ಜುಲೈ, ಡಿಸೆಂಬರ್ 16: ಅಪ್ಪನ ಅಥವಾ ತಾತನ ಹಳೆಯ ಕಡತಗಳನ್ನು (ಹಳೆಯ ದಾಖಲೆಗಳು) ನೋಡುವಾಗ ಜೋಪಾನವಾಗಿರಿ. ಅದನ್ನು ನೀವು ನಿರೀಕ್ಷಿಸಿದ, ಹಾಗೂ ಅವರೇ ಮರೆತುಹೋಗಿರುವ ದಾಖಲೆಗಳಿದ್ದೀತು. ಅವು ಇವತ್ತಿನ ಕಾಲಕ್ಕೆ ಲಕ್ಷ, ಕೋಟಿ ರೂಗಳ ಬೆಲೆ ಬಾಳುತ್ತಿರಬಹುದು. ಇಂತಹ ಹಲವು ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದು ಶೇರ್ ಆಗುತ್ತಿರುತ್ತವೆ. ದಿ ಚಾರ್ಟಿಯನ್ಸ್ ಹೆಸರಿನ ಎಕ್ಸ್ ಬಳಕೆದಾರರೊಬ್ಬರು ಇಂಥದ್ದೊಂದು ಘಟನೆಯನ್ನು ಹಂಚಿಕೊಂಡಿದ್ದಾರೆ.
ಮೂವತ್ತು ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಒಬ್ಬ ಕಂಪನಿಯ 20 ಷೇರುಗಳನ್ನು 200 ರೂಗೆ ಖರೀದಿಸಲಾಗಿದೆ. ಹಾಗೆ ಖರೀದಿಸಿದವರು ಮರೆತೇ ಹೋಗಿದ್ದಾರೆ. ಈಗ ಆ 20 ಷೇರುಗಳ ಸರ್ಟಿಫಿಕೇಟ್ ದಾಖಲೆಯು ಅವರ ಸಂಬಂಧಕ್ಕೆ ಸಿಕ್ಕಿದೆ. ಷೇರುಗಳ ಮೌಲ್ಯ 30 ರಿಂದ ಶೇ. 89,900 ಹೆಚ್ಚು. 200 ರೂಪಾಯಿಯ ಷೇರುಗಳ ಮೌಲ್ಯ ಇವತ್ತು ಎರಡೂವರೆ ಲಕ್ಷ ರೂ ಆಗಿ ಹೋಗಿದೆ.
ಇದನ್ನೂ ಓದಿ: ಎಫ್‌ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ
ಬರೋಸ್ ವೆಲ್ಕಮ್ ಇಂಡಿಯಾದ 20 ಷೇರುಗಳು…
ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿ ಪ್ರಕಾರ 1993ರಲ್ಲಿ ಬರೋಸ್ ವೆಲ್ಕಮ್ ಇಂಡಿಯಾ (ಬರ್ರೋಸ್ ವೆಲ್ಕಮ್ ಇಂಡಿಯಾ ಲಿಮಿಟೆಡ್) ಕಂಪನಿಯ 20 ಷೇರುಗಳನ್ನು ಖರೀದಿಸಲಾಗಿದೆ. ಪ್ರತೀ ಶೇರಿಗೆ 10 ರೂನಂತೆ ಅವನನ್ನು ಪಡೆಯಲಾಗಿದೆ. ಈ ಕಂಪನಿ ಈಗ ಅಸ್ತಿತ್ವದಲ್ಲಿಲ್ಲ. ಕಾಲಾನಂತರದಲ್ಲಿ ಅದು ಗ್ಲ್ಯಾಕ್ಸೋಸ್ಮಿತ್‌ಕ್ಲೈನ್ (GlaxoSmithKline India) ಎನ್ನುವ ಔಷಧ ತಯಾರಕ ಸಂಸ್ಥೆ ಜೊತೆ ವಿಲೀನಗೊಂಡಿದೆ.
ಚಾರ್ಟಿಯನ್ಸ್ ಅವರ ಎಕ್ಸ್ ಪೋಸ್ಟ್
POV: ನೀವು ₹1,80,000 ಮೌಲ್ಯದ 1993 ರ ಕಾಗದದ ತುಂಡು ಕಾಣುವಿರಿ. 😱
ಸಂಬಂಧಿಯೊಬ್ಬರು ಬರೋಸ್ ವೆಲ್ಕಮ್ಗಾಗಿ ಈ 20-ಷೇರ್ ಪ್ರಮಾಣಪತ್ರವನ್ನು ಕಂಡುಕೊಂಡಿದ್ದಾರೆ.
ಇದು ವಿಲೀನಗೊಂಡಿದೆ ಎಂದು ತಿರುಗುತ್ತದೆ #GSKಬೋನಸ್ಗಳನ್ನು ನೀಡಲಾಯಿತು… ಮತ್ತು 30 ವರ್ಷಗಳ ಕಾಲ ಮೌನವಾಗಿ ಕುಳಿತುಕೊಂಡರು.
ನಂತರ ಮೌಲ್ಯಮಾಪನ: ₹200 (ಮುಖಬೆಲೆ) ಮೌಲ್ಯಮಾಪನ… pic.twitter.com/MTdUEzcIQF
– ಚಾರ್ಟಿಯನ್ಸ್ (@ಚಾರ್ಟಿಯನ್ಸ್) ಡಿಸೆಂಬರ್ 14, 2025
ವಿಲೀನಗೊಂಡ ಬಳಿಕ ಬರೋಸ್ನ ಷೇರುಗಳು ಗ್ಲ್ಯಾಕ್ಸೋಗೆ ವರ್ಗಾವಣೆ ಆಗಿದೆ. ಆ ಬಳಿಕ ಬೋನಸ್ ಷೇರುಗಳೂ ಬಿಡುಗಡೆ ಆಗಿವೆ. ಷೇರುಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದರ ಷೇರು ಬೆಲೆ ಇವತ್ತು 2,592.50 ರೂ ಇದೆ. ಜೂನ್ 6 ರಂದು ಇದರ ಷೇರುಬೆಲೆ 3,438 ರೂ ಕೂಡ ಮುಟ್ಟಿತ್ತು.
ಅಂದು 10 ರೂ.ಗಳನ್ನು ಖರೀದಿಸಿದ್ದ ಆ 20 ಷೇರುಗಳ ಬೆಲೆ ಇವತ್ತು 2,59,250 ರೂ ಆಗಿದೆ. 32 ಷೇರುಬೆ ಅಂದರೆ ಯದ್ವಾತದ್ವಾ ಏರಿದೆ.
ಇದನ್ನೂ ಓದಿ: ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸಲು ಪಳಗಿರುವ ರಾಮದೇವ್ ಅಗರ್ವಾಲ್ ಅವರ ಟ್ರಿಕ್ಸ್ಗಳು…
ಈ ಘಟನೆಯಿಂದ ಕಲಿಯುವ ಪಾಠವೇನು?
ಈ ಹಳೆಯ ಷೇರುಗಳು ಸಿಕ್ಕಿರುವುದು ಯಾವಾಗಲೂ ಸಂಭವಿಸುವಂಥದ್ದಲ್ಲ. ಆ ಷೇರುಗಳನ್ನು ವಾರಸುದಾರರು ತಮ್ಮ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿಕೊಳ್ಳಲು ಹರಸಾಹಸ ಮಾಡಬೇಕಾಗಬಹುದು. ಅದೇನೇ ಇದ್ದರೂ, ಈ ಘಟನೆಯಿಂದ ಒಂದು ಒಳ್ಳೆಯ ಹಣಕಾಸು ಪಾಠವನ್ನು ಕಲಿಯಲು ಸಾಧ್ಯ. ಅದು ದೀರ್ಘಾವಧಿ ಹೂಡಿಕೆಯ ಪಾಠ. ಒಂದು ಒಳ್ಳೆಯ ಕಂಪನಿಯಲ್ಲಿ ನೀವು ದೀರ್ಘಾವಧಿ ಹೂಡಿಕೆ ಮಾಡಿದರೆ ಅದ್ಭುತ ಎನಿಸುವ ರಿಟರ್ನ್ ಗಳಿಸುವ ಸಾಧ್ಯತೆ ಬಹಳ ಅಧಿಕವಾಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ