Numerology Horoscope 6th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 6ರ ದಿನಭವಿಷ್ಯ

Numerology Horoscope 6th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 6ರ ದಿನಭವಿಷ್ಯ


Numerology Horoscope 6th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 6ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಯಾವುದು ನಿರಂತರ ಎಂಬ ಅದಮ್ಯವಾದ ವಿಶ್ವಾಸದಲ್ಲಿ ಇರುತ್ತೀರಿ, ಅಂಥದ್ದೊಂದು ನಂಬುಗೆ ಅಲುಗಾಡುವಂಥ ಸನ್ನಿವೇಶಗಳು ಈ ದಿನ ಎದುರಾಗಬಹುದು. ಬಹಳ ದೊಡ್ಡ ಸಂಖ್ಯೆಯಲ್ಲಿ ಇರುವ ಜನರ ಗುಂಪೊಂದು ನಿಮ್ಮ ಅಭಿಪ್ರಾಯಕ್ಕೆ ಮನ್ನಣೆಯೇ ಸಿಗದಂತೆ ಮಾಡಲು ಪ್ರಯತ್ನಿಸಬಹುದು. ಮೇಲುನೋಟಕ್ಕೆ ಏನೋ ಸರಿಯಿಲ್ಲ ಎಂಬ ಗುಮಾನಿ ಬರುವಂಥ ಸ್ಥಳದಲ್ಲಿ ಮಾತನಾಡಲು ಹೋಗಬೇಡಿ. ನಿಮಗೇ ಸಂದೇಹಗಳಿವೆ ಎಂಬ ವಿಷಯದ ಬಗ್ಗೆಯಂತೂ ತುಟಿ ಕೂಡ ಬಿಚ್ಚುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರು ಪ್ರತಿಷ್ಠೆಗೋಸ್ಕರ ಅಥವಾ ಇತರರ ಮೇಲಿನ ಸಿಟ್ಟಿಗೋಸ್ಕರ ದೊಡ್ಡ ಮಟ್ಟದ ಕೆಲವು ಖರ್ಚುಗಳನ್ನು ಮಾಡಲು ಮುಂದಾಗಬಹುದು. ಇಂಥದ್ದನ್ನು ಮಾಡುವುದನ್ನು ಸಾಧ್ಯವಾದಷ್ಟೂ ನಿಲ್ಲಿಸಿ. ಒಂದು ವೇಳೆ ನೀವೇನಾದರೂ ಕ್ರೆಡಿಟ್ ಕಾರ್ಡ್ ಹೆಚ್ಚಿಗೆ ಬಳಸುವವರು ಅಂತಾ ಎಚ್ಚರಿಕೆಯಿಂದ ಇರಬೇಕು.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ತಂದೆಯವರ ಅಥವಾ ತಂದೆ ಸಮಾನರಾದವರ ಆರೋಗ್ಯ ಅಥವಾ ಆರ್ಥಿಕ ಸ್ಥಿತಿಗೆ ಚಿಂತೆ ಆಗಬಹುದು. ಈ ಹಿಂದೆ ಮಾಡಿ ಮುಗಿಸಿದ ಕೆಲಸಗಳು ಕೆಲವನ್ನು ಮೊದಲು ಆರಂಭ ಮಾಡಬೇಕಾದ ಸನ್ನಿವೇಶ ಬರಬಹುದು ಎಂಬ ಸುಳಿವು ನಿಮಗೆ ದೊರೆಯಲಿದೆ. ನಿಮ್ಮಿಂದ ಸಹಾಯದ ಅವಶ್ಯಕತೆ ಇದೆ, ಇಂಥ ಸಮಯಕ್ಕೆ ಬರುವುದಾಗಿ ಹೇಳಿದ್ದವರು ಬಹಳ ಮುಂಚೆಯೇ ಬಂದು, ನಿಮಗಿರುವ ಇತರ ಕೆಲಸಗಳು ಒತ್ತಡ ಆಗುವುದಕ್ಕೆ ಕಾರಣ ಆಗಬಹುದು. ಯಾರಿಗೆ ಆದರೂ “ಆಯಿತು, ಮಾಡಿಕೊಡ್ತೀನಿ” ಎಂಬ ಮಾತನ್ನು ಹೇಳಲು ಮುಂಚೆ ಸಾವಿರ ಬಾರಿ ಯೋಚಿಸಿ. ಯಾವ ನಿರ್ಧಾರದಿಂದ ನಿಮಗೆ ಹೆಸರು ಬರಬಹುದು ಎಂದು ಭಾವಿಸಿರುತ್ತೀರೋ ಆ ಬಗ್ಗೆ ಆಕ್ಷೇಪಗಳನ್ನು ಕೇಳಿಸಿಕೊಳ್ಳುವಂತೆ ಆಗಲಿದೆ. ಈ ದಿನ ಸಾಧ್ಯವಾದಷ್ಟು ಮುಕ್ತವಾದ ಮನಸ್ಸಿನಿಂದ ಎಲ್ಲವನ್ನೂ ಸ್ವೀಕರಿಸುವ ಕಡೆಗೆ ಲಕ್ಷ್ಯವಿರಲಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸಂತೋಷ ಹಾಗೂ ಬೇಸರ ಹೀಗೆ ಎರಡೂ ರೀತಿಯ ಭಾವನೆ, ಮಿಶ್ರ ಭಾವನೆಗಳು ಇರಲಿ. ನಿಮಗೆ ಸಿಗುವಂಥ ಯೋಗ ಇದೆ. ಇದೇ ವೇಳೆ ನೀವು ಬಹಳ ನಿರೀಕ್ಷೆ ಮಾಡುವ ವ್ಯಕ್ತಿಯ ಜೊತೆಗೆ ಮಾತು ಬಿಟ್ಟಿರುವುದೋ ಅಥವಾ ಜಗಳ ಆಗಿರುವುದೋ ಬೇಸರ ಕೂಡ ನೀಡಲಿದೆ. ನಿಮ್ಮ ತಂದೆ- ತಾಯಿಯಿಂದ ಮೆಚ್ಚುಗೆಯ ಮಾತುಗಳನ್ನು ಕೇಳಿಸಿಕೊಳ್ಳಲಾಗಿದೆ. ನಿಮ್ಮಲ್ಲಿ ಕೆಲವರು ದೇವಸ್ಥಾನಗಳಿಗೆ ಕಾಣಿಕೆ ನೀಡುವುದು, ಕುಟುಂಬದ ಸದಸ್ಯರಿಗೆ ಬೇಕಾದ ಕೆಲವು ವಸ್ತುಗಳನ್ನು ಕೊಡಿಸುವುದು ಇಂಥದ್ದು ಸಹ ಈ ದಿನ ಮಾಡಲಾಗಿರುತ್ತದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಈ ವಿಷಯವನ್ನು ತಿಳಿಸಬೇಕು ಎಂದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಮೂರನೇ ವ್ಯಕ್ತಿಗಳ ಮೂಲಕ ಕುಟುಂಬ ಸದಸ್ಯರಿಗೆ ಈ ವಿಚಾರ ತಿಳಿಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮಗೆ ಬರಬೇಕಾದ ಹಣ ಬಾರದೆ ಆತಂಕ ಶುರುವಾಗುತ್ತದೆ. ನೀವು ಉದ್ಯೋಗ ಮಾಡುವ ಸ್ಥಳದಲ್ಲಿ ಸರಿಬಾರದ ವಿಷಯವನ್ನು ಹೇಳಬೇಕು ಎಂದು ಚಡಪಡಿಕೆ ಆಗಲಿದೆ. ನಿಮ್ಮ ಕಣ್ಣಂದಾಜಿನಲ್ಲಿಯೇ ಗುರುತಿಸಬಹುದಾದ ರೀತಿಯಲ್ಲಿ ಕೆಲವು ಬದಲಾವಣೆಗಳು ಆಗಲಿವೆ ಎಂಬುದು ತಿಳಿದು ಬರಲಿದೆ. ದಿಢೀರ್ ಅಂತ ದೂರ ಪ್ರಯಾಣ ಮಾಡಬೇಕು ಎಂದಾದಲ್ಲಿ ಸರಿಯಾದ ಸಿದ್ಧತೆಯನ್ನು ಮಾಡಿಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ. ನಿಮ್ಮಲ್ಲಿ ಯಾರು, ಪ್ರಾಣಾಯಾಮ ಇಂಥದ್ದನ್ನು ಕಲಿಸುವುದರ ಮೂಲಕ ಆದಾಯವನ್ನು ಗಳಿಸಿದ್ದಾರೆ ಅಂತಾದಲ್ಲಿ ಅದರಲ್ಲಿ ಯೋಗ ಆಗಲಿದೆ. ಯಾವ ವೃತ್ತಿಯಲ್ಲಿ ಅದರ ಹೆಚ್ಚುವರಿ ಸೇವೆಗಳನ್ನು ಸೇರಿಸಬೇಕು ಎಂದು ಯೋಚಿಸಿದರೆ ಈ ದಿನ ಈ ಪ್ರಯತ್ನಗಳು ಫಲ ನೀಡುವುದಕ್ಕೆ ಪ್ರಾರಂಭವಾಗುತ್ತವೆ. ಈ ಬಗೆಗಿನ ಕೆಲವು ನಿರ್ಧಾರಗಳು ನಿಮಗೆ ಸಮಾಧಾನ ನೀಡಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಜೀವನಶೈಲಿಯನ್ನು ಕಡ್ಡಾಯವಾಗಿ ಬದಲಿಸಿಕೊಳ್ಳಲೇಬೇಕು ಎಂಬ ಸನ್ನಿವೇಶ ಸೃಷ್ಟಿಯಾಗಲಿದೆ. ಈ ಹಿಂದಿನ ನಿಮ್ಮ ನಡವಳಿಕೆ, ಸ್ವಭಾವ ಮತ್ತು ತೆಗೆದುಕೊಂಡ ತೀರ್ಮಾನಗಳ ಬಗ್ಗೆ ವಿಶ್ಲೇಷಣೆಯನ್ನು ಪ್ರಾರಂಭಿಸಲಾಗಿದೆ. ನಿಮ್ಮ ಸ್ನೇಹಿತರಿಂದ ಅಗತ್ಯವಾದ ನೆರವು, ಸಲಹೆ ಸೂಚನೆಗಳು ಸಿಗಲಿವೆ. ಇತರರಿಗೆ ಸುಲಭಕ್ಕೆ ಹೊಳೆಯದ ಕೆಲವು ಸಂಗತಿಗಳು ಹೊಳೆಯಲಿವೆ. ಮನೆಯ ಖರ್ಚು-ವೆಚ್ಚಗಳಿಗೆ ಬೇಕಾದ ಮೂಲವನ್ನು ಹುಡುಕಲು ಗಂಭೀರವಾದ ಪ್ರಯತ್ನಗಳನ್ನು ಮಾಡಲಾಗಿದೆ. ನಿಮ್ಮಲ್ಲಿ ಈಗಿರುವ ಉದ್ಯೋಗವೋ ವೃತ್ತಿ ವ್ಯಾಪಾರವೋ ಏನೇ ಇದ್ದರೂ ಅದರ ಜೊತೆಗೆ ಹೊಸದಾದ ಆದಾಯದ ಮೂಲವನ್ನು ಸೇರಿಸಿಕೊಳ್ಳಿ. ನಿಮ್ಮ ಬಳಿಯಿರುವ ವಸ್ತು ಆಪ್ತರೊಬ್ಬರಿಗೆ ಬಳಕೆ ಮಾಡುವ ಸಲುವಾಗಿ ಕೊಡುವಂಥ ಸಾಧ್ಯತೆ ಈ ದಿನ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನೀವು ಸ್ವಾವಲಂಬಿಗಳು ಆಗಬೇಕು, ಆದಾಯಕ್ಕಾಗಿ ಇತರರನ್ನು ಎದುರು ನೋಡಬಾರದು ಎಂಬ ಭಾವನೆ ಈ ದಿನ ಹೊಸ ಹೊಸ ಆಲೋಚನೆಗಳನ್ನು ತರಲಿವೆ. ನಿಮ್ಮ ಕಷ್ಟದ ದಿನಗಳಲ್ಲಿ ಹಂಗಿಸಿದ್ದು, ಮೂಡಲಿಸುವ ಮಾತುಗಳನ್ನಾಡಿದ್ದು ನೆನಪಾಗಿ ವಿಪರೀತ ಕಾಡಲಿವೆ. ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವುದಕ್ಕೆ ಬೇಕಾದ ಸಿದ್ಧತೆಗಳನ್ನು ಪ್ರಾರಂಭಿಸಿದೆ. ನೀವು ಮಾಡಿದ ನಿರ್ಧಾರಕ್ಕೆ ಬೇಕಾದ ಸಂಪನ್ಮೂಲ ಸಂಗ್ರಹಕ್ಕೆ ಹೆಚ್ಚು ಸಮಯವನ್ನು ಮೀಸಲಿಡಲಾಗಿದೆ. ಇತರರಿಗೆ ಸಹಾಯ ಮಾಡಿ, ಅದು ನೀವು ಹಾಕಿದ ಶ್ರಮದ ನಿರರ್ಥಕತೆ ಎಂದಾದರೂ ಭಾವಿಸಿದರೆ ಅದು ಬದಲಾಗುವಂತೆ ನಿಮಗೆ ನೆರವು ದೊರೆಯಲಿದೆ. ಕ್ರಿಯೇಟಿವ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಮೊದಮೊದಲಿಗೆ ಹಿಂಜರಿಕೆ ಮಾಡಿದಂತೆ ಕೆಲವು ಕೆಲಸಗಳನ್ನು ಒಪ್ಪಿಕೊಳ್ಳಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮಗೆ ತಿಳಿಯದಂತೆ ಅಥವಾ ನಿಮ್ಮ ತನಕ ವಿಷಯ ಬಾರದೆ ತುಂಬ ತಡವಾಗಿ ಸ್ನೇಹಿತರೋ- ಸಮಸ್ಯೆಗೆ ಸಿಲುಕಿದವರು ಮೂರನೇ ವ್ಯಕ್ತಿಯಿಂದ ತಿಳಿದು ಬರುತ್ತಾರೆ. ಉದ್ಯೋಗ ನಿಮಗೆ ವಹಿಸಿದ ಜವಾಬ್ದಾರಿಗಳನ್ನು ಸಮಯ ತೆಗೆದುಕೊಳ್ಳುತ್ತದೆ. ನಿಮ್ಮಲ್ಲಿ ಯಾರ ಮನೆ ನಿರ್ಮಾಣ ಮಾಡುತ್ತಿದ್ದೀರೋ ಅಂಥವರಿಗೆ ಯಾವುದಾದರೂ ಸಂಬಂಧಪಟ್ಟ ಇಲಾಖೆಯಿಂದ ನೋಟಿಸ್ ನೀಡುವ ಸಾಧ್ಯತೆ ಇದೆ. ಇನ್ನು ಕೆಲವರಿಗೆ ಅಧಿಕಾರಿಗಳ ಮೂಲಕ ಎಚ್ಚರಿಕೆ ಸಹ ಬರಬಹುದು. ಇಂಥದ್ದು ಏನೇ ಆದರೂ ತಕ್ಷಣಕ್ಕೆ ವಿಪರೀತವಾಗಿ ರಿಯಾಕ್ಟ್ ಮಾಡಬೇಡಿ. ಮಕ್ಕಳ ಶಿಕ್ಷಣದ ಸಲುವಾಗಿ ಉಳಿತಾಯ ಅಥವಾ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸುವ ಕುರಿತು ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಲಾಗಿದೆ. ಕಾಲಿನ ಮೀನಖಂಡ ಭಾಗದ ನೋವು ವಿಪರೀತ ಕಾಡಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಸಂಗಾತಿಯ ಆರೋಗ್ಯ ವಿಚಾರ, ಕುಟುಂಬದಲ್ಲಿನ ಬೆಳವಣಿಗೆ, ಹಣಕಾಸು ಪರಿಸ್ಥಿತಿ ಇವೆಲ್ಲವೂ ನಿಮಗೆ ಕಲಸುಮೇಲೋಗರ ಆಗಿ, ಮುಂದೆ ಏನು ಮಾಡಬೇಕು ಎಂಬುದು ದೊಡ್ಡ ಚಿಂತೆಯಂತೆ ಮಾರ್ಪಡಲಿದೆ. ನನ್ನಿಂದ ಸಾಧ್ಯವಾದ ಸಹಾಯವನ್ನು ಮಾಡ್ತೀನಿ ಎಂದು ನಿಮ್ಮ ಆಪ್ತರ ಮೇಲೆಯೇ ಯಾರಾದರೂ ಮುಂದೆ ಬರಬಾರದಾ ಎಂದು ನಿರೀಕ್ಷೆ ಹಾಗೂ ಅಪೇಕ್ಷೆ ಬಹುವಾಗಿ ಕಾಡಲಿದೆ. ಮನಸಾರೆ ಮಾಡಿದ ಕೆಲಸದಲ್ಲಿ ಅಂದುಕೊಂಡಂತೆ ಅಥವಾ ಅಂದುಕೊಂಡ ರೀತಿಯಲ್ಲಿ ಫಲಿತಾಂಶ ಬಾರದೆ ನಿರಾಸೆ ಆಗಬಹುದು. ಊಟ- ತಿಂಡಿ ವಿಚಾರದಲ್ಲಿ ಹಠ ಮಾಡುವುದಕ್ಕೆ ಹೋಗಬೇಡಿ. ಒಂದು ವೇಳೆ ರುಚಿಯಾಗಿಲ್ಲ ಎಂಬ ಕಾರಣಕ್ಕೆ ಯಾರ ಮೇಲೂ ಕೂಗಾಡುವುದಕ್ಕೆ ಮುಂದಾಗಬೇಡಿ. ನೀವೇನಾದರೂ ನಿಮ್ಮ ಸ್ವಂತ ವ್ಯವಹಾರಗಳನ್ನು ಮಾಡುತ್ತಾ ಇದ್ದಲ್ಲಿ ದೊಡ್ಡ ಮೊತ್ತದ ಮೂಲಕ ನಿಮಗೆ ಸ್ನೇಹಿತರಿಂದ ಆರ್ಡರ್ ಮಾಡಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸ್ನೇಹಿತರು ಅಥವಾ ನಿಮಗೆ ಸಹಾಯ ಮಾಡಬೇಕು ಎಂದು ಸಾಲ ಪಡೆಯಬೇಕಾದ ಸನ್ನಿವೇಶ ಎದುರಾಗಬಹುದು. ಉದ್ಯೋಗ ಮತ್ತು ವೈಯಕ್ತಿಕ ಜೀವನದ ಸಮತೋಲನವು ಕಷ್ಟವಾಗಬಹುದು. ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಈಗಿನಿಂದಲೇ ಯೋಜನೆ ಮಾಡಿಕೊಳ್ಳುವ ಬಗ್ಗೆ ಮನೆಯಲ್ಲಿ ಈ ದಿನದ ಚರ್ಚೆಗಳು ಆಗಬಹುದು. ಇಷ್ಟು ಸಮಯ ನಿಮಗೆ ಸಿಗದಿದ್ದ ಡಾಕ್ಯುಮೆಂಟ್ ಗಳು ಅಚಾನಕ್ ಆಗಿ ಸಿಕ್ಕಿಬಿಡುವ ಅವಕಾಶಗಳು ಇವೆ. ಕಣ್ಣೆದುರಿಗೆ ಇರುವಂಥ ದೊಡ್ಡ ಬೆಳವಣಿಗೆಯ ಸಾಧ್ಯತೆಗಳನ್ನು ಬಾಯಿ ಬಿಟ್ಟು ಕೇಳಿಯೇ ಪಡೆದುಕೊಳ್ಳಬೇಕು ಎಂದಾದಲ್ಲಿ ಸಂಕೋಚ ಮಾಡಿಕೊಳ್ಳದೆ ಕೇಳಿಪಡೆಯಿರಿ. ಇನ್ನು ನಿಮ್ಮಲ್ಲಿ ಯಾರು ಬಾಡಿಗೆ ಮನೆಯಲ್ಲಿದ್ದು, ಅಲ್ಲಿಂದ ಬೇರೆ ಸ್ಥಳಕ್ಕೆ ತೆರಳಬೇಕು ಎಂಬ ಚಿಂತನೆಯಲ್ಲಿ ಇರುತ್ತೀರಿ, ಅಂಥವರಿಗೆ ಮನಸ್ಸಿಗೆ ಒಪ್ಪುವಂಥ ಬಾಡಿಗೆ ಮನೆ ಸಿಗುವ ಯೋಗ ಇದೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *