Headlines

Optical Illusion: ಮರದಲ್ಲಿ ಅಡಗಿ ಕುಳಿತಿದೆ ಮುದ್ದಾದ ಬೆಕ್ಕು, 7 ಸೆಕೆಂಡುಗಳಲ್ಲಿ ಗುರುತಿಸಿ

Optical Illusion: ಮರದಲ್ಲಿ ಅಡಗಿ ಕುಳಿತಿದೆ ಮುದ್ದಾದ ಬೆಕ್ಕು, 7 ಸೆಕೆಂಡುಗಳಲ್ಲಿ ಗುರುತಿಸಿ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಟ್ರಿಕ್ಕಿಯಾಗಿರುವ ಲಕ್ಷಣಗಳನ್ನು ಬಿಡಿಸುವುದರ ಮಜಾನೇ ಬೇರೆ. ಹೆಚ್ಚಿನವರು ಇಂತಹ ಆಪ್ಟಿಕಲ್ ಇಲ್ಯೂಷನ್ ನಂತಹ (ಆಪ್ಟಿಕಲ್ ಇಲ್ಯೂಷನ್) ಒಗಟಿನ ಚಿತ್ರಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಚಿತ್ರ ನೋಡಿದ ತಕ್ಷಣ ಉತ್ತರ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಬುದ್ಧಿವಂತರಿಗೆ ಒಗಟಿನ ಚಿತ್ರ ಬಿಡಿಸುವುದು ಸುಲಭದಾಯಕ. ಇದೀಗ ಅಂತಹದ್ದೇ ಟ್ರಿಕ್ಕಿಯಾಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿರುವ ಬೆಕ್ಕು (ಕ್ಯಾಟ್) ಅಡಗಿ ಕುಳಿತಿದೆ. ಹೀಗಾಗಿ ನೀವು ಏಳು ಸೆಕೆಂಡುಗಳ ಒಳಗೆ ಈ ಬೆಕ್ಕನ್ನು ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ಸಾಧ್ಯವಾದರೆ ನೀವು ಅತೀ ಬುದ್ಧಿವಂತರು ಹಾಗೂ ಚುರುಕು ಸ್ವಭಾವದವರಾಗಿರುವುದು ಖಚಿತವಾಗುತ್ತದೆ.

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಏನಿದೆ ನೋಡಿ

ಇದು ನಿಮ್ಮನ್ನು ಭ್ರಮೆಗೆ ಒಳಪಡಿಸುವ ಒಗಟಿನ ಚಿತ್ರವಾಗಿದೆ. ವೈರಲ್ ಆಗಿರುವ ಈ ಚಿತ್ರದಲ್ಲಿ ಮರವೊಂದು ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ಆದರೆ ಈ ಮರದ ಮೇಲೆ ಬೆಕ್ಕು ಅಡಗಿ ಕುಳಿತಿದೆ. ಈ ಫೋಟೋದಲ್ಲಿರುವ ಸವಾಲು ಬೆಕ್ಕು ಎಲ್ಲಿದೆ ಎಂದು ಕಂಡುಹಿಡಿಯುವುದು. ನೀವು 7 ಸೆಕೆಂಡುಗಳಲ್ಲಿ ಬೆಕ್ಕನ್ನು ಹುಡುಕಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ಉತ್ತಮವಾಗಿದೆ ಎಂದರ್ಥ.

ಈ ಸವಾಲನ್ನು ನೀವು ಸ್ವೀಕರಿಸಿದ್ದೀರಾ?

ಈ ಚಿತ್ರದಲ್ಲಿನ ಮರವನ್ನು ಎಷ್ಟು ಗಮನಿಸಿದರೂ ಅಷ್ಟು ಸುಲಭವಾಗಿ ನಿಮ್ಮ ಕಣ್ಣಿಗೆ ಬೆಕ್ಕು ಕಾಣುವುದಿಲ್ಲ. ಇಂತಹ ಕೆಲವು ಒಗಟನ್ನು ಬಿಡಿಸುವ ತಾಳ್ಮೆ ಮತ್ತು ಏಕಾಗ್ರತೆ ಬಹಳ ಮುಖ್ಯ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ನೀವು ಸಾಮಾನ್ಯವಾಗಿ ಗೊಂದಲಕ್ಕೆ ಒಳಗಾಗುತ್ತೀರಿ. ನೀವು ಈಗ ಈ ಮರದಲ್ಲಿ ಅಡಗಿರುವ ಬೆಕ್ಕನ್ನು ಹುಡುಕುವ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ದೀರಾ. ಹಾಗಾದ್ರೆ ನಿಮ್ಮ ಸಮಯ ಈಗಲೇ ಆರಂಭವಾಗುತ್ತದೆ.

ಇದನ್ನೂ ಓದಿ

ಇದನ್ನೂ ಓದಿ:ಆಪ್ಟಿಕಲ್ ಇಲ್ಯೂಷನ್: ಮಹಿಳೆಯ ಮುಖದ ನಡುವೆ ಅಡಗಿರುವ ಪುರುಷನನ್ನು ಗುರುತಿಸಿ

ಬೆಕ್ಕನ್ನು ಕಂಡು ಹಿಡಿಯಲು ನಿಮಗೆ ಸಾಧ್ಯವಾಯಿತೇ?

ಆಪ್ಟಿಕಲ್ ಇಲ್ಯೂಷನ್ ಉತ್ತರ

ಎಷ್ಟು ಪ್ರಯತ್ನಪಟ್ಟರೂ ಮರದಲ್ಲಿ ಅಡಗಿರುವ ಬೆಕ್ಕನ್ನು ಗುರುತಿಸಲು ಸಾಧ್ಯವಾಗಿಲ್ಲ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನಿಮಗೆ ಸುಳಿವನ್ನು ನಾವು ನೀಡುತ್ತೇವೆ. ಈ ಮರದಲ್ಲಿ ಅಡಗಿ ಕುಳಿತಿರುವುದು ಕಪ್ಪು ಬಣ್ಣದ ಬೆಕ್ಕು. ಈ ಪ್ರಾಣಿಯನ್ನು ಹುಡುಕಲು ತಾಳ್ಮೆ ಅಗತ್ಯ. ಒಮ್ಮೆ ಏಕಾಗ್ರತೆಯಿಂದ ಈ ಚಿತ್ರದತ್ತ ಕಣ್ಣು ಹಾಯಿಸಿ. ಬೆಕ್ಕು ಕಂಡು ಹಿಡಿಯಲು ಸಾಧ್ಯವಾಗಿದ್ದರೆ ನಿಮಗೆ ಅಭಿನಂದನೆಗಳು. ಕೆಲವರಿಗೆ ಬೆಕ್ಕನ್ನು ಗುರುತಿಸುವುದು ಕಷ್ಟವಾಗಬಹುದು. ಹೀಗಾಗಿ ಈ ಮೇಲಿನ ಚಿತ್ರದಲ್ಲಿ ಗಮನಿಸಿ. ಈ ಮರದಲ್ಲಿ ಬೆಕ್ಕು ಎಲ್ಲಿದೆ ಎಂದು ಕೆಂಪು ಬಣ್ಣದಿಂದ ಗುರುತಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *