
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಇಂದು ಮನೆಗೆ ಬರುವ ಸಂಬಂಧಿಗಳು ಹರ್ಷ ತುಂಬಿದ ವಾತಾವರಣಕ್ಕೆ ಕಾರಣ ಆಗುತ್ತಾರೆ. ವಿದ್ಯಾರ್ಥಿಗಳು ಗಮನ ಕೇಂದ್ರೀಕರಿಸುವುದರಿಂದ ಪರೀಕ್ಷಾ ಸಿದ್ಧತೆ ಸರಿಯಾದ ದಾರಿಗೆ ಬರುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಕಾರ್ಯವಿಧಾನ ಬದಲಾವಣೆ ಹೊಸ ಅವಕಾಶವನ್ನು ತರುತ್ತದೆ, ಮೇಲಧಿಕಾರಿಗಳ ನಿರೀಕ್ಷೆ ಪೂರೈಸಲು ಸ್ಪಷ್ಟ ಸಂವಹನ ಅಗತ್ಯ. ವ್ಯವಹಾರ ನಡೆಸುವವರಿಗೆ ಗ್ರಾಹಕರಿಂದ ಬಂದ ಪ್ರತಿಕ್ರಿಯೆ ಮುಂದಿನ ಯೋಜನೆಗೆ ಮಾರ್ಗದರ್ಶಿಯಾಗುತ್ತದೆ. ಲಾನ್ಸರ್‌ಗಳಿಗೆ ಹೊಸ ಪ್ರಾಕ್ಟ್‌ಗಳ ಉಚಿತ ಪರೀಕ್ಷೆ ಇದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಈ ದಿನ ಹೊಸ ಅವಕಾಶಗಳು ನಿಮ್ಮನ್ನು ಹುಡುಕುತ್ತವೆ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ಹೊಸ ಪ್ರಯತ್ನಗಳಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ. ವ್ಯವಹಾರಸ್ಥರಿಗೆ ಹೊಸ ಗ್ರಾಹಕರು ಮತ್ತು ಒಪ್ಪಂದಗಳಿಂದ ಲಾಭ ಕಾಣಲಿದೆ. ವಿದ್ಯಾರ್ಥಿಗಳಿಗೆ ಹೊಸ ಪಾಠವನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಫ್ರೀಲಾನ್ಸರ್‌ಗಳಿಗೆ ಸೃಜನಾತ್ಮಕ ಯೋಜನೆಗಳಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ, ಹಿರಿಯರ ಮಾರ್ಗದರ್ಶನ ಉಪಯುಕ್ತ ವಸ್ತು. ಪ್ರೀತಿಯ ಸಂಬಂಧಗಳಲ್ಲಿ ಪರಸ್ಪರ ನಂಬಿಕೆಯಿಂದ ವಿಶ್ವಾಸವು ಗಟ್ಟಿಯಾಗುತ್ತದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಈ ದಿನ ನಿಮ್ಮ ತೀಕ್ಷ್ಣ ಅಭಿಪ್ರಾಯ ಮತ್ತು ವಿಶ್ಲೇಷಣಾ ಶಕ್ತಿಯು ವಿವಿಧ ಕ್ಷೇತ್ರದಲ್ಲಿ ಪ್ರಮುಖ ಅವಕಾಶಗಳನ್ನು ತರುತ್ತದೆ. ಉದ್ಯೋಗಸ್ಥರು ಹೊಸ ಯೋಜನೆಗಳೊಂದಿಗೆ ಮೆಚ್ಚುಗೆಯನ್ನು ಪಡೆಯುತ್ತಾರೆ. ವ್ಯವಹಾರಸ್ಥರು ಹೊಸ ಒಪ್ಪಂದಗಳು ಮತ್ತು ಗ್ರಾಹಕರ ವಿಶ್ವಾಸದಿಂದ ಹೆಚ್ಚಿನ ಆದಾಯದ ಮೂಲ ಮತ್ತು ಲಾಭವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಕಠಿಣ-ಸವಾಲು ಎನಿಸಿದ ಪ್ರಾಜೆಕ್ಟ್‌ಗಳಲ್ಲಿ ಯಶಸ್ಸು ಪಡೆಯುತ್ತಾರೆ. ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನದಿಂದ ಸಮಸ್ಯೆಗಳಿಗೆ ಪರಿಹಾರ.
ಲೇಖನ- ಸ್ವಾತಿ ಎನ್.ಕೆ.