
ವಿಜಯಪುರ, ಮಾರ್ಚ್ 12: ಜಗತ್ತಿಗೆ ಸಮಾನತೆಯನ್ನು ಸಾರಿದ ವಿಶ್ವಗುರು ಬಸವಣ್ಣ (ಬಸವಣ್ಣ) ಹಾಗೂ ವೈರಾಗ್ಯಮೂರ್ತಿ, ವಚನಗಾರ್ತಿ ಅಕ್ಕಮಹಾದೇವಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕವಾದ ಹಾಗೂ ಅಶ್ಲೀಲ ಪದಗಳ ಸಹಿತ ಬರವಣಿಗೆಗೆ ಪೋಸ್ಟ್ ಮಾಡಿ ಹರಿಬಿಡಲಾಗಿದೆ. ಫೇಸ್ಬುಕ್ ನಲ್ಲಿ ಹರಿ ಬಿಟ್ಟವರ ವಿರುದ್ಧ ಬಸವ ಅನುಯಾಯಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ನಿಂದನೆ ಪೋಸ್ಟ್
ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಬಸವಾದಿ ಶರಣರ ಅನುಯಾಯಿಗಳ ಆಕ್ರೋಶಗೊಂಡಿದ್ದಾರೆ. ನ್ಯಾಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇಷ್ಟಕ್ಕೆಲ್ಲಾ ಕಾರಣ ಸೋಷಿಯಲ್ ಮೀಡಿಯಾದಲ್ಲಿ ವಿಶ್ವಗುರು ಬಸವಣ್ಣ ಹಾಗೂ ಮಹಾಶರಣೆ ಅಕ್ಕಮಹಾದೇವಿ ಅವರ ಕುರಿತು ನಿಂದನಾತ್ಮಕ ಹಾಗೂ ಅಶ್ಲೀಲ ಶಬ್ದಗಳ ಬಳಕೆ ಮಾಡಿ ಹರಿಬಿಟ್ಟ ಪೋಸ್ಟ್.
ಇದನ್ನೂ ಓದಿ: ಬಬಲಾದಿ ಕಾಲಜ್ಞಾನ ನಿಜವಾಯಿತೇ?: ಯುದ್ಧ ಆಯಿತು, ಮುಂದೆ ಪ್ರವಾಹ, ಭಾರತಕ್ಕೆ ಗಡಿ ಆತಂಕ!
ರಮಾಕಾಂತ ಎಂ ಹೆಸರಿನ ಖಾತೆಯ ಫೇಸ್‌ಬುಕ್‌ನಲ್ಲಿ ಈ ಪೋಸ್ಟ್ ಹರಿಬಿಡಲಾಗಿದೆ. ಇದಕ್ಕೆ ಬಸವ ಅನುಯಾಯಿಗಳು ತೀವ್ರವಾಗಿ ವಿರೋಧಿಸಿ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ಬಸವಣ್ಣ ಹಾಗೂ ಅಕ್ಕಮಹಾದೇವಿಯವರಿಗೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ್ದಾರೆ. ಜೊತೆಗೆ ರಮಾಕಾಂತ ಎಂಬುವವರ ವಿರುದ್ದ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ಧಾರೆ.
ರಮಾಕಾಂತ ಎಂಬುವರ ಫೆಸ್ ಬುಕ್ ನಲ್ಲಿ ಬಸವಣ್ಣನವರ ಹಾಗೂ ಅಕ್ಕಮಹಾದೇವಿಯರ ಕುರಿತು ಹಾಕಿರುವ ಆಕ್ಷೇಪಾರ್ಹ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ. ಪೋಸ್ಟ್ ಖಂಡಿಸಿ ಕೆಲ ಬಸವವಾದಿ ಶರಣ ಅನುಯಾಯಿಗಳು ಪೋಸ್ಟ್ ವಿರುದ್ಧ ಕಮೆಂಟ್ ಹಾಕಿ ವಿರೋಧಿಸಿದ್ದಾರೆ. ಸದ್ಯ ಪೋಸ್ಟ್ ಹಾಕಿದ್ದವರ ಕುರಿತು ಬಸವನಬಾಗೇವಾಡಿ ಪೊಲೀಸರು ತನಿಖೆ ನಡೆಸಿದ್ದಾರೆ. ನಕಲಿ ಖಾತೆ ಈ ಪೋಸ್ಟ್ ಹಾಕಿರುವ ಸಂಶಯವೂ ಇದೆ. ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಗಲಭೆ, ಗಲಾಟೆ ಆಗಬೇಕೆಂಬ ದುರುದ್ದೇಶದಿಂದ ಈ ಪೋಸ್ಟ್ ಮಾಡಿದ ಮಾತುಗಳು ಕೇಳಿ ಬರುತ್ತಿವೆ.
ಉಗ್ರ ಹೋರಾಟದ ಎಚ್ಚರಿಕೆ
ಒಟ್ಟಿನಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ಅವಹೇಳನಕಾರಿಯಾಗಿ, ನಿಂದನಾತ್ಮಕವಾಗಿ ಪೋಸ್ಟ್ ಮಾಡಿರುವ ರಮಾಕಾಂತ ಎಂ ಹಾಗೂ ಆತನನ್ನ ಬೆಂಬಲಿಸಿದ್ದರೆ ಅವರೆಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ಬಂಧಿಸಬೇಕು. ಇಲ್ಲವಾದರೆ ಬಸವಾದಿ ಶರಣರ ಅನುಯಾಯಿಗಳು ಬಸವ ಭಕ್ತರು ಉಗ್ರ ಹೋರಾಟ ಪ್ರತಿಭಟನೆ ನಡೆಸುತ್ತೇವೆಂದು ಬಸವ ಅನುಯಾಯಿ ಪ್ರಭಾಗೌಡ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ವಿಚಿತ್ರ ಸಮಸ್ಯೆಗೆ ನಲುಗಿದ ಕುಟುಂಬ: ಇದಕ್ಕಿಂದ ರಕ್ತ ಜಿನುಗುವುದು, ಚಿನ್ನ ಮಾಯ, ಬಟ್ಟೆಗೆ ಬೆಂಕಿ
ಬಸವಾದಿ ಶರಣರ ಅನುಯಾಯಿಗಳು ಮನವಿ ಪತ್ರವನ್ನು ಸ್ವೀಕಾರ ಮಾಡಿರುವ ಸಾರ್ವಜನಿಕ ಸೂಕ್ತ ಕ್ರಮದ ಭರವಸೆ ನೀಡಿದೆ. ಘಟನೆ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳ ಮಾಹಿತಿ ನೀಡಿ ಪೋಸ್ಟ್ ಮಾಡಿದವನ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.