Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 20ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 20ರ ದಿನಭವಿಷ್ಯ


ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 20ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಇಲ್ಲಿಯ ಆದಾಯ- ಖರ್ಚು ಮತ್ತು ಭವಿಷ್ಯದಲ್ಲಿ ಮಾಡಿಕೊಳ್ಳಬೇಕಾದ ಉಳಿತಾಯ, ಹೂಡಿಕೆಯ ಬಗ್ಗೆ ಗಣನೀಯ ಚಿಂತನೆ ಮಾಡಿದೆ. ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಿಮಗೆ ಬಹಳ ಆಪ್ತರಾದ ವ್ಯಕ್ತಿಗಳಿಗೆ ಕೆಲವು ಉಡುಗೊರೆ ನೀಡುವ ಚಿಂತನೆ ಮಾಡಲಿದ್ದೇವೆ. ಒಂದು ವೇಳೆ ಪಿತ್ರಾರ್ಜಿತ ಆಸ್ತಿ ವಿವಾದ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ವೇದಿಕೆ ಸಿಗಲಿದೆ. ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಾ ಇರುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಈ ದಿನ ಸಣ್ಣದಾದರೂ ಗಾಯ ಆಗುವಂಥ ಸಾಧ್ಯತೆ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಇನ್ನು ಸಾಕು ಎಂದುಕೊಂಡು ನೀವಾಗಿಯೇ ನಿಲ್ಲಿಸಿರುವ ಕೆಲಸ- ಕಾರ್ಯಗಳನ್ನು ಮತ್ತೆ ಮುಂದುವರಿಸಿಕೊಂಡು ಹೋಗಲೇಬೇಕು ಎಂಬ ಪರಿಸ್ಥಿತಿ ಎದುರಾಗಲಿದೆ. ದೂರ ಪ್ರಯಾಣವೋ ಅಥವಾ ತೀರ್ಥಕ್ಷೇತ್ರಕ್ಕೆ ಅಂತ ಹೊರಟಿದ್ದೇನೆ ಅಂತಾ ಸಾಮಾನ್ಯವಾಗಿ ಹೋಗಬೇಕೆಂದರೆ ಹೆಚ್ಚಿನ ಹಣವನ್ನು ಕೈಲಿಟ್ಟುಕೊಂಡು ಹೊರಡಿ. ಒಂದು ವೇಳೆ ಸ್ವಂತ ವಾಹನದಲ್ಲಿ ತೆರಳುತ್ತಿದ್ದಾಗ ವಾಹನ ಉತ್ತಮ ಸ್ಥಿತಿಯಲ್ಲಿದೆ ಹಾಗೂ ಸರ್ವೀಸ್ ಆಗಿದೆಯಾ ಎಂದು ಸರಿಯಾಗಿ ಪರಿಶೀಲಿಸಿದಾಗ ನಂತರವೇ ಹೊರಡಿ.

ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕುಟುಂಬದ ವಿಚಾರಗಳು ವಿಪರೀತ ಪ್ರಾಮುಖ್ಯ ಪಡೆದುಕೊಳ್ಳಲಿವೆ. ಸಂಗಾತಿಯ ಆರೋಗ್ಯ, ಮಕ್ಕಳ ಶಿಕ್ಷಣ, ತಂದೆ- ತಾಯಿಯ ಪರಿಸ್ಥಿತಿ ಹೀಗೆ ನಾನಾ ವಿಚಾರಗಳು ಏಕಕಾಲಕ್ಕೆ ಮುನ್ನೆಲೆಗೆ ಬರಲಿವೆ. ನಿಮ್ಮ ಕೆಲವು ಸಿದ್ಧಾಂತ- ನಂಬಿಕೆಗಳ ಜೊತೆಗೆ ರಾಜೀ ಮಾಡಿಕೊಳ್ಳಲೇಬೇಕು ಎಂಬ ಸನ್ನಿವೇಶ ಸೃಷ್ಟಿಯಾಗಬಹುದು. ನಿಮ್ಮಲ್ಲಿ ಯಾರು ಕಾಲಿನ ಮೀನಖಂಡದ ಸಮಸ್ಯೆಯಿಂದ ಬಳಲುತ್ತಾ ಇದ್ದೀರಿ, ಅಂಥವರಿಗೆ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ಚರ್ಮ ರೋಗಗಳು ಇದ್ದಲ್ಲಿ ಉಲ್ಬಣಗೊಳ್ಳಬಹುದು.

ಲೇಖನ- ಸ್ವಾತಿ ಎನ್.ಕೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *