ಬಣ್ಣದ ಬಟ್ಟೆ ಧರಿಸಿ ಹೋಳಿ ಆಡ್ತಾರೆ ವಿಧವೆಯರು, ಭಾರತದ ಇದೊಂದೇ ಜಾಗದಲ್ಲಿ ನಡೆಯುತ್ತೆ ಆಚರಣೆ

ಬಣ್ಣದ ಬಟ್ಟೆ ಧರಿಸಿ ಹೋಳಿ ಆಡ್ತಾರೆ ವಿಧವೆಯರು, ಭಾರತದ ಇದೊಂದೇ ಜಾಗದಲ್ಲಿ ನಡೆಯುತ್ತೆ ಆಚರಣೆ

ಬಣ್ಣದ ಬಟ್ಟೆ ಧರಿಸಿ ಹೋಳಿ ಆಡ್ತಾರೆ ವಿಧವೆಯರು, ಭಾರತದ ಇದೊಂದೇ ಜಾಗದಲ್ಲಿ ನಡೆಯುತ್ತೆ ಆಚರಣೆ

ಹೋಳಿ ಜಾತಿ – ಜನಾಂಗದ ಗಡಿ ಮೀರಿದೆ. ಮತಬೇಧ ಮರೆತು ಜನರು ಹೋಳಿ ಆಡ್ತಾರೆ. ಆದ್ರೆ ವಿಧವೆಯರು ಈ ಹೋಳಿ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಬಹಳ ಅಪರೂಪ. ಉತ್ತರ ಪ್ರದೇಶದ ಒಂದು ಜಾಗದಲ್ಲಿ ವಿಧವೆಯರಿಗೆ ಬಣ್ಣದೋಕುಳಿಯಲ್ಲಿ ಮಿಂದೇಳುವ ಅವಕಾಶ ನೀಡಲಾಗಿದೆ. ಅದು ಎಲ್ಲಿ ಎನ್ನುವ ಮಾಹಿತಿ ಇಲ್ಲಿದೆ.

ವಿಧವೆಯರನ್ನು ವಿಚಿತ್ರವಾಗಿ ನೋಡುವ ಕಾಲ ಒಂದಿತ್ತು. ಇಡೀ ದಿನ ಮನೆಯಲ್ಲಿ ಬಂಧಿಯಾಗಿರ್ತಿದ್ದ ಅವರಿಗೆ ಯಾವುದೇ ಸ್ವಾತಂತ್ರ್ಯ ಇರಲಿಲ್ಲ. ಮಾಡದ ತಪ್ಪಿಗೆ ಅವರು ಶಿಕ್ಷೆ ಅನುಭವಿಸುತ್ತಿದ್ದರು. ಬಣ್ಣದ ಬಟ್ಟೆ, ಸಾರ್ವಜನಿಕ ಪ್ರದೇಶ, ಹಬ್ಬಗಳಲ್ಲಿ ಪಾಲ್ಗೊಳ್ಳುವುದನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಆದ್ರೀಗ ಎಲ್ಲ ಮಹಿಳೆಯರಿಗೆ ಗೌರವ ಸಿಗ್ತಿದೆ. ವಿಧವೆಯರು ಮನೆಯಿಂದ ಹೊರಗೆ ಬಂದು ಕೆಲ್ಸ ಮಾಡ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಅದಕ್ಕೆ ಉತ್ತರ ಪ್ರದೇಶದ ವೃಂದಾವನ ಕೂಡ ಸಾಕ್ಷ್ಯವಾಗಿದೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಚಿತ್ರಣ ಬದಲಾಗುತ್ತಿದೆ. ವಿಧವೆಯರು ಖುಷಿಯಾಗಿ ಹೋಳಿ ಆಚರಣೆಯಲ್ಲಿ ಪಾಲ್ಗೊಳ್ತಿದ್ದಾರೆ. ಹೂವಿನ ಹೋಳಿ, ಬಣ್ಣದ ಹೋಳಿಯಲ್ಲಿ ಪಾಲ್ಗೊಳ್ಳುವ ಅವರು ಭಜನೆ, ಕೀರ್ತನೆಗಳಲ್ಲಿ ಭಾಗಿಯಾಗ್ತಿದ್ದಾರೆ. ಈ ಬದಲಾವಣೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಸಾಮಾಜಿಕ ಚಿಂತನೆಯಲ್ಲಿನ ಬದಲಾವಣೆಯ ಸಂಕೇತವಾಗಿದೆ.

ವೃಂದಾವನ ಕೃಷ್ಣ ಭಕ್ತರ ಪ್ರಮುಖ ಕೇಂದ್ರ. ಇಲ್ಲಿ ಹೋಳಿ ವಸಂತ ಪಂಚಮಿಯಂದು ಪ್ರಾರಂಭವಾಗುತ್ತದೆ. ಹಲವಾರು ವಾರಗಳವರೆಗೆ ಹೋಳಿ ಸಂಭ್ರಮ ಮನೆ ಮಾಡಿರುತ್ತದೆ. ಹೂವಿನ ಹೋಳಿ, ಲಠ್ಮಾರ್ ಹೋಳಿ ಮತ್ತು ರಂಗ್ವಾಲಿ ಹೋಳಿಯಂತಹ ವಿವಿಧ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಕ್ಕೆ ದೇಶ ಮಾತ್ರವಲ್ಲ ವಿದೇಶಿ ಭಕ್ತರು ಬರ್ತಾರೆ. ಇಲ್ಲಿ ವಿಧವೆಯರ ಹೋಳಿಗೆ ವಿಶೇಷ ಮನ್ನಣೆ ಗಳಿಸಿದೆ. ಅವರು ದೇವಾಲಯದ ಅಂಗಳದಲ್ಲಿ ಒಟ್ಟುಗೂಡುತ್ತಾರೆ, ಪರಸ್ಪರ ಬಣ್ಣ ಹಚ್ಚಿಕೊಂಡು, ದೇವರ ನಾಮಗಳನ್ನು ಹೇಳ್ತಾ ಹೋಳಿ ಆಚರಿಸ್ತಾರೆ.

ವೃಂದಾವನದಲ್ಲೂ ವಿಧವೆಯರು ಕಟ್ಟುನಿಟ್ಟಿನ ನಿಯಮ ಪಾಲಿಸ್ತಿದ್ರು. ಸುಮಾರು ಒಂದು ದಶಕದ ಹಿಂದೆ, ಸಾಮಾಜಿಕ ಸಂಸ್ಥೆಗಳು ಈ ಮನಸ್ಥಿತಿಯನ್ನು ಬದಲಾಯಿಸಲು ಕ್ರಮ ತೆಗೆದುಕೊಂಡಿದ್ದವು. ಸುಲಭ್ ಇಂಟರ್ನ್ಯಾಷನಲ್ ನಂತಹ ಸಂಸ್ಥೆಗಳು ವೃಂದಾವನದಲ್ಲಿ ವಾಸಿಸುವ ವಿಧವೆಯರ ಘನತೆ ಮತ್ತು ಸಾಮಾಜಿಕ ಪುನರ್ಮಿಲನಕ್ಕಾಗಿ ಅಭಿಯಾನಗಳನ್ನು ಪ್ರಾರಂಭಿಸಿದವು. ಹೋಳಿ ಹಬ್ಬದ ಸಾಮೂಹಿಕ ಆಚರಣೆಯು ಈ ಪ್ರಯತ್ನದ ಭಾಗವಾಗಿದೆ.

ಈ ಮಹಿಳೆಯರು ಹೋಳಿಯಂದು ಕೆಂಪು, ಹಳದಿ ಮತ್ತು ಕೇಸರಿ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಳ್ರಾರೆ. ಸಾಮಾಜಿಕ ಪ್ರತ್ಯೇಕತೆಯನ್ನು ದೂರ ಮಾಡುವ ಈ ಹಬ್ಬ ಅವರಿಗೆ ಕೇವಲ ಹಬ್ಬವಲ್ಲ. ಮರುಜೀವನ ನೀಡಿದೆ. ಇಲ್ಲಿ ಸಂಘಟನೆಗಳು ಯಾರಿಗೂ ಒತ್ತಡ ಹೇರಿಲ್ಲ. ಮಹಿಳೆಯರು ಸ್ವಯಂ ಪ್ರೇರಿತರಾಗಿ ಹೋಳಿ ಆಚರಣೆ ಬರ್ತಿದ್ದಾರೆ.

2012 ರಲ್ಲಿ ಸುಪ್ರೀಂ ಕೋರ್ಟ್ ವೃಂದಾವನದಲ್ಲಿ ವಾಸಿಸುವ ವಿಧವೆಯರ ದುಃಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅದ್ರ ನಂತ್ರ ಆಡಳಿತಾತ್ಮಕ ಸುಧಾರಣೆ ವೇಗ ಪಡೆದಿತ್ತು. ವಿಧವೆಯರ ಹೋಳಿ, ಸಂಪ್ರದಾಯ ಸ್ಥಿರವಲ್ಲ, ಕಾಲದೊಂದಿಗೆ ಬದಲಾಗುತ್ತೆ ಎಂಬುದನ್ನು ಸೂಚಿಸುತ್ತದೆ. . ವೃಂದಾವನದ ಹೋಳಿ ಅಂತರಾಷ್ಟ್ರೀಯ ಮನ್ನಣೆ ಪಡೆದಿದೆ. ವಿದೇಶದಿಂದ ಅನೇಕ ಭಕ್ತರು ಈ ಹೋಳಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇದು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದೆ. ವೃಂದಾವನದಲ್ಲಿ ವಿಧವೆಯರಿಗಾಗಿ ವಿಶೇಷ ಹೋಳಿ ಆಯೋಜನೆ ಮಾಡಿ, ಪ್ರತಿಯೊಬ್ಬರಿಗೂ ಸಂತೋಷ ಮತ್ತು ಘನತೆಯ ಹಕ್ಕಿದೆ ಎಂಬುದನ್ನು ಸಾರಲಾಗ್ತಿದೆ.

Source link

Leave a Reply

Your email address will not be published. Required fields are marked *