ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗುತ್ತದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 25 ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಹಲವು ಶುಭ ಫಲಗಳು ಅನುಭವ ಬರಲಿವೆ. ದೈವಿಕವಾದ ಅನುಗ್ರಹ ನಿಮ್ಮ ಮೇಲಿದೆ ಎಂಬ ಭಾವನೆ ಗಟ್ಟಿಯಾಗಲಿದೆ. ಪ್ರೇಮಿಗಳಿಗೆ, ನವ ವಿವಾಹಿತರಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಯಾರು ಬಾಡಿಗೆ ಆದಾಯದಂಥದ್ದನ್ನು ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಅಂಥವರಿಗೆ ನಿರೀಕ್ಷೆಯಂತೆ ಇರುವ ಆಸ್ತಿಗಳು ಖರೀದಿಗೆ ದೊರೆಯಲಿವೆ. ನಿಮ್ಮ ಕೆಲವು ಕೆಲಸಗಳು- ಕಾರ್ಯಗಳು ಆಗುವುದಕ್ಕೆ ಪ್ರಭಾವ ಬೀರಬೇಕು, ಶಿಫಾರಸು ಮಾಡಬೇಕು ಎಂದಾದರೂ ಇದ್ದಲ್ಲಿ ಅಂತಹವು ಸಹ ಸಾಧ್ಯವಾಗುತ್ತದೆ. ನಿಮ್ಮಲ್ಲಿ ಕೆಲವು ಬೆಲೆ ಬಾಳುವ ಚಿನ್ನಾಭರಣ ಖರೀದಿ, ಅದರಲ್ಲೂ ವಜ್ರದ ಆಭರಣಗಳನ್ನು ಮಾಡುವ ಯೋಗ ಇದ್ದು, ನೀವು ಹಾಕಿಕೊಂಡಂತಹ ಬಜೆಟ್‌ಗಿಂತ ಹೆಚ್ಚಿನ ಮೊತ್ತವನ್ನು ಈ ಖರೀದಿಗಾಗಿ ಖರ್ಚು ಮಾಡಿ. ನಿಮಗೆ ಇದರಿಂದ ಸಂತೋಷ- ಸಮಾಧಾನ ಕೂಡ ದೊರೆಯಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಖರ್ಚಿನ ರೀತಿಯಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ಅಳವಡಿಸಿಕೊಳ್ಳಲು ಈ ದಿನ ತೀರ್ಮಾನ ಮಾಡಲಾಗಿದೆ. ಸೈಟು ಖರೀದಿಯೋ ಅಥವಾ ಮನೆ ನಿರ್ಮಾಣವೋ ಅಥವಾ ಇರುವ ಮನೆ ನವೀಕರಣ ಮಾಡಿಸಬೇಕೋ ಇಂಥ ವಿಚಾರದ ಬಗ್ಗೆ ತಂದೆಯ ಜೊತೆ ಅಥವಾ ಪಿತೃ ಸಮಾನರಾದವರ ಜೊತೆಗೆ ಚರ್ಚೆ ನಡೆಸಲಾಗಿದೆ. ನಿಮಗೆ ಬರಬೇಕಾದ ಹಣ ಎಷ್ಟು ಎಂಬ ಖಚಿತವಾದ ಮೇಲೆ ಕೆಲಸಕ್ಕೆ ವೇಗವಾಗಿದೆ ಎಂದು ಯೋಚಿಸುತ್ತಿದ್ದರೆ ಈ ದಿನ ಸ್ಪಷ್ಟತೆ ಸಿಗಲಿದೆ. ಗೊತ್ತಿದೆ ಎಂದುಕೊಂಡಿದ್ದ ಸಹೋದ್ಯೋಗಿ ಅಥವಾ ಸ್ನೇಹಿತರು/ಆಪ್ತರ ಹಲವು ವಿಚಾರಗಳ ಬಗ್ಗೆ ನಿಮಗೆ ಮಾಹಿತಿಯೇ ಇಲ್ಲ ಎಂಬುದು ಗೊತ್ತಾಗುತ್ತದೆ, ಇದರಿಂದ ಬೇಸರ- ಗಾಬರಿ ಎರಡೂ ಏಕಕಾಲಕ್ಕೆ ಆಗಲಿದೆ. ನಿಮ್ಮ ಎದುರಿಗೆ ಇರುವ ವ್ಯಕ್ತಿಗಳು ಹೆಚ್ಚೆಚ್ಚು ಮಾತನಾಡುವುದಕ್ಕೆ ಹಾಗೂ ನೀವು ಹೆಚ್ಚೆಚ್ಚು ಕೇಳಿಸಿಕೊಳ್ಳುವುದಕ್ಕೆ ಸಮಯವನ್ನು ಮೀಸಲಿಡಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಒಳ್ಳೆಯದು ಬಂದರೆ ಒಂದೋ ಎರಡೋ ಆಗುತ್ತದೆ, ಅದೇ ಕೆಟ್ಟದ್ದು ಒಂದರ ಹಿಂದೆ ಒಂದು ಎಂಬಂತೆ ಆಗುತ್ತದೆ ಎಂಬ ರೀತಿಯಲ್ಲಿ ನಿಮಗೆ ಈ ದಿನ ಮೇಲಿಂದ ಮೇಲೆ ಕೆಟ್ಟ ಸುದ್ದಿ ಕಿವಿಗೆ ಬೀಳುತ್ತದೆ. ಉದ್ಯೋಗದಲ್ಲಿರುವ ನೀವು ಉದ್ಯೋಗದಲ್ಲಿರುವ ಸಂಸ್ಥೆಯಲ್ಲಿ ದೊಡ್ಡ ಜನರಲ್ಲಿ ಕೆಲಸ ಮಾಡಲಿದ್ದಾರೆ ಅಂತಲೋ ನೀವು ಹೂಡಿಕೆ ಮಾಡಿರುವ ರಿಯಲ್ ಎಸ್ಟೇಟ್ ಅಥವಾ ಮಾರುಕಟ್ಟೆಯ ಹಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಅಂತಲೋ ಹೀಗೆ- ಇಂಥವೇ ಮಾತುಗಳು ಕಿವಿ ಮೇಲೆ ಬೀಳುವುದರಿಂದ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ. ನೀವು ಬಹಳ ಇಷ್ಟಪಟ್ಟು ಖರೀದಿ ಮಾಡಿದ್ದೀರಿ ವಿಲಾಸಿ ಕಾರನ್ನೋ ಅಥವಾ ಗೇಟೆಡ್ ಕಮ್ಯೂನಿಟಿಯಲ್ಲಿ ಇರುವಂತಹ ವಿಲ್ಲಾ ಸೈಟು ಇಂಥದ್ದನ್ನೋ ಬೇರೆಯವರ ಬಲವಂತದ ಕಾರಣಕ್ಕೆ ಮಾರಾಟ ಮಾಡುವ ಆಲೋಚನೆ ಮಾಡಿಲ್ಲ. ಒಟ್ಟಿನಲ್ಲಿ ಈ ದಿನದ ಎಚ್ಚರಿಕೆ ಏನೆಂದರೆ, ನಿಮಗೆ ಅತಿಯಾದ ಆಲೋಚನೆ- ಬುದ್ಧಿವಂತಿಕೆ ಮಾಡಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮಗೆ ಗೊತ್ತಿರುವ ಕೌಶಲ, ವಿದ್ಯೆ ಹಾಗೂ ನಿಮಗೆ ಇರುವಂಥ ಈಗಿನ ಅನುಭವಕ್ಕೆ ಬೇಡಿಕೆ ಹೆಚ್ಚಲಿದೆ. ನಿಮ್ಮಲ್ಲಿ ಕೆಲವರಿಗೆ ಏಕಕಾಲಕ್ಕೆ ನಾಲ್ಕಾರು ಕಡೆಯಿಂದ ಉದ್ಯೋಗದ ಆಫರ್ ಬರಬಹುದು. ಸಂಬಳದ ಜೊತೆಗೆ ಲಾಭದಲ್ಲಿ ಸಹ ಇಂತಿಷ್ಟು ಪರ್ಸೆಂಟ್ ಎಂದು ಕೊಡುವುದಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ ನಿಮಗೆ ಪ್ರಸ್ತಾವ ಬರುವಂಥ ಯೋಗ ಇದೆ. ನಿಮ್ಮ ಪಾಲಿಗೆ ಯಾವುದು ಉತ್ತಮ ಆಯ್ಕೆ ಆಗಲಿದೆ ಸರಿಯಾಗಿ ಅಳೆದು- ತೂಗಿ ಮುಂದಕ್ಕೆ ಹೆಜ್ಜೆ ಇಡಿ. ಅದರಲ್ಲಿ, ಟೆಸ್ಟರ್- ಡೆವಲಪರ್ ಇಂಥ ಉದ್ಯೋಗದಲ್ಲಿ ಇರುವವರಿಗೆ ದೊಡ್ಡ ತಂಡದಿಂದ ಮುನ್ನಡೆಸುವ ಅಥವಾ ಕೋ- ಆರ್ಡಿನೇಟರ್ ಆಗಿ ಮುಖ್ಯ ಜವಾಬ್ದಾರಿ ನಿರ್ವಹಿಸುವಂತೆ ಕೇಳಿಕೊಳ್ಳುವ ಸಾಧ್ಯತೆಯಿದೆ. ಕುಟುಂಬದ ವಿಚಾರಗಳಿಗೆ ಹೆಚ್ಚಿನ ಗಮನ ನೀಡುವುದು ಸಾಧ್ಯವೇ ಆಗದೇ ಹೋಗುತ್ತದೆ. ಇದೆ ಸಂಗತಿಯಿಂದ ಆಕ್ಷೇಪದ ಮಾತುಗಳನ್ನು ಕೇಳಿಸಿಕೊಳ್ಳುತ್ತೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಬೇಡ ಅಂದುಕೊಂಡಿದ್ದನ್ನೇ ಮಾಡಬೇಕಾದ ಸನ್ನಿವೇಶಗಳು ಸೃಷ್ಟಿ ಆಗಲಿವೆ. ಯಾವ ವ್ಯಕ್ತಿ ಜೊತೆಗೆ ಈ ವ್ಯವಹಾರ ಮಾಡಬಾರದು, ಹಣಕಾಸಿನ ವಿಷಯ ಮಾತನಾಡಬಾರದು, ಸಾಲ ಕೇಳಬಾರದು, ಜೊತೆಯಾಗಿ ಕೆಲಸ ಮಾಡಬಾರದು ಹೀಗೆ ಅಂದುಕೊಂಡಿರುತ್ತೀರೋ ಅವರಿಗೆ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ನಿಮಗೆ ಸಂಪೂರ್ಣವಾಗಿ ಮಾಹಿತಿ ಇರುವ ವಿಷಯಗಳನ್ನು ಮಾತ್ರ ಮಾತನಾಡಿ. ಇತರರ ವೈಯಕ್ತಿಕ ಸಂಗತಿಗಳು, ಹಣಕಾಸಿನ ಪರಿಸ್ಥಿತಿ ಇಂಥವುಗಳ ಬಗ್ಗೆ ತಮಾಷೆ ಎಂಬಂತೆ ಮಾತನಾಡುವುದಕ್ಕೆ ಹೋಗಬೇಡಿ. ಸರ್ವೇ, ಪೋಡಿ, ಹದ್ದುಬಸ್ತ್ ಈ ರೀತಿ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡು ಮಾಡಬೇಕಾದ ಕೆಲಸ- ಕಾರ್ಯಗಳು ಒಂದಲ್ಲ ಒಂದು ಕಾರಣಕ್ಕೆ ವಿಳಂಬ ಆಗಲಿದೆ. ಯಾರೋ ಕೆಲಸ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದಾರೆ ಎಂದು ಒಬ್ಬರನ್ನೇ ನೆಚ್ಚಿಕೊಂಡು, ಅವರಿಗಾಗಿ ಕಾಯುತ್ತಾ ಕೂರಬೇಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಇನ್ನು ಯಾರ ವೈದ್ಯರ ಮಾರ್ಗದರ್ಶನದಲ್ಲಿ ಪ್ರಯತ್ನ ಮಾಡುತ್ತಾ ಇದ್ದೀರಿ ಅಂಥವರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ. ಪರ್ ಫ್ಯೂಮ್, ದುಬಾರಿ ಬ್ರ್ಯಾಂಡ್ ಗಳ ಬಟ್ಟೆ, ಶೂ ಇಂಥವುಗಳ ಮಾರಾಟ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಲಿದೆ. ದೊಡ್ಡ ಮಟ್ಟದ ಆರ್ಡರ್ ನಿಮ್ಮ ಸ್ನೇಹಿತರೇ ಅಥವಾ ಸ್ನೇಹಿತರ ರೆಫರೆನ್ಸ್ ಮೂಲಕ ಬರುವ ಯೋಗ ಇದೆ. ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ವೇತನ- ಬಡ್ತಿ ದೊರೆಯುವ ಬಗ್ಗೆ ಮಾಹಿತಿ ದೊರೆಯಲಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಸೌಕರ್ಯ- ಸವಲತ್ತಿನ ರೂಪದಲ್ಲಿ ಕಾರು ಅಥವಾ ಕ್ವಾರ್ಟರ್ಸ್ ಇಂಥವುಗಳನ್ನು ನೀಡುವ ಸಾಧ್ಯತೆ ಇದೆ, ಈ ಬಗ್ಗೆ ಮೇಲಧಿಕಾರಿಗಳು ಸುಳಿವು ನೀಡಬಹುದು.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮಲ್ಲಿ ಕೆಲವು ಹೊಸ ಭಾಷೆ ಕಲಿಯುವುದಕ್ಕೆ ಕೋರ್ಸ್ ಗೆ ಸೇರಿಕೊಳ್ಳುವುದರ ಬಗ್ಗೆ ಆಲೋಚನೆ ಮಾಡುತ್ತೀರಿ. ಇಂಟರ್ನ್ ಶಿಪ್ ಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಅವಕಾಶ ಸಿಗಲಿದೆ. ಹಣಕಾಸು ವಿಚಾರದಲ್ಲಿ ನೀವು ಮಾಡಿಕೊಂಡಂಥ ಪ್ಲಾನಿಂಗ್ ಕೈ ಹಿಡಿಯಲಿದೆ. ಸಣ್ಣ ಮಟ್ಟದ ಹೂಡಿಕೆ ಮಾಡಿ ಆರಂಭಿಸಿದ್ದ ವ್ಯವಹಾರ- ವ್ಯಾಪಾರದಲ್ಲಿ ನೀವು ನಿರೀಕ್ಷೆ ಮಾಡಿಲ್ಲದಂಥ ಯಶಸ್ಸು ದೊರೆಯಲಿದೆ. ಅಥವಾ ಅಂಥದ್ದೊಂದು ಬೆಳವಣಿಗೆ ಈ ದಿನ ಆಗಲಿದೆ. ಸ್ನೇಹಿತರ ತೃಪ್ತಿಗಾಗಿ ಹಣಕಾಸಿನ ಸಾಲ ನೀಡಿದರೆ ಅದನ್ನು ವಾಪಸ್ ಪಡೆಯುವ ಅವಕಾಶವಿದೆ. ನಿಮಗಿಂತ ವಯಸ್ಸಿನಲ್ಲಿ ಕಿರಿಯರಾದವರು ನೀಡುವಂಥ ಸಲಹೆಗಳನ್ನು ಸರಿಯಾಗಿ ಪರಿಗಣಿಸಿ, ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ವೃತ್ತಿಪರರಿಗೆ ಹೊಸ ಚಿಕಿತ್ಸೆಗಳು ಏರ್ಪಡುತ್ತವೆ, ದೀರ್ಘಾವಧಿಯಲ್ಲಿ ಅನುಕೂಲಗಳು ಆಗಲಿವೆ.
ಇದನ್ನೂ ಓದಿ: ನವೆಂಬರ್ 23 ರಿಂದ 29 ರವರೆಗೆ ರಾಶಿ ಭವಿಷ್ಯ: ಆನಂದದಿಂದ ಕರ್ತವ್ಯ ನಿರ್ವಹಿಸಿದರೆ ಲಾಭ ಖಚಿತ
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಕೋರ್ಟ್-ಕಚೇರಿಗಳಲ್ಲಿ ವ್ಯಾಜ್ಯಗಳು ನಡೆಯುತ್ತಿದ್ದರೆ ಅವು ಒತ್ತಡವಾಗಿ ಪರಿಣಮಿಸುತ್ತವೆ. ನಿಮ್ಮಲ್ಲಿ ಕೆಲವರಿಗೆ ಆಸ್ತಿ ಕೈ ಬಿಟ್ಟುಹೋಗುವ ಸುಳಿವು ದೊರೆಯಲಿದೆ. ಇನ್ನು ಚಿನ್ನ- ಬೆಳ್ಳಿ ಇಂಥವುಗಳ ಅಡಮಾನ ಮಾಡಿ, ಸಾಲವನ್ನು ಇದ್ದಲ್ಲಿ ಅದು ಹರಾಜಿಗೆ ಬರುವ ಸಾಧ್ಯತೆಯಿದೆ. ನಿಗದಿತ ದಿನಾಂಕಕ್ಕೆ ಹಣ ಮರುಪಾವತಿ ಮಾಡುವ ಕಡೆಗೆ ನಿಮ್ಮ ಲಕ್ಷ್ಯ ಇರಲಿ. ಸ್ವಲ್ಪ ಮೈ ಮರೆತರೂ ಆ ನಂತರ ಪರಿತಪಿಸುವಂತೆ ಆಗಲಿದೆ. ನಿಮ್ಮ ಮನೆ ದೇವರಿಗೋ ಅಥವಾ ಬೇರೆ ಬೇರೆ ದೇವರಿಗೆ ಹರಕೆ ಹೊತ್ತಿದ್ದಲ್ಲಿ ಅವರನ್ನು ಪೂರೈಸುವುದಕ್ಕೆ ಆದ್ಯತೆ ನೀಡಿ. ಕೆಲಸಗಳಲ್ಲಿ ಭಾರೀ ಅಡೆತಡೆ ಆಗುತ್ತದೆ, ನಿಮಗೆ ಬರಬೇಕಾದ ಹಣಕಾಸಿಗೆ ಅಡೆತಡೆ ಆಗುತ್ತಿದೆ ಎಂದಾದರೂ ಅನಿಸುತ್ತದೆ ಎಂದಾದರೆ ಈ ಹಿಂದೆ ನೀವು ಮಾಡಿಕೊಂಡಂಥ ದೇವರ ಹರಕೆಗಳನ್ನು ಪೂರೈಸುವುದು ಸಹ ಕಾರಣ ಆಗಿರಬಹುದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಒಂದು ಬಗೆಯ ಸಮಾಧಾನ- ಸಂತೃಪ್ತಿ ಹಾಗೂ ಸಾರ್ಥಕ್ಯದ ಭಾವ ನಿಮ್ಮಲ್ಲಿ ಇರಲಿದೆ. ಕೊಟ್ಟ ಮಾತಿನಂತೆಯೇ ಹಾಗೂ ಅಂದುಕೊಂಡ ರೀತಿಯಲ್ಲಿ ಕೆಲಸ- ಕಾರ್ಯಗಳನ್ನು ಮಾಡಿಕೊಡಲಿದ್ದೀರಿ. ಹಣಕಾಸಿನ ಒತ್ತಡಗಳಿಂದ ಹೊರಬರಲು ಮಾರ್ಗೋಪಾಯಗಳು ಗೋಚರಿಸಲಿವೆ. ಉತ್ಪನ್ನಗಳು ಅಥವಾ ಕೃಷಿಗೆ ಬೇಕಾದ ಸಲಕರಣೆ, ಯಂತ್ರ, ಗೊಬ್ಬರ, ಕೃಷಿ ಇಂತಹವುಗಳ ಮಾರಾಟ ಮಾಡುತ್ತಿರುವವರು ತಮ್ಮ ವಿಸ್ತರಣೆಯ ಪ್ರಯತ್ನವನ್ನು ಮಾಡಿದ್ದಾರೆ. ನಿಮ್ಮ ಉದ್ದೇಶಕ್ಕೆ ಕೈ ಜೋಡಿಸಲಾಗಿದೆ, ತಾವು ಬಂಡವಾಳ ಹೂಡಿಕೆ ಮಾಡುವುದಾಗಿದೆ ಮುಂದೆ ಬರಲಿದೆ. ನಿಮ್ಮಲ್ಲಿ ಕೆಲವು ಮನೆಯಲ್ಲಿ ಮರದ ಕೆಲಸಗಳನ್ನು ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೇನೆ. ಅಥವಾ ವ್ಯಕ್ತಿಯಿಂದ ನಿಮಗೆ ಬರಬೇಕಾದ ಹಣದ ಬಾಕಿ ಬದಲಾಗಿ ಇಂಥದ್ದೊಂದು ಕೆಲಸ ಮಾಡಿಕೊಟ್ಟುಬಿಡಿ ಎಂದು ಸಹ ಹೇಳುವ ಸಾಧ್ಯತೆ ಇದೆ.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ಮಾಡಿ