ಭಾರತ್ ಟ್ಯಾಕ್ಸಿಗೆ ಇಂದು ಅಧಿಕೃತ ಚಾಲನೆ; ಸಹಕಾರಿ ತತ್ವದಲ್ಲಿ ಕ್ಯಾಬ್ ಚಲಾಯಿಸುವವರು ಚಾಲಕರಲ್ಲ, ಸಾರಥಿಗಳು

ಭಾರತ್ ಟ್ಯಾಕ್ಸಿಗೆ ಇಂದು ಅಧಿಕೃತ ಚಾಲನೆ; ಸಹಕಾರಿ ತತ್ವದಲ್ಲಿ ಕ್ಯಾಬ್ ಚಲಾಯಿಸುವವರು ಚಾಲಕರಲ್ಲ, ಸಾರಥಿಗಳು


ನವದೆಹಲಿ, ಫೆಬ್ರುವರಿ 5: ಸಹಕಾರಿ ತತ್ವದಲ್ಲಿ ರೂಪುಗೊಂಡಿರುವ ಕ್ಯಾಬ್ ಸರ್ವಿಸ್ ಕಂಪನಿಯಾದ ಭಾರತ್ ಟ್ಯಾಕ್ಸಿ (ಭಾರತ್ ಟ್ಯಾಕ್ಸಿ) ಸೇವೆ ಇಂದು ಗುರುವಾರ ಅಧಿಕೃತವಾಗಿ ಚಾಲನೆಗೊಳ್ಳುತ್ತಿದೆ. ಅಮುಲ್ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಬೆಂಬಲಿತವಾಗಿರುವ ಈ ಕ್ಯಾಬ್ ಸರ್ವಿಸ್ ಸದ್ಯ ದೆಹಲಿ ಎನ್‌ಸಿಆರ್ (ದೆಹಲಿ-ಎನ್‌ಸಿಆರ್) ಪ್ರದೇಶದಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದೆ. ಗುರುವಾರ ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಅವರು ಭಾರತ್ ಟ್ಯಾಕ್ಸಿ ಸರ್ವೀಸ್‌ಗೆ ಚಾಲನೆ ಕೊಡಲಿದ್ದಾರೆ. ಈ ಮೂಲಕ ಕ್ಯಾಬ್ ಸರ್ವಿಸ್ ಕ್ಷೇತ್ರದಲ್ಲಿ ಓಲಾ, ಉಬರ್ನ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಭಾರತ್ ಟ್ಯಾಕ್ಸಿ ಅಖಾಡಕ್ಕೆ ಇಳಿಯುತ್ತಿದೆ.

ಓಲಾ, ಊಬರ್ಗಿಂತ ಭಾರತ್ ಟ್ಯಾಕ್ಸ್ ಹೇಗೆ ಭಿನ್ನವಾಗಿದೆ?

ಭಾರತ್ ಟ್ಯಾಕ್ಸಿ ಸಹಕಾರಿ ತತ್ವದಲ್ಲಿ ರೂಪುಗೊಂಡಿರುವ ಸೇವೆ. ಈ ಟ್ಯಾಕ್ಸಿ ಸರ್ವೀಸ್‌ಗೆ ಸರ್ಕಾರದಿಂದ ನೇರ ಬೆಂಬಲ ಇಲ್ಲವಾದರೂ ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಕಂಪನಿಯ ಸಹಕಾರಿ ಸಂಸ್ಥೆ ಈ ಕ್ಯಾಬ್ ಸರ್ವಿಸ್ ಅನ್ನು ನಿರ್ವಹಿಸುತ್ತದೆ. ಈ ಸಹಕಾರಿ ಸಂಸ್ಥೆಯು ಲಾಭದ ಉದ್ದೇಶವನ್ನು ಹೊಂದಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ: ವಾಣಿಜ್ಯ ಸಚಿವರ ಟೀಕೆ

ಭಾರತ್ ಟ್ಯಾಕ್ಸಿಯಲ್ಲಿ ಡ್ರೈವರ್‌ಗಳೇ ಶಿಫಾರಸು. ಪ್ಲಾಟ್ಫಾರ್ಮ್ ಶುಲ್ಕ ತೆರಬೇಕಿಲ್ಲ. ಓಲಾ, ಊಬರ್ಗಳು ಚಾಲಕರಿಂದ ಶೇ. 30-40ರಷ್ಟು ಕಮಿಷನ್ ಪಡೆಯುತ್ತವೆ. ಭಾರತ್ ಟ್ಯಾಕ್ಸಿಯಲ್ಲಿ ಈ ಶುಲ್ಕ ಇರುವುದಿಲ್ಲ. ಹೀಗಾಗಿ, ಇದು ಕ್ಯಾಬ್ ಚಾಲಕರು ಮತ್ತು ಗ್ರಾಹಕರು ಇಬ್ಬರಿಗೂ ವಿನ್-ವಿನ್ ಸ್ಥಿತಿ. ಕ್ಯಾಬ್ ಚಾಲಕರಿಗೆ ಹೆಚ್ಚಿನ ಆದಾಯ ಸಿಗುತ್ತದೆ. ಗ್ರಾಹಕರಿಗೆ ಬೆಲೆಯೂ ಸ್ವಲ್ಪ ಕಡಿಮೆ ಆಗುತ್ತದೆ.

ಭಾರತ್ ಟ್ಯಾಕ್ಸಿಯಲ್ಲಿ ಚಾಲಕರನ್ನು ಸಾರಥಿಗಳೆಂದು ಕರೆಯಲಾಗುತ್ತದೆ. ಈ ಕ್ಯಾಬ್ ಸರ್ವೀಸ್ಗೆ ಸೇರಬಯಸುವ ಸಾರಥಿಗಳು ಕೆಲ ಷೇರುಗಳನ್ನು ಖರೀದಿಸಬಹುದು. ಕನಿಷ್ಠ ಐದು ಷೇರುಗಳನ್ನು ಖರೀದಿಸಬಹುದು. ಸುಮಾರು 500 ರೂ ಆಗುತ್ತದೆ. ಆದರೆ, ಸಂಸ್ಥೆಯು ವೃದ್ಧಿಸಿದಂತೆಲ್ಲಾ ಈ ಷೇರುಗಳಿಂದ ಚಾಲಕರಿಗೆ ಡಿವಿಡೆಂಡ್ ಸಿಗುತ್ತಾ ಹೋಗುತ್ತದೆ.

ಇದನ್ನೂ ಓದಿ: ವಿದೇಶದಿಂದ ಬರುವಾಗ ಎಷ್ಟು ಲಗೇಜಿಗೆ ಸುಂಕ ವಿನಾಯಿತಿ ಇರುತ್ತೆ? ಎಷ್ಟು ಆಭರಣ ತರಬಹುದು?

ಸದ್ಯ, ಭಾರತ್ ಟ್ಯಾಕ್ಸಿಯಲ್ಲಿ ಎಸಿ, ನ್ಯಾನ್-ಎಸಿ ಕ್ಯಾಬ್‌ಗಳು, ಎಕ್ಸ್ ಎಲ್ ಕ್ಯಾಬ್‌ಗಳು, ಆಟೊ, ಬೈಕ್ ಟ್ಯಾಕ್ಸಿ ಸೇವೆ ಲಭ್ಯವಿದೆ. ಇದರ ಆಯಪ್ನ ಇಂಟರ್ಫೇಸ್ ಕೂಡ ಅತ್ಯಾಧುನಿಕವಾಗಿದೆ. 2025 ಡಿಸೆಂಬರ್‌ನಲ್ಲಿ ದೆಹಲಿ ಮತ್ತು ಗುಜರಾತ್‌ನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾಯಿತು. ಸಾಕಷ್ಟು ರೈಡ್‌ಗಳು ಈ ವೇಳೆ ಆಗಿವೆ. ಈ ಪ್ರಯೋಗ ಯಶಸ್ವಿಯಾದ ದೆಹಲಿ ಎನ್ ಸಿಆರ್ ಪ್ರದೇಶದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತು ದೇಶಾದ್ಯಂತ ಎಲ್ಲಾ ನಗರಗಳಲ್ಲಿ ಇದರ ಸೇವೆಯನ್ನು ವಿಸ್ತರಿಸುವ ಉದ್ದೇಶವಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *