
ಚಿತ್ರರಂಗದಲ್ಲಿ (ಚಲನಚಿತ್ರ ಇಂಡಸ್ಟ್ರಿ) ಕೆಲಸ ಮಾಡಬೇಕು, ನಟಿಯಾಗಬೇಕು ಎಂಬುದು ಹಲವು ಯುವತಿಯರ ಆಸೆ. ಆದರೆ ಕಾಸ್ಟಿಂಗ್ ಕೌಚ್ ಎಂಬ ಪೆಡಂಭೂತ ಇಂಥಹ ಹಲವು ಪ್ರತಿಭಾವಂತ ಯುವತಿಯರನ್ನು ತಡೆಯುತ್ತಿದೆ. ಕಾಸ್ಟಿಂಗ್ ಕೌಚ್ ವಿರುದ್ಧ ಹೋರಾಟಗಳು ನಡೆಯುತ್ತಲೇ ಇವೆ, ಕಾನೂನು ಕಟ್ಟಳೆಗಳನ್ನು ಸಹ ಮಾಡಲಾಗಿದೆ. ಅದರೂ ಸಹ ಇದು ಸಂಪೂರ್ಣ ನಿಂತಿಲ್ಲ. ಇದೀಗ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಯುವತಿಯೊಬ್ಬರು ತಮಗೆ ಟಾಲಿವುಡ್ ನಲ್ಲಿ ಆದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ‘ಪೀಕು ನೆಮಿಲಿ’ ಹೆಸರಿನಲ್ಲಿ ಯುವತಿಯೊಬ್ಬರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ನಟಿ ಇದೀಗ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತೆಲುಗು ಚಿತ್ರರಂಗದಲ್ಲಿ ತಮಗೆ ಎದುರಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಖುದ್ದು ಹೇಳಿದ್ದಾರೆ. ಜೊತೆಗೆ, ಇಂಥಹಾ ಅಸುರಕ್ಷಿತ ಮತ್ತು ಭಯದ ವಾತಾವರಣ ಇರುವ ಕಾರಣಕ್ಕೆ ಎಷ್ಟೋ ಮಂದಿ ಯುವತಿಯರು ಚಿತ್ರರಂಗಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಅವರಿಗೆ ಇತರ ಕೆಲವು ಗೆಳೆಯರಿಂದ ಕೆಲವು ಸಹಾಯಕ ನಿರ್ದೇಶಕರು ನಂಬರ್ ಸಿಕ್ಕಿತು, ನಾನು ಒಬ್ಬರೊಟ್ಟಿಗೆ ಮಾತನಾಡಿದಾಗ ನಿಮ್ಮ ‘ಪೋರ್ಟ್ ಫೋಲಿಯೊ’ ಕಳಿಸಿ ಹೇಳಿದರು. ಅದರಂತೆ ನಾನು ನನ್ನ ಚಿತ್ರಗಳನ್ನು ತೆಗೆಸಿಕೊಂಡು ಅವರಿಗೆ ಕಳಿಸಿದೆ. ನಂತರ ಆ ವ್ಯಕ್ತಿ ಕರೆ ಮಾಡಿ, ‘ನೀವು ‘ಕಮಿಟ್ಮೆಂಟ್’ ಕೊಡುತ್ತೀರ ಎಂದು ಕೇಳಿದೆ, ಅದಕ್ಕೆ ನಾನು ನಟನೆ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದರು, ‘ಹೌದು ನಾನು ತುಂಬಾ ಕಮಿಟ್ಮೆಂಟ್ ಇರುವ ಯುವತಿ, ನಾನು ಪಾತ್ರಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸುತ್ತೇನೆ’ ಎಂದೆಲ್ಲ ಹೇಳಿದೆ ಯುವತಿ.
ಇದನ್ನೂ ಓದಿ:ತಗ್ಗದ ‘ಧುರಂಧರ 2’ ಚಿತ್ರದ ಅಬ್ಬರ; ಮುಂದಕ್ಕೆ ಹೋದ ದೊಡ್ಡ ಸಿನಿಮಾಗಳು
ಬಳಿಕ ಆ ವ್ಯಕ್ತಿ ಮತ್ತೆ ಕರೆ ಮಾಡಿ, ಒಬ್ಬ ಜನಪ್ರಿಯ ನಿರ್ಮಾಪಕ ನಿಮ್ಮನ್ನು ಭೇಟಿ ಮಾಡಲು ರೆಡಿ ಆಗಿದ್ದಾರೆ, ರೆಸಾರ್ಟ್ ಒಂದರಲ್ಲಿ ನಿಮ್ಮ ಮೀಟಿಂಗ್ ಫಿಕ್ಸ್ ಮಾಡಿದ್ದೇನೆ, ನೀವು ಫ್ಲೈಟ್ ಹತ್ತಿ ಬಂದುಬಿಡಿ ಎಂದನಂತೆ. ಜೊತೆಗೆ, ಪರೋಕ್ಷವಾಗಿ ನಿರ್ಮಾಪಕನ ಜೊತೆಗೆ ಸಮಯ ಕಳೆಯಬೇಕು ಎಂದು ಸಹ ಹೇಳಿದ್ದಾಳೆ ಎಂದು ಯುವತಿ ಹೇಳಿದ್ದಾಳೆ. ಬೇರೆ ಬೇರೆ ಸಂಖ್ಯೆಗಳಿಂದ ಆ ವ್ಯಕ್ತಿ ಮತ್ತೆ ಕರೆ ಮಾಡಿದಾಗಲೂ ಸಹ ಯುವತಿ ಬ್ಲಾಕ್ ಮಾಡಲಾಗಿದೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಇದೀಗ ಯುವತಿಯ ವಿಡಿಯೋ ವೈರಲ್ ಆಗಿದೆ. ತೆಲುಗು ಚಿತ್ರರಂಗದ ಜಾನ್ಸಿ ಸಹ ವಿಡಿಯೋಕ್ಕೆ ಕಮೆಂಟ್ ಮಾಡಿದ್ದು, ತೆಲುಗು ಚಿತ್ರರಂಗದ ನಟಿ ದೌರ್ಜನ್ಯ ತಡೆ ಸಮಿತಿಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಜಾನ್ಹವಿ ಸಹ ಈ ಸಮಿತಿಯ ಸದಸ್ಯೆ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆಯನ್ನು ಯುವತಿಗೆ ನೀಡಿದ್ದಾರೆ. ಆದರೆ ಯುವತಿ ಯಾವುದೇ ದೂರು ನೀಡಿದ್ದು ವರದಿ ಆಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(@piku_nemali)