
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಮೇಲಿಂದ ಮೇಲೆ ಭಾವನಾತ್ಮಕವಾಗಿ ಭಾರವಾದ ಮಾತುಗಳನ್ನು ಕೇಳಿಸಿಕೊಳ್ಳುವ ಸನ್ನಿವೇಶಗಳು ಉದ್ಭವ ಆಗಲಿವೆ. ನಾಲ್ಕು ಗೋಡೆಯ ಮಧ್ಯೆ ಮಾತನಾಡಿ ಮುಗಿಸಬೇಕಾದ ವಿಷಯಗಳನ್ನು ಅದೇ ರೀತಿ ಮಾತಾಡಿ ಮುಗಿಸಿಕೊಳ್ಳಿ. ಹೆಚ್ಚು ಕಷ್ಟ ಆಗಬಹುದಾದ ವಿಷಯಗಳು ಅಥವಾ ವಿಚಾರಗಳನ್ನು ಪ್ರಭಾವ ಪೂರ್ಣ ಮಾಡುವ ಕುರಿತು ತೀರ್ಮಾನವನ್ನು ಮಾಡಲಾಗಿದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದಾದರೂ ಪ್ರಯತ್ನ ಮಾಡುತ್ತಾ ಇರುವವರಿಗೆ ನಿರೀಕ್ಷೆ ಕೂಡ ಮಾಡದಂತಹ ವ್ಯಕ್ತಿಗಳಿಂದ ನೆರವು ದೊರೆಯಲಿದೆ. ಈ ಹಿಂದೆ ಹೂಡಿಕೆ ಮಾಡಿದಂಥ ಹಣದ ಮೇಲೆ ಸ್ವಲ್ಪ ಮೊತ್ತವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಲೋಚನೆ ಶುರು ಆಗಲಿದೆ. ನಿಮ್ಮಲ್ಲಿ ಕೆಲವರು ದ್ವಿಚಕ್ರ ವಾಹನ ಅಥವಾ ಕಾರು ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಿದ್ದರೆ, ಅದಕ್ಕಾಗಿ ಹಣವನ್ನು ಅಡ್ವಾನ್ಸ್ ನೀಡುವ ಸಾಧ್ಯತೆ ಇದೆ. ಮುಖ್ಯವಾದ ಕೆಲಸಕ್ಕೆ ಹೊರಡುವಾಗ ಸ್ವಲ್ಪ ಮುಂಚಿತವಾಗಿ ಅಲ್ಲಿರುವಂತೆ ಯೋಜನೆ ಮಾಡಿಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಗೆಳೆತನದಲ್ಲಿ ಯಾವುದೆಲ್ಲ ಸಹಜ ಎಂದು ಭಾವಿಸಿದ್ದಿರೋ ಅದು ಹಾಗಲ್ಲ ಎಂದೆನಿಸಲಿದೆ. ಅಂತರಂಗದ ವಿಚಾರಗಳನ್ನು ಸಲುಗೆಯ ಕಾರಣಕ್ಕೆ ಹಂಚಿಕೊಳ್ಳಬಾರದು ಎಂಬ ಸಲಹೆಯನ್ನು ಕುಟುಂಬ ಸದಸ್ಯರು ನೀಡಲಿದ್ದಾರೆ, ಇದು ನಿಮಗೂ ಸರಿ ಎನಿಸಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಆಲೋಚನೆ ಮಾಡಲಿದ್ದೀರಿ. ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಹಣಕಾಸನ್ನು ಹೊಂದಾಣಿಕೆ ಮಾಡುವ ಬಗ್ಗೆ ಸಂಗಾತಿ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ದಿನ ಭಾರವಾದ ವಸ್ತುಗಳನ್ನು ಎತ್ತುವಾಗ ಎಚ್ಚರಿಕೆ ವಹಿಸಿ. ಇಲ್ಲದಿದ್ದರೆ ಬೆನ್ನು ಹಿಡಿದುಕೊಳ್ಳುವಂತೆ ಆಗುವುದು ಅಥವಾ ಉಳುಕುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಬಾಡಿಗೆ ಮನೆಯಲ್ಲಿದ್ದು, ಅದರ ಬದಲಾವಣೆಗಾಗಿ ಪ್ರಯತ್ನಿಸುತ್ತಾ ಇರುವವರಿಗೆ ಮನಸ್ಸಿಗೆ ಹಿಡಿಸುವಂಥ ಮನೆ ದೊರೆಯಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿತ್ಯವೂ ಕಾಣುವ ವಿಚಾರಗಳಲ್ಲಿಯೇ ಏನೋ ಬದಲಾವಣೆಗಳು ಆಗುತ್ತಿವೆ ಎಂಬುದು ಗಟ್ಟಿಯಾಗಿ ನಿಮ್ಮ ಮನಸ್ಸಿನಲ್ಲಿ ಬೇರೂರಲಿದೆ. ಮದುವೆಗೆ ಪ್ರಯತ್ನ ಮಾಡುತ್ತಿರುವ ವಿವಾಹದ ವಯಸ್ಕರಿಗೆ ಸೂಕ್ತ ಸಂಬಂಧ ಪಡೆಯುವ ಸಾಧ್ಯತೆಗಳು ಇವೆ. ದೂರದವರಲ್ಲಿ ಇರುವ ಕೆಲವು ವಿಚಾರಗಳಲ್ಲಿ ಸಹಾಯ ಮಾಡುವಂತೆ ನಿಮ್ಮನ್ನು ಕೇಳಿಕೊಳ್ಳಬಹುದು. ನಿಮ್ಮಿಂದ ಅದು ಮಾಡಲಿಕ್ಕೆ ಸಾಧ್ಯವೇ ಇಲ್ಲ ಎಂದು ಆಲೋಚಿಸಿದ ನಂತರವಷ್ಟೇ ಉತ್ತರವನ್ನು ಹೇಳಿ. ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ನಿಯೋಜನೆ ಮೇಲೆ ಹೆಚ್ಚುವರಿಯಾಗಿ ಜವಾಬ್ದಾರಿಗಳನ್ನು ವಹಿಸುವ ಬಗ್ಗೆ ನಿಮಗೆ ಸೂಚನೆ ಬರಬಹುದು. ಆಹಾರ ಪಥ್ಯವನ್ನು ಪಾಲನೆ ಮಾಡುವ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ. ಮನೆಗೆ ಖರೀದಿಸಿ ತರುವುದಕ್ಕೆ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸುವ ಯೋಗ ಇದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಕೆಮ್ಮು, ಕಫ, ಗಂಟಲು ನೋವು ಇಂತಹ ಆರೋಗ್ಯ ಸಮಸ್ಯೆಗಳು ನಿಮ್ಮಲ್ಲಿ ಕೆಲವರನ್ನು ಕಾಡಬಹುದು. ದಿಢೀರ್ ಅಂತ ದೂರ ಪ್ರಯಾಣ ಮಾಡುವ ಅನಿವಾರ್ಯ ಸೃಷ್ಟಿ ಆಗಲಿದೆ. ದೈಹಿಕ ಆಯಾಸ, ದಣಿವು ಕಾಡುವುದರಿಂದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವವರಿಗೆ ಅಗತ್ಯ ಇರುವ ಪುಸ್ತಕಗಳು, ಲ್ಯಾಪ್ ಟಾಪ್ ಅಥವಾ ಇಂತಹವುಗಳ ಖರೀದಿಗಾಗಿ ಖರ್ಚು ಮಾಡುವ ಯೋಗ ಇದೆ. ಸರ್ಕಾರದಿಂದ ಬರಬೇಕಾದ ಟ್ಯಾಕ್ಸ್ ರೀಫಂಡ್ ಸೇರಿದಂತೆ ಇತರೆ ಯಾವುದೇ ಬಾಕಿ ಇದ್ದರೆ ಅದು ಯಾವಾಗ ಬರಬಹುದು ಎಂಬ ಸುಳಿವು ದೊರೆಯಲಿದೆ. ಗಾಜಿನ ವಸ್ತುಗಳು ಅಥವಾ ಚೂಪಾದ ವಸ್ತುಗಳನ್ನು ಬಳಸುವಾಗ ಸಾಮಾನ್ಯ ದಿನ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು. ಹೋಟೆಲ್ ವ್ಯವಹಾರ ನಡೆಸುತ್ತಿರುವವರಿಗೆ ಹಣಕಾಸಿನ ಒತ್ತಡ ಕಾಣಿಸಿಕೊಳ್ಳಬಹುದು.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಎಲ್ಲರೂ ಹತ್ತಿರ ಹೇಳಿಕೊಂಡು ಬಂದಿದ್ದಾರೆ ಎಂಬ ಕಾರಣಕ್ಕಾಗಿಯೇ ಕೆಲವು ಕೆಲಸಗಳನ್ನು ಪೂರ್ಣ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿಕೊಳ್ಳಲಾಗಿದೆ. ದಾಕ್ಷಿಣ್ಯಕ್ಕೆ ಸಿಕ್ಕಿಬೀಳದೆ ಒಂದು ವೇಳೆ ಬೇಡ ಎನಿಸಿದ್ದನ್ನು ಈಗಿರುವ ಸ್ಥಿತಿಯಲ್ಲೇ ಬಿಟ್ಟು ಬಿಡುವುದು ನಿಮಗೆ ಹೆಚ್ಚು ನಷ್ಟವಾಗದಂತೆ ತಡೆಯಲಿದೆ. ಇನ್ನು ನಿಮ್ಮಲ್ಲಿ ಯಾರಿಗೆ ಚರ್ಮ, ಕೂದಲಿಗೆ ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆಗಳು ಇದ್ದಲ್ಲಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದಕ್ಕೆ ಗಮನ ಕೊಡಿ. ಸ್ವಂತ ವ್ಯವಹಾರ- ವ್ಯಾಪಾರ ಆರಂಭ ಮಾಡಬೇಕು ಎಂದು ಹಣಕಾಸು ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದಲ್ಲಿ ಅದು ಸಾಧ್ಯವಾಗಲಿದೆ. ವಾಹನ ಖರೀದಿಗಾಗಿ ಬ್ಯಾಂಕ್- ಬ್ಯಾಂಕೇತರ ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿದ್ದರೆ ಅದು ಸಿಗುವ ಬಗ್ಗೆ ಖಾತ್ರಿ ದೊರೆಯಲಿದೆ. ಈ ಬಗ್ಗೆ ನಿಮಗೆ ಕಾಡುತ್ತಿರುವ ಆತಂಕ ದೂರ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮಲ್ಲಿ ಈಗ ಕೆಲವರು ಮನೆಯಲ್ಲಿ ಇರುವ ಹಳೇ ವಸ್ತುಗಳು ಅಥವಾ ನಿರುಪಯುಕ್ತ ಆದಂಥ ವಸ್ತುಗಳನ್ನು ಮಾರಾಟ ಮಾಡುವುದಕ್ಕೋ ಅಥವಾ ಯಾರಿಗಾದರೂ ಕೊಟ್ಟುಬಿಡುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ದೇವತಾ ಕಾರ್ಯಗಳನ್ನು ಆಯೋಜನೆ ಮಾಡುವ ಸಲುವಾಗಿ ಸಿದ್ಧತೆಗಳನ್ನು ಪ್ರಾರಂಭಿಸುವ ಯೋಗ ಇರುವಂತೆ, ನಿಮ್ಮ ಸ್ನೇಹಿತರ ಮನೆಯ ಕಾರ್ಯಕ್ರಮಗಳಿಗೆ ಸಹ ನೀವು ಚಾಲನೆ ನೀಡಬೇಕಾಗಬಹುದು. ವೃತ್ತಿಪರರಿಗೆ ಹೊಸ ಅವಕಾಶಗಳನ್ನು ಹುಡುಕಿಕೊಂಡು ಬರಬಹುದು. ಈ ಹಿಂದೆ ನೀವಾಗಿಯೇ ಬೇಡ ಎಂದು ಮುರಿದುಕೊಂಡ ಒಪ್ಪಂದಗಳನ್ನು ಮತ್ತೆ ಮುಂದುವರಿಸುವಂತೆ ಸಂಬಂಧಿಸಿದವರು ನಿಮ್ಮನ್ನು ಕೇಳಿಕೊಳ್ಳಬಹುದು. ಯಾವುದನ್ನು ಇನ್ನು ಮುಂದೆ ಕಷ್ಟ ಆಗಬಹುದು ಎಂದುಕೊಂಡಿರುತ್ತೀರೋ ಅದರಿಂದ ಹೊರಬರುವ ಮಾರ್ಗೋಪಾಯಗಳು ಗೋಚರವಾಗಲಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮಲ್ಲಿ ಕೆಲವು ಪಡೆದಂಥ ಸಾಲಗಳನ್ನು ತೀರಿಸುವ ಕುರಿತು ಆಲೋಚನೆ ಮಾಡಲಿದ್ದೇವೆ. ಅದಕ್ಕಾಗಿ ನೀವು ಮಾಡಿದಂತಹ ಉಳಿತಾಯ, ಹೂಡಿಕೆ ಹಣವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ. ಯಾರ ಮನೆಯಿಂದ ದೂರದ ಪ್ರದೇಶದಲ್ಲಿ ವ್ಯಾಸಂಗ, ಉದ್ಯೋಗ ಮಾಡುತ್ತಾ ಇರುವಿರೋ ಅಂಥವರಿಗೆ ಮನೆಯ, ಕುಟುಂಬದ ನೆನಪು ವಿಪರೀತವಾಗಿ ಕಾಡಲಿದೆ. ಆರೋಗ್ಯಕ್ಕಾಗಿ ನಿಮ್ಮ ಕಾಳಜಿ ಹೆಚ್ಚಾಗುವ ಅವಕಾಶಗಳು ಇರುತ್ತವೆ, ಅದಕ್ಕಾಗಿ ಉಪಕರಣಗಳನ್ನು ಖರೀದಿಸಲು ಮುಂದಾಗಿದೆ. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡುವುದಕ್ಕೆ ಶುರು ಮಾಡಲಿದ್ದೀರಿ. ಅಗತ್ಯಕ್ಕಿಂತ ತುಂಬ ಚಿಂತೆ ಮಾಡುತ್ತಿದ್ದೀರಿ ಎಂದು ನಿಮ್ಮ ಆಪ್ತರ ಬಳಿ ಹೇಳಲಾಗುವುದು, ಒಂದು ಹಂತಕ್ಕೆ ಇದೇ ಭಾವನೆ ನಿಮ್ಮಲ್ಲೂ ಮೂಡಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಮನೆಗೆ ಟೀವಿ, ಫ್ರಿಜ್ ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಂಥ ಯೋಗ ಇದೆ. ನಿಮಗೆ ಅಗತ್ಯ ಇದ್ದಾಗ ನೆರವು ನೀಡುವುದಾಗಿ ಮಾತು ನೀಡಿದ್ದವರಿಂದ ನೆರವು ಪಡೆಯುವ ಕುರಿತು ನಿಮ್ಮಲ್ಲಿ ಯಾರಾದರೂ ಸಲಹೆ ಮಾಡಲಿದ್ದೇನೆ. ವ್ಯಾಪಾರ- ವ್ಯವಹಾರ ಆರಂಭಿಸಬೇಕು ಎಂದಿರುವವರಿಗೆ ತಂದೆ ಅಥವಾ ತಂದೆ ಸಮಾನರಾದವರಿಂದ ನೆರವು ನೀಡುವ ಭರವಸೆ ದೊರೆಯಲಿದೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ವಿಪರೀತ ಒತ್ತಡ ಬೀಳಲಿದೆ. ನಿಮ್ಮ ಬಳಿ ಇರಿಸಿಕೊಳ್ಳುವಂತೆ ನೀಡಿದ ದಾಖಲೆ ಪತ್ರ, ಪತ್ರಗಳನ್ನು ಜೋಪಾನವಾಗಿ ನೋಡಿಕೊಳ್ಳುವುದು ಈ ದಿನದ ಮುಖ್ಯ ಸಮಾರಂಭ. ಒಂದು ಸ್ಥಳದಿಂದ ಮತ್ತೊಂದು ಕಡೆ ಹೋದಾಗ ಸಾಮಾನ್ಯವಾಗಿ ತೆಗೆದುಕೊಳ್ಳುವಾಗ ಹೆಚ್ಚಿನ ಲಕ್ಷ್ಯ ನೀಡುವುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಕೆಲಸ- ಕಾರ್ಯಗಳಲ್ಲಿಯೇ ಮುಳುಗಿ ಹೋಗುವಂತೆ ಆಗುತ್ತದೆ. ಕುಟುಂಬಕ್ಕೆ ಲಕ್ಷ್ಯ ನೀಡುತ್ತಿಲ್ಲ ಎಂದು ನಿಮ್ಮ ಬಗ್ಗೆ ಆಕ್ಷೇಪಣೆ ಕೇಳಬಹುದು. ಅಥವಾ ನಿಮಗೇ ಇನ್ನು ಹೀಗೇ ಇದ್ದರೆ ಆಗಲ್ಲ ಎಂಬ ಭಾವನೆಯೊಂದು ಮೂಡಬಹುದು. ಒಂದು ವೇಳೆ ಒಂದು ವೇಳೆಯಾದರೂ ಮನೆ ನಿರ್ಮಾಣ, ನವೀಕರಣ ಕಾಮಗಾರಿ ಹಿಡಿಸಿಕೊಂಡಲ್ಲಿ ಅದು ನಿಧಾನವಾಗುತ್ತಿದೆ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಖರ್ಚು ಆಗುತ್ತಿದೆ ಎಂದು ಬಲವಾಗಿ ಅನಿಸಲಿದೆ. ವಾಸ್ತವವನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ನಿಮ್ಮಲ್ಲಿ ಕೆಲವರು ಕುಟುಂಬದ ಸದಸ್ಯರ ಜೊತೆಗೆ ಜಗಳ- ಕಲಹ ಮಾಡಿಕೊಳ್ಳಬಹುದು. ಇತರರ ವೈಯಕ್ತಿಕ ನಿರ್ಧಾರಗಳಲ್ಲಿ ತುಂಬ ಮೂಗು ತೂರಿಸುವುದಕ್ಕೆ ಹೋಗಬೇಡಿ. ಅದೇ ರೀತಿ ಅತಿ ಉತ್ಸಾಹದಿಂದ ತಮಾಷೆಗೆ ಆಡಿದ ಮಾತುಗಳೇ ಇತರರನ್ನು ಘಾಸಿಗೊಳಿಸಬಹುದು. ಹಾಗೆ ಆ ಕಡೆಗೂ ಲಕ್ಷ್ಯವನ್ನು ನೀಡಿ. ಮಾತಾಡುವಾಗ ಬಳಸುವ ಪದಗಳ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಿ.
ಲೇಖನ- ಎನ್.ಕೆ.ಸ್ವಾತಿ