Numerology Horoscope 19th October:: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 19ರ ದಿನಭವಿಷ್ಯ

Numerology Horoscope 19th October:: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 19ರ ದಿನಭವಿಷ್ಯ


Numerology Horoscope 19th October:: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 19ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಒಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ ಎಂದು ನಂಬಿಕೊಂಡು ಯಾವ ವಿಚಾರದಲ್ಲೂ ಸುಮ್ಮನೆ ಇರಬೇಡಿ. ಅದರಲ್ಲೂ ಈ ದಿನ ಫಾಲೋ ಅಪ್ ಮಾಡಿದರೆ ಬಹಳ ಮುಖ್ಯವಾಗುತ್ತದೆ. ಭಾವನಾತ್ಮಕ ಕ್ಷಣಗಳಲ್ಲಿ ಯಾರಿಗೂ ಮಾತು ನೀಡುವುದಕ್ಕೆ ಹೋಗಬೇಡಿ. ಒಂದು ವೇಳೆ ಹಾಗನಿಸಿದರೂ ಮಾತನಾಡದೆ ಸುಮ್ಮನಿರುವುದಕ್ಕೆ ಪ್ರಯತ್ನಿಸಿ. ಆ ನಂತರ ನಿಜವಾಗಿಯೂ ನಿಮ್ಮಿಂದ ನೆರವು ನೀಡಲು ಸಾಧ್ಯವಾದರೆ ಹೇಳಿದರೆ ಸಹಾಯ ಮಾಡಿ. ಮನೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ಹೆಚ್ಚಿನ ಖರ್ಚು ಸಹ ಆಗಬಹುದು. ನೀವು ಹಾಕಿಕೊಂಡ ಬಜೆಟ್ ಗಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸಲಾಯಿತು. ಸೇಲ್ ಬಿಲ್ಡಿಂಗ್ ನಿರ್ಮಾಣ ಮಾಡುವವರಿಗೆ ಒಂದೇ ಸಲಕ್ಕೆ ಎರಡು- ಮೂರು ಕಡೆ ಕೆಲಸ ಆರಂಭಿಸುವ ಅವಕಾಶಗಳು ತೆರೆದುಕೊಳ್ಳಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಧಾರ್ಮಿಕ ಕಾರ್ಯಕ್ರಮಗಳು,- ಸಮಾರಂಭಗಳನ್ನು ನಡೆಸುವಂಥ ಸಭೆಗಳು ನಿಮಗೆ ವಹಿಸುವಂಥ ಸಾಧ್ಯತೆಗಳಿವೆ. ಅಷ್ಟೇ ಅಲ್ಲ, ಹಣಕಾಸು ಹೊಂದಿಸಬೇಕಾದ ಹೆಚ್ಚುವರಿ ಹೊಣೆ ಕೂಡ ನಿಮ್ಮ ಮೇಲೆ ಬೀಳಬಹುದು. ಇದೇ ವಿಚಾರಕ್ಕೆ ನಿಮ್ಮ ಸ್ನೇಹಿತರು- ಆಪ್ತರ ಅಭಿಪ್ರಾಯಗಳು ವಿಭಜನೆ ಆಗಲಿವೆ. ಇದನ್ನು ವಹಿಸಿಕೊಳ್ಳುವಂತೆಯೂ ಹಾಗೂ ಮತ್ತೆ ಕೆಲವರು ಈ ಉಸಾಬರಿ ನಿಮಗೆ ಬೇಡ ಅಂತಲೂ ಹೇಳಬಹುದು. ಪ್ರೀತಿ- ಪ್ರೇಮದ ವಿಚಾರದಲ್ಲಿ ಗಟ್ಟಿ ತೀರ್ಮಾನವನ್ನು ಕೈಗೊಳ್ಳಲೇ ಬೇಕಾದ ಸ್ಥಿತಿ ಉದ್ಭವ ಆಗಲಿದೆ. ಇನ್ನು ಪ್ರಮುಖವಾದ ವ್ಯಕ್ತಿಯೊಬ್ಬರನ್ನು ಈ ದಿನ ಭೇಟಿಯಾಗುವ ಯೋಗ ನಿಮಗೆ ಇದೆ. ಅವರ ಜತೆಗಿನ ಒಡನಾಟದಿಂದ ನಿಮ್ಮ ಆಲೋಚನಾ ಕ್ರಮದಲ್ಲಿ ಬದಲಾವಣೆ ಆಗಲಿದೆ. ಅಷ್ಟೇ ಅಲ್ಲ, ದೀರ್ಘಾವಧಿಯಲ್ಲಿ ಆದಾಯ ತರುವ ಸಾಧ್ಯತೆಗಳೂ ಇವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಬ್ರಾಂಡೆಡ್ ವಸ್ತುಗಳಿಗಾಗಿ ವಿಪರೀತ ಖರ್ಚು ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಇದಕ್ಕಾಗಿ ನೀವೇನಾದರೂ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದಾದರೆ ಅಳತೆಗೆ ಮೀರಿ ಖರ್ಚು ಬರಲಿದೆ. ನೀವೇನಾದರೂ ಕಮಿಷನ್ ಆಧಾರದಲ್ಲಿ ಕೆಲಸ ಮಾಡುವಂಥವರಾದರೆ ಮುಖ್ಯವಾದ ಕೆಲಸವೊಂದು ನಿಮಗೆ ಬರಲಿದೆ, ಅದಕ್ಕೆ ದೊಡ್ಡ ಮೊತ್ತದ ಕಮಿಷನ್ ಆಫರ್ ಸಹ ಮಾಡಬಹುದು. ಸಿನಿಮಾ ಕ್ಷೇತ್ರದಲ್ಲಿ ಬರುವವರಿಗೆ ಪ್ರಶಸ್ತಿಗಳು ಅಥವಾ ದೊಡ್ಡ ವ್ಯಕ್ತಿಗಳಿಂದ ಉಡುಗೊರೆಗಳನ್ನು ಪಡೆಯುವ ಸಾಧ್ಯತೆ ಇದೆ. ಮನೆ ಮಾರಾಟ ಮಾಡಿಬಿಡಬೇಕು ಎಂದುಕೊಳ್ಳುತ್ತಿರುವವರಿಗೆ ಒಳ್ಳೆ ಗ್ರಾಹಕರು ದೊರೆಯಬಹುದು. ಅಥವಾ ನೋಡಿಕೊಂಡು ಹೋಗಿ, ಬಹಳ ಸಮಯ ಆದಂಥವರೇ ಮತ್ತೆ ನಿಮ್ಮ ಆಸ್ತಿ ಖರೀದಿ ಮಾಡಲು ಬರುವ ಸಾಧ್ಯತೆಗಳಿವೆ. ಆದರೆ ಹಣಕಾಸು ವಿಚಾರಕ್ಕೆ ನಿಮಗೇ ಸ್ವಲ್ಪ ಮಟ್ಟಿಗೆ ಗೊಂದಲ ಕಾಡಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಮನಸ್ಸಿನಿಂದ ಮುಕ್ತವಾಗಿ ವರ್ತಿಸಿದೆ. ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಆಗಲಿವೆ. ತುಂಬ ಆಪ್ತರು ಹಾಗೂ ಬಂಧುಗಳು ನೀಡುವ ಕೆಲವು ಸಲಹೆ- ಸೂಚನೆಗಳಿಂದ ಬಹಳ ಬದಲಾವಣೆಗಳನ್ನು ನೀವು ಮಾಡಿಕೊಳ್ಳುತ್ತೀರಿ. ನೀವು ತೆಗೆದುಕೊಂಡಿರುವ ತೀರ್ಮಾನಗಳನ್ನು ತಕ್ಷಣಕ್ಕೆ ತಿಳಿಸದೆ ಮುಂದಕ್ಕೆ ಹಾಕುವ ಸಾಧ್ಯತೆಗಳಿವೆ. ಇನ್ನೇನು ಇಂತಹ ದಿನ ಹಣವನ್ನು ನೀಡುತ್ತೇನೆ ಎಂಬ ಮಾತು ನೀಡಿದ್ದವರು ಸಹ ಈ ತೀರ್ಮಾನದ ಬಗ್ಗೆ ಇನ್ನಷ್ಟು ಆಲೋಚನೆ ಮಾಡಬೇಕಾಗಿದೆ ಎಂದು ಹಣ ನೀಡುವುದನ್ನೇ ಮುಂದಕ್ಕೆ ಹಾಕಿದ್ದಾರೆ. ಸಂಗಾತಿಯ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ಅವರು ನಿಮಗೆ ಅಚ್ಚರಿ ಮೂಡಿಸುವಂತೆ ಕೆಲವು ಉಡುಗೊರೆಗಳನ್ನು ನೀಡಬಹುದು ಅಥವಾ ಪ್ರವಾಸಕ್ಕೆ ಹೋಗಲು ಯೋಜನೆ ಮಾಡಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಏಕಾಗ್ರತೆಯನ್ನು ಕಾಪಾಡಿಕೊಳ್ಳುವುದು ತುಂಬ ಮುಖ್ಯ. ಈ ದಿನ ಸಣ್ಣ- ಪುಟ್ಟ ಅಪಘಾತಗಳಾಗುವ ಸಾಧ್ಯತೆಗಳಿವೆ. ಮಣ್ಣಿನ ರಸ್ತೆಯಲ್ಲಿ ಅಥವಾ ಹಳ್ಳ-ಗುಂಡಿಗಳು ಇರುವ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುವಂಥವರು ಬಿದ್ದು ಗಾಯಗೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾರಾದರೂ ನಿಮ್ಮನ್ನು ಮುಂದೆ ಬಿಟ್ಟು, ತಮ್ಮ ಕೆಲಸವನ್ನು ಮಾಡಿಕೊಳ್ಳಲು ಪ್ರಯತ್ನಿಸಲಿದ್ದಾರೆ. ಅದನ್ನು ಕೇಳಿದ್ದಕ್ಕಾಗಿ ನೀವು ಪ್ರಭಾವಿಗಳ ದೃಷ್ಟಿಗೆ ಬಿದ್ದು, ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದ್ದರಿಂದ ಅವಕಾಶ ಪುಸಲಾಯಿಸಿದರು ಎಂಬ ಕಾರಣಕ್ಕಾಗಿ ಪ್ರಭಾವಿಗಳನ್ನು ಎದುರು ಹಾಕಿಕೊಳ್ಳಬೇಡಿ. ಇನ್ನು ಈ ಹಿಂದೆ ಯಾವಾಗಲೋ ನೀವು ಹಾಕಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ಈ ದಿನ ವಿವಾದ ಬುಗಿಲೇಳುವ ಸಾಧ್ಯತೆಗಳಿವೆ. ನೀವು ತುಂಬಾ ಪಡುವಂಥ ರೆಸ್ಟೋರೆಂಟ್ ನಲ್ಲಿ ಇಷ್ಟ ತಿಂಡಿ ವ್ಯವಸ್ಥೆಯನ್ನಾದರೂ ಮಾಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ತೆಗೆದುಕೊಳ್ಳಲು ಆದ್ಯತೆ ನೀಡುತ್ತೀರಿ. ಏಕಾಏಕಿ ಬದಲಾವಣೆಗಳನ್ನು ನೋಡುವುದಕ್ಕೆ ಪ್ರಾರಂಭಿಸುತ್ತೀರಿ. ಸಕಾರಾತ್ಮಕವಾದ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ರಾಜಕಾರಣದಲ್ಲಿ ಅಂಥವರಿಗೆ ನಿಮ್ಮ ಕೈಯಲ್ಲಿರುವ ಅವಕಾಶ ನಿಮ್ಮ ಬಳಿಯೇ ಇರುವುದು ಎಷ್ಟರ ಮಟ್ಟಿಗೆ ಸಾಧ್ಯವೋ ಹಲವು ಸಲ ಅಳೆದು ತೂಗಿ ನೋಡುವ ಪರಿಸ್ಥಿತಿ ಎದುರಾಗಲಿದೆ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವಂಥವರಿಗೆ ಒಂದಿಷ್ಟು ಆತಂಕ ತರುವಂಥ ಆರ್ಡರ್ ಗಳು ಬರಬಹುದು. ಅಂದರೆ ತುಂಬ ದೊಡ್ಡ ಮಟ್ಟದ ಆರ್ಡರ್ ಬಂದು, ಅದಕ್ಕೆ ಕೇಳಿದ ಮಟ್ಟಿಗಿನ ಅಡ್ವಾನ್ಸ್ ನೀಡುವುದಕ್ಕೆ ಗ್ರಾಹಕರು ಸಿದ್ಧರಾಗಿದ್ದಾರೆ. ಇದರಿಂದ ಚಿಂತೆಗೆ ಕಾರಣವಾಗುತ್ತದೆ. ನಿಮಗೆ ಹಣ ತಂದುಕೊಡದಿದ್ದರೂ ಹೆಸರು ತರುವಂಥ ಕೆಲವು ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಇಂತಹ ಸನ್ನಿವೇಶದಲ್ಲಿ ಏನು ಹೇಳಬೇಕು ಎಂದು ತಿಳಿಯದೆ ನೀವು ಗೊಂದಲಕ್ಕೆ ಈಡಾಗುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಹೊಸ ಉತ್ಸಾಹವೊಂದು ನಿಮ್ಮಲ್ಲಿ ಇರಲಿದೆ. ಕುಟುಂಬದಲ್ಲಿ ಅಥವಾ ಸ್ನೇಹಿತರು ಸೇರಿಕೊಳ್ಳಬೇಕು ಎಂದುಕೊಂಡಿದ್ದ ಕಾರ್ಯಕ್ರಮಗಳ ಕೆಲಸ- ಕಾರ್ಯಗಳು ವೇಗ ಪಡೆದುಕೊಳ್ಳುತ್ತವೆ. ಸ್ನೇಹಿತರು ನಿಮ್ಮ ಬಳಿ ಮುಖ್ಯವಾದ ಸಲಹೆ- ಸೂಚನೆಗಳನ್ನು ಕೇಳುವ ಸಾಧ್ಯತೆಯಿದೆ. ಇನ್ನು ನಿಖರವಾಗಿ ಹೇಳಬೇಕು ಅಂದರೆ, ನೀವು ನೀಡುವ ಸಲಹೆ- ಸೂಚನೆಗಳು ನಿಮಗೆ ಮುಖ್ಯವಾಗುತ್ತವೆ. ಮನೆಗೆ ಬೆಳ್ಳಿ ವಸ್ತುಗಳನ್ನು ಖರೀದಿಸುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಅದರಲ್ಲೂ ದೇವರ ಪಾತ್ರಗಳು, ವಸ್ತುಗಳನ್ನು ತರುವಂಥ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರಿಗೆ ತಂದೆ- ತಾಯಿಯಿಂದ ದಾನಪತ್ರದ ಮೂಲಕ ಆಸ್ತಿಗಳು ಬರುವಂಥ ಸುಳಿವು ದೊರೆಯಲಿದೆ. ಇನ್ನು ಬರಲಾರದು ಎಂದು ಭಾವಿಸಿದ್ದ ಕೆಲವು ಸಣ್ಣ ಮೊತ್ತದ ಹಣ ಕೂಡ ಈ ದಿನ ಪ್ರಯತ್ನ ಪಟ್ಟಲ್ಲಿ ಬರುವ ಅವಕಾಶಗಳು ಹೆಚ್ಚಿಗೆ ಇವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಬೇಗ ಆಸಕ್ತಿ ಕಳೆದುಕೊಳ್ಳುವಂತೆ ಆಗಲಿದೆ. ಮನಸ್ಸಿಟ್ಟು, ಶ್ರಮಪಟ್ಟು ಮಾಡಿದ ಕೆಲಸ ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಮುಖ್ಯವಾಗಿ ನಿಮಗಿರುವ ಆಸಕ್ತಿ ಹಾಗೂ ಅಗತ್ಯವೇ ಎಲ್ಲರಿಗೂ ಇರುತ್ತದೆ ಎಂದು ಭಾವಿಸುವುದಕ್ಕೆ ಹೋಗಬೇಡಿ. ಮೇಲುನೋಟಕ್ಕೆ ಕಾಣುವಂತೆಯೇ ನೀವು ಈ ಕೆಲಸ ಮಾಡಿದ್ದು ಸಾಕು ಎಂಬಂತೆ ನಡೆದುಕೊಳ್ಳುವುದಕ್ಕೆ ಶುರುವಾಗಲಿದೆ. ಇದನ್ನು ಗುರುತಿಸುವಲ್ಲಿ ಈ ದಿನ ನೀವೇನಾದರೂ ವಿಫಲವಾದರೆ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಈ ಯಾವಾಗಲೋ ನಿಮ್ಮಿಂದ ಆಗಿದ್ದ ನಷ್ಟವೊಂದಕ್ಕೆ ಪರಿಹಾರ ಕಟ್ಟಿಕೊಡುವಂತೆ ಕೆಲವರು ಬೆನ್ನು ಬೀಳಲಿದ್ದಾರೆ. ಈ ರೀತಿ ನೀವು ಮಾತು ಹೇಳಿದ್ದಿರಿ, ಅದಕ್ಕೆ ನಾವೇ ಸಾಕ್ಷಿ ಎಂದು ಹೇಳಿಕೊಂಡು ಕೆಲವು ಜನ ಅವರ ಬೆಂಬಲಕ್ಕೂ ನಿಲ್ಲಲಿದ್ದಾರೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಹೊಸ ವ್ಯಕ್ತಿಯಂತೆ ಆಲೋಚನೆಯಲ್ಲಿ ಬದಲಾವಣೆ ಆಗಲಿದೆ. ನಿಮ್ಮಲ್ಲಿ ಕೆಲವು ಎಲಿಕಲ್ ವಾಹನಗಳನ್ನು ಖರೀದಿಸುವಂಥ ಯೋಗ ಇದೆ. ಈ ಹಿಂದೆ ಯಾವಾಗಲೋ ಹೂಡಿಕೆ ಮಾಡಿದ್ದ ಷೇರು, ಮ್ಯೂಚುವಲ್ ಫಂಡ್‌ಗಳಿಗೆ ಉತ್ತಮ ರಿಟರ್ನ್ಸ್ ದೊರೆಯಲಿದೆ. ನೀವು ಅಂದುಕೊಂಡ ಕೆಲವು ಯೋಜನೆಗಳನ್ನು ಜಾರಿಗೆ ತರಲು ಬೇಕಾದ ಸಂಪನ್ಮೂಲ ಒಟ್ಟುಗೂಡಿಸುವ ಪ್ರಯತ್ನದಲ್ಲಿ ದೊಡ್ಡ ಮಟ್ಟದ ಸಾಫಲ್ಯ ಕಾಣುತ್ತಿದೆ. ನಿಮ್ಮಲ್ಲಿ ಕೆಲವರು ನಿಮ್ಮ ಜಮೀನಿಗೋ ಅಥವಾ ಮನೆಗೋ ಸೋಲಾರ್ ಸಾಧನಗಳನ್ನು ಅಳವಡಿಸುವುದಕ್ಕೆ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಸಂತಾನ ಅಪೇಕ್ಷಿತರು ಶುಭ ಸುದ್ದಿ ಕೇಳುವ ಯೋಗ ಇದೆ. ಇನ್ನು ಐವಿಎಫ್ ನಂಥ ಪದ್ಧತಿಯ ಮೂಲಕ ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಈ ದಿನ ಉತ್ತಮ ಬೆಳವಣಿಗೆಗಳು ಆಗಲಿವೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *