Numerology Horoscope 25th October: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 25ರ ದಿನಭವಿಷ್ಯ

Numerology Horoscope 25th October: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 25ರ ದಿನಭವಿಷ್ಯ


Numerology Horoscope 25th October: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 25ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಲೆಕ್ಕಾಚಾರದಲ್ಲಿ ತಪ್ಪಿದೆಯಾ ಎಂದು ಪದೇಪದೇ ಅನಿಸಲಿದೆ. ವಿಪರೀತ ಗಾಬರಿ, ಆತಂಕ ಸೃಷ್ಟಿ ಆಗಲಿದೆ. ಏಕೋ ಅಂದುಕೊಂಡಂತೆ ಏನೂ ಆಗುತ್ತಿಲ್ಲ ಅಂತಲೂ ಅನಿಸಲಿದೆ. ಇನ್ನೂ ಮುಂದುವರಿದು ಸಣ್ಣ ಸಮಸ್ಯೆಗೆ ಇಡೀ ದಿನ ತಲೆ ಕೆಡಿಸಿಕೊಳ್ಳುವಂತೆ ಆಗುತ್ತದೆ. ಆದರೆ ವಾಸ್ತವ ಹೇಗಿರುತ್ತದೆ, ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬ ಮಾತಿದೆಯಲ್ಲಾ ಹಾಗೆ. ಈ ದಿನ ನಿಮ್ಮ ಪರಿಸ್ಥಿತಿಯ ಬಗ್ಗೆ ನಿಮಗೆ ಮರುಕ ಹುಟ್ಟಲಿದೆ. ಆದ್ದರಿಂದ ಮೇಲುನೋಟಕ್ಕೆ ಕಾಣುವಂಥ ವಿಚಾರಗಳು ಆಳದಲ್ಲಿ ಅಷ್ಟು ಗಂಭೀರವಾಗಿ ಇರುವುದಿಲ್ಲ. ಕಟ್ಟಡ ನಿರ್ಮಾಣ ವೃತ್ತಿಯಲ್ಲಿ ಇರುವವರಿಗೆ ಹೊಸ ಕೆಲಸಗಳು ದೊರೆಯಲಿವೆ. ವಿಷಯಕ್ಕೆ ಹಾಗೂ ವ್ಯಕ್ತಿಗಳಿಗೆ ಎಷ್ಟು ಪ್ರಾಮುಖ್ಯವೋ ಅಷ್ಟು ಮಾತ್ರ ನೀಡಿ. ಮನೆಗೆ ಕೆಲವು ಎಲಿಕಲ್ಲು ವಸ್ತುಗಳನ್ನು ಖರೀದಿಸುವ ಯೋಗವಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಹಲವು ವಿಚಾರ- ವಿವಾದಗಳನ್ನು ಬಗೆಹರಿಸಿಕೊಳ್ಳಲು ಬೇಕಾದ ವೇದಿಕೆ ಸಿಗಲಿದೆ. ಈ ಹಿಂದೆ ಸಿಟ್ಟಿನಲ್ಲಿ ನೀವು ಆಡಿದ್ದ ಮಾತಿನಿಂದ ಆದ ಬೇಸರವನ್ನು ಕಡಿಮೆ ಮಾಡುವುದಕ್ಕೆ ಸರಿಯಾದ ದಿನ ಇದಾಗಿದೆ. ಖರ್ಚಿನ ವಿಚಾರದಲ್ಲಿಯೂ ಉದಾರವಾಗಿ ವರ್ತಿಸಿದೆ. ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವ ಯೋಗ ಸಹ ಇದೆ. ರೆಸಾರ್ಟ್, ರೆಸ್ಟೋರೆಂಟ್, ಸಿನಿಮಾ ಹೀಗೆ ಮನರಂಜನೆಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲಾಗಿದೆ. ಪ್ರೇಮಿಗಳಿಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಕೆಲಸ ಬದಲಾವಣೆ ಮಾಡುವುದಕ್ಕೆ ಸ್ನೇಹಿತರ ಸಹಾಯ ದೊರೆಯಲಿದೆ. ಈ ಹಿಂದೆ ನೀವು ಪಟ್ಟ ಶ್ರಮವನ್ನು ಗುರುತಿಸಿ, ಉಡುಗೊರೆಗಳನ್ನು ನೀಡಬಹುದು. ಚಿನ್ನ- ಬೆಳ್ಳಿ ಖರೀದಿ ಮಾಡಬೇಕು ಎಂದುಕೊಂಡಿದ್ದಲ್ಲಿ ದಿನದ ಮಟ್ಟಿಗೆ ನಿರ್ಧಾರವನ್ನು ಮುಂದೆ ಹಾಕುವುದು ಉತ್ತಮ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನೀವು ಯಾರೊಂದಿಗೆ ಭಾವನಾತ್ಮಕವಾಗಿ ಬಹಳ ಹತ್ತಿರವಾಗುತ್ತೀರಿ ಅವರ ಜೀವನದಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಕುಗ್ಗಿಹೋಗುವ ಸಾಧ್ಯತೆಗಳಿವೆ. ಮತ್ತು ಇದೇ ದಿನ ತಂದೆ- ತಾಯಿಯ ಆರೋಗ್ಯ ವಿಚಾರಕ್ಕೆ ಕಾರಣ ಆಗಲಿದೆ. ನೀವು ಭೇಟಿ ಆಗಬಾರದು, ಮಾತನಾಡಬಾರದು ಅಂದುಕೊಂಡಿರುತ್ತೀರೋ ಅಂಥ ವ್ಯಕ್ತಿ ನಿರೀಕ್ಷೆಯ ರೀತಿಯಲ್ಲಿ ಯಾರಿಗೆ ಎದುರಾಗಿ, ಆ ವ್ಯಕ್ತಿಯ ಮುಖಾಮುಖಿಯಿಂದಾಗಿ ಮುಜುಗರ, ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಇನ್ನು ಯಾರು- ಎಷ್ಟು ಕೇಳಿಕೊಂಡರೂ ಒತ್ತಡ ಹಾಕಿದರೂ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸವನ್ನು ಮಾಡಿಕೊಡುವುದಾಗಿ ಒಪ್ಪಿಕೊಳ್ಳಲು ಹೋಗದಿರಿ. ಮರೆತೇ ಹೋದಷ್ಟು ಹಿಂದಿನ ಸ್ನೇಹಿತರು ಮತ್ತೆ ನಿಮ್ಮನ್ನು ಭೇಟಿ ಆಗಬಹುದು. ಅಂಥವರು ಹಣಕಾಸಿನ ಸಹಾಯ ಕೇಳಿದ ಏಕಾಏಕಿ ಒಪ್ಪಿಕೊಂಡಿರುವುದು ಕ್ಷೇಮ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಹಣದ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಮುಂದಿನ ದಿನಗಳಲ್ಲಿ ಏನೇನು ಮಾಡಬೇಕು ಎಂಬ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿದೆ. ನಿಮ್ಮ ಸ್ನೇಹಿತರು- ಸಂಬಂಧಿಗಳು ನಿರುತ್ಸಾಹ ಆಗುವಂಥ ಮಾತುಗಳನ್ನು ಆಡಿದರೂ ಕೆಲವು ಕೆಲಸಗಳನ್ನು ಹಿಡಿದಿಟ್ಟುಕೊಳ್ಳಿ, ಮುಗಿಸಲು ನಿರ್ಧಾರ ತೆಗೆದುಕೊಳ್ಳಬೇಕು. ವಿದೇಶಗಳಲ್ಲಿ ವ್ಯವಹಾರ ನಡೆಸುತ್ತಿರುವವರಿಗೆ ಆದಾಯದಲ್ಲಿ ಉದ್ಯಮ ಆಗುವುದಕ್ಕೆ ಮಾರ್ಗ ಗೋಚರವಾಗುತ್ತದೆ. ತೀವ್ರವಾದ ಕಾಲು ನೋವು ಅನುಭವಿಸುತ್ತಿದ್ದರೆ ಸೂಕ್ತ ವೈದ್ಯೋಪಚಾರ ದೊರೆಯುವಂಥ ಯೋಗ ಇದೆ. ಬ್ರ್ಯಾಂಡೆಡ್ ಬಟ್ಟೆಗಳು, ಗ್ಯಾಜೆಟ್, ಶೂ, ವಾಚ್ ಇತ್ಯಾದಿಗಳನ್ನು ಖರೀದಿಸಲು ಮನಸ್ಸು ಮಾಡಿದೆ. ಈ ದಿನ ಸಾಧ್ಯವಾದಾಗ ವಿಷ್ಣು ಸಹಸ್ರನಾಮ ಪಠಣ ಅಥವಾ ಶ್ರವಣವನ್ನು ಮಾಡಿದರೆ ಒಳ್ಳೆಯದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಾನು ಎಲ್ಲವನ್ನೂ ಮಾಡಬಲ್ಲೆ ಎಂಬ ವಿಶ್ವಾಸ ತಪ್ಪಲ್ಲ. ಆದರೆ ಅದು ಅತಿಯಾದ ಆತ್ಮವಿಶ್ವಾಸ ಎಂದೆನಿಸಬಾರದು. ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಈ ದಿನ ಯಾವುದೇ ಮುಖ್ಯ ಪ್ರಯಾಣ ಅಥವಾ ಪ್ರವಾಸ ಇದ್ದಲ್ಲಿ ನಿಗದಿತ ಸಮಯಕ್ಕಿಂತ ಮುಂಚೆಯೇ ಅಲ್ಲಿರುವುದಕ್ಕೆ ಪ್ರಯತ್ನ ಮಾಡಿ. ಕೊನೆ ಕ್ಷಣದ ತನಕ ಕಾಯ್ದಲ್ಲಿ ಒತ್ತಡ ಸೃಷ್ಟಿ ಆಗಲಿದೆ. ಸ್ವಂತಕ್ಕೆ ಎಂದು ತೆಗೆದುಕೊಂಡಿರುವ ವಸ್ತು ಅಥವಾ ವಾಹನವನ್ನು ಇತರರಿಗೆ ತಾತ್ಕಾಲಿಕವಾಗಿ ಆದರೂ ನೀಡಬೇಕಾದಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಇಂಥದ್ದೊಂದು ಪರಿಸ್ಥಿತಿಯನ್ನು ನೀವಾಗಿಯೇ ತಂದುಕೊಳ್ಳುವಂತೆ ಆಗುತ್ತದೆ. ಈ ಹಿಂದೆ ಆತುರ ಆತುರವಾಗಿ ಮಾಡಿ ಮುಗಿಸಿದೆ ಅಥವಾ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ಮಾಡಿದ ಕೆಲಸದಲ್ಲಿ ತಪ್ಪುಗಳಾಗಿ, ಅದನ್ನೇ ಮತ್ತೆ ಮಾಡಬೇಕಾಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಯಾವುದೇ ವಿಚಾರ ಆಲೋಚನೆ ಸಹ ಮಾಡದೆ ಸುಮ್ಮನಿದ್ದು ಬಿಡಬೇಕು ಎಂದೆನಿಸಲಿದೆ. ಇನ್ನೂ ನಿಖರವಾಗಿ ಹೇಳಬೇಕು ಅಂದರೆ ನಿಮ್ಮಷ್ಟಕ್ಕೆ ನೀವಿರುವುದಕ್ಕೆ ಈ ದಿನ ಬಹಳ ಪ್ರಾಮುಖ್ಯತೆ ನೀಡುತ್ತೀರಿ. ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದ ಸ್ಥಳಕ್ಕೆ ಭೇಟಿ ನೀಡಬಹುದು ಅಥವಾ ಮುಖ್ಯ ವ್ಯಕ್ತಿಯೊಬ್ಬರ ಮನೆಗೆ ಹೋಗಬಹುದು. ಇದೆಲ್ಲವನ್ನೂ ಮೀರಿದಂಥ ವಿಚಾರ ಏನೆಂದರೆ, ಪುಸ್ತಕ ಓದುವುದು, ಸಂಗೀತ ಕೇಳುವುದು, ಧ್ಯಾನ ಮಾಡುವುದು ಇಂಥ ಹೊಸ ಕೆಲಸಗಳಿಗೆ ಸಿದ್ಧವಾಗುವುದಕ್ಕೆ ಉತ್ಸಾಹ ದೊರೆಯುತ್ತದೆ. ಕಾಗದ, ಪತ್ರ ಅಥವಾ ದಾಖಲೆಗಳಿಗಾಗಿ ಹುಡುಕುತ್ತಿದ್ದಲ್ಲಿ ಅವು ಅಚಾನಕ್ ಆಗಿ ಸಿಗುವಂಥ ಯೋಗ ಇದೆ. ಉದ್ಯಮ, ವ್ಯವಹಾರಗಳನ್ನು ನಡೆಸುತ್ತಿರುವವರು ದೀರ್ಘಾವಧಿ ಹೂಡಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ತುಂಬ ನಂಬಿದವರಿಂದಲೇ ವಂಚನೆ ಆಗಿದೆ ಎಂಬುದು ಈ ದಿನ ಗಮನಕ್ಕೆ ಬರಲಿದೆ. ಅದರಲ್ಲಿ ನೀವು ಹೂಡಿಕೆ ಮಾಡಿದ್ದರಲ್ಲಿ ಅಸಲು ಹಣಕ್ಕೆ ಮೋಸ ಆಗಬಹುದು ಎಂಬ ಸೂಚನೆ ದೊರೆಯಲಿದೆ. ಇನ್ನು ತಾವು ಮುಂದೆ ನಿಂತು, ಶಿಫಾರಸು ಮಾಡಿದ್ದ ಹಾಗೂ ಈ ಹಣಕಾಸು ವಿಚಾರದಲ್ಲಿ ನೀವು ಬಹಳ ನಂಬಿದ್ದ ವ್ಯಕ್ತಿಗಳೇ ನನಗೂ ಇದಕ್ಕೂ ಸಂಬಂಧವಿಲ್ಲ ಎಂದುಬಿಡಲಿದ್ದಾರೆ. ಯಾವುದೇ ನಿರ್ಣಯಕ್ಕೆ ಬರುವ ಮುನ್ನ ಸಾವಿರ ಸಲ ಆಲೋಚಿಸಿ. ನಿಮ್ಮ ಪ್ರಭಾವ ಬಳಸಿ, ಆ ಕೆಲಸವನ್ನು ಮಾಡಬಹುದು ಎಂದೆನಿಸಿದರೆ ನೆರವನ್ನು ಕೇಳುವುದಕ್ಕೆ ಹಿಂದೆ- ಮುಂದೆ ಆಲೋಚನೆ ಮಾಡಬೇಡಿ. ಸಾಮ- ದಾನ- ಭೇದ- ದಂಡ ಹೀಗೆ ಚತುರೋಪಾಯಗಳನ್ನು ಬಳಸುವ ಕಡೆ ಚಿಂತಿಸಿ. ಫಾಲೋಅಪ್ ಚೆಕ್ ಗಳನ್ನು ಮಾಡಿಸಬೇಕಿದ್ದಲ್ಲಿ ಅದನ್ನು ಮರೆಯದೆ ಮಾಡಿಸಿಕೊಳ್ಳುವ ಕಡೆಗೆ ಗಮನ ನೀಡಿ. ಸ್ವಯಂ ವೈದ್ಯ ಯಾವುದೇ ಕಾರಣಕ್ಕೂ ಬೇಡ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಸೋದರ ಸಂಬಂಧಿಗಳ ಆರ್ಥಿಕ ಸ್ಥಿತಿ ಒಂದಿಷ್ಟು ಒತ್ತಡವನ್ನು ತರಲಿದೆ. ಮಕ್ಕಳ ಆರೋಗ್ಯ ವಿಚಾರವು ಆತಂಕಕ್ಕೆ ಕಾರಣ ಆಗಲಿದೆ. ಈ ಹಣಕಾಸನ್ನು ಹೊಂದಿಸಲು ಹಾಗೂ ಇತರ ಜವಾಬ್ದಾರಿಗಳನ್ನು ನಿರ್ವಹಿಸಲು ಹೆಚ್ಚಿನ ಶ್ರಮವನ್ನು ಹಾಕಲಾಗುತ್ತದೆ. ನಿಮ್ಮ ಮೇಲೆ ಹಗೆ ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಇಂಥವರಿಗೆ ಹೇಗೆ ಉತ್ತರ ಕೊಡಬೇಕು ಎಂದು ಯೋಚಿಸುವಂತೆ ಆಗುತ್ತದೆ. ಆದರೆ ಕುಟುಂಬದ ಸಲುವಾಗಿಯೇ ಹೆಚ್ಚು ಸಮಯವನ್ನು ಮೀಸಲಿಡಲಾಗಿದೆ. ಕಾರು ಅಥವಾ ಬೈಕ್ ಸರ್ವೀಸ್ ಮಾಡಿಸಿದ್ದೀರಾ ಎಂದು ನೋಡಿಕೊಳ್ಳಿ. ಒಂದು ವೇಳೆ ಮುಖ್ಯ ವ್ಯಕ್ತಿಯನ್ನು ಭೇಟಿಯಾಗಬೇಕು ಎಂದಿದ್ದಲ್ಲಿ ಸಮಯಕ್ಕೆ ಸರಿಯಾಗಿ ಅಲ್ಲಿರುವಂತೆ ನೋಡಿಕೊಳ್ಳಿ. ಅಲ್ಲಿಗೆ, ಸ್ನೇಹಿತರು ಮನೆಗೆ ತೆರಳಬೇಕು ಎಂದಿದ್ದಲ್ಲಿ ಅಲ್ಲಿನ ಪರಿಸ್ಥಿತಿ, ವಾತಾವರಣ ಹೇಗಿದೆ ಅವಲೋಕಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇವರು ಏನು ನನಗೆ ಹೇಳುವುದು ಎಂಬ ಧೋರಣೆ ಯಾವುದೇ ಕಾರಣಕ್ಕೂ ಬೇಡ. ಈ ದಿನ ನಿಮ್ಮೊಂದಿಗೆ ಮಾತನಾಡುವಾಗ ಶ್ರದ್ಧೆಯಿಂದ ಕೇಳಿಸಿಕೊಳ್ಳಿ. ಈ ಹಿಂದೆ ಯಾವಾಗಲೋ ನಡೆದ ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಯಾವುದೇ ತೀರ್ಮಾನಕ್ಕೆ ಬರಬೇಡಿ. ಇನ್ನು ಈ ದಿನ ಸೋದರ- ಸೋದರಿಯರಿಗೆ ನಿಮ್ಮ ನೆರವಿನ ಅವಶ್ಯಕತೆ ಇದೆ. ಸಂಗ್ರಹಿಸಿದ ಹೂಡಿಕೆ ಅಥವಾ ಸೇವಿಂಗ್ಸ್ ಮುರಿಸಬೇಕಾಗಬಹುದು. ಈ ಬಗ್ಗೆ ಗಂಭೀರವಾಗಿ ಯೋಚಿಸಿದೆ. ಕಾರ್ಯಕ್ರಮ ಅಥವಾ ಸಮಾರಂಭಗಳಲ್ಲಿ ಭಾಗವಹಿಸುವ ಸಲುವಾಗಿ ಪ್ರಯಾಣ ಮಾಡಬೇಕಾಗಬಹುದು. ಇದರಿಂದ ದಣಿವು ಸಹ ಆಗಲಿದೆ. ನೀವು ಲೆಕ್ಕ ಹಾಕಿಕೊಂಡಂತೆಯೇ ಕೆಲವು ವ್ಯವಹಾರಗಳು ನಡೆಯಲಿವೆ. ಮತ್ತೆ ಬಾರದು ಎಂದುಕೊಂಡಿದ್ದ ಹಣವೊಂದು ಕೈ ಸೇರುವುದಕ್ಕೆ ಏನು ಮಾಡಬೇಕು ಎಂಬ ಮಾರ್ಗ ಗೋಚರ ಆಗಲಿದೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *