ದುಬೈ, ಡಿಸೆಂಬರ್ 14: ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕಾಣುವುದೇ ಕಾಣುವುದು, ನಾಗರಿಕ ಪರಿಚಯ, ನಿಯಮಗಳ ಪಾಲನೆ. ದುಬೈನಲ್ಲಿರುವ ಭಾರತೀಯರು ಹಂಚಿಕೊಂಡಿರುವ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಅದು ಬೆಳಗಿನ ಜಾವ 4 ಗಂಟೆ, ಟ್ರಾಫಿಕ್ ಇಲ್ಲ, ಅಕ್ಕ ಪಕ್ಕ ಬೇರೆ ಯಾವ ಕಾರು ಕೂಡ ಇಲ್ಲ, ರೆಡ್ ಸಿಗ್ನಲ್ ಬಿದ್ದಾಗ ಚಾಲಕ ನಿಲ್ಲಿಸಿ ಕಾದು ಬಳಿಕ ಹೋಗಿರುವ ವಿಡಿಯೋ ಇದು. ಹೊಸದೇನಿದೆ ಎಂದು ನಿಮಗೆ ಅನಿಸಬಹುದು. ಆದರೆ ಬೆಳಗಿನ ಜಾವ ಸಿಗ್ನಲ್ ಇದ್ದರೆ ವಾಹನಗಳು ಇಲ್ಲದಿದ್ದರೆ ಸಿಗ್ನಲ್ ಜಂಪ್ ಮಾಡಿ ಹೋಗುವ ವಾಹನಗಳೇ ಹೆಚ್ಚು. ಆದರೆ ನೇಹಾ ಜೈಸ್ವಾಲ್ ಪೋಸ್ಟ್ ಮಾಡಿದ ಕ್ಲಿಪ್‌ನಲ್ಲಿ ಬೆಳಗಿನ ಜಾವವಾದರೂ ಚಾಲಕ ರೆಡ್ ಸಿಗ್ನಲ್‌ನಲ್ಲಿ ಶಾಂತಿಯಿಂದ ಕಾಯುತ್ತಾ ಕುಳಿತಿರುವುದನ್ನು ನೋಡಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ