ವಾಷಿಂಗ್ಟನ್, ಫೆಬ್ರುವರಿ 6: ಅಮೆರಿಕದಲ್ಲಿ ನಿರುದ್ಯೋಗ ಪರಿಸ್ಥಿತಿ (ಯುಎಸ್ ನಿರುದ್ಯೋಗ) ಆತಂಕಕಾರಿ ಮಟ್ಟ ತಲುಪಿದೆ. ಆರ್ಥಿಕ ತಜ್ಞರು ನಿರೀಕ್ಷಿಸುತ್ತಿರುವ ಹೆಚ್ಚಿನ ಕಳವಳಕಾರಿಯಾಗಿದೆ ಅಲ್ಲಿಯ ಉದ್ಯೋಗ ನಷ್ಟದ ತೀವ್ರತೆ ಎಂದು ಹೇಳಲಾಗಿದೆ. ಚಾಲೆಂಜರ್, ಗ್ರೇ ಆಂಡ್ ಕ್ರಿಸ್ಮಸ್ (ಸಿಜಿಸಿ) ಎಂಬ ಎಂಪ್ಲಾಯ್ಮೆಂಟ್ ಸರ್ವಿಸ್ ಕಂಪನಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜನವರಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಕಡಿತ ಮಾಡಲಾಗಿದೆ. ಇದು 2009 ರ ನಂತರ ಯಾವುದೇ ಜನವರಿ ತಿಂಗಳಲ್ಲಿ ಅಮೆರಿಕದಲ್ಲಿ ಕಂಡ ಅತಿಹೆಚ್ಚು ಉದ್ಯೋಗ ಕಡಿತದ ಸಂಖ್ಯೆ.
ಚಾಲೆಂಜರ್ ರಿಪೋರ್ಟ್ ಪ್ರಕಾರ 2026ರ ಜನವರಿಯಲ್ಲಿ 1,08,435 ಉದ್ಯೋಗಿಯಾಗಿದೆ. ಅಮೆರಿಕದ ಕಾರ್ಮಿಕ ಕ್ಷೇತ್ರ ಈ ಹಿಂದೆ ಮಾಡಿದ್ದ ಅಂದಾಜಿಗಿಂತ ಹೆಚ್ಚು ದುರ್ಬಲ ಸ್ಥಿತಿಯಲ್ಲಿರುವುದರ ಸೂಚಕ ಇದು ವಿಶ್ಲೇಷಕರು ಹೇಳುತ್ತಿದ್ದಾರೆ. ಎಂಪ್ಲಾಯ್ಮೆಂಟ್ ಸರ್ವಿಸಸ್ ಕಂಪನಿಯ ಈ ವರದಿ, ಸರ್ಕಾರದ ಲೇಬರ್ ಸ್ಟಾಟಿಸ್ಟಿಕ್ಸ್ ಬ್ಯೂರೋ ಬಿಡುಗಡೆ ಮಾಡಿದ ದತ್ತಾಂಶವೂ ಕೂಡ ಇಂಥದ್ದೇ ಸ್ಥಿತಿಯತ್ತ ಬೊಟ್ಟು ಮಾಡಿದೆ.
ಇದನ್ನೂ ಓದಿ: ರಿಪೋ ಬಡ್ಡಿದರ ಶೇ. 5.25ರಲ್ಲಿ ಮುಂದುವರಿಸಿದ ಆರ್ಬಿಐ
ಲೇಬರ್ ಡಿಪಾರ್ಟ್ಮೆಂಟ್ ಡಿಸೆಂಬರ್ ಡೇಟಾ
ಅಮೆರಿಕದ ಬ್ಯೂರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ಮತ್ತೊಂದು ದತ್ತಾಂಶದ ಡಿಸೆಂಬರ್ ತಿಂಗಳಿನಲ್ಲಿ ಜಾಬ್ ಓಪನಿಂಗ್ಸ್ 65 ಲಕ್ಷಕ್ಕೆ ಇಳಿಕೆಯಾಗಿದೆ. ನವೆಂಬರ್ನಲ್ಲಿ ಇದು 69 ಲಕ್ಷ ಇತ್ತು. ಡಿಸೆಂಬರ್ನಲ್ಲಿ ಜಾಬ್ ಓಪನಿಂಗ್ಸ್ ಅಥವಾ ಹೊಸ ಉದ್ಯೋಗಾವಕಾಶದಲ್ಲಿ 4 ಲಕ್ಷ ಕಡಿಮೆ ಆಗಿದೆ. 2020 ರ ನಂತರ ಇದು ಅತ್ಯಂತ ಕಡಿಮೆ ಮಟ್ಟದ ಜಾಬ್ ಓಪನಿಂಗ್ಸ್ ಎಂದು ಹೇಳಲಾಗುತ್ತಿದೆ.
ಎಡಿಪಿಯ ಖಾಸಗಿ ಎಚ್ಆರ್ ಸರ್ವಿಸ್ ಕಂಪನಿ ಬಿಡುಗಡೆ ಮಾಡಿದ ಮತ್ತೊಂದು ದತ್ತಾಂಶ ಕೂಡ ಅಮೇರಿಕಾದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿನ ಮಟ್ಟದಲ್ಲಿರುವುದನ್ನು ಸೂಚಿಸಿದೆ. ಎಡಿಪಿ ಬಿಡುಗಡೆ ಮಾಡಿದ ಡಾಟಾ ಪ್ರಕಾರ, ಖಾಸಗಿ ವಲಯದ ಕಂಪನಿಗಳು ಜನವರಿಯಲ್ಲಿ 22,000 ನೇಮಕಾತಿ ಮಾತ್ರ ಮಾಡಿಕೊಂಡಿವೆ.
ಇದನ್ನೂ ಓದಿ: ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ
ಜೊತೆಗೆ, ಮತ್ತೊಂದು ದತ್ತಾಂಶದ ಪ್ರಕಾರ ಜನವರಿಯಲ್ಲಿ ನಿರುದ್ಯೋಗ ವಿಮೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಇದೆ. ಇವೆಲ್ಲವೂ ಕೂಡ ಅಮೇರಿಕಾದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು ಗಂಭೀರ ಸ್ಥಿತಿಗೆ ಜಾರುವ ಲಕ್ಷಣಗಳನ್ನು ಸೂಚಿಸುತ್ತಿವೆ. ಆದರೆ, ಈ ದತ್ತಾಂಶಗಳು ನಿರುದ್ಯೋಗ ಹೆಚ್ಚುತ್ತಿರುವುದನ್ನು ಸಂಕೇತಿಸಿದರೆ, ಡಿಸೆಂಬರ್ ತಿಂಗಳ ನಿರುದ್ಯೋಗ ದರ ಶೇ. 4.4ರಷ್ಟು ಮಾತ್ರವೇ ಇದೆ. ಇದು ಕಳವಳಕಾರಿ ಎಂದು ಹೇಳುವಷ್ಟು ದೊಡ್ಡ ಮಟ್ಟದ ನಿರುದ್ಯೋಗ ಸಮಸ್ಯೆಯಲ್ಲ. ಆದರೆ, ಜನವರಿಯಿಂದ ಅಮೆರಿಕದಲ್ಲಿ ನಿರುದ್ಯೋಗ ದರ ಏರಿಕೆಯ ಟ್ರೆಂಡ್ಗೆ ಹೋಗುತ್ತಾ ಕಾದು ನೋಡಬಹುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ