ರಾಯಚೂರು, ನವೆಂಬರ್ 16: ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಸೈಬರ್ ವಂಚಕರು ರಾಯಚೂರಿನ ವ್ಯಕ್ತಿಯೋರ್ವರಿಗೆ ಬರೋಬ್ಬರಿ 59 ಲಕ್ಷ ರೂ. ಹಣವನ್ನ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹೆಚ್ಚು ಹಣ ಮಾಡುವ ದಾರಿ ಹುಡುಕೋಕೆ ಹೋದ ವ್ಯಕ್ತಿಯೀಗ ಕೈಯಲ್ಲಿದ್ದ ದುಡ್ಡನ್ನೂ ಕಳೆದುಕೊಂಡಿದ್ದು, ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ರಾಯಚೂರಿನ ಶರಣಬಸವ ಎನ್ನುವವರು ಆನ್ ಲೈನ್ ಟ್ರೇಡಿಂಗ್ ನಲ್ಲಿ ಹೊಂದಿದ್ದು, ಹೇಗೆಲ್ಲ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಸಿಗುತ್ತೆ ಎಂಬ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ನೋಡಿ. ಇದೇ ವೇಳೆ ಸೈಬರ್ ವಂಚಕರಿಂದ ಶರಣಬಸವ ಅವರ ವಾಟ್ಸ್ಯಾಪ್‌ಗೆ ಒಂದು ಮೆಸೆಜ್ ಬಂದಿದೆ. ಆ ಲಿಂಕ್ ಅವರ ಓಪನ್ ಮಾಡಿದ್ದು, ಬಳಿಕ ಶರಣಬಸವ ಅವರಿಗೆ ಅಪರಿಚಿತರಿಂದ ವಾಟ್ಸ್ಯಾಪ್ ಕರೆ ಬಂದಿದೆ. ಆರೋಪಿಗಳು Paytm Money ಕಂಪನಿಯ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗುವ ಆಮಿಷ ಒಡ್ಡಿದ್ದಾರೆ. ಅವರ ಮಾತು ನಂಬಿದ್ದ ಶರಣಬಸವ, ಮೊದಲು 500 ರೂ. ಹಣ ವರ್ಗಾಯಿಸಿದ್ದರು. ಬಳಿಕ ಹೆಚ್ಚಿನ ಹಣ ಹಾಕುತ್ತಾ ಹೋಗಿದ್ದು, ಅಧಿಕ ಲಾಭಾಂಶವೂ ಸಿಕ್ಕಿದೆ. ಹೀಗಾಗಿ ದೊಡ್ಡ ಮೊತ್ತದ ಹಣವನ್ನು ಶರಣಬಸವ ಹೂಡಿಕೆ ಮಾಡಲು ಶುರುಮಾಡಿದ್ದಾರೆ. ಅಲ್ಲಿಂದ ಆರೋಪಿಗಳ ನವರಂಗಿ ಆಟ ಆರಂಭವಾಗಿದೆ.
ಇದನ್ನೂ ಓದಿ: ಫೋನ್ ಪೇ ಮೂಲಕ ಪರಿಚಯವಾಗಿ ಲವ್ವಿ ಡವ್ವಿ, ಗರ್ಭಿಣಿಯಾದ 9ನೇ ತರಗತಿ ವಿದ್ಯಾರ್ಥಿನಿ
ಒಟ್ಟು 59 ಲಕ್ಷ ರೂ. ಹಣವನ್ನು ಶರಣಬಸವ ಅವರು ವಂಚಕರ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಲಾಭಾಂಶವೂ ಬರುತ್ತಿಲ್ಲ, ಅಸಲೂ ಸಿಗುತ್ತಿಲ್ಲ ಎಂಬ ಸ್ಥಿತಿ ಎದುರಾದಾಗ ತಮಗೆ ಕರೆ ಮಾಡಿದ್ದ ನಂಬರ್‌ನನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ವಂಚಕರು ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ತಾವು ಮೋಸ ಹೋಗಿರೋದು ಶರಣಬಸವ ಅವರಿಗೆ ಅರಿವಾಗಿದೆ. ಹೀಗಾಗಿ ಸಂಬಂಧ ರಾಯಚೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಂತಹ ವಂಚನೆ ಪ್ರಕರಣಗಳು ರಾಯಚೂರಿನಲ್ಲಿ ಮೇಲಿಂದ ಮೇಲೆ ಕೇಳಿಬರುತ್ತಿವೆ. 2021ರಲ್ಲಿ ಅರ್ಚಕ ಲಕ್ಷ್ಮೀಕಾಂತ್ ಎಂಬವರು ಕೂಡ ಶರಣಬಸವ ಅವರ ಮಾದರಿಯಲ್ಲೇ ಆನ್‌ಲೈನ್ ಟ್ರೇಡಿಂಗ್ ಎಂದು ಹಣ ಹೂಡಿಕೆ ಮಾಡಲು ಹೋಗಿ 58 ಲಕ್ಷ ರೂ. ಕಳೆದುಕೊಂಡಿದ್ದರು. ಪ್ರಕರಣ ಬೆನ್ನತ್ತಿದ ಆರೋಪಿ ಬಯನ್ನ ತಮಿಳುನಾಡಿಯಲ್ಲಿ ಪತ್ತೆಯಾಗಿದ್ದಾನೆ. ಆದರೆ, ಆತ ಕೇಳಿದ್ದಾನೆ ಎಂಬ ವಿಚಾರ ತನಿಖೆ ವೇಳೆ ಗೊತ್ತಾಗಿತ್ತು. ಪ್ರಕರಣ ಸಂಬಂಧ ಆರೋಪಿ ಖಾತೆಗಳಿಗೆ ಹಣ ಹೋದ ದಾಖಲೆಗಳ ಆಧಾರದಲ್ಲಿ 18 ಲಕ್ಷ ರೂ. ದುರಂತ ಅಂದರೆ ವಿದ್ಯಾವಂತ ಹೆಚ್ಚಾಗಿ ಆನ್‌ಲೈನ್ ವಂಚನೆಗೆ ಒಳಗಾಗಿದೆ, ಈ ಬಗ್ಗೆ ಎಚ್ಚರದಿಂದ ಇರುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 7:31 am, ಭಾನುವಾರ, 16 ನವೆಂಬರ್ 25