
ಈ ದಿನ ತಾಮ್ರದ ತುಂಬಿಗೆಯಲ್ಲಿ ನೀರು ಹಾಗೂ ಅದರೊಳಗೆ ನಾಣ್ಯ ಹಾಕಿ, ದಾನ ಮಾಡಿ. ಅಥವಾ ಒಂದು ಲೋಟದಲ್ಲಿ ಹಾಲನ್ನು ಹಾಕಿ, ಅದನ್ನು ದಾನ ಮಾಡುವುದರಿಂದ ನಿಮ್ಮ ವಿಶ್ವಾಸಾರ್ಹತೆ. ಜೊತೆಗೆ ಆಸ್ತಿ ವ್ಯಾಜ್ಯಗಳು ದೂರ ಇರುತ್ತವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮ ಪರಿಶ್ರಮಕ್ಕೆ ಮೇಲಧಿಕಾರಿಗಳ ಮೆಚ್ಚುಗೆ ಸಿಗುತ್ತದೆ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಗಮವಾಗುತ್ತದೆ. ಸಂಬಂಧಗಳಲ್ಲಿ ಮಾತಿನಲ್ಲಿ ಮೃದುತ್ವ ಮುಖ್ಯ; ಸಂಗಾತಿಯ ಭಾವನೆಗಳನ್ನು ಗೌರವಿಸಿದರೆ ಸಣ್ಣ ಅಸಮಾಧಾನಗಳು ನಿವಾರಣೆಯಾಗುತ್ತವೆ. ಇಂದು ಪಡೆದ ಅನುಭವಗಳು ಮುಂದಿನ ನಿರ್ಧಾರಗಳಲ್ಲಿ ಹೆಚ್ಚಿನ ಸ್ಪಷ್ಟತೆಯನ್ನು ನೀಡುತ್ತವೆ. ಸಮತೋಲನದಿಂದ ಮುಂದುವರಿಯುವ ಕಡೆಗೆ ಗಮನ ನೀಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಬ್ರ್ಯಾಂಡೆಡ್ ವಸ್ತುಗಳು ಇಂದು ನಿಮ್ಮ ಮನಸ್ಸು ಹೆಚ್ಚು ಸೆಳೆಯುತ್ತದೆ. ಡಿಸ್ಕೌಂಟ್ ಅಥವಾ ಆಫರ್ ಕಂಡ ತಕ್ಷಣ ಖರೀದಿಸುವ ಪ್ರವೃತ್ತಿ ಹೆಚ್ಚಾಗಬಹುದು. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರಾದರೆ ಅಂದುಕೊಂಡಿದಕ್ಕಿಂತ ಹೆಚ್ಚು ಖರ್ಚಾಗುತ್ತದೆ, ಬಜೆಟ್ ಮೀರಿ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಖರ್ಚಿನಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿಗಳನ್ನು ನೀಡಲಿದ್ದಾರೆ
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸ್ನೇಹಿತರ ಸಹಕಾರದಿಂದ ಕೆಲವು ಕೆಲಸಗಳು ಸುಗಮವಾದವು. ಆರೋಗ್ಯದಲ್ಲಿ ಸಣ್ಣ ತೊಂದರೆ ಕಂಡರೂ ದಿನಾಂತ್ಯಕ್ಕೆ ಸುಧಾರಣೆ ಕಾಣಿಸಿಕೊಂಡಿದೆ. ಹೊಸ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳುವ ಸೂಚನೆ ಇದೆ, ಆದರೂ ಶೀಘ್ರವಾಗಿ ತೀರ್ಮಾನಿಸಲು ಯತ್ನಿಸಬೇಡಿ. ನಿಮ್ಮ ಸಾಮರ್ಥ್ಯವನ್ನು ಗುರುತಿಸುವವರು ಇಂದು ಕಂಡುಬರುತ್ತಾರೆ, ಇದು ಆತ್ಮವಿಶ್ವಾಸವನ್ನು ಹೊಂದಿದೆ. ದಿನದ ಅಂತ್ಯದ ವೇಳೆಗೆ ಮಾನಸಿಕ ಶಾಂತಿ ದೊರೆಯತ್ತದೆ.
ಲೇಖನ- ಸ್ವಾತಿ ಎನ್.ಕೆ.