Headlines

Optical Illusion: ಅಡುಗೆ ಮನೆಯಲ್ಲಿ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಗುರುತಿಸುವಿರಾ

Optical Illusion: ಅಡುಗೆ ಮನೆಯಲ್ಲಿ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಗುರುತಿಸುವಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಒಗಟಿನ ಚಿತ್ರಗಳು ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಹೆಚ್ಚಿನವರು ಇಂತಹ ಒಗಟನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಆದರೆ ಎಲ್ಲರಿಗೂ ಸಾಧ್ಯವಾಗಿಲ್ಲ. ಇದೀಗ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಅಡುಗೆ ಮನೆಯಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಹುಡುಕುವ ಸವಾಲು ಇಲ್ಲಿದೆ. ಇಲ್ಲಿರುವ ವಸ್ತುಗಳ ನಡುವೆ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಕಂಡು ಹಿಡಿಯುವುದು ಅಷ್ಟು ಸುಲಭವಲ್ಲ. ಇದೀಗ ಕೇವಲ 20 ಸೆಕೆಂಡುಗಳೊಳಗೆ ಈ ಮನೆಯ ಮುದ್ದಿನ ಸಾಕು ಪ್ರಾಣಿಯನ್ನು ಹುಡುಕಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ವಸ್ತುಗಳನ್ನು, ಪ್ರಾಣಿ ಪಕ್ಷಿಗಳನ್ನು ಕಂಡು ಹಿಡಿಯುವುದು ಹೇಳುವಷ್ಟು ಸುಲಭವಲ್ಲ. ಈ ಚಿತ್ರ ನೋಡಿದಾಗ ನಿಮಗೆ ಅಡುಗೆ ಮನೆಯ ಸ್ಪಷ್ಟ ಚಿತ್ರಣವು ಕಾಣಿಸುತ್ತದೆ. ಈ ಅಡುಗೆ ಮನೆಯಲ್ಲಿ ಪಾತ್ರೆ, ಡೈನಿಂಗ್ ಟೇಬಲ್ ಸೇರಿದಂತೆ ವಿವಿಧ ವಸ್ತುಗಳು. ನೀವು ಇಲ್ಲಿ ಅಡಗಿ ಕುಳಿತಿರುವ ಬೆಕ್ಕನ್ನು ಪತ್ತೆ ಹಚ್ಚಬೇಕು.

ಇದನ್ನೂ ಓದಿ: ದಟ್ಟವಾದ ಕಾನನದಲ್ಲಿ ಅಡಗಿ ಕುಳಿತಿರುವ ಚಿರತೆಯನ್ನು ಗುರುತಿಸಬಲ್ಲಿರಾ

ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತೇ?

ಅಡುಗೆ ಮನೆಯಲ್ಲಿ ಅಡಗಿ ಕುಳಿತಿರುವ ಮನೆಯ ಮುದ್ದಿನ ಬೆಕ್ಕನ್ನು ಹುಡುಕುವುದು ಕಷ್ಟ. ಹೌದು, ನೀವು ಕಣ್ಣು ಅಗಲಿಸಿ ನೋಡಿದರೂ ಕಳ್ಳ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲವೇ. ಈ ಟ್ರಿಕ್ಕಿ ಬಿಡಿಸಲು ಸಾಧ್ಯವಾಗಿಲ್ಲ ಅಂದ್ರೆ ನಾವೇ ಈ ಸಾಕು ಪ್ರಾಣಿ ಎಲ್ಲಿದೆ ಎಂದು ಹೇಳುತ್ತೇವೆ. ಬೆಕ್ಕು ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ಗುರುತಿಸಲಾಗಿದೆ. ನೀವು ಈ ಸಾಕು ಪ್ರಾಣಿಯನ್ನು ನೋಡಿದ್ದೀರಿ ಎಂದು ಭಾವಿಸುತ್ತೇವೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *