
ನಟಿ ಕಿಯಾರಾ ಅಡ್ವಾಣಿ ಅಹಂಕಾರದ ಪರಮಾವಧಿನಾ? ವಿಮಾನದಲ್ಲಿ ನಡೆದ ಘಟನೆ ಬಿಚ್ಚಿಟ್ಟ ಇನ್ಫ್ಲುಯೆನ್ಸರ್: ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ!
ಬಾಲಿವುಡ್‌ನ ‘ಕ್ಯೂಟ್ ನಟಿ’ ಎಂದೇ ಕರೆಸಿಕೊಳ್ಳುವ ಕಿಯಾರಾ ಅಡ್ವಾಣಿ ಸದ್ಯ ವಿವಾದವೊಂದರ ಸುಳಿಗೆ ಸಿಲುಕಿದ್ದಾರೆ. ಬೆಳ್ಳಿ ಪರದೆಯ ಮೇಲೆ ಸದಾ ಮುಗುಳ್ನಗುತ್ತಾ ಕಾಣಿಸಿಕೊಳ್ಳುವ ಈ ನಟಿ, ನಿಜ ಜೀವನದಲ್ಲಿ ಅಷ್ಟೇನೂ ವಿನಮ್ರವಾಗಿಲ್ಲ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಇನ್ಫ್ಲುಯೆನ್ಸರ್ ಒಬ್ಬರು ತಮ್ಮ ತಾಯಿಯ ಜೊತೆ ಕಿಯಾರಾ ನಡೆದುಕೊಂಡ ರೀತಿಯನ್ನು ವಿವರಿಸಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.