Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 3ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 3ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 3ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ದೇವತಾ ಕಾರ್ಯಗಳಲ್ಲಿ ಭಾಗವಹಿಸಿದ್ದರು. ನಿಮ್ಮಲ್ಲಿ ಕೆಲವರು ಮನೆ ದೇವರ ದೇವಸ್ಥಾನ ಅಥವಾ ಗ್ರಾಮದೇವತೆ ದೇವಸ್ಥಾನ, ಪೂಜೆ, ಜಾತ್ರೆ, ಅನ್ನ ಸಂತರ್ಪಣೆ ಇಂಥವುಗಳಿಗೆ ದೇಣಿಗೆ ಅಥವಾ ಪದಾರ್ಥಗಳನ್ನು ದಾನ ನೀಡುವಂಥದ್ದು. ನಿಮ್ಮಲ್ಲಿ ಯಾರ ದೊಡ್ಡ ಮಟ್ಟದ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುತ್ತೀರೋ ಅಂಥವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಹಣಕಾಸಿನ ವಿಚಾರಕ್ಕೆ ಇಕ್ಕಟ್ಟು ಕಾಣಿಸಿಕೊಂಡಿದ್ದಲ್ಲಿ ಅದರಿಂದ ಹೊರಬರುವುದಕ್ಕೆ ಮಾರ್ಗೋಪಾಯಗಳು ಗೋಚರವಾಗಲಿವೆ. ಒಂದು ವೇಳೆ ನಿಮ್ಮದೇ ಹಣ ಬರಬೇಕಿತ್ತು, ಅದಕ್ಕಾಗಿಯೇ ಕಾಯುತ್ತಾ ಇದ್ದೀರಿ ಅಂತಾ ಬರುವ ಸೂಚನೆಗಳು ದೊರೆಯಲಿವೆ ಅಥವಾ ಆ ಹಣ ಕೈಗೆ ತಲುಪುವ ಅವಕಾಶಗಳು ಸಹ ಇವೆ. ಸಂಶೋಧನೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಕಾಡಬಹುದು. ಆದರೆ ಇದು ತಾತ್ಕಾಲಿಕವಾದದ್ದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ವಿವಾಹಿತರಲ್ಲಿ ಸಂಗಾತಿಯ ಹಠಮಾರಿ ಧೋರಣೆ ಕಂಗೆಡಿಸಲಿದೆ. ನೀವು ಹೇಳು ವಿಚಾರ- ಸಲಹೆ ಸೂಕ್ತವಾಗಿದ್ದರೂ ಅದನ್ನು ಪಾಲಿಸುತ್ತಿಲ್ಲವಲ್ಲ ಎಂಬ ಸಂಗತಿಯು ಬೇಸರಕ್ಕೆ ಕಾರಣ ಆಗಬಹುದು. ಒಂದು ವೇಳೆ ನೀವೇನಾದರೂ ಸ್ನೇಹಿತರು- ನಿಮ್ಮಿಂದ ಸಾಲವನ್ನು ಪಡೆಯಲು ಬಯಸಿದ್ದಲ್ಲಿ ಈಗ ಹಿಂತಿರುಗಿ ಎಂದು ಕೇಳಲು ಬರುತ್ತಾರೆ. ಅವರು ನಿಮಗೆ ಹೆಚ್ಚಿನ ಸಮಯವನ್ನು ನೀಡುವುದಕ್ಕೆ ಸುತರಾಂ ಒಪ್ಪುವುದಿಲ್ಲ. ಈ ನೀವಾಗಿಯೇ ಇಂತಹ ದಿನಾಂಕದಲ್ಲಿ- ಸಮಯದಲ್ಲಿ ಹಣವನ್ನು ಹಿಂತಿರುಗಿಸುತ್ತೇನೆ ಎಂದಾದರೂ ಮಾತು ನೀಡಿದರೆ ಅದನ್ನು ಉಳಿಸಿಕೊಳ್ಳುವ ಲಕ್ಷ್ಯ- ಪ್ರಯತ್ನ ಇರಲಿ. ನಿಮ್ಮಲ್ಲಿ ಯಾರಿಗೆ ಥೈರಾಯ್ಡ್ ಸಮಸ್ಯೆ ಇದೆಯೋ ಅಂಥವರು ಆತಂಕಕ್ಕೆ ಒಳಗಾಗುವಂಥ ಕೆಲವು ಬೆಳವಣಿಗೆಗಳು ಆಗಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಆದಾಯ ತೆರಿಗೆ ರೀಫಂಡ್, ಸರ್ಕಾರದಿಂದ ಬರಬೇಕಾದ ಯಾವುದಾದರೂ ಹಣ, ನೀವು ಕೆಲಸ ಮಾಡಿದ್ದೀರಿ, ಅದು ನಿಮ್ಮ ಕೈಗೆ ತಲುಪಿಲ್ಲ ಎಂದಾದಲ್ಲಿ ಈ ದಿನ ನಿಮಗೆ ಬರುವ ಅವಕಾಶಗಳು ಹೆಚ್ಚಿವೆ. ಮನೆಯಲ್ಲಿ ಹಿರಿಯರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರಿಗೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ತರಬೇತಿಗೆ ಸೇರಿಸುವ ನಿರ್ಧಾರ ಮಾಡುವಂಥ ಯೋಗ ಈ ದಿನ ಇದೆ. ಇತ್ತೀಚೆಗೆ ಉದ್ಯೋಗ ಸ್ಥಳದಲ್ಲಿ ಆಗಿರುವ ಕೆಲವು ಬೆಳವಣಿಗೆಗಳ ಬಗ್ಗೆ ನಿಮ್ಮಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತುಂಬ ಕಡಿಮೆ ಖರ್ಚಿನೊಳಗೆ ಮಾಡಿ ಮುಗಿಸಬೇಕು ಎಂದು ನೀವು ಅಂದುಕೊಂಡಿದ್ದ ಕಾರ್ಯಕ್ರಮಕ್ಕೆ ಖರ್ಚು ಬರಲಿವೆ. ಇದರಿಂದ ಸ್ವಲ್ಪ ಮಟ್ಟಿಗೆ ನಿಮಗೆ ಒತ್ತಡ ಎದುರಾಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮಗೆ ಇಲ್ಲಿಯವರೆಗೆ ಯಾವ ವಿಚಾರದಲ್ಲಿ ಅನಿಶ್ಚಿತತೆ ಕಾಡುತ್ತಿರುತ್ತದೆಯೋ ಅದರಿಂದ ಹೊರಗೆ ಬರುವಂಥ ದಾರಿ ಈ ದಿನ ಗೋಚರವಾಗುತ್ತದೆ. ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಫೈನಾನ್ಷಿಯಲ್ ಪ್ಲಾನಿಂಗ್ ಇಂಥವುಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಾಧಾನ ದೊರೆಯುವಂಥ ಬೆಳವಣಿಗೆಗಳು ಆಗಲಿವೆ. ಕೆಲವು ತಾವಾಗಿಯೇ ನಿಮ್ಮ ಬಳಿ ಬಂದು, ಸಹಾಯವನ್ನು ಕೇಳಲಿದ್ದಾರೆ. ಹಣಕಾಸಿನ ಆದಾಯದ ದೃಷ್ಟಿಯಿಂದಲೂ ನಿಮಗೆ ಇದರಿಂದ ಅನುಕೂಲಗಳು ಆಗಲಿವೆ. ಇದೇ ಮೊದಲ ಬಾರಿಗೆ ಎಂಬಂತೆ ವ್ಯಾಪಾರ- ವ್ಯವಹಾರಗಳನ್ನು ಆರಂಭಿಸಿದವರಿಗೆ ಹಿಡಿತ ಸಿಕ್ಕಿರುವ ಸೂಚನೆ ದೊರೆಯಲಿದೆ, ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೌಟುಂಬಿಕ ವಿಚಾರದಲ್ಲಿ ನೀವು ಮೌನವಾಗಿ ಇದ್ದುಬಿಡುವುದಕ್ಕೆ ನಿರ್ಧರಿಸುವಂತೆ ಆಗುವ ಸನ್ನಿವೇಶಗಳು ಸೃಷ್ಟಿಯಾಗಲಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಮನಸ್ಸಿಗೆ ಬಹಳ ಹತ್ತಿರವಾದವರು ವಿಪರೀತ ನೆನಪಾಗಲಿದ್ದಾರೆ. ಒಂದೋ ಅವರಿಗೆ ಈ ದಿನ ಭೇಟಿಯೇ ಆಗಬೇಕು ಅಂತಲೋ ಅಥವಾ ಫೋನ್ ನಲ್ಲಿಯಾದರೂ ಮಾತನಾಡಬೇಕು ಎಂದು ಬಲವಾಗಿ ಅನಿಸಲಿದೆ. ನಿಮ್ಮಲ್ಲಿ ಕೆಲವು ಪುಸ್ತಕಗಳನ್ನು ಖರೀದಿಸಬಹುದು ಅಥವಾ ಒಟಿಟಿ ಸಬ್ ಸ್ಕ್ರಿಪ್ಷನ್ ಅನ್ನು ಪಡೆದುಕೊಳ್ಳಬಹುದು ಅಥವಾ ಹೊಸ ವೈಫೈ ಸಂಪರ್ಕ- ಒಂದು ವೇಳೆ ಲಭ್ಯವಿರುವಂತಹ ಕನೆಕ್ಷನ್‌ಗಳಲ್ಲಿ ಪ್ಲಾನ್ ಬದಲಾವಣೆ ಇಂಥವೇನಾದರೂ ಮಾಡಿ. ಆಯುರ್ವೇದ ಮೂಲಿಕೆಗಳ ಕೃಷಿ ಮಾಡಿ, ಅದರ ಮೂಲಕ ಆದಾಯ ಗಳಿಸುತ್ತಿರುವವರಿಗೆ ದೊಡ್ಡ- ಪ್ರತಿಷ್ಠಿತ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವ ಬರಬಹುದು. ಭೂಮಿ ಮೇಲೆ ಹೂಡಿಕೆ ಮಾಡಬೇಕು ಎಂದು ಸೂಕ್ತ ಸ್ಥಳಕ್ಕಾಗಿ ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಆರೋಗ್ಯ ಹಾಗೂ ದೇಹದಲ್ಲಿ ಒಂದಲ್ಲಾ ಒಂದು ಸಮಸ್ಯೆ, ಗಾಯ, ಸಣ್ಣ- ಪುಟ್ಟ ಅಪಘಾತ ನಿಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ. ಉದ್ಯೋಗ ಸ್ಥಳದಲ್ಲಿ ನೀವು ಅಂದುಕೊಂಡ ಸಂಗತಿಯನ್ನು ಅಂದುಕೊಂಡ ರೀತಿಯಲ್ಲಿ ಹೇಳಲು ಸಾಧ್ಯವಾಗದೆ ಹೋಗಬಹುದು. ಈ ದಿನ ಮುಖ್ಯವಾಗಿ ಯಾರ ಜೊತೆಗೂ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಹಳೇ ನೆನಪುಗಳು ಕಾಡುವುದರಿಂದ ಹಲವು ವರ್ಷಗಳ ಹಿಂದೆ ನೀವಿದ್ದ ಸ್ಥಳ, ತೆರಳಿದ್ದ ದೇವಸ್ಥಾನ, ಹೋಟೆಲ್ ಅಥವಾ ನದಿ- ಸಮುದ್ರ ಹೀಗೆ ಒಂದಲ್ಲಾ ಒಂದು ಸ್ಥಳಕ್ಕೆ ತೆರಳಬೇಕು ಎಂದು ಬಲವಾದ ಆಯ್ಕೆ ಮೂಡಲಿದೆ. ಕೆಲವು ಸಣ್ಣ- ಪುಟ್ಟದಾದರೂ ಕೈ ಸಾಲ ಕೇಳಿಕೊಂಡು ನಿಮ್ಮ ಬಳಿ ಬರಬಹುದು. ನಿಮ್ಮ ತಾಯಿ ಅಥವಾ ತಾಯಿ ಸಮಾನರಾದವರ ಕಡೆಯಿಂದ ಕೆಲವರು ಬಂದು, ತಮಗೆ ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ಕೇಳಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮದೇ ಮನೆಯಲ್ಲಿ ತಮ್ಮ ಅಭಿಪ್ರಾಯ, ತಮಗೆ ಬೇಕಾದ ಸಂಗತಿಗಳನ್ನು ಹೇರಲಾಗುತ್ತಿದೆ ಎಂದು ಬಲವಾಗಿ ನಿಮಗೆ ಅನಿಸಲಿದೆ. ಇದನ್ನು ಯಾರು ಸಂಬಂಧಪಟ್ಟವರು ಇದ್ದಾರೋ ಅವರಿಗೆ ಹೇಳುವಂಥ ಸಾಧ್ಯತೆಗಳು ಈ ದಿನ ಜಾಸ್ತಿ ಇವೆ. ಮಕ್ಕಳ ಕೆಲವು ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿ ವರ್ತನೆ ನಿಮ್ಮನ್ನು ಕೆರಳಿಸಲಿದೆ. ನಿಮ್ಮಲ್ಲಿ ಕೆಲವರ ಕಾರಣವೇ ಇಲ್ಲದೆ ಮಕ್ಕಳ ಮೇಲೆ ಸಿಟ್ಟನ್ನು ಸಹ ಮಾಡಿಕೊಳ್ಳಲಾಗಿದೆ. ಸರ್ಕಾರಿ ಕೆಲಸಗಳಲ್ಲಿ ಇರುವವರಿಗೆ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ, ವೈಯಕ್ತಿಕ ಕೆಲಸ-ಕಾರ್ಯಗಳ ಮೇಲೆ ಸ್ವಲ್ಪ ಗಮನ ಹರಿಸಲು ಸಾಧ್ಯವಿಲ್ಲದಂತಹ ಸನ್ನಿವೇಶ ಎದುರಾಗಲಿದೆ. ಇನ್ನು ಊಟ- ತಿಂಡಿ ವಿಚಾರಗಳಲ್ಲಿ ನೀವು ಬಹಳ ಸಮಯದಿಂದ ಹೋಗಬೇಕು ಅಂದುಕೊಂಡಿದ್ದ ಹೋಟೆಲ್ ಅಥವಾ ರೆಸ್ಟೋರೆಂಟ್ ಇಂಥ ಕಡೆಗಳಿಗೆ ತೆರಳುವಂಥ ಯೋಗ ಸಹ ನಿಮ್ಮ ಪಾಲಿಗೆ ಇರಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈ ದಿನ ಚುಚ್ಚುಮಾತುಗಳನ್ನು ಕೇಳುವಂತೆ ಆಗಲಿದೆ. ನಿಮ್ಮ ಎದುರಿಗೆ ಇರುವ ಆಡುವ ಮಾತುಗಳು ಕೇಳಿ, ಹೌದಲ್ಲವಾ ಅಂತ ಒಂದು ಕ್ಷಣ ಅನ್ನಿಸಿಬಿಡುವ ಅವಕಾಶಗಳು ಇವೆ. ಈ ಹಿಂದೆ ಯಾವಾಗಲೋ ನಿಮ್ಮಿಂದ ಆದ ತಪ್ಪು ನಿರ್ಧಾರ- ತೀರ್ಮಾನಗಳನ್ನು ನೆನಪಿಸಿಕೊಂಡು ಬಾಧೆ ಪಡುವಂತೆ ಆಗಲಿದೆ. ಕೆಲವು ಕಾರ್ಯಗಳು ಸರಿ ಮಾಡಿಬಿಡೋಣ ಎಂದು ಪ್ರಯತ್ನ ಮಾಡಿದರು ಅದು ರಂಪ- ರಾಮಾಯಣ ಆಗಬಹುದು. ಆದ್ದರಿಂದ ತಕ್ಷಣಕ್ಕೆ ಅನ್ನಿಸಿದ್ದನ್ನು ಮಾಡಿಬಿಡುತ್ತೇನೆ ಎಂದು ಹೊರಡಬೇಡಿ. ಈ ದಿನ ನಿಮ್ಮದಲ್ಲ ಅಂದು ಸುಮ್ಮನಿರುವುದು ಕ್ಷೇಮ. ನೀವು ಇರುವ ಸ್ಥಳದಿಂದ ದೂರದ ಪ್ರದೇಶಗಳಲ್ಲಿ ವ್ಯಾಪಾರ- ವ್ಯವಹಾರ ಮಾಡುವಿರಿ ಎಂದಾದಲ್ಲಿ ಅದರ ಬಗ್ಗೆ ನಿಮಗೆ ಲಕ್ಷ್ಯ ಹೆಚ್ಚಾಗಲಿದೆ. ಅಲ್ಲಿಗೇ ಹೋಗಿ ಕೆಲ ಸಮಯ ಇದ್ದು, ನಿಗ-ಲುಸ್ತುವಾರಿ ಮಾಡುವ ತೀರ್ಮಾನ ಮೇಲುಸ್ತುವಾರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸಮಯಕ್ಕೆ ನೀವು ತೆಗೆದುಕೊಂಡ ನಿರ್ಧಾರಕ್ಕೆ ಕುಟುಂಬ ಸದಸ್ಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಲಿದೆ. ನೀವಾಡುವ ಮಾತು ಇತರರಲ್ಲಿ ಧೈರ್ಯ ತುಂಬಲಿದೆ, ಎಲ್ಲರೂ ನಿಮ್ಮ ಕಡೆಗೆ ಮೆಚ್ಚುಗೆಯಿಂದ ನೋಡುವಂತೆ ಆಗಲಿದೆ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ಇರುವ ಹಳೇ ವಸ್ತುಗಳು, ಪಾತ್ರೆಗಳ ರಿಪೇರಿಗಾಗಿ ಹಣ ಖರ್ಚು ಮಾಡುವ ಯೋಗ ಇದೆ. ಅಥವಾ ನಿಮ್ಮ ಸ್ನೇಹಿತರೋ- ಪಡೆದೋ ತಮ್ಮ ಮನೆಯಲ್ಲಿ ಇರುವಂಥದ್ದನ್ನು ನೀವು ತೆಗೆದುಕೊಂಡು ಹೋಗಿ ಉಪಯೋಗಿಸಿ ಅಂತಲೂ ಹೇಳಬಹುದು. ಕಾಲಿನ ಬೆರಳುಗಳ ಸಂದಿಯಲ್ಲಿ ಫಂಗಸ್ ಅಥವಾ ಯಾವುದಾದರೂ ಸೋಂಕು- ಇನ್ ಫೆಕ್ಷನ್ ಆಗುವಂಥ ಸಾಧ್ಯತೆಗಳಿವೆ. ಆದ್ದರಿಂದ ಅದರ ಸೂಚನೆ ಅಥವಾ ಸಾಧ್ಯತೆಗಳಿದ್ದರೂ ಮುನ್ನೆಚ್ಚರಿಕೆಯನ್ನು ವಹಿಸಿ. ಈ ಸಮಸ್ಯೆ ಇದೆ ಎಂದಾದಲ್ಲಿ ಸೂಕ್ತವಾಗಿ ಪಡೆದುಕೊಳ್ಳಿ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *