Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಗೆ ಇಂದು ವ್ಯಾಪಾರವೋ ವ್ಯವಹಾರವೋ ದೊಡ್ಡದಾಗಿ ಬೆಳೆಯುವ ಸೂಚನೆ ಸಿಗಲಿದೆ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಗೆ ಇಂದು ವ್ಯಾಪಾರವೋ ವ್ಯವಹಾರವೋ ದೊಡ್ಡದಾಗಿ ಬೆಳೆಯುವ ಸೂಚನೆ ಸಿಗಲಿದೆ


ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನೀವು ಇರುವಂಥ ಸ್ಥಳದಲ್ಲಿ ಸಕಾರಾತ್ಮಕ ವಾತಾವರಣ ಇರಲಿದೆ. ಆಲೋಚನೆಯಲ್ಲಿ ಸ್ಪಷ್ಟ ಚಿಂತನೆ, ಸರಿಯಾದ ಮಾರ್ಗದಲ್ಲಿ ನಡೆಯುವುದು ಇತ್ಯಾದಿ ಶುಭ ವಿಚಾರಗಳು ಅನುಭವಕ್ಕೆ ಬರಲಿದೆ. ಲಾಭ ಬರುತ್ತದೆ ಎಂಬ ಕಾರಣಕ್ಕೆ ತೆಗೆದುಕೊಂಡಿರುವ ನಿರ್ಧಾರವನ್ನು ಬದಲಾಯಿಸುವುದಕ್ಕೆ ಹೋಗಬೇಡಿ. ಸ್ನೇಹಿತರ ಬಳಿ ನೀವೇನಾದರು ಸಹಾಯ ಕೇಳಿದ್ದಲ್ಲಿ ಅದು ದೊರೆಯುವ ಎಲ್ಲ ಸಾಧ್ಯತೆಯಿದೆ. ದೀರ್ಘ ಕಾಲದ ಹೂಡಿಕೆಗೆ ಮಹತ್ತರ ಎನಿಸಿದ ಯೋಜನೆ ರೂಪಿಸಲಾಗಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಯಾವುದಾದರೂ ಇರಲಿ ಅಂತ ಮುಂಜಾಗ್ರತೆಯಿಂದ ಕೂಡಿದ ಈ ದಿನ ನಿಮ್ಮ ಸಹಾಯಕ್ಕೆ ಬರಲಿದೆ. ಆರ್ಥಿಕವಾಗಿ ಕೂಡ ಉತ್ತಮ ಬೆಳವಣಿಗೆ ಆಗುವ ಸುಳಿವು ಸಿಗಲಿದೆ. ಊಟ- ತಿಂಡಿ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಶಿಸ್ತಿನಿಂದ ನಡೆದುಕೊಳ್ಳಿ. ಒಂದು ವೇಳೆ ವೈದ್ಯರು ಆಹಾರ ಪಥ್ಯವನ್ನು ಸೂಚಿಸಿದ್ದಲ್ಲಿ ಕಡ್ಡಾಯವಾಗಿ ಪಾಲಿಸಿ. ಆಯುರ್ವೇದ ಅಥವಾ ಜ್ಯೋತಿಷ್ಯ ರೀತಿಯಲ್ಲಿ ಅನುಕೂಲ ತರುವಂಥ ಕೆಲವು ವಸ್ತುಗಳನ್ನು ಮನೆಗೆ ತರುವ ಯೋಗ ಈ ದಿನ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಮರೆವು ಈ ದಿನ ನಿಮಗೆ ಸಮಸ್ಯೆ ತರಬಹುದು. ಮುಖ್ಯವಾದ ಕೆಲಸಗಳನ್ನು ಒಪ್ಪಿಕೊಂಡಿದ್ದಲ್ಲಿ ಅದನ್ನು ನೆನಪಿಸುವ ರೀತಿಯಲ್ಲಿ ಮೊಬೈಲ್ ಫೋನ್‌ನಲ್ಲಿ ರಿಮೈಂಡರ್ ಹಾಕಿ, ಅಥವಾ ಒಂದು ಪುಸ್ತಕದಲ್ಲಿ ಬರೆದಿಡುವುದೋ ಮಾಡಿ. ಸಣ್ಣ ಮಟ್ಟದಲ್ಲಿ ಶುರು ಮಾಡಿದ ವ್ಯಾಪಾರವೋ ವ್ಯವಹಾರವೋ ದೊಡ್ಡದಾಗಿ ಬೆಳೆಯುವ ಸೂಚನೆಯನ್ನು ನೀಡಲಿದೆ. ಭವಿಷ್ಯದಲ್ಲಿ ನಿಮಗೆ ಸಹಾಯ ಆಗಲಿರುವ ಪ್ರಭಾವಿ ವ್ಯಕ್ತಿಯೊಬ್ಬರ ಪರಿಚಯದಿಂದ ಆತ್ಮವಿಶ್ವಾಸ ಜಾಸ್ತಿ ಆಗಲಿದೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *