Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ


ಸಂಖ್ಯಾಶಾಸ್ತ್ರದ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9 ರ ಮಾರ್ಚ್ 16 ರ ದಿನಭವಿಷ್ಯ

ಈ ದಿನ ಸಂಜೆ ಮನೆಯ ಹೊಸ್ತಿಲಲ್ಲಿ ತುಪ್ಪದ ದೀಪ ಹಚ್ಚುವುದರಿಂದ ಕೌಟುಂಬಿಕ ಕಲಹಗಳು ಕಡಿಮೆಯಾಗಿ, ಮನೆಯಲ್ಲಿ ಸುಖದ ವಾತಾವರಣ ನಿರ್ಮಾಣವಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಸೋದರ ಸಂಬಂಧಿಗಳ ಆರ್ಥಿಕ ಸ್ಥಿತಿ ಒಂದಿಷ್ಟು ಒತ್ತಡವನ್ನು ತರಲಿದೆ. ಮಕ್ಕಳ ಆರೋಗ್ಯ ವಿಚಾರವು ಆತಂಕಕ್ಕೆ ಕಾರಣ ಆಗಲಿದೆ. ಈ ಹಣಕಾಸನ್ನು ಹೊಂದಿಸಲು ಹಾಗೂ ಇತರ ಜವಾಬ್ದಾರಿಗಳನ್ನು ನಿರ್ವಹಿಸಲು ಹೆಚ್ಚಿನ ಶ್ರಮವನ್ನು ಹಾಕಲಾಗುತ್ತದೆ. ನಿಮ್ಮ ಮೇಲೆ ಹಗೆ ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಇಂಥವರಿಗೆ ಹೇಗೆ ಉತ್ತರ ಕೊಡಬೇಕು ಎಂದು ಯೋಚಿಸುವಂತೆ ಆಗುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕುಟುಂಬದ ಸಲುವಾಗಿಯೇ ಹೆಚ್ಚು ಸಮಯವನ್ನು ಮೀಸಲಿಡಲಾಗಿದೆ. ಕಾರು ಅಥವಾ ಬೈಕ್ ಸರ್ವೀಸ್ ಮಾಡಿಸಿದ್ದೀರಾ ಎಂದು ನೋಡಿಕೊಳ್ಳಿ. ಒಂದು ವೇಳೆ ಮುಖ್ಯ ವ್ಯಕ್ತಿಯನ್ನು ಭೇಟಿಯಾಗಬೇಕು ಎಂದಿದ್ದಲ್ಲಿ ಸಮಯಕ್ಕೆ ಸರಿಯಾಗಿ ಅಲ್ಲಿರುವಂತೆ ನೋಡಿಕೊಳ್ಳಿ. ಅಲ್ಲಿಗೆ, ಸ್ನೇಹಿತರು ಮನೆಗೆ ತೆರಳಬೇಕು ಎಂದಿದ್ದಲ್ಲಿ ಅಲ್ಲಿನ ಪರಿಸ್ಥಿತಿ, ವಾತಾವರಣ ಹೇಗಿದೆ ಅವಲೋಕಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇವರು ಏನು ನನಗೆ ಹೇಳುವುದು ಎಂಬ ಧೋರಣೆ ಯಾವುದೇ ಕಾರಣಕ್ಕೂ ಬೇಡ. ಈ ದಿನ ನಿಮ್ಮೊಂದಿಗೆ ಮಾತನಾಡುವಾಗ ಶ್ರದ್ಧೆಯಿಂದ ಕೇಳಿಸಿಕೊಳ್ಳಿ. ಈ ಹಿಂದೆ ಯಾವಾಗಲೋ ನಡೆದ ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಯಾವುದೇ ತೀರ್ಮಾನಕ್ಕೆ ಬರಬೇಡಿ. ಇನ್ನು ಈ ದಿನ ಸೋದರ- ಸೋದರಿಯರಿಗೆ ನಿಮ್ಮ ನೆರವಿನ ಅವಶ್ಯಕತೆ ಇದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *