ಸಿಂಪಲ್ ಸುನಿ ಅವರು ನಿರ್ದೇಶನ ಮಾಡಿದ್ದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಈಗ ಒಟಿಟಿಗೆ ಬರಲು ಸಜ್ಜಾಗಿದೆ. ವಿನಯ್ ರಾಜ್ ಕುಮಾರ್ ನಟನೆಯ ಈ ಸಿನಿಮಾ ನವೆಂಬರ್ 21 ರಿಂದ ಜೀ5 ಒಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್ ಸೇರಿದಂತೆ ಸಿನಿಮಾಗೆ ಚಿತ್ರಮಂದಿರದಲ್ಲಿ ಭಾರೀ ಮೆಚ್ಚುಗೆ ಸಿಕ್ಕಿತ್ತು. ಒಟಿಟಿ ವೀಕ್ಷಿಸು ಕೂಡ ಈ ಸಿನಿಮಾವನ್ನು ಮೆಚ್ಚಿಕೊಳ್ಳುವ ನಿರೀಕ್ಷೆ ಇದೆ.
ನಾಯಕನಾಗಿ ವಿನಯ್, ನಾಯಕಿಯರಾಗಿ ಸ್ವಾತಿಷ್ಠ, ಮಲ್ಲಿಕಾ ಸಿಂಗ್ ನಟಿಸಿದ್ದಾರೆ. ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದಾರೆ. ಹಾಡುಗಳ ಮೂಲಕ ಗಮನ ಸೆಳೆದ ಈ ಚಿತ್ರದಲ್ಲಿ ಸಂಗೀತದ ಕುರಿತು ಕಹಾನಿ ಇದೆ.
ರಾಘವೇಂದ್ರ ರಾಜ್ಕುಮಾರ್ ಅವರು ಈ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಸಾಧುಕೋಕಿಲ, ಅರುಣಾ ಬಾಲರಾಜ್ ಮುಂತಾದವರು ಕೂಡ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಆದಿ ಅವರ ಸಂಕಲನ, ಕಾರ್ತಿಕ್ ಅವರ ಛಾಯಾಗ್ರಹಣ ‘ಒಂದು ಸರಳ ಪ್ರೇಮಕಥೆ’ ಸಿನಿಮಾಗಿದೆ. ‘ರಾಮ್ ಮೂವೀಸ್’ ಬ್ಯಾನರ್ ಮೂಲಕ ಮೈಸೂರು ರಮೇಶ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.




