ಜನ್ಮಸಂಖ್ಯೆ ೭, ೮, ೯ರ ದಿನಭವಿಷ್ಯವನ್ನು ನೀಡುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 24ರ ಮಂಗವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಯಾರು ದ್ವಿಚಕ್ರ ವಾಹನವನ್ನೋ ಅಥವಾ ಕಾರು ಇತ್ಯಾದಿಗಳನ್ನೋ ಖರೀದಿಸಬೇಕು ಎಂದುಕೊಳ್ಳುತ್ತಾ ಇರುತ್ತೀರಿ ಅದಕ್ಕೆ ಬೇಕಾದ ಹಣಕಾಸಿನ ಹೊಂದಾಣಿಕೆ ಆಗಲಿ, ಅಡ್ವಾನ್ಸ್ ನೀಡಿ- ಬುಕ್ ಮಾಡುವ ಸಾಧ್ಯತೆ ಇದೆ. ಅಥವಾ ಲೋನ್ ಗಾಗಿ ಪ್ರಯತ್ನ ಮಾಡಬೇಕು ಎಂದಿರುವವರು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಮಾತುಕತೆಯನ್ನಾದರೂ ಮಾಡುತ್ತೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಖರ್ಚಿಗೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಾ ಇದ್ದಲ್ಲಿ ಅದು ಈ ದಿನ ದೂರ ಸರಿ. ಹೊಸ ಆದಾಯ ಮೂಲಗಳು ತೆರೆದುಕೊಳ್ಳಲಿವೆ. ಹಣಕಾಸಿನ ಹರಿವು ಸರಾಗ ಆಗಲಿದೆ. ಬಹಳ ಆಪ್ತರಾದವರು ನಿಮ್ಮಲ್ಲಿ ಕೆಲವರಿಗೆ ಉಡುಗೊರೆಗಳನ್ನು ನೀಡುವ ಸಾಧ್ಯತೆಯಿದೆ. ಹೂಡಿಕೆ ಬಗ್ಗೆ ನಿಮಗೆ ಯಾರಾದರೂ ಸಲಹೆ ಕೇಳಿಕೊಂಡು ಬಂದರೆ ಸಾಧ್ಯವಾದಷ್ಟೂ ಯಾವುದೇ ಸಲಹೆ ನೀಡದಿರುವುದು ಉತ್ತಮ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಮನೆಗೆ ಹೊಸದಾದ ಇಂಟರ್ ನೆಟ್ ಸಂಪರ್ಕ ಅಥವಾ ವೈ-ಫೈಗೆ ಸಂಬಂಧಿಸಿದ ಸಲಕರಣೆಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಈ ದಿನ ಇದೆ. ಮ್ಯಾನೇಜರ್ ಅಥವಾ ಅದಕ್ಕಿಂತ ಮೇಲಿನ ಹುದ್ದೆಯಲ್ಲಿ ಇರುವವರಿಗೆ ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಕ್ಕೆ ಕಾರಣ ಏನು ಮತ್ತು ಅದರ ಫಲಿತಾಂಶ ಏನು ಎಂದು ವಿಪರೀತ ಸಮಾಜಾಯಿಷಿ- ಕಾರಣಗಳನ್ನು ನೀಡುವಂತೆ ಆಗಲಿದೆ.
ಲೇಖನ- ಸ್ವಾತಿ ಎನ್.ಕೆ.