
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಅದೊಂದು ವಿಷಯವನ್ನು ಬಿಟ್ಟು ಏನನ್ನಾದರೂ ಕೇಳಿ ಎಂದು ಬಹಳ ಸಲ ನೀವು ಹೇಳುವಂಥ ಸನ್ನಿವೇಶ ಈ ದಿನ ಎದುರಾಗಲಿದೆ. ನಿಮಗೆ ಆಪ್ತರಾದವರ ಹೆಸರು ಪ್ರಸ್ತಾವ ಆಗಬಾರದು ಎಂಬ ಕಾರಣಕ್ಕೆ ಕೆಲವು ಆಕ್ಷೇಪ- ನಿಂದೆಗಳನ್ನು ನೀವೇ ತೆಗೆದುಕೊಳ್ಳುತ್ತೀರಿ ಅಥವಾ ನಿಮ್ಮ ಪ್ರಭಾವವನ್ನು ಬಳಸಿ, ಎದುರಿಗೆ ಇರುವವರ ಮನವನ್ನು ಒಲಿಸಿ, ಆ ವಿಷಯವೇ ಪ್ರಸ್ತಾವ ಆಗಬಾರದು ಎಂದು ತುಂಬ ಪ್ರಯತ್ನವನ್ನು ಮಾಡುತ್ತೀರಿ. ನಿಮ್ಮಲ್ಲಿ ಯಾರ ಹೋಟೆಲ್ ವ್ಯವಹಾರ ನಡೆಯುತ್ತಿದೆ ಅಂಥವರಿಗೆ ಅನಿರೀಕ್ಷಿತವಾದ ನಷ್ಟ ಎದುರಾಗಬಹುದು. ಈ ತನಕ ಅನುಸರಿಸಿದ ಮಾರ್ಗೋಪಾಯವನ್ನು ಅನುಸರಿಸಿದ ಫಲಿತಾಂಶವು ಕಾಣುವಂತೆ ಆಗುತ್ತದೆ. ಇನ್ನು ಯಾರು ಐಟಿ- ಬಿಪಿಯೋ ಇಂಥ ಕಡೆಗಳಲ್ಲಿ ಕೆಲಸ ಮಾಡುತ್ತಿರುವವರು ಅಂಥವರಿಗೆ ನಿಮ್ಮ ಗಮನಕ್ಕೆ ತರದೆ ಅನುಷ್ಠಾನಕ್ಕೆ ಬಂದಿರುವುದು ತಿಳಿದು, ಬೇಸರ ಹಾಗೂ ಆತಂಕ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಎಲ್ಲವೂ ಗೊತ್ತಿದೆ, ನಾನು ನಿಮಗೆ ಸಹಾಯ ಮಾಡ್ತೀನಿ ಎಂಬ ಮಾತನ್ನು ಹೇಳುವುದಕ್ಕೆ ಮುಂಚೆ ಸಾವಿರ ಬಾರಿ ಈ ದಿನ ಯೋಚಿಸಿ. ಏಕೆಂದರೆ ಒಂದು ನಯಾಪೈಸೆ ಪ್ರಯೋಜನವಾಗದೆ, ಈ ಒಂದು ಹೆಜ್ಜೆ ಮುಂದೆ ಹೋಗಿ, ನಿಮ್ಮ ಕೈಯಿಂದ ಹಣ ಹಾಕುವ ಕೆಲಸ ಮಾಡಬೇಕಾದ ಸನ್ನಿವೇಶ ಎದುರಾಗುತ್ತದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಸ್ವಲ್ಪ ಮಟ್ಟಿಗೆ ಒತ್ತಡ ಇರುತ್ತದೆ. ಕೊನೆ ಕ್ಷಣದಲ್ಲಿ ನಿಮ್ಮ ಜೊತೆಗೆ ವ್ಯಕ್ತಿಯೊಬ್ಬರು ಸಂಯೋಜನೆ, ಒಂದು ಬಗೆಯ ನಕಾರಾತ್ಮಕ ಆಲೋಚನೆಯನ್ನು ಬಿತ್ತಲಿದ್ದಾರೆ. ಅತಿ ಉತ್ಸಾಹದಲ್ಲಿ ನೀವೇ ಗುರಿಯನ್ನು ನಿಗದಿಪಡಿಸಿದರೆ ಸಿಕ್ಕಾಪಟ್ಟೆ ಸಮಜಾಯಿಷಿಗಳನ್ನು ನೀಡುವ ಸನ್ನಿವೇಶ ಎದುರಾಗಲಿದೆ. ಹಾಗೆ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಕಣ್ಣು ಅಂದಾಜಿಗೆ ಕಾಣುವಂತೆ ಹಲವು ಸನ್ನಿವೇಶಗಳು ಇರುವುದಿಲ್ಲ. ಈ ಹಿಂದೆ ನಿಮಗೆ ಆದ ಅನುಭವಗಳು ಈ ದಿನ ಸಹಾಯಕ್ಕೆ ಬರುವುದಿಲ್ಲ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮ ಓದು, ತಿಳಿವಳಿಕೆ, ಲೆಕ್ಕಾಚಾರ ಹಾಗೂ ಅನುಭವ ಉದ್ಯೋಗದಾತರ ಅಥವಾ ಮೇಲಧಿಕಾರಿಗಳ ಗಮನಕ್ಕೆ ಬರಲಿದೆ. ತಾತ್ಕಾಲಿಕವಾಗಿ ನಿಮಗೆ ಸವಾಲಿನ ಜವಾಬ್ದಾರಿ ವಹಿಸುವುದಕ್ಕೆ ಅವರು ಆಲೋಚಿಸಬಹುದು. ಇದನ್ನು ಶ್ರದ್ಧೆ- ಉತ್ಸಾಹದಿಂದ ಪೂರ್ಣಗೊಳಿಸಿದರೆ ಭವಿಷ್ಯದಲ್ಲಿ ದೊಡ್ಡ ಅನುಕೂಲ ಆಗಲಿದೆ. ಮನೆಯ ಸದಸ್ಯರ ಬೆಂಬಲ ತುಂಬ ಚೆನ್ನಾಗಿರಲಿದೆ. ಇನ್ನು ನಿಮ್ಮಲ್ಲಿ ಯಾರ ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಾರೆ, ಅಂಥವರಿಗೆ ಪರಿಚಿತರಿಂದ ಅಥವಾ ಕುಟುಂಬ ಸ್ನೇಹಿತರಿಂದಲೇ ಪ್ರಸ್ತಾವ ಬರುವ ಸಾಧ್ಯತೆಗಳಿವೆ. ಒಂದು ವೇಳೆ ತತ್ ಕ್ಷಣವೇ ವರ/ವಧು ನೋಡುವ ಪ್ರಕ್ರಿಯೆ ಮುಗಿಸೋಣ ಎಂದು ಹೇಳಿದರೆ ನೀವಾಗಿಯೇ ಏನಾದರೂ ಸಬೂಬು ಹೇಳಿ ಮುಂದೂಡಿದರೋ ಆ ನಂತರ ಪರಿತಪಿಸುವಂತೆ ಆಗಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ವಿಪರೀತ ಆತ್ಮವಿಶ್ವಾಸ ನಿಮ್ಮಲ್ಲಿ ಈ ದಿನ ಇರಲಿದೆ. ಕೃಷಿ ಜಮೀನು ಅಥವಾ ಅಭಿವೃದ್ಧಿ ಆಗಿರುವ ತೋಟ ಇತ್ಯಾದಿಗಳನ್ನು ಖರೀದಿಸಬೇಕು ಎಂದಿದ್ದಲ್ಲಿ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಅವಕಾಶಗಳು ಹೆಚ್ಚಿವೆ. ನಿಮ್ಮಲ್ಲಿ ಯಾರು ಪದೇ ಪದೇ ಉದ್ಯೋಗ ಬದಲಾವಣೆ ಮಾಡಿದ್ದೀರೋ, ಅಂದರೆ ಇತ್ತಿಚಿನ ವರ್ಷಗಳಲ್ಲಿ ಎರಡ್ಮೂರು ಕೆಲಸಗಳನ್ನು ಬದಲಾಯಿಸಿದ್ದೀರೋ ಅಂಥವರಿಗೆ ಮನಸ್ಸಿಗೆ ಇಷ್ಟವಾಗುವ ಹಾಗೆ ಪ್ರತಿಷ್ಠಿತವಾದ ಕಡೆಯಿಂದ ಉದ್ಯೋಗದ ಆಫರ್ ಬರಲಿದೆ. ಆಹಾರ ಪಥ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಮುಖ್ಯ. ಕೆಲವು ಮಸಾಲೆ ಪದಾರ್ಥಗಳನ್ನು ಸೇವಿಸಿದರೆ ಸಮಸ್ಯೆಗಳು ಆಗುತ್ತಿದೆ ಎಂದಿದ್ದಲ್ಲಿ ಸಾಮಾನ್ಯ ದಿನದಿಂದ ಈ ದಿನದಲ್ಲಿ ಈ ದಿನವು ಜಾಗ್ರತೆಯಿಂದ ಇರಿ. ನಿಮ್ಮಲ್ಲಿ ಮೂವತ್ತರಿಂದ ನಲವತ್ತು ವರ್ಷದೊಳಗೆ ಯಾರಿಗೆ, ಅಂಥವರು ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸುವ ಅಥವಾ ಅಡ್ವಾನ್ಸ್ ಯೋಗ ನೀಡುವ ಈ ದಿನ ಇದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗಿರುತ್ತದೆ. ಮುಖ್ಯವಾದ ಜವಾಬ್ದಾರಿ ಇರುವಂಥ ಹುದ್ದೆಯಲ್ಲಿ ಇರುವವರಿಗೆ ಬೇರೆಯವರು ಮಾಡಿದ ತಪ್ಪು ತಲೆಗೆ ಸುತ್ತಿಕೊಳ್ಳಲಿದೆ. ನೀವು ಹೇಳಿದರೂ ಕೇಳಿಸಿಕೊಳ್ಳುವ ಯಾವುದೇ ಸ್ಥಿತಿಯಲ್ಲಿ ಇರುವುದಿಲ್ಲ. ಇನ್ನು ಇದೇ ವೇಳೆ ಕೌಟುಂಬಿಕವಾಗಿಯೂ ಕೆಲವು ಬೆಳವಣಿಗೆಗಳು ಅಂದುಕೊಂಡಂತೆ ನಡೆಯುತ್ತವೆ, ಜಗಳ- ಕಲಹಗಳು ನಡೆಯಬಹುದು. ನಿಮಗೆ ಎಷ್ಟು ಆಪ್ತರಾಗಿದ್ದರೂ ಅವರ ಪ್ರೀತಿ- ಪ್ರೇಮ- ಮದುವೆ ವಿಚಾರಗಳಿಗೆ ತಲೆ ಹಾಕುವುದಕ್ಕೆ ಹೋಗಬೇಡಿ. ನಿಮ್ಮದು ಅಂತ ಇರುವ ಹೂಡಿಕೆಯೋ ಅಥವಾ ಉಳಿತಾಯವನ್ನೋ ಇತರರ ಸಲುವಾಗಿ ಮುರಿಯಲಿಕ್ಕೆ ಹೋಗಬೇಡಿ. ಭಾವನಾತ್ಮಕವಾಗಿ ತುಂಬಿಕೊಂಡ ವ್ಯಕ್ತಿಯ ಅಸಹಾಯಕತೆ ನಿಮ್ಮನ್ನು ದುರ್ಬಲಗೊಳಿಸಬಹುದು. ಒಬ್ಬ ವ್ಯಕ್ತಿಯ ಇಂದಿನ ಪರಿಸ್ಥಿತಿಗೆ ಕಾರಣ ಏನು ಎಂದು ವಿಶ್ಲೇಷಿ, ಆಲೋಚಿಸದಿದ್ದರೆ ಯಾವುದೇ ತೀರ್ಮಾನಕ್ಕೆ ಬರಬೇಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮಲ್ಲಿ ಕೆಲವರಿಗೆ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅವರು ಪ್ರತ್ಯುಪಕಾರ ಎಂಬಂತೆ ನಿಮಗೆ ಸಹಾಯ ಮಾಡಬಹುದು. ಒಂದು ವೇಳೆ ದೊಡ್ಡ ಕೆಲಸ ಕೈಗೆತ್ತಿಕೊಂಡಿದ್ದು, ಅದಕ್ಕೆ ನಿಮ್ಮ ಬಳಿ ಇರುವ ಹಣ ಸಾಕಾಗುತ್ತಿಲ್ಲ ಎಂದು ಚಿಂತೆಗೆ ಗುರಿಯಾಗಿ, ಹಲವು ಕಡೆಗಳಲ್ಲಿ ಹಣ ಹೊಂದಾಣಿಕೆ ಮಾಡುವ ಪ್ರಯತ್ನದಲ್ಲಿ ನಿಮ್ಮ ಸ್ನೇಹಿತರ ರೆಫರೆನ್ಸ್ ಮೂಲಕ ಸಾಧ್ಯವಾಗಲಿದೆ. ನೆಟ್ ವರ್ಕ್ ಮಾರ್ಕೆಟಿಂಗ್ ನಂಥದ್ದನ್ನು ಸಹ ನಿಮಗೆ ತಗುಲಿಸುವುದಕ್ಕೆ ಪ್ರಯತ್ನ ಮಾಡಲಿದ್ದಾರೆ. ಆದರೆ ಅಂಥವರಿಂದ ದೂರ ಇರುವುದು ಕ್ಷೇಮ. ಹದಿನೈದು ವರ್ಷದ ಮೇಲ್ಪಟ್ಟ ವಯಸ್ಸಿನ ಮಕ್ಕಳಿರುವವರಿಗೆ ಅವರ ಶೈಕ್ಷಣಿಕ ಪ್ರಗತಿಯು ಸಮಾಧಾನ- ತೃಪ್ತಿಯನ್ನು ತರಲಿವೆ. ಇನ್ನು ನಿಮ್ಮಲ್ಲಿ ಯಾರು ಅವರ ಓದಿಗಾಗಿ ನೀವೇ ಕೊಟ್ಟ ಪಾಠ- ಪ್ರವಚನ ಮಾಡುತ್ತೀರಿ, ಅಂಥವರಿಗೆ ಈ ಹೆಮ್ಮೆ ತರುವ ದಿನ ಇದಾಗಿರುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಹಾಕಿದ ಪೋಸ್ಟ್ ಅಥವಾ ವಿಡಿಯೋದಿಂದ ಬಹಳ ಚರ್ಚೆಗೆ ಎಡೆ ಮಾಡಿಕೊಡುತ್ತೀರಿ. ನಿಮ್ಮದೇ ಸ್ನೇಹಿತರು, ಸುಮ್ಮನಿದ್ದರೆ ಆಗಲಿದೆ ಎಂದು ಹೇಳಲಿದ್ದಾರೆ. ನೀವು ಉದ್ದೇಶಪೂರ್ವಕವಾಗಿಯೇ ಮಾಡುತ್ತೀರೋ ಅಥವಾ ಅಂಥ ಉದ್ದೇಶವೇ ಇಲ್ಲದೆ ಮಾಡುತ್ತೀರೋ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳು ಸಿಟ್ಟು ಮಾಡಿಕೊಳ್ಳುವಂಥ ಸನ್ನಿವೇಶ ಎದುರಾಗಲಿದೆ. ಮನೆಯಲ್ಲೇ ಅಂದುಕೊಂಡು ಶುರುವಾದ ಕಾರ್ಯಕ್ರಮವೊಂದರ ಖರ್ಚು ಸಿಕ್ಕಾಪಟ್ಟೆ ಹೆಚ್ಚಾಗಲಿದೆ. ಇತರರ ಮೇಲಿನ ಪ್ರತಿಷ್ಠೆಯಿಂದ ನೀವು ದುಬಾರಿ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದೀರಿ. ಇದಕ್ಕಾಗಿ ಸಾಲ ಮಾಡುವುದೋ ಅಥವಾ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ, ಐಎಂಐ ಆಗಿ ಕನ್ವರ್ಟ್ ಮಾಡುವುದೋ ಹೀಗೆ ಯಾವುದಾದರೊಂದು ಮಾಡಿ, ಆ ನಂತರ ನಿಮ್ಮ ತುರ್ತು ವೆಚ್ಚಕ್ಕೆ ಹಣ ಹೊಂದಿಸಲು ಪರದಾಡುವಂತೆ ಆಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಪ್ರೀತಿಯಲ್ಲಿನಂಥವರು ಬಹಳ ಮುಖ್ಯವಾದ ತೀರ್ಮಾನ ಆಗುವ ದಿನ ಇದು. ಒಂದು ವೇಳೆ ಇಷ್ಟು ಸಮಯ ನಿಮ್ಮ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗುವುದಿಲ್ಲ ಅಂತಾದರೆ ಈ ದಿನ ಆ ಬಗ್ಗೆ ತಿಳಿದುಬರಲಿದೆ. ಸಮಾಧಾನವಾಗಿ ಮುಗಿಯಲಿ ಎಂದುಕೊಂಡ ಆಸ್ತಿ ವ್ಯಾಜ್ಯ ವಿಚಾರಗಳು ನಿಮ್ಮ ಕೈ ಮೀರುವ ಹಂತಕ್ಕೆ ಹೋಗಬಹುದು. ಇದಕ್ಕೆ ಸಂಬಂಧಪಡದವರೆಲ್ಲ ತಲೆ ಹಾಕಿ, ರಂಕಲು ಮಾಡಿಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಇನ್ನೂ ನಿಮ್ಮ ಕೈ ಸೇರದ ಅಥವಾ ವ್ಯಾಜ್ಯ ಇತ್ಯರ್ಥವಾಗದ್ದನ್ನು ನೆಚ್ಚಿಕೊಂಡು ಯಾವುದನ್ನು ಹಣಕಾಸು ತೀರ್ಮಾನ ಮಾಡುವುದಕ್ಕೆ ಹೋಗಬೇಡಿ. ನೀರಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿರುವಿರಿ ಅಂತಾ ಸರ್ಕಾರದಿಂದ ಪಡೆದುಕೊಳ್ಳಬೇಕಾದ ಪರವಾನಗಿ ಇತ್ಯಾದಿಗಳು ಇವೆಯೇ ಅಥವಾ ರಿನೀವಲ್ ಆಗಬೇಕಿದ್ದರೆ ಖಾತ್ರಿ ಮಾಡಿಕೊಳ್ಳಿ. ಈ ದಿನ ನಿಮ್ಮಲ್ಲಿ ಒಂದಲ್ಲ ಒಂದು ವಿಚಾರಕ್ಕೆ ದಂಡುವಂಥ ಯೋಗವಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ವಾದ ಮಾಡುವುದರಿಂದ ಅಥವಾ ನಿಮ್ಮ ಪರವಾಗಿ ಇರುವಂತಹ ಅಂಶಗಳನ್ನು ಮಂಡಿಸುವುದರಿಂದ ಕೆಲಸಗಳು ಆಗುವುದಿಲ್ಲ ಈ ದಿನ ನಿಮ್ಮ ಗಮನಕ್ಕೆ ಬರಲಿದೆ. ಇಷ್ಟು ಸಮಯ ನೀವು ಯಾವುದಾದರೂ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದ ರೀತಿಗೂ ಇವತ್ತಿಗೂ ಬಹಳ ವ್ಯತ್ಯಾಸ ಇರಲಿದೆ. ಸಾಮ-ದಾನ-ಭೇದ-ದಂಡ ಹೀಗೆ ಯಾವ ಉಪಾಯವನ್ನು ಅನುಸರಿಸಿದರೆ ಉತ್ತಮ ಎಂದು ತುಂಬಾ ವೇಗವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ನೀವು ಕೂಡಿಟ್ಟುಕೊಂಡಿದ್ದ ಹಣವೊಂದು ಉದ್ದೇಶಕ್ಕೆ ಅಲ್ಲದೆ ಬೇರೆಯದಕ್ಕೆ ಬಳಸಲೇಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ. ಹೊಸದಾದ ವಿದ್ಯೆ ಕಲಿಯುವುದಕ್ಕೆ ನಿಮ್ಮಲ್ಲಿ ಕೆಲವರು ಮುಂದಾಗಿದ್ದಾರೆ. ಬಹುಶಃ ಮರೆತೇ ಹೋಗಿದ್ದ ಸ್ನೇಹಿತ ಅಥವಾ ಸ್ನೇಹಿತೆಯು ದಿಢೀರ್ ಈ ದಿನ ಕಾಣಿಸಿಕೊಂಡು ಅಥವಾ ಸಂಪರ್ಕಕ್ಕೆ ಸಿಕ್ಕಿ, ಭವಿಷ್ಯಕ್ಕೆ ಬಹಳ ಮುಖ್ಯವೆನಿಸುವ ಸಲಹೆ- ಸೂಚನೆಗಳನ್ನು ನಿಮಗೆ ನೀಡಲಿದ್ದಾರೆ. ಇದರಿಂದ ತುಂಬ ದೊಡ್ಡ ಮಟ್ಟದಲ್ಲಿ ನಿಮಗೆ ಅನುಕೂಲ ಆಗಲಿದೆ.
ಲೇಖನ- ಎನ್.ಕೆ.ಸ್ವಾತಿ