ಬಾಲಿವುಡ್​​ನಲ್ಲಿ ಪಿಆರ್​ ತಂತ್ರ ಹೇಗೆ ನಡೆಯುತ್ತೆ ನೋಡಿ; ಎಕ್ಸ್​​ಪೋಸ್ ಮಾಡಿದ ಫ್ಯಾನ್ಸ್

ಬಾಲಿವುಡ್​​ನಲ್ಲಿ ಪಿಆರ್​ ತಂತ್ರ ಹೇಗೆ ನಡೆಯುತ್ತೆ ನೋಡಿ; ಎಕ್ಸ್​​ಪೋಸ್ ಮಾಡಿದ ಫ್ಯಾನ್ಸ್


ಅಲ್ಲಿ ಪಿಆರ್ ತಂತ್ರಗಳು ಹೆಚ್ಚು ಕೆಲಸ ಮಾಡುತ್ತವೆ. ಕೆಲವು ಸಿನಿಮಾ ಹಿಟ್ ಅಥವಾ ಫ್ಲಾಪ್ ನ ನಿರ್ಧಾರ ಮಾಡೋದು ಇವರೇ. ಆದರೆ, ಈಗ ಆಡಿಯನ್ಸ್ ಬದಲಾಗಿದ್ದಾರೆ. ಸರಿ ಯಾವುದು, ತಪ್ಪು ಯಾವುದು ಎಂದು ಸ್ಪಷ್ಟವಾಗಿ ಕಂಡುಕೊಳ್ಳುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಬಾಲಿವುಡ್ ಅಲ್ಲಿ ಪಿಆರ್ ಟೆಕ್ನಿಕ್ ಮೂಲಕ ಗೆಲ್ಲುವ ಪ್ರಯತ್ನವನ್ನು ‘ಓ ರೋಮಿಯೋ’ ಸಿನಿಮಾ ಮಾಡಿತ್ತು. ಆದರೆ, ಈ ತಂತ್ರಕ್ಕೆ ಬ್ರೇಕ್ ಬಿದ್ದಿದೆ. ಈ ಸಿನಿಮಾ ಹೀನಾಯವಾಗಿ ಸೋಲುವ ಸೂಚನೆ ಸಿಕ್ಕಿದೆ.

‘ಓ ರೋಮಿಯೋ’ ಚಿತ್ರದಲ್ಲಿ ಶಾಹಿದ್ ಕಪೂರ್, ತೃಪ್ತಿ ದಿಮ್ರಿ ಮೊದಲಾದವರು ನಟಿಸಿದ್ದಾರೆ. ಫೆಬ್ರವರಿ 13 ರಂದು ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ನೋಡಿದ ಅನೇಕ ವಿಮರ್ಶಕರು ಹಾಡಿ ಹೊಗಳಿದರು. ‘ಸಿನಿಮಾ ಅದ್ಭುತವಾಗಿದೆ, ಮತ್ತೊಂದು ಅನಿಮಲ್ ರೀತಿಯಲ್ಲಿ ಸಿನಿಮಾ ಇದೆ’ ಎಂದೆಲ್ಲ ವಿಮರ್ಶೆ ಕೊಟ್ಟರು. ಮೊದಲ ದಿನ ಈ ಚಿತ್ರ 8.5 ಕೋಟಿ ರೂಪಾಯಿಗಳಿಗೆ ಮಾಡಿತು.

ಒಳ್ಳೆಯ ವಿಮರ್ಶೆ ಸಿಕ್ಕಿದೆ ಎಂದು ಎರಡನೇ ದಿನ ಪ್ರಕಟಿಸು ಥಿಯೇಟರ್ ಗೆ ತೆರಳಿದರು. ಇದರಿಂದ 12.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾನುವಾರ ಕೂಡ ಸಿನಿಮಾ ಒಳ್ಳೆಯ ಗಳಿಕೆ ಮಾಡಿತು. ಒಟ್ಟಾರೆ ಕಲೆಕ್ಷನ್ 32 ಕೋಟಿ ರೂಪಾಯಿ ಆಗಿದೆ.

ಆ ಬಳಿಕ ಗೊತ್ತಾಯ್ತು ನೋಡಿ ಸಿನಿಮಾದ ನಿಜವಾದ ಬಣ್ಣ. ಒಳ್ಳೆಯ ವಿಮರ್ಶೆ ಸಿಕ್ಕಿದೆ ಎಂದು ಥಿಯೇಟರ್‌ಗೆ ತೆರಳಿದ ಅನೇಕರು ಸಿಟ್ಟಲ್ಲಿ ಮರಳಿದ್ದಾರೆ. ‘ಇದು ಮೀಶೋ ಪ್ರಾಣಿ’ ಎಂದು ಹೇಳಿದ್ದಾರೆ. ಚಿತ್ರದಲ್ಲಿ ತುಂಬಾ ಹಿಂಸೆ ಇದೆ ಎಂದು ಹೇಳಿದ್ದಾರೆ. ಸಿನಿಮಾ ಸದ್ಯ ಸೋಲಿನ ಹಾದಿಯಲ್ಲಿ ಸಾಗುತ್ತಿದೆ. ಇದು ಪಿಆರ್ ತಂತ್ರ ಎಂದು ಅನೇಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಖಾನ್‌ಗಳ ಬುಡ ಅಲ್ಲಾಡಿಸುತ್ತಿರುವ ಮೂವರು ಸ್ಟಾರ್ ನಟರು

ಐಎಂಡಿಬಿಯಲ್ಲಿ ಚಿತ್ರಕ್ಕೆ 6.4 ರೇಟಿಂಗ್ ಸಿಕ್ಕಿದೆ. ಬುಕ್ ಮೈ ಶೋನಲ್ಲಿ ನೆಗೆಟಿವ್ ವಿಮರ್ಶೆ ಸಿಗುತ್ತಿದ್ದಂತೆ ಕೋರ್ಟ್ ನಿಂದ ಆದೇಶ ನಿರ್ಮಾಣ ಸಂಸ್ಥೆ ರೇಟಿಂಗ್ ನೀಡುವ ಆಯ್ಕೆಯನ್ನೇ ನಿಷ್ಕ್ರಿಯಗೊಳಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *