Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 26ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 26ರ ದಿನಭವಿಷ್ಯ


ಸಂಖ್ಯಾಶಾಸ್ತ್ರದ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 26 ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗುತ್ತದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 26 ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನವ ವಿವಾಹರ ಮಧ್ಯೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅದರಲ್ಲಿಯೂ ಹಣಕಾಸಿನ ವಿಚಾರಕ್ಕೆ ಸಣ್ಣದಾಗಿ ಪ್ರಾರಂಭವಾಗುವ ಕಲಹ ತೀರಾ ಮನಶ್ಶಾಂತಿ ಹಾಳು ಮಾಡುವ ಮಟ್ಟಕ್ಕೆ ಹೋಗಲಿದೆ. ನೀವು ಒಂದು ವೇಳೆ ಸಾಲವನ್ನು ಸ್ವೀಕರಿಸಿದ್ದೀರಿ ಎಂದಾದಲ್ಲಿ ತಕ್ಷಣವೇ ಹಿಂತಿರುಗಿಸುವಂತೆ ಯಾರಾದರೂ ಕುತ್ತಿಗೆ ಮೇಲೆ ಕುಳಿತಿರುವಂತಹ ಅನುಭವ ನಿಮಗೆ ಆಗಲಿದೆ. ಇತರರನ್ನು ಓಲೈಕೆ ಮಾಡುವ ಸಲುವಾಗಿ ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವ ಸಾಧ್ಯತೆಯಿದೆ ಈ ದಿನ ಕಾಣಿಸುತ್ತಿದೆ. ಮುಖ್ಯವಾದ ಕಾಗದ ಪತ್ರಗಳ ವಿಚಾರಗಳು ಇದ್ದಲ್ಲಿ ಈ ದಿನ ಸಾಧ್ಯವಾದಷ್ಟು ಮುಂದಕ್ಕೆ ಹಾಕುವುದು ಉತ್ತಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಒಂದು ವೇಳೆ ರಾಜೀ-ಸಂಧಾನ ಆಗುವಂಥ ಅಸಮಾಧಾನಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಆದರೆ ನಿಮ್ಮ ಹಠಮಾರಿತನ ಧೋರಣೆಯಿಂದ ಸಮಸ್ಯೆಗಳನ್ನು ಮಾಡಿಕೊಳ್ಳಲು ಎಂಬಂತಹ ಸನ್ನಿವೇಶಗಳಿವೆ. ಹಾಗಾಗಿ ಈ ದಿನ ಕೆಲವು ಪರಿಸ್ಥಿತಿಯಲ್ಲಿ ನಾನು ಹೇಳಿದ್ದೆ ಆಗಬೇಕು ಎಂಬ ಮೊಂಡುತನ ಬೇಡ. ಹೊಸದಾಗಿ ಪರಿಚಯವಾಗುವ ವ್ಯಕ್ತಿಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಸೆಕೆಂಡ್ ಹ್ಯಾಂಡ್ ಮನೆ ನಿರ್ಮಾಣ ವಸ್ತುಗಳು, ಕುರ್ಚಿ- ಸೋಫಾ ಅಥವಾ ಬೇರೆ ಯಾವುದಾದರೂ ಈ ದಿನ ಖರೀದಿ ಮಾಡದಿರುವುದು ಉತ್ತಮ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹಿಂದಿನ ನಿಮ್ಮ ಅನುಭವಗಳು ಮತ್ತು ಘಟನೆಗಳು ಬಹಳಷ್ಟು ಬದಲಾವಣೆಗಳು ನಿಮ್ಮಲ್ಲಿ ಆಗಲಿದೆ. ಈ ದಿನ ಪ್ರತಿ ವಿಚಾರದಲ್ಲೂ ವ್ಯವಹಾರದ ಲೆಕ್ಕಾಚಾರವನ್ನೇ ಹಾಕಿದೆ. ಇದನ್ನು ಮಾಡುವುದರಿಂದ ನನಗೇನು ಲಾಭ ಎಂಬ ಧೋರಣೆ ಇರಲಿದೆ. ನಿಮ್ಮ ಈ ಸ್ವಭಾವದ ಸ್ನೇಹಿತರು ಅಥವಾ ಗೊಂದಲಕ್ಕೆ ಸಿಲುಕುತ್ತಾರೆ. ನಿಮ್ಮಲ್ಲಿ ಕೆಲವರಿಗೆ ಐಷಾರಾಮಿ ಕಾರು ಖರೀದಿ ಮಾಡುವ ಯೋಗ ಇದೆ. ಕೆಲವು ಈ ದಿನ ಅಡ್ವಾನ್ಸ್ ನೀಡಿ ಬುಕ್ ಸಹ ಮಾಡುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ವಿದೇಶದಲ್ಲಿರುವ ಪ್ರತಿಷ್ಠಿತ ಸಂಘ- ಸಂಸ್ಥೆಗಳಿಂದ ನಿಮ್ಮಲ್ಲಿ ಕೆಲವರಿಗೆ ಸನ್ಮಾನ- ಗೌರವ ಅಥವಾ ಹಣಕಾಸಿನ ಅನುದಾನಗಳು ದೊರೆಯುವ ಮಾಹಿತಿ ದೊರೆಯಲಿದೆ. ನಿಮ್ಮ ಸ್ಥಿರಾಸ್ತಿ ಮೇಲಕ್ಕೆ ಕೆಲವನ್ನು ಮಾಡುವುದಕ್ಕೆ ಪ್ರಯತ್ನಿಸಿದೆ. ಪರಿಸರ ಪ್ರೇಮಿಗಳು, ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರು, ಪ್ರಾಣಿ ದಯಾ ಸಂಘಗಳಲ್ಲಿ ಇರುವವರಿಗೆ ಪ್ರಮುಖವಾದ ದಿನ ಇದಾಗಿದೆ. ಅದೆಷ್ಟೇ ಸಣ್ಣ ಕೆಲಸ ಅಂತಾದರೂ ಹೆಚ್ಚಿನ ಗಮನ ಇಟ್ಟು, ಮಾಡುವುದಕ್ಕೆ ಪ್ರಯತ್ನಿಸಿ. ಇತರರ ಪ್ರಭಾವಕ್ಕೆ ನೀವು ಒಳಗಾಗುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವು ನಂಬಿಕೆ ಇಟ್ಟುಕೊಂಡಿರುವ ವ್ಯಕ್ತಿಗಳಿಂದ ದೊಡ್ಡ ಮಟ್ಟದ ಸಹಾಯಗಳು ಆಗಲಿವೆ. ಕೆಲವು ಹೊಸ ಪರಿಚಯಗಳಿಂದ ಪ್ರಭಾವದ ವ್ಯಾಪ್ತಿ ವಿಸ್ತರಣೆ ಆಗುವುದಕ್ಕೂ ಅನುಕೂಲ ಒದಗಿ ಬರಲಿದೆ. ನಿಮ್ಮಲ್ಲಿ ಕೆಲವರಿಗೆ ಈ ದಿನ ಆಭರಣಗಳನ್ನು ಖರೀದಿಸಲು ಯೋಗ್ಯವಾಗಿದೆ. ಅದರಲ್ಲೂ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಅಥವಾ ವಜ್ರಾಭರಣಗಳನ್ನು ಖರೀದಿಸಲಾಗಿದೆ. ಚಿನ್ನದ ಚೀಟಿಯನ್ನು ಕಟ್ಟುವುದಕ್ಕೆ ಪ್ರಾರಂಭವಾಗುವ ಅಥವಾ ಕಟ್ಟುವಾಗ ಇನ್ನೂ ಒಂದು ಹೆಚ್ಚುವರಿಯಾಗಿ ಆರಂಭಿಸುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಬೇರೆಯವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಬಹಳ ಮುಖ್ಯ ವಸ್ತು. ಇನ್ನೊಂದು ಕಡೆ ನಿಮ್ಮ ಆರ್ಥಿಕ ಪರಿಸ್ಥಿತಿ ಚಿಂತೆಗೆ ಕಾರಣ. ಆದಾಯ ಹೆಚ್ಚಿಸಿಕೊಳ್ಳಬೇಕು ಎಂಬ ನಿಮ್ಮ ಪ್ರಯತ್ನಗಳು ಫಲ ನೀಡದೆ ಗೊಂದಲಕ್ಕೆ ಗುರಿಯಾಗುತ್ತವೆ. ಯಾವುದೇ ದೊಡ್ಡ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಬೇಡಿ. ಇನ್ನೂ ನಿಮ್ಮ ಕೈಗೆ ಸೇರದ ಹಣವನ್ನು ನೆಚ್ಚಿಕೊಂಡು ಯಾರಿಗೂ ಮಾತು ಕೊಡಲು ಹೋಗಬೇಡಿ. ಸಂಗಾತಿಯ ಸಲಹೆಯನ್ನು ತೆಗೆದುಕೊಳ್ಳಲಾಗಿಲ್ಲ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮಗೆ ಎಷ್ಟು ಆಪ್ತರು ಅಥವಾ ಹತ್ತಿರದವರೇ ಆದರೂ ಇತರರ ವೈಯಕ್ತಿಕ ವಿಚಾರಗಳಿಗೆ, ಪ್ರೀತಿ- ಪ್ರೇಮದ ಸಂಗತಿಗಳಿಗೆ ನೀವು ತಲೆ ಹಾಕಲು ಹೋಗಬೇಡಿ. ಒಂದು ವೇಳೆ ಮಧ್ಯಸ್ಥರಾಗಿ ನಿಮಗೆ ಆಹ್ವಾನ ನೀಡಲು ಸಹ ಒಪ್ಪಿಕೊಳ್ಳದೇ ಇರುವುದು ಒಳ್ಳೆಯದು. ಒಂದು ವೇಳೆ ನೀವೇ ಅತ್ಯುತ್ಸಾಹದಿಂದ ಯಾವುದಾದರೂ ಇಂತಹ ವಿಚಾರಗಳಲ್ಲಿ ತೊಡಗಿಸಿಕೊಂಡಿರೋ ನಿಂದೆ ಆರೋಪಗಳಿಗೆ ಗುರಿಯಾಗುವುದು ನಿಶ್ಚಿತ. ಈ ಹಿಂದೆ ಯಾವಾಗಲೂ ಹೂಡಿಕೆ ಮಾಡಿದ್ದು, ಭೂಮಿಗೆ ಸಂಬಂಧಿಸಿದಂತಹ ಹೂಡಿಕೆ ಇದ್ದಲ್ಲಿ ಅದನ್ನು ಖರೀದಿಸುವ ಬಗ್ಗೆ ಯೋಚಿಸಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಬಹು ದಿನಗಳ ಕನಸು ಸಾಕಾರ ಆಗುವಂಥ ಸುಳುಹು ನಿಮಗೆ ದೊರೆಯಲಿದೆ. ಇನ್ನು ವ್ಯಾಪಾರ, ವ್ಯವಹಾರ ಅಥವಾ ಉದ್ಯಮವನ್ನು ಆರಂಭಿಸುವ ಉದ್ದೇಶದಿಂದ ಹಣಕಾಸನ್ನು ಹೊಂದಾಣಿಕೆ ಮಾಡಲು ಪ್ರಯತ್ನ ಪಡುತ್ತಿರುವವರಿಗೆ ಈ ದಿನ ಒಳ್ಳೆ ಸುದ್ದಿ ಇದೆ. ಇಷ್ಟು ಸಮಯ ಒಂದು ವೇಳೆ ಕುಟುಂಬದ ಒಳಗಿನಿಂದ ಏನಾದರೂ ವಿರೋಧಗಳು ಬರುತ್ತಿದ್ದವು ಈಗ ಅವರ ಸಹಕಾರ ದೊರೆಯಲಿದೆ. ವಿದೇಶಗಳಲ್ಲಿ ಉದ್ಯೋಗಕ್ಕೋ ಅಥವಾ ವ್ಯಾಸಂಗಕ್ಕೋ ಪ್ರಯತ್ನ ಪಡುತ್ತಾ ಇರುವವರಿಗೆ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಸಹಾಯಗಳು ದೊರೆಯಲಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ನಿಮ್ಮ ಏಕಾಗ್ರತೆ- ಗಮನವೇ ಒಂದು ಬಗೆಯಲ್ಲಿ ವಿಚಿತ್ರವಾಗಿ ಇರಲಿದೆ. ಇತರರನ್ನು ಮೆಚ್ಚಿಸುವ ಪ್ರಯತ್ನದಲ್ಲಿ ಒತ್ತಡಕ್ಕೆ ಸಿಲುಕಿಕೊಳ್ಳಲಾಗಿದೆ. ನಿಮ್ಮ ಬಳಿ ಇರುವ ಹಣಕ್ಕೆ ಮಾತ್ರ ಖರ್ಚನ್ನು ಯೋಜನೆ ಮಾಡುವುದು ಉತ್ತಮ. ನೆನಪಿನಲ್ಲಿ ಇರಬೇಕಾದದ್ದು ಏನೆಂದರೆ, ಅದೆಷ್ಟೇ ಕೆಲಸ ಅಂತಾದರೂ ನಿರೀಕ್ಷೆ ಮಾಡಿದ್ದಕ್ಕಿಂತ ಜಾಸ್ತಿ ಖರ್ಚು ಆಗಲಿದೆ. ಮನೆಯ ದುರಸ್ತಿ, ಕಚೇರಿ, ವಾಹನಗಳನ್ನು ಸರ್ವೀಸ್‌ಗೆ ಬಿಡುವುದು ಇಂಥ ಯಾವುದೇ ಕೆಲಸವಾದರೂ ಎಷ್ಟು ಖರ್ಚು ಬರಬಹುದು ಎಂದು ಲೆಕ್ಕ ಹಾಕಬೇಕು.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *