ ಮತ್ತು ಯಾವುದೇ ಮಾಧ್ಯಮಗಳಿಗೆ ನೀವು ನೀಡುವ ಸಂದರ್ಶನದಲ್ಲಿ ಏನು ಮಾತನಾಡುತ್ತಿದ್ದೀರಿ ಎಂಬುದರ ಬಗ್ಗೆ ನಿಗಾ ಇರಿಸಿಕೊಳ್ಳಿ. ರಿಯಲ್ ಎಸ್ಟೇಟ್ ಸೇರಿದಂತೆ ಯಾವು

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈಗಿರುವ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದು ಬಿಟ್ಟರೆ ಸಾಕು ಎಂಬ ಆಲೋಚನೆ ಒಳ್ಳೆಯದಲ್ಲ. ಶಾಶ್ವತವಾದ ಪರಿಹಾರದ ಕಡೆಗೇ ನಿಮ್ಮ ಗಮನ ಇರಲಿ. ನಿಮ್ಮ ಮೇಲಿನ ಒತ್ತಡದಲ್ಲಿ ಯಾವುದೇ ವ್ಯಕ್ತಿಯ ಬಳಿ ಕೆಲಸ ಮಾಡಬೇಕು ಎಂಬ ಸ್ಪಷ್ಟ ಚಿತ್ರಣ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹೇಗೋ ಈ ಸಮಯಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎಂಬ ಧೋರಣೆ ಬೇಡ. ಏಕೆಂದರೆ ಹಲ್ಲಿನ ವೈದ್ಯರ ಕಣ್ಣಿಗೆ ಕೈ ಹಾಕಬಾರದು ಎಂದು ಮಾತನಾಡಿದೆ. ಆದರೆ ನಿಮಗೆ ಕೆಲವು ಅಂಥ ವ್ಯಕ್ತಿಗಳು ಸಿಗಲಿದ್ದಾರೆ. ತಮಗೆ ಗೊತ್ತಿರುವಂಥದ್ದು ಅಥವಾ ಬರುವಂಥದ್ದನ್ನು ಬಿಟ್ಟು, ಉಳಿದೆಲ್ಲವನ್ನೂ ತಾನೇ ಮಾಡಿಕೊಡುವುದಾಗಿ ಭರವಸೆ ನೀಡುವ ಮಾತುಗಳನ್ನು ಆಡಲಿದ್ದಾರೆ. ಆದರೆ ಅವರಿಗೆ ತಮ್ಮ ಆದಾಯ ಹೆಚ್ಚಾಗಬೇಕು ಎಂಬುದಷ್ಟೇ ಗಮನದಲ್ಲಿರಲಿದೆ. ಅಷ್ಟನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು, ನಿಮಗೆ ಸಹಾಯ ಮಾಡುವವರಂತೆ ಹತ್ತಿರ ಆಗಲಿದ್ದಾರೆ. ಯಾರ ಅರ್ಹತೆ, ಯೋಗ್ಯತೆ ಏನು ಅಳೆಯುವುದರಲ್ಲಿ ಸೋತಿರೋ ದೊಡ್ಡ ಮೊತ್ತ, ಸಮಯ, ಗೌರವ, ಮರ್ಯಾದೆ ಎಲ್ಲವನ್ನೂ ಒಂದೇಟಿಗೆ ಕಳೆದುಕೊಳ್ಳುತ್ತದೆ. ನಿಮ್ಮ ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳುವಂಥ ಅವಕಾಶಗಳು ದೊರೆಯಲಿವೆ. ಸರ್ಕಾರಿ ಕೆಲಸಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಿ ಅಂತಾ ಹಿರಿಯರು, ಅನುಭವಿಗಳ ಮಾರ್ಗದರ್ಶನ ದೊರೆಯಲಿದೆ. ಅಷ್ಟೇ ಅಲ್ಲ, ಲಿಖಿತ ಪರೀಕ್ಷೆ, ಸಂದರ್ಶನಗಳಿಗೆ ಹೇಗೆ ಸಿದ್ಧತೆ ನಡೆಸಬೇಕು

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಯಾವುದನ್ನೂ ಸಲೀಸು, ಸುಲಭದ್ದು ಎಂಬ ಭಾವನೆ ಬೇಡ. ಒಂದು ಕ್ಷಣದ ಅತ್ಯುತ್ಸಾಹ, ಮೈ ಮರೆವು ಕೂಡ ದೊಡ್ಡ ಸಮಸ್ಯೆ ತಂದಿಟ್ಟಿತು. ಆದ್ದರಿಂದ ಸಮಚಿತ್ತದಿಂದ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಈ ಹಿಂದಿನ ಅನುಭವ ಎಷ್ಟೇ ಇರಬಹುದು ಅಥವಾ ನೀವು ಆ ವಿಷಯದಲ್ಲಿ ತುಂಬಾ ಪರಿಣತರಿದ್ದರೂ ಕೆಲಸ- ಕಾರ್ಯದಲ್ಲಿ ತೊಡಗಿಸಿಕೊಳ್ಳಲೇ ಇಲ್ಲ. ಗಡುವು ಮುಗಿಯುವ ಕೊನೆ ಕ್ಷಣದ ತನಕ ಯಾವುದನ್ನೂ ಕಾಯುತ್ತಾ ಕೂರಬೇಡಿ. ಅದೇ ರೀತಿ ಇದರಿಂದ ಏನಾದೀತು, ನನಗೆ ಹತ್ತಿರದವರು, ಆಪ್ತರು ಅವರಿಗೆ ನಾನು ಹೇಳಿಕೊಳ್ಳಬಹುದು ಎಂದು ಯಾವುದನ್ನೂ ಮುಂದಕ್ಕೆ ಹಾಕುತ್ತಾ ಹೋಗಬೇಡಿ. ಏಕೆಂದರೆ ಬೇಕಿದ್ದು- ಬೇಡದಿದ್ದು ಎಲ್ಲ ವಿಚಾರಗಳು ಈ ತಿಂಗಳಿನದೇ ಆದ ರೀತಿಯಲ್ಲಿ ಪ್ರಾಮುಖ್ಯತೆಯನ್ನು ನೀಡುತ್ತವೆ. ನೀವು ಬಹಳ ಮುಖ್ಯವಾದ ಕಾರ್ಯಕ್ರಮಕ್ಕೋ ಅಥವಾ ತುಂಬ ಸಮಯದಿಂದ ಹೋಗಬೇಕು ಎಂದುಕೊಂಡಿದ್ದ ಸ್ಥಳಕ್ಕೋ ಹಾಕಿದ್ದ ಪ್ರವಾಸವನ್ನು ಅನಿವಾರ್ಯವಾಗಿ ಅಥವಾ ಮುಂದಕ್ಕೆ ಹಾಕಬೇಕಾದ ಸನ್ನಿವೇಶ ಎದುರಾಗಬಹುದು. ಬೆನ್ನು ನೋವು, ಮೈಗ್ರೇನ್, ಕಣ್ಣಿಗೆ ಸಂಬಂಧಿಸಿದ ತೊಂದರೆಗಳು, ವೆರಿಕೋಸ್ ವೆನ್ಸ್ ಇಂಥ ಆರೋಗ್ಯ ಸಮಸ್ಯೆಗಳು ಈ ಕೆಳಗಿನಂತಿವೆ ಒಂದು ವೇಳೆ ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದಾದರೆ ತಕ್ಷಣ ಸೂಕ್ತ ವೈದ್ಯರಲ್ಲಿ ಪರೀ

ಲೇಖನ- ಎನ್.ಕೆ.ಸ್ವಾತಿ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *