ಬೆಂಗಳೂರು, (ಅಕ್ಟೋಬರ್ 27): ಕರ್ನಾಟಕ ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಚಿವ ಸಂಪುಟ ಪುನಾರಚನೆಯಾಗುವುದು ಖಚಿತವಾಗಿದೆ. ಆದರೆ, ಸಿಎಂ ಬದಲಾವಣೆ ಬಗ್ಗೆ ಭಾರೀ ಚರ್ಚೆಗಳು ಆಗುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಸಿಎಂ ಆಕಾಂಕ್ಷಿಯಾಗಿರುವ ಡಿಸಿಎಂ ಡಿಕೆ ಡಿಕೆ ನಿರಂತರ ದೆಹಲಿ ಪ್ರವಾಸ ಕುತೂಹಲಕ್ಕೆ ಕಾರಣವಾಗಿದೆ. ಇಂದು (ಅಕ್ಟೋಬರ್ 27) ದೆಹಲಿಗೆ ತೆರಳಿದ್ದ ಡಿಕೆ ಶಿವಕುಮಾರ್ ಭೇಟಿಗೆ ರಾಹುಲ್ ಗಾಂಧಿ ಸಮಯ ಕೊಟ್ಟಿಲ್ಲ. ಹೀಗಾಗಿ ಡಿಕೆಶಿ ದಿಲ್ಲಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದರೆ, ನವೆಂಬರ್ 11ರಂದು ಪ್ರತ್ಯೇಕ ಭೇಟಿಗೆ ಸಮಯ ಕೇಳಿದ್ದಾರೆ ಎಂದು ತಿಳಿಸಿದ್ದಾರೆ.
ನವೆಂಬರ್ 11 ರಂದು ಬಿಹಾರದಲ್ಲಿ 2ನೇ ಚರ್ಚೆ ನಡೆಯಲಿದ್ದು, ಅದೇ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ, ಅಧಿಕಾರ ಹಂಚಿಕೆ ಕುರಿತು ರಾಹುಲ್ ಗಾಂಧಿ ಜೊತೆ ಡಿಕೆಶಿ ನಡೆಯಲಿದೆ. ಇದರ ಜೊತೆಗೆ ಮುಂದಿನ ರಾಜಕೀಯ ಭವಿಷ್ಯ ಕುರಿತು ಸಹ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸದ್ಯ ನವೆಂಬರ್ 11ರವರೆಗೆ ಮೌನದಿಂದ ಇರುವಂತೆ ತನ್ನ ಬೆಂಬಲಿಗರಿಗೆ ಡಿಕೆ ಸೂಚಿಸಿದ್ದಾರೆ. ಇದರಿಂದ ಡಿಕೆ ದೆಹಲಿ ಪ್ರವಾಸ ಕುತೂಹಲ ಹೆಚ್ಚಿಸಿದೆ.