
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಮೊದಲು ನಿಮ್ಮ ಪ್ರಾಶಸ್ತ್ಯದ ಕೆಲಸಗಳೇನು ಎಂಬ ಪರಿವೇ ಇರಲಿ. ಆದರೆ ಸ್ನೇಹಿತರು ಅಥವಾ ಪರಿಚಿತರಿಗೆ ಸಹಾಯ ಮಾಡುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಲಾಗಿದೆ. ಹಳೇ ವಾಹನವನ್ನು ಅಥವಾ ಸಲಕರಣೆಗಳನ್ನು ಮಾರಾಟಕ್ಕೆ ಇಟ್ಟಿದ್ದಲ್ಲಿ ಅವುಗಳಿಗೆ ಉತ್ತಮ ಬೆಲೆ ಸಿಗಲಿದೆ. ದೂರದವುಗಳಿಂದ ಶುಭ ಸುದ್ದಿ ಕೇಳಿಬರಲಿದೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧಗಳನ್ನು ಹುಡುಕಿಕೊಂಡು ಬರುವಂಥ ಯೋಗವಿದೆ. ನಿಧಾನವಾಗಿ ಸಾಗುತ್ತಿದ್ದ ಕೆಲವು ವ್ಯವಹಾರ ಅಥವಾ ಸಂಗತಿಗಳು ವೇಗವನ್ನು ಪಡೆದುಕೊಳ್ಳಲಿವೆ. ಒಂದು ವೇಳೆ ಯಾವುದಾದರೂ ಮುಖ್ಯ ಕಾಗದ- ಪತ್ರ, ದಾಖಲೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದರೆ ಅದನ್ನು ದೊರಕಿಸಬಲ್ಲಂಥ ವ್ಯಕ್ತಿಯ ಪರಿಚಯ ಆಗಲಿದೆ. ಮನೆ ದೇವರ ಆರಾಧನೆಗೆ ಅಥವಾ ಕಾರ್ಯಕ್ರಮಗಳಿಗೆ ಹಣಕಾಸು ಅಥವಾ ಇನ್ಯಾವ ಬಗೆಯಲ್ಲಾದರೂ ನೆರವು ಕೇಳಿಕೊಂಡು ಈ ದಿನ ಯಾರಾದರೂ ಬಂದಲ್ಲಿ ನಿಮ್ಮಿಂದ ಸಾಧ್ಯವಾದದ್ದನ್ನು ಮಾಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮಿಂದ ತಪ್ಪಾಗಿದೆ ಅಂತಾದಲ್ಲಿ ತಮ್ಮ ಮೂಗಿನ ನೇರಕ್ಕೆ ಏನೋ ಹೇಳುತ್ತಿದ್ದಾರೆ ಅಂತಾದಲ್ಲಿ ಎಲ್ಲವನ್ನೂ ಕೇಳಿಸಿಕೊಳ್ಳಲೇಬೇಕು. ಆದರೆ ತಮಗೆ ಅನಿಸಿದ್ದನ್ನು ನೀವು ಮಾಡಲೇಬೇಕು ಎಂದು ಒತ್ತಡ ಹಾಕಿದರೆ ಮಾತ್ರ ಸೂಕ್ತ ಉತ್ತರವನ್ನು ನೀಡಲೇಬೇಕು ಎಂಬುದನ್ನು ನೆನಪಿನಲ್ಲಿಡಿ. ಕಣ್ಣೆದುರು ಆಗುತ್ತಿರುವ ಹಣದ ಪೊಲನ್ನು ನಿಮ್ಮಿಂದ ತಡೆಯುವುದಕ್ಕೆ ಸಾಧ್ಯವಾಗಲಿಲ್ಲ. ಮಕ್ಕಳ ವರ್ತನೆ, ಶಿಕ್ಷಣದ ವಿಚಾರದಲ್ಲಿನ ಹಿನ್ನಡೆಯು ನಿಮಗೆ ಆತಂಕವನ್ನು ಉಂಟು ಮಾಡಬಹುದು. ಕುಟುಂಬದಲ್ಲಿ ಆಗುವ ಯಾವುದೇ ಚರ್ಚೆಯ ವೇಳೆ ನಿಮಗೆ ಮಾಹಿತಿ ಇಲ್ಲದ ವಿಚಾರದ ಬಗ್ಗೆ ಅಧಿಕಾರಯುತವಾಗಿ ಮಾತನಾಡುವುದಕ್ಕೆ ಹೋಗಬೇಡಿ. ಪ್ರಶಾಂತವಾದ ಸ್ಥಳದಲ್ಲಿ ಸ್ವಲ್ಪ ಸಮಯ ಕಳೆಯುವುದಕ್ಕೆ ನಿಮಗೆ ಮನಸ್ಸಾದಲ್ಲಿ ಅಂಥಲ್ಲಿಗೆ ತೆರಳಿ, ಸ್ವಲ್ಪ ಹೊತ್ತು ಇದ್ದು ಬನ್ನಿ. ಒತ್ತಡದ ಕಾರಣಕ್ಕೆ ತಲೆ ನೋವು, ಕಣ್ಣು ಉರಿ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡರೆ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಸುಲಭಕ್ಕೆ ಬಗೆಹರಿಯದು ಎಂದುಕೊಂಡಿದ್ದ ಕೆಲವು ವ್ಯಾಜ್ಯ- ಪ್ರಕರಣಗಳು ಸಮಾಧಾನವಾಗಿ ಮುಗಿಯುವ ಸೂಚನೆಗಳು ದೊರೆಯಲಿವೆ. ನಿಮ್ಮ ತೀರ್ಮಾನ ಅಥವಾ ನಿರ್ಧಾರದ ಫಲಿತವಾದ ಯೋಜನೆಗಳಂತೆಯೇ ಈ ದಿನ ಹಲವು ಬೆಳವಣಿಗೆಗಳು ಆಗಲಿವೆ. ಎಟ್ ತಮ್ಮ ಪರವಾಗಿ ನಿಂತು ಕೆಲವು ರಾಜೀ-ಸಂಧಾನಗಳನ್ನು ಮಾಡಿಕೊಡುವಂತೆ ಕೇಳಿಕೊಳ್ಳಬಹುದು. ವಿದ್ಯಾರ್ಥಿ ಆಗಿದ್ದು, ವಿದೇಶಕ್ಕೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಈ ಹಿಂದೆ ಪ್ರಯತ್ನ ಮಾಡಿ, ಅದರಲ್ಲಿ ಸಫಲವಾಗಿಲ್ಲ ಎಂದಾದಲ್ಲಿ ಈ ದಿನ ತುಂಬ ಮಹತ್ತರವಾದ ಬೆಳವಣಿಗೆಯೊಂದು ಆಗಲಿದೆ. ಹಣಕಾಸಿನ ವಿಚಾರವೇ ಇರಬಹುದು ಅಥವಾ ವೀಸಾ ಮೊದಲಾಗಿದ್ದೇ ಆಗಬಹುದು, ಯಾವ ಅಡೆತಡೆ ಇರುತ್ತದೋ ಅದರ ನಿವಾರಣೆಗೆ ಮಾರ್ಗ ಗೋಚರವಾಗುತ್ತದೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಹಳ ಪ್ರಮುಖವಾದ ಸಂಸ್ಥೆ ಅಥವಾ ವ್ಯಕ್ತಿಯಿಂದ ಆಫರ್ ಬರುವ ಯೋಗ ಇದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ರಚ್ಚೆ- ವಿಪರೀತ ಹಠ ಹಿಡಿದು, ರಂಪ- ರಾದ್ಧಾಂತ ಮಾಡುವ ರೀತಿಯಲ್ಲಿ ಮಕ್ಕಳ ಗುಣದಲ್ಲಿ ಬದಲಾವಣೆ ಆಗುವುದು ನಿಮ್ಮ ಆತಂಕಕ್ಕೆ ಗುರಿಯಾಗಬಹುದು. ಬಂಧುಗಳಿಂದ ಸಾಲ ತಂದಿದ್ದರೆ ಅದನ್ನು ಕೂಡಲೇ ಹಿಂತಿರುಗಿಸುವಂತೆ ಕೇಳಲಿದ್ದಾರೆ. ತಂದೆ- ತಾಯಿಗೆ ನಿಮ್ಮ ನೆರವಿನ ಅವಶ್ಯಕತೆ ಈ ದಿನ ತುರ್ತಾಗಿ ಬೇಕಾಗುವಂಥ ಸನ್ನಿವೇಶವು ಇರುತ್ತದೆ, ನಿಮ್ಮನ್ನು ಸಂಪರ್ಕಿಸುವ ಯಾವುದೇ ಸಾಧ್ಯತೆಗಳನ್ನು ಮುಕ್ತವಾಗಿ ಇಟ್ಟುಕೊಳ್ಳಿ. ಯಾವ ವಸ್ತುವನ್ನಾದರೂ ನಿಮಗಾಗಿಯೇ ಅಂತ ತಂದುಕೊಂಡಿದ್ದಲ್ಲಿ, ಅದನ್ನು ಹೆಚ್ಚು ಬಳಸಿಲ್ಲ ಅಥವಾ ಇವತ್ತೇ ಮೊದಲ ಬಾರಿಗೆ ಬಳಸುತ್ತದೆ ಅಂತಾದಲ್ಲಿ ಅದರಲ್ಲಿ ಏನಾರೂ ಒಂದು ಹಾಳಾಗಿರುವ ಅಥವಾ ಬಳಸುವುದಕ್ಕೆ ಸಾಧ್ಯವಿಲ್ಲದಂಥದ್ದು ಆಗಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಈ ಹಿಂದಿನ ನಿಮ್ಮ ತಪ್ಪು ತೀರ್ಮಾನಗಳ ಬಗ್ಗೆ ಪಶ್ಚಾತಾಪ ಪಡುವಂತೆ ಆಗಲಿದೆ. ತಂದೆ ಅಥವಾ ತಂದೆ ಸಮಾನರಾದವರ ಅನಾರೋಗ್ಯ ಸಮಸ್ಯೆ ಚಿಂತೆಗೆ ಕಾರಣ ಆಗಲಿದೆ. ನೀವು ಮಕ್ಕಳ ಶಿಕ್ಷಣಕ್ಕೋ ಭವಿಷ್ಯಕ್ಕೋ ಅಥವಾ ಮದುವೆಗಾಗಿಯೋ ಉಳಿತಾಯ ಮಾಡಿಟ್ಟುಕೊಂಡಿದ್ದ ಹಣವನ್ನು ತೆಗೆಯಲೇಬೇಕಾದ ಸಂದರ್ಭ ಎದುರಾಗಬಹುದು. ನಿಮ್ಮಿಂದ ಹಣ ಪಡೆದು, ಇದೇ ಸಮಯಕ್ಕೆ ಕೊಡುತ್ತೇನೆ ಎಂದು ಮಾತು ನೀಡಿದ್ದ ವ್ಯಕ್ತಿಗಳು ಕೊನೆ ಕ್ಷಣದಲ್ಲಿ ತಮ್ಮಿಂದ ಆಗುವುದಿಲ್ಲ ಎಂದು ಹೇಳುವಂಥ ಸಾಧ್ಯತೆಗಳಿವೆ. ಈ ಎಲ್ಲಾ ವ್ಯವಹಾರಗಳನ್ನು ಎಂಬ ಭರವಸೆಯನ್ನು ಇಟ್ಟುಕೊಂಡಿರುವುದು ಉತ್ತಮವಾಗಿದೆ. ಇನ್ನು ಭಾರವಾದ ವಸ್ತುಗಳನ್ನು ಎತ್ತುವಾಗ ಜಾಗ್ರತೆಯಿಂದ ಇರಬೇಕು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಲೇಬೇಕಾಗುವಂಥ ಸ್ಥಿತಿ ನಿರ್ಮಾಣ ಆಗಲಿದೆ. ಆಸ್ಪತ್ರೆಯಲ್ಲಿ ಇದ್ದಲ್ಲಿ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಎಲ್ಲ ಸರಾಗವಾಗಿ ಆಗುತ್ತದೆ ಎಂಬುದು ನಿಮ್ಮ ಎಣಿಕೆ ಆಗಿರುತ್ತದೆ. ನೀವು ಅಂದುಕೊಂಡಿರುತ್ತೀರೋ ಇಲ್ಲವೋ ಕೆಲವು ವಿಚಾರಗಳಲ್ಲಿ ದಯಾ- ದಾಕ್ಷಿಣ್ಯದಿಂದ ನಡೆದುಕೊಳ್ಳಲೇಬೇಕಾದ ಸನ್ನಿವೇಶ ಎದುರಾಗಲಿದೆ. ಇಲ್ಲ ಅಥವಾ ಹೌದು ಹೀಗೆ ಯಾವುದನ್ನೂ ಖಡಾಖಂಡಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲದಂಥ ಸ್ಥಿತಿಯಲ್ಲಿ ನೀವಿರುತ್ತೀರಿ. ನಿಮ್ಮಲ್ಲಿ ಕೆಲವು ದೂರ ಪ್ರಯಾಣಕ್ಕೆ ಹೊರಡಬೇಕಾದ ಅನಿವಾರ್ಯ ಅಥವಾ ತುರ್ತು ಎದುರಾಗಲಿದೆ. ಇನ್ನು ಇದಕ್ಕೆ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಖರ್ಚಾಗಲಿದೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದೀರಿ ಅಂತಾ ಅದನ್ನು ಜೋಪಾನವಾಗಿ ನೋಡಿಕೊಳ್ಳಿ. ಅದರ ಪಿನ್ ಅನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ ಅಥವಾ ಅದರ ಟ್ಯಾಪ್ ಮಾಡಿ ಬಳಸಿದರೆ ತುಂಬ ಜಾಗ್ರತೆ ವಹಿಸಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುತ್ತೀರಿ ಅಂತಾದಲ್ಲಿ ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಹೃದಯದಿಂದ ಆಲೋಚಿಸುವ ಬದಲು ಸ್ವಲ್ಪ ಮಟ್ಟಿಗೆ ದೂರದಿಂದ ಆಲೋಚಿಸಿ. ಈ ದಿನ ನೇರವಂತಿಕೆ ಕೆಲಸಕ್ಕೆ ಬರುವುದಿಲ್ಲ. ಎಲ್ಲ ವಿಚಾರವನ್ನೂ ನೇರಾನೇರ ಹೇಳುತ್ತೀನಿ ಎಂದೆನಾದರೂ ಅಂದುಕೊಂಡಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳುತ್ತದೆ. ಭಾವನಾತ್ಮಕ ವಿಚಾರಗಳು ಅಂತಾದಲ್ಲಿ ಅದನ್ನು ಸರಿಯಾಗಿ ನಿರ್ವಹಿಸಿ. ಸ್ವಂತ ವ್ಯವಹಾರ, ಉದ್ಯಮ ನಡೆಸುತ್ತಿರುವವರಿಗೆ ಹೊಸದಾಗಿ ಬಂಡವಾಳ ಹೂಡಿಕೆ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಇನ್ನು ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳನ್ನು ಹೇಗೆ ಮುಗಿಸಬೇಕು ಎಂಬ ಯೋಜನೆ ಮಾಡಿಕೊಳ್ಳಿ. ಇನ್ನೂ ಸಮಯವಿದೆ, ಅಥವಾ ನಿಮ್ಮ ಸಾಮರ್ಥ್ಯಕ್ಕೆ ಬಹಳ ಬೇಗ ಮುಗಿಸಬಲ್ಲೆನಾದರೂ ಅತಿಯಾದ ವಿಶ್ವಾಸದಿಂದ ಏನಾದರೂ ಆಲೋಚನೆ ಮಾಡಿದರೆ ಅವಮಾನಕ್ಕೆ ಗುರಿಯಾಗಬೇಕು. ಸೋದರ ಸಂಬಂಧಿಗಳ ಜೊತೆಗೆ ಸಣ್ಣ- ವಿಚಾರಕ್ಕಾದರೂ ಅಭಿಪ್ರಾಯ ಭೇದಗಳು, ಮನಸ್ತಾಪಗಳು ಉದ್ಭವಿಸಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ವಿಶಾಲವಾದ ಆಲೋಚನೆ ಎಲ್ಲ ಸಂದರ್ಭಕ್ಕೂ ಸೂಕ್ತ ಎನಿಸುವುದಿಲ್ಲ. ನಿಮಗೆ ಗೊತ್ತಿರುವ ವಿಚಾರ, ವಿದ್ಯೆಗೆ ಬೇಡಿಕೆ ಹೆಚ್ಚಾಗಲಿದೆ. ನೀವು ಕೇಳಿದಂಥ ಮೊತ್ತವನ್ನು ಕೊಡ್ತೀವಿ, ಕೆಲಸ ಮಾಡಿಕೊಡಿ ಅಥವಾ ಮಾಹಿತಿ ಕೊಡಿ ಎಂದು ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಬಹುದು. ನೀವು ಇನ್ನು ಬರಲಾರದು ಎಂದುಕೊಂಡಿದ್ದ ಮೊತ್ತವನ್ನು ವಸೂಲಿ ಮಾಡುವುದಕ್ಕೆ ಮಾರ್ಗೋಪಾಯ ಗೋಚರವಾಗುತ್ತದೆ. ನಿಮ್ಮಿಂದ ಯಾವುದನ್ನು ದಕ್ಕಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಯಾರಾದರೂ ಸವಾಲು ಹಾಕಿದರೆ ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸಲು ಬೇಕಾದ ವೇದಿಕೆ ದೊರೆಯಲಿದೆ. ಮನೆ ಅಥವಾ ಜಮೀನು ಮಾರಾಟಕ್ಕೆ ಇಟ್ಟಿದ್ದಲ್ಲಿ ನಿರೀಕ್ಷಿತ ಬೆಲೆಗೆ ಕೇಳಿಕೊಂಡು ಖರೀದಿದಾರರು ಬರಲಿದ್ದಾರೆ. ಇತ್ತೀಚೆಗೆ ನಿದ್ದೆ ಬಾರದೆ ಇರುವುದೇ ಸಮಸ್ಯೆಯಾಗಿ ಮಾರ್ಪಟ್ಟಿದ್ದಲ್ಲಿ ಇದಕ್ಕೆ ಕಾರಣ ಮತ್ತು ಪರಿಹಾರ ತಿಳಿದುಬರಲಿದೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅವರು ನಿಮ್ಮ ನೆರವಿಗೆ ಬರುತ್ತಾರೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಔಟ್ ಆಫ್ ದ ಬಾಕ್ಸ್ ಆನ್ ಆಗುವುದಿಲ್ಲ, ಇತರರಿಗೆ ಸುಲಭವಾಗಿ ಹೊಳೆಯುವ ಕೆಲವು ಸಂಗತಿಗಳು ನಿಮ್ಮ ಆಲೋಚನೆಗೆ ಬರಲಿವೆ. ನಿಮ್ಮಲ್ಲಿ ಕೆಲವು ಒಡವೆ ವಸ್ತುಗಳನ್ನು ಖರೀದಿಸಲು ಹಣವನ್ನು ಖರ್ಚು ಮಾಡಲಿದ್ದೀರಿ. ಮನೆಯ ದುರಸ್ತಿ, ಸುಣ್ಣ-ಬಣ್ಣ, ಸಂಪತ್ತು ಇತ್ಯಾದಿಗಳನ್ನು ಮಾಡುವುದಕ್ಕೆ ಈ ದಿನ ಮಾತುಕತೆ ನಡೆಸಲಾಗಿದೆ. ಆಸ್ತಿ ಮಾರಾಟ ಅಥವಾ ಖರೀದಿ ವಿಚಾರವಾಗಿ ಇಷ್ಟು ಸಮಯ ಸಿಕ್ಕುಸಿಕ್ಕಾಗಿದ್ದ ಸಂಗತಿಗಳನ್ನು ಸರಿಪಡಿಸಿಕೊಳ್ಳಲು ಈ ದಿನ ಅವಕಾಶಗಳು ದೊರೆಯಲಿವೆ. ಹಣಕಾಸು ಸಂಗತಿಗಳು ಕುಟುಂಬದಲ್ಲಿ ಆದ್ಯತೆ ಪಡೆದುಕೊಳ್ಳಲಿವೆ. ಒಂದು ವೇಳೆ ನೀವೇನಾದರೂ ಬಾಡಿಗೆ ಮನೆ ಇದ್ದೀರಿ ಅಂತಾದಲ್ಲಿ ಈಗ ಇರುವ ಮನೆಯನ್ನು ಬದಲಿಸಿ, ದೊಡ್ಡದಕ್ಕೆ ತೆರಳಲು ತೀರ್ಮಾನವನ್ನು ಮಾಡಲಾಗಿದೆ. ನಿಮ್ಮ ಸ್ವಂತ ವಿಚಾರದಲ್ಲಿ ವಿಪರೀತ ಮೂಗು ತೂರಿಸುತ್ತಿದ್ದಾರೆ ಎಂಬ ವ್ಯಕ್ತಿಯನ್ನು ದೂರ ಇಡಲಾಗಿದೆ.
ಲೇಖನ- ಎನ್.ಕೆ.ಸ್ವಾತಿ