Headlines

Numerology Horoscope 10th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 10ರ ದಿನಭವಿಷ್ಯ

Numerology Horoscope 10th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 10ರ ದಿನಭವಿಷ್ಯ


Numerology Horoscope 10th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 10ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ನಿಧಾನಗತಿಯ ಧೋರಣೆ, ಆಲೋಚನೆಯ ಬಗ್ಗೆ ಉದ್ಯೋಗ ಸ್ಥಳದಲ್ಲಿ ಹಿಯಾಳಿಸುವುದು, ಮೂದಲಿಕೆಯ ಮಾತುಗಳನ್ನು ಕೇಳಿಸಿಕೊಳ್ಳುವುದು. ಇತರರ ಜೊತೆಗೆ ನಿಮ್ಮನ್ನು ಹೋಲಿಸಿ, ಸಾಮರ್ಥ್ಯದ ಬಗ್ಗೆ ಹೀಗಳೆಯಬಹುದು. ಈ ದಿನ ಇಂಥ ಮಾತುಗಳಿಗೆ ಬಿರುಸಾದ ಉತ್ತರವನ್ನು ನೀಡುತ್ತೇನೆ ಎಂದು ಹೊರಡಬೇಡಿ. ಏಕೆಂದರೆ ನಿಮ್ಮ ಕೆಲವು ತಪ್ಪುಗಳಾಗಿ, ಬಹಳ ಸುಲಭವಾಗಿ ಅವಮಾನಕ್ಕೆ ಈಡಾಗುವ ಸಾಧ್ಯತೆಗಳಿವೆ. ಸಾಧ್ಯವಾದಷ್ಟೂ ತಾಳ್ಮೆ, ಸಂಯಮ ಹಾಗೂ ಸಮಾಧಾನದಿಂದ ಇರುವುದಕ್ಕೆ ಪ್ರಯತ್ನಿಸಿ. ಇತರರಿಂದ ಯಾವುದಾದರೂ ಸಾಲದ ಮೊತ್ತವನ್ನು ಹೇಳಿದ ಸಮಯಕ್ಕೆ ಹಿಂತಿರುಗಿಸಲು ಪ್ರಯತ್ನಿಸಿ. ಇನ್ನು ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಸಾಲದ ಕಂತುಗಳನ್ನು ನಿಗದಿತ ದಿನಾಂಕಕ್ಕೆ ಕೊಡುವ ಕಡೆಗೆ ಲಕ್ಷ್ಯ ನೀಡಿ. ನೀವು ಅದನ್ನು ಮರೆತು, ಆ ನಂತರ ಪರಿತಪಿಸುವಂತೆ, ಎಚ್ಚರ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಸಮಯ ಗಮನ, ಮುಂಜಾಗ್ರತೆಯಿಂದ ತೆಗೆದುಕೊಳ್ಳುವ ಎಚ್ಚರಿಕೆಗಳು, ಹಣಕಾಸು ವಿಷಯದಲ್ಲಿ ವಹಿಸಿದ ಜಾಗ್ರತೆ ಬಗ್ಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತದೆ. ಲೆಕ್ಕಪತ್ರ ಕಾರ್ಯ ನಿರ್ವಹಿಸುವವರಿಗೆ ಮೇಲಧಿಕಾರಿಗಳಿಂದ ಖುಷಿ, ಸಂತೋಷ ಇರುತ್ತದೆ, ವೇತನ ಹೆಚ್ಚಳ, ಬಡ್ತಿಯನ್ನು ನಿರೀಕ್ಷಿಸುತ್ತಿರುವವರಿಗೆ ಆ ಬಗ್ಗೆ ಮಾಹಿತಿ ದೊರೆಯುತ್ತದೆ. ಅಥವಾ ಜವಾಬ್ದಾರಿ ಹೊರುವುದಕ್ಕೆ ಸಿದ್ಧವಾಗುವಂತೆ ಸೂಚನೆ ಸಹ ನೀಡಬಹುದು. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳಿಬರಲಿದೆ. ವಧು ಅಥವಾ ವರನನ್ನು ನೋಡಿಕೊಂಡು ಬಂದಿದ್ದೇವೆ, ಒಪ್ಪುತ್ತಾರಾ ಇಲ್ಲ ಎಂದು ಉತ್ತರದ ನಿರೀಕ್ಷೆಯಲ್ಲಿ ಇದ್ದೇವೆ ಎಂಬುವವರಿಗೆ ಮನಸ್ಸು ಬಯಸುವಂಥ ಉತ್ತರ ದೊರೆಯಲಿದೆ. ಮಧುಮೇಹ ಅಥವಾ ಅನಾರೋಗ್ಯದ ಸಮಸ್ಯೆ ಇರುವವರು ಹೆಚ್ಚಿನ ಲಕ್ಷ್ಯ ವಹಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹಣಕಾಸು ವಿಚಾರದಲ್ಲಿ ಕಾಡುತ್ತಿರುವ ಗೊಂದಲಗಳು ಬಗೆಹರಿಯುವ ಎಲ್ಲ ಸಾಧ್ಯತೆಗಳಿವೆ. ನಿಮ್ಮೊಬ್ಬರಿಂದ ಏನಾದೀತು ಎಂಬಂತೆ ಆಡಿದ ಮಾತುಗಳಿಗೆ ಉತ್ತರ ಎಂಬಂತೆ ಕೆಲವು ಅಸಾಧ್ಯವಾದ ಕೆಲಸ- ಕಾರ್ಯಗಳನ್ನು ಮಾಡಿ, ಮುಗಿಸಲು ಸಫಲರಾಗುತ್ತೀರಿ. ವಿದೇಶಗಳಿಗೆ ಉದ್ಯೋಗ ನಿಮಿತ್ತ ತೆರಳಬೇಕು ಎಂದಿರುವವರಿಗೆ ಈ ತನಕ ಏನಾದರೂ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವರನ್ನು ನಿವಾರಿಸಿಕೊಳ್ಳುವುದಕ್ಕೆ ಅವಕಾಶಗಳಿವೆ. ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದು ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಅವಕಾಶಗಳು ಹೆಚ್ಚಿವೆ. ತರಕಾರಿ, ಹೂವು- ಹಣ್ಣಿನ ವ್ಯವಹಾರ, ಬ್ಯಾಂಗಲ್ ಸ್ಟೋರ್ಸ್ ನಡೆಸುತ್ತಿರುವವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬರುತ್ತದೆ. ಇನ್ನು ದೀರ್ಘಾವಧಿಯ ಆರ್ಡರ್ ಗಳು ಸಹ ದೊರೆಯುವ ಅವಕಾಶಗಳು ಹೆಚ್ಚಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಕುಟುಂಬದ ವ್ಯವಹಾರದಲ್ಲಿ ತೊಡಗಿರುವವರಿಗೆ ಸ್ವತಂತ್ರವಾಗಿ ವ್ಯಾಪಾರ- ಆರಂಭಿಸುವ ಬಗ್ಗೆ ಆಲೋಚನೆ ಮೂಡಬಹುದು. ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿರುವವರಿಗೆ ನಿಮಗೆ ಇಷ್ಟವಿಲ್ಲದ ವರ್ಗಾವಣೆ ಮಾಡುವ ಸಾಧ್ಯತೆಗಳಿವೆ. ಅಥವಾ ನಿಮಗೆ ಯಾರ ಜೊತೆಗೆ ವೈಮನಸ್ಯ ಇರುತ್ತದೋ ಅಂಥ ವ್ಯಕ್ತಿಗಳ ಕೈಕೆಳಗೆ ಅಥವಾ ಜತೆಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ನೀವು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ತಡವಾಗಿ ಕೆಲವು ಉದ್ಯೋಗಾವಕಾಶಗಳು ಕೈ ತಪ್ಪಿ ಹೋಗುವ ಸಾಧ್ಯತೆಗಳಿದ್ದು, ಅತಿ ಮುಖ್ಯವಾದ ವಿಚಾರಗಳು ಇದ್ದಲ್ಲಿ ತಡಮಾಡದೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು ಮದುವೆ ನಿಶ್ಚಯ ಆಗಿರುವವರು ಸಣ್ಣ- ಪುಟ್ಟ ವಿಚಾರಗಳಿಗಾಗಿ ಸಿಟ್ಟು ಮಾಡುವುದು, ಮಾತು ಬಿಡುವುದು ಇಂಥದ್ದನ್ನು ಮಾಡಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ವೃತ್ತಿಗೆ ಸಂಬಂಧಿಸಿದ ವಸ್ತುಗಳು ಅಥವಾ ಗ್ಯಾಜೆಟ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಮೊದಲಾದವುಗಳನ್ನು ಖರೀದಿಸಲು ಹಣ ಖರ್ಚು ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗಿದೆ. ಒಂದು ವೇಳೆ ಹಣಕಾಸಿನ ಕೊರತೆ ಕಂಡುಬಂದಲ್ಲಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳು ನೆರವಿಗೆ ನಿಲ್ಲಲಿದ್ದಾರೆ. ಒಂದು ವೇಳೆ ನೀವೇನಾದರೂ ಈಗ ಇರುವಂಥ ಮನೆಯನ್ನು ಖಾಲಿ ಮಾಡಿ, ಹೊಸ ಮನೆಗೆ ಹೋಗಬೇಕು ಎಂದುಕೊಳ್ಳುತ್ತಿದ್ದರೆ ಅಂದುಕೊಂಡಂತೆ ಮನೆ ದೊರೆಯುವ ಅವಕಾಶ ಹೆಚ್ಚಿಗೆ ಇದೆ. ಸಾಲ ಹಾಗೂ ಮನೆಯ ಬಜೆಟ್ ವಿಚಾರಕ್ಕೆ ಕುಟುಂಬದಲ್ಲಿ ಗಂಭೀರವಾದ ಚರ್ಚೆಗಳು ಆಗಲಿವೆ. ಈ ನೀವಾಡಿದ್ದ ಮಾತುಗಳು ಹಾಗೂ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಆಕ್ಷೇಪಗಳ ಹಿಂದೆ ಕಾಣಿಸುವ ಸಾಧ್ಯತೆಗಳು ಹೆಚ್ಚಿವೆ. ಇಂತಹ ಯಾವುದೇ ಬೆಳವಣಿಗೆಯಾದರೂ ಧೈರ್ಯಗುಂದಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮಗಿಂತ ಚಿಕ್ಕವರು, ಹುದ್ದೆಯಲ್ಲಿ ಕಡಿಮೆ ಇರುವವರು, ಅನುಭವದಲ್ಲಿಯೂ ಕಡಿಮೆ ಇರುವವರಿಂದ ಕೆಲವು ಮುಜುಗರದ ಮಾತುಗಳನ್ನು ಕೇಳಿಸಿಕೊಳ್ಳಲಾಗುತ್ತದೆ. ನಾಲ್ಕು ಜನರ ಮಧ್ಯೆಯೇ ಭಾರೀ ಅವಮಾನ ಆಗುವಂಥ ಸನ್ನಿವೇಶ ಎದುರಾಗಲಿದೆ. ಈ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು, ಆ ನಂತರ ಸರಿಯಾಗಿ ಆಲೋಚನೆ ಮಾಡಿ, ಮಾತನಾಡಿದರೆ ಒಳ್ಳೆಯದು. ಇನ್ನೇನು ಪ್ರಮುಖ ಹುದ್ದೆಯೊಂದು ನಿಮಗೆ ದೊರೆಯಲಿದೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು ಕೊನೆ ಕ್ಷಣದಲ್ಲಿ ಕೈ ತಪ್ಪಿದೆ ಎಂಬ ಮಾಹಿತಿ ನಿಮಗೆ ಬರಬಹುದು. ನಿಮಗೆ ಇಷ್ಟು ಸಮಯ ಹತ್ತಿರವಿರುವ ಮೇಲಧಿಕಾರಿ ನಿಮ್ಮ ಸಾಮರ್ಥ್ಯದ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿರುವ ಸನ್ನಿವೇಶಕ್ಕೆ ಬಹಳ ಕಾಣಿಸಿಕೊಂಡಿದ್ದಾರೆ. ಹಳೇ ದ್ವೇಷ ಸಾಧನೆಗೆ ಕೆಲವು ಗಟ್ಟಿಯಾಗಿ ಪ್ರಯತ್ನಿಸುತ್ತಿರುವುದು ನಿಮ್ಮ ಗಮನಕ್ಕೆ ಬರಲಿದೆ, ಇದಕ್ಕೆ ಏನೂ ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿ ನೀವಿರುತ್ತೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮಕ್ಕಳ ಆರೋಗ್ಯ, ಶಿಕ್ಷಣ, ಭವಿಷ್ಯ, ಮದುವೆ, ಉದ್ಯೋಗ ಇಂಥ ವಿಚಾರಗಳು ಈ ದಿನ ವಿಪರೀತ ಆದ್ಯತೆ ಪಡೆಯುತ್ತವೆ. ದೈನಂದಿನ ಕೆಲಸ- ಕಾರ್ಯಗಳಲ್ಲಿ ಹೆಚ್ಚು ಉತ್ಸಾಹದಿಂದ ತೊಡಗಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಾಗದೇ ಹೋಗಬಹುದು. ನಿಮ್ಮಲ್ಲಿ ಕೆಲವು ವಿಪರೀತ ಪ್ರಯಾಣಗಳು. ನೀವು ಇತರರನ್ನು ನಂಬಿಕೊಂಡು ವಹಿಸಿರುವ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಮುಗಿಯದ ಕಾರಣಕ್ಕೆ ಒತ್ತಡಕ್ಕೆ ಸಿಲುಕಿಕೊಳ್ಳುತ್ತವೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರು, ಚಾರ್ಟರ್ಡ್ ಅಕೌಂಟೆಂಟ್ ಗಳು, ವಕೀಲ ವೃತ್ತಿಯನ್ನು ಮಾಡುತ್ತಿರುವವರಿಗೆ ವರ್ಚಸ್ಸಿಗೆ ಪೆಟ್ಟು ಬೀಳುವಂಥ ಕೆಲವು ಘಟನೆಗಳು ನಡೆಯಲಿವೆ. ನೀವು ಈ ಹಿಂದೆ ಯಾವಾಗಲೋ ಹೇಳಿದ್ದು ಸುಳ್ಳು, ಆಡಿದ್ದ ಮಾತು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಮುಂದೆ ಮಾಡಿಕೊಂಡು ನಿಮ್ಮ ವಿರುದ್ಧ ಕೆಲವರು ಅಪಪ್ರಚಾರ ಮಾಡಲಿದ್ದಾರೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಮನೆಗೆ ಇಲಿಕ್ ಅಥವಾ ವಸ್ತುಗಳನ್ನು ತರುವಂಥ ಯೋಗ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು, ಕಂಪನಿಗಳ ಸಿಐಒ, ಸಿಒಒ ಇಂಥ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಹಳ ಒಳ್ಳೆ ದಿನ. ನಿಮ್ಮಲ್ಲಿ ಯಾರಾದರೂ ಸ್ಟಾರ್ಟ್ ಅಪ್ ಮಾಡಲು ಸಿದ್ಧತೆ ನಡೆಸುತ್ತಿದ್ದೀರಿ ಅಂತಾ ಬೇಕಾದ ಹಣಕಾಸಿನ ಅನುಕೂಲಗಳು ಒದಗಿ ಬರಲಿವೆ. ಅಥವಾ ಕಾನೂನಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಣ್ಣ- ಪುಟ್ಟ ಅಡೆತಡೆಗಳು ಕಾಡುತ್ತಿದ್ದಲ್ಲಿ ನಿವಾರಿಸಿಕೊಂಡು, ಮುಂದಕ್ಕೆ ಸಾಗಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಅವುಗಳ ವಿಸ್ತರಣೆಗೆ ಬಹಳ ಉತ್ತಮವಾದ ದಿನ ಇದಾಗಿದೆ. ಇನ್ನು ಸರಿಯಾದ ಸಂಪನ್ಮೂಲ ವ್ಯಕ್ತಿಗಳು, ಕೆಲಸಗಾರರನ್ನು ಹುಡುಕುತ್ತಿದ್ದಾರೆ ಅಂತಾದಲ್ಲಿ ಅಂಥವರು ಸಹ ದೊರೆಯಲಿದ್ದಾರೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸುಮ್ಮನೆ ಇದ್ದಿದ್ದರೆ ಆಗುತ್ತಿದೆ ಎಂದೆನಿಸುವಂಥ ಹಲವು ಘಟನೆಗಳು ಈ ದಿನ ನಡೆಯಲಿವೆ. ಅಂತರಂಗದ ವಿಚಾರವನ್ನು ಯಾರ ಬಳಿ ಹೇಳಿದರೂ ಅವರು ಅದನ್ನು ಹಲವರ ಬಳಿ ಹೇಳಿಕೊಂಡು ಬಂದಿದ್ದಾರೆ, ನಿಮಗೆ ಮುಜುಗರದ ಸನ್ನಿವೇಶವನ್ನು ತಂದೊಡ್ಡಲಿದ್ದಾರೆ. ಸಂಗಾತಿಯು ನಿಮ್ಮ ಧೋರಣೆ ಬಗ್ಗೆ ಬೇಸರ ವ್ಯಕ್ತಪಡಿಸಬಹುದು. ನೀವು ಬಳಸುವ ಭಾಷೆ, ಅದನ್ನು ಆಡಿದ ರೀತಿ ಹಾಗೂ ಇತರ ವಿಚಾರಗಳನ್ನು ಮುಂದಿಟ್ಟುಕೊಂಡು, ಹೀಯಾಳಿಸಬಹುದು. ಆದ್ದರಿಂದ ಗುಂಪು ಗುಂಪಾಗಿ ಜನರು ಇರುವ ಕಡೆಗೆ, ಒಂದು ಸಣ್ಣ ತಪ್ಪು ಮಾತು ಕೂಡ ದೊಡ್ಡ ಅವಮಾನಕ್ಕೆ ಕಾರಣ ಆಗುವಂಥ ಕಡೆಗೆ ಸುಮ್ಮನೆ ಇದ್ದರೆ ಒಳಿತು. ಪ್ರೀತಿ- ಪ್ರೇಮ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿದೆ, ಹಳೇ ಪ್ರೇಮ ಪ್ರಕರಣಗಳು ಮತ್ತೆ ಜೀವ ಪಡೆದುಕೊಳ್ಳಲಿವೆ. ನೀವಾಗಿಯೇ ಕರೆ ಮಾಡುವುದರ ಮೂಲಕ ಸಮಸ್ಯೆಯೊಂದು ಮೈ ಮೇಲೆ ಎಳೆದುಕೊಳ್ಳುವಂತೆ ಮಾಡಿದೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *