
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗುತ್ತದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 31 ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಬಗ್ಗೆ ಗಾಸಿಪ್ ಹರಿದಾಡಲಿದೆ. ಅದರ ಮೂಲ ಯಾವುದು, ಯಾರು ಈ ರೀತಿ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಪತ್ತೆ ಹಚ್ಚುವುದಕ್ಕೆ ಹರಸಾಹಸ ಪಡುವಂತೆ ಆಗಲಿದೆ. ಮನೆಯ ಮಟ್ಟಿಗೆ ಮಾಡೋಣ ಎಂದುಕೊಂಡಿದ್ದ ಕಾರ್ಯಕ್ರಮ ಒಂದನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಆಲೋಚನೆ ಮಾಡಲಿಲ್ಲ. ಸಂಗೀತಗಾರರಿಗೆ ದೂರದವರಿಗೆ ಆಹ್ವಾನ ಬರಲಿದೆ. ನಿಮಗೆ ಆ ಸ್ಥಳಕ್ಕೆ ಪದೇಪದೇ ಹೋಗಬೇಕಾಗುವ ರೀತಿಯಲ್ಲಿ ಬಾಂಧವ್ಯ ಗಟ್ಟಿ ಆಗಲಿದೆ. ಉದ್ಯೋಗಸ್ಥರಿಗೆ ಕೆಲವು ಸಮಯದವರೆಗೆ ಬೇರೆ ಆಯ್ಕೆಯೋ ಅಥವಾ ಬೇರೆ ಕ್ಲೈಂಟ್ ಗಾಗಿಯೋ ಕೆಲಸ ಮಾಡುವಂತೆ ಹೇಳಬಹುದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಯಾರು ಏನೆಂದುಕೊಂಡರೆ ನನಗೇನು ಅನಿಸಿದ್ದನ್ನು ನೇರಾನೇರಾ ಹೇಳಿಬಿಡುತ್ತೇನೆ ಎಂಬ ಸ್ಥಿತಿಯಲ್ಲಿ ಈ ದಿನ ನೀವು ಇರಲಿದ್ದೀರಿ. ನಿಮ್ಮ ಈ ಸ್ವಭಾವದಿಂದ ಕುಟುಂಬ ಸದಸ್ಯರಲ್ಲಿ ಆತಂಕ ಎದುರಾಗಲಿದೆ. ನಿಮಗೆ ತಿಳಿಹೇಳುವುದಕ್ಕೆ ಸಹ ಪ್ರಯತ್ನ ಮಾಡಲಿದ್ದಾರೆ. ತಾತ್ಕಾಲಿಕ ಉದ್ಯೋಗದಲ್ಲಿ ಇರುವಂಥವರಿಗೆ ಈಗ ಇರುವಂಥ ಕೆಲಸವೇ ಕಾಯಂ ಆಗುವ ಅಥವಾ ಬೇರೆಡೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ನಿಮಗೆ ಸಂಬಂಧವಿಲ್ಲದ ವಿಷಯ ಎಂದುಕೊಂಡು ದೂರ ಇದ್ದುಬಿಟ್ಟಿದ್ದ ಕೆಲವು ಸಂಗತಿಗಳನ್ನು ನೀವೇ ಮುಂದೆ ನಿಂತು ತುರ್ತಾಗಿ ಪರಿಹರಿಸಬೇಕಾದ ಸನ್ನಿವೇಶ ಎದುರಾಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹೊಸ ವಿಚಾರಗಳು, ನೀವು ಈ ತನಕ ಕಂಡಿರದ ಕೆಲವು ಸನ್ನಿವೇಶಗಳನ್ನು ಕಾಣಬಹುದಾಗಿದೆ. ಇವು ನಿಮ್ಮ ಬಾಳಿನಲ್ಲಿ ಹೊಸ ಬದಲಾವಣೆಗಳನ್ನು ತರಲಿವೆ. ಒಂದು ಬಗೆಯ ಸುರಕ್ಷತೆ ಭಾವ ನಿಮ್ಮಲ್ಲಿ ಮನೆ ಮಾಡಲಿದೆ. ಸ್ನೇಹಿತರ ಸಲಹೆ ನಿಮಗೆ ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ಬರಲಿದೆ. ದಾನ- ಧರ್ಮಕ್ಕಾಗಿ ಸ್ವಲ್ಪ ಮೊತ್ತದ ಹಣವನ್ನಾದರೂ ಖರ್ಚು ಮಾಡಿದೆ. ಯಾವುದಾದರೂ ಒಂದು ಕಾರಣಕ್ಕೆ ಮನೆಯ ಹೊರಗಿನ ಊಟ- ತಿಂಡಿಯನ್ನೇ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನೀವು ಬಹಳ ಕಾಲದಿಂದ ತಿಳಿದುಕೊಳ್ಳಬೇಕು ಎಂದು ಬಯಸುತ್ತಿರುವ ಮಾಹಿತಿಯ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬರಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಕುಟುಂಬದಲ್ಲಿ ಆಗುವಂಥ ಕೆಲವು ಬೆಳವಣಿಗೆಗಳಿಂದ ನಿಮಗೆ ನಿರಾಶೆ ಮೂಡಲಿದೆ. ನೀವು ನೀಡಿದ ಸಲಹೆಗಳಿಂದ ಅನುಕೂಲ ಆಗಲಿದೆ ಎಂದು ಗೊತ್ತಾದರೂ ನಿರ್ಲಕ್ಷ್ಯ ಮಾಡುವವರಿಂದ ಬೇಸರ ಆಗಲಿದೆ. ಮಕ್ಕಳಿಗೆ ಏನು ಆಹಾರ ನೀಡುತ್ತೀರಿ ಎಂಬ ಬಗ್ಗೆ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಲಕ್ಷ್ಯವನ್ನು ವಹಿಸಿ. ಉದ್ಯೋಗಸ್ಥರಿಗೆ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಲಿವೆ. ಕೆಲಸ- ಕಾರ್ಯ ಪೂರ್ಣ ಮಾಡಲು ವಿಳಂಬ ಆಗಲಿದೆ. ಇಷ್ಟು ಸಮಯದೊಳಗೆ ಕೆಲಸ ಮಾಡಿಕೊಡುವುದಾಗಿ ಮಾತು ನೀಡುವ ಮೊದಲು ಅದು ಸಾಧ್ಯವಾ ಎಂಬ ಬಗ್ಗೆ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಹೊಸದಾಗಿ ಕೆಲಸದ ಹುಡುಕಾಟದಲ್ಲಿ ಇರುವವರು ಉದ್ಯೋಗ ಬದಲಾವಣೆಗಾಗಿ ತೀವ್ರವಾದ ಪ್ರಯತ್ನವನ್ನು ಪ್ರಾರಂಭಿಸುವಿರಿ. ಸಿ.ವಿ. ಸಿದ್ಧತೆ ಮಾಡಿಕೊಳ್ಳುವುದು ಹಾಗೂ ಸೋಶಿಯಲ್ ನೆಟ್ ವರ್ಕ್ ಮೂಲಕ ಏನು ರೆಫರೆನ್ಸ್ ಪಡೆದುಕೊಳ್ಳಲು ಸಾಧ್ಯವೋ ಆ ಎಲ್ಲವನ್ನೂ ಒಂದರ ನಂತರ ಒಂದರಂತೆ ಎಂಬ ರೀತಿಯಲ್ಲಿ ತೆಗೆದುಕೊಳ್ಳುವ ಇಂತಹವುಗಳನ್ನು ಮಾಡುವುದಕ್ಕೆ ದಿನದ ಹೆಚ್ಚಿನ ಸಮಯ ಹೋಗಲಿದೆ. ಮನೆಗೆ ಬೇಕಾದ ಕೆಲವು ಯಂತ್ರಗಳು, ಗ್ಯಾಜೆಟ್ಗಳನ್ನು ಖರೀದಿಸಲು ಹಣವನ್ನು ವೆಚ್ಚ ಮಾಡಲಾಗಿರುತ್ತದೆ. ಸೋದರ ಸಂಬಂಧಿಗಳು ನಿಮ್ಮ ಹಣಕಾಸು ಅಗತ್ಯಗಳನ್ನು ಪೂರೈಸಲು ಮುಂದೆ ಬರಲಿದ್ದಾರೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಆನ್ ಲೈನ್ ವ್ಯವಹಾರಗಳನ್ನು ಮಾಡುವಾಗ ಸಾಮಾನ್ಯ ದಿನದಿಂದ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಏಕೆಂದರೆ ಡಬಲ್ ಪೇಮೆಂಟ್ ಆಗಿ, ಆ ನಂತರ ಅದನ್ನು ವಾಪಸ್ ಪಡೆಯಲು ಹರಸಾಹಸ ಪಡುತ್ತಾರೆ. ಉದ್ಯೋಗ ಸ್ಥಳದಲ್ಲಿ ಈ ಹಿಂದೆ ಯಾವಾಗ ಬೇಕಾದರೂ ಪ್ರತೀಕಾರವನ್ನು ಪಡೆಯಲು ಅವಕಾಶ ಸಿಕ್ಕಿಬಿಡುತ್ತದೆ, ಆದರೆ ಆ ಭಾವನೆಯಿಂದ ಹೊರಬಂದು ಬಿಡುವುದರಿಂದ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಲಾರಿ ಅಥವಾ ಭಾರೀ ವಾಹನಗಳು ಚಾಲನೆ ಮಾಡುವವರಿಗೆ ಒಂದಲ್ಲ ಒಂದು ರೀತಿ ಒತ್ತಡದ ಅನುಭವಕ್ಕೆ ಬರಲಿದೆ. ನೀವು ತೋರಿದ ನಿರ್ಲಕ್ಷ್ಯದಿಂದ ನಷ್ಟ ಕಾಣುವಂತಾಯಿತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಬಡ್ಡಿಗೆ ಹಣ ನೀಡುವವರು, ಗಿರವಿ ಅಂಗಡಿ ನಡೆಸುತ್ತಾ ಇರುವವರು, ಸಿನಿಮಾ ಫೈನಾನ್ಷಿಯರ್ ಆಗಿ ಇರುವವರಿಗೆ ಈ ದಿನ ಆದಾಯದಲ್ಲಿ ಹೆಚ್ಚು ಆಗುವಂಥ ಯೋಗ ಇದೆ. ನಿಮ್ಮ ಪ್ರಭಾವ ವಿಸ್ತಾರ ಆಗುವಂಥ ಸಾಧ್ಯತೆಯೂ ಇದೆ. ಒಂದು ವೇಳೆ ಪಾರ್ಟನರ್ ಶಿಪ್ ನಲ್ಲಿ ವ್ಯವಹಾರ ಮಾಡುತ್ತಾ ಬಂದಿದ್ದೀರಿ ಅಂತಾ ಸ್ವತಂತ್ರವಾಗಿ ವ್ಯವಹಾರ ಆರಂಭಿಸುವ ನಿರ್ಧಾರಕ್ಕೆ ಬರುತ್ತೀರಿ. ನೀವು ನಿರೀಕ್ಷೆ ಕೂಡ ಮಾಡಿದರದಂಥ ಹಣ ಕೈ ಸೇರಲಿದೆ. ತಿಂಗಳಿಗೆ ಇಂತಿಷ್ಟು ಆದಾಯ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಾ ಇರುವವರು ಅದಕ್ಕೆ ಬೇಕಾದ ಪ್ರಯತ್ನ ಆರಂಭಿಸುತ್ತೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮಷ್ಟಕ್ಕೆ ನೀವು ಅಂತಿದ್ದರೂ ಕೆಲವು ವಾದ- ವಿವಾದಗಳಿಗೆ ಕೆಲವರು ಎಳೆಯುತ್ತಾರೆ. ದೊಡ್ಡ ಗುಂಪಿನಲ್ಲಿ ಜನರು ಇರುವ ಕಡೆಗೆ ನೀವು ಹೋಗದಿರುವುದು ಉತ್ತಮ. ಇದನ್ನು ಮೀರಿಯೂ ಅಂಥ ಸ್ಥಳದಲ್ಲಿ ನೀವು ಇದ್ದೀರಿ ಅಂತಾ ಮೌನವಾಗಿ ಇರುವುದು ಕ್ಷೇಮ. ಸಹನೆ ಇಟ್ಟುಕೊಂಡು ಬಹಳ ಸಮಯದಿಂದ ಕಾಯುತ್ತಾ ಬಂದಿದ್ದ ಸಾರ್ಥಕ ಎಂಬಂತೆ ಕೆಲವು ಕಾರ್ಯಗಳು ನಿಮ್ಮಂತೆಯೇ- ನಿಮಗೆ ಬೇಕಾದಂತೆಯೇ ಆಗಲಿದೆ. ನಿರ್ಧಾರಿತ ಧ್ವನಿಯಲ್ಲಿ ಹೇಳುವ ಮೂಲಕ ಕೆಲವು ವ್ಯಕ್ತಿಗಳಿಂದ ನೀವಾಗಿಯೇ ಅಂತರವನ್ನು ಕಾಯ್ದುಕೊಳ್ಳಲಾಗಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಮೇಲೆ ದೈವಾನುಗ್ರಹ ಇರಲಿದೆ. ಬಹಳ ಕಷ್ಟ ಆಗಬಹುದು ಎಂದುಕೊಂಡ ಕೆಲಸ- ಕಾರ್ಯ, ವ್ಯವಹಾರಗಳ ನಿರೀಕ್ಷೆಗಿಂತ ಸಲೀಸಾಗಿ ಪೂರ್ಣಗೊಳ್ಳಲಿದೆ. ಹಳೇ ವಸ್ತುಗಳ ಖರೀದಿ- ಮಾರಾಟದಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಸುಮಾರು ಆಗಲಿದೆ. ಬ್ರ್ಯಾಂಡೆಡ್ ವಸ್ತುಗಳನ್ನು ಉಡುಗೊರೆಯಾಗಿ ಸ್ವೀಕರಿಸುವ ಯೋಗ ಇದೆ. ಈ ದಿನ ಪಾಲ್ಗೊಳ್ಳುವ ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ವಧು ಅಥವಾ ವರ ದೊರೆಯುವಂಥ ಯೋಗವಿದೆ. ದೂರದಿಂದಲೂ ಸಂಬಂಧಿಗಳು ನಿಮ್ಮ ಮನೆಗೆ ಬರಲಿದ್ದಾರೆ.
ಲೇಖನ- ಎನ್.ಕೆ.ಸ್ವಾತಿ