Optical Illusion: ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯನ್ನು ಪತ್ತೆ ಹಚ್ಚಬಲ್ಲಿರಾ

Optical Illusion: ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯನ್ನು ಪತ್ತೆ ಹಚ್ಚಬಲ್ಲಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಒಗಟುಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಸುಲಭ, ಇನ್ನು ಕೆಲವರಿಗೆ ಕಷ್ಟಕರ. ಈ ಟ್ರಿಕ್ಕಿ ಒಗಟಿನ ಚಿತ್ರ ಬಿಡಿಸುತ್ತಾ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಆದರೆ ಈ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡಿ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಇದೀಗ ಇಂತಹದ್ದೇ ಕಠಿಣ ಸವಾಲಿನ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯನ್ನು ಕೇವಲ 7 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ಕಣ್ಣು ಬಿಟ್ಟು ಈ ಚಿತ್ರ ನೋಡಿ ಒಗಟು ಬಿಡಿಸಲು ಪ್ರಯತ್ನಿಸಿ.

ಈ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಏನು ಕಾಣಿಸಿತು?

ಆಪ್ಟಿಕಲ್ ಇಲ್ಯೂಷನ್ ಫೋಟೋ

ಆಪ್ಟಿಕಲ್‌ ಇಲ್ಯೂಷನ್‌ ಒಗಟಿನ ಚಿತ್ರವು ನೋಡುವುದಕ್ಕೆ ಸುಲಭವಾಗಿ ಕಂಡರೂ ಟ್ರಿಕ್ಕಿಯಾಗಿರುತ್ತದೆ. ಇದೀಗ ಈ ಚಿತ್ರವೂ ಅಷ್ಟೇ ಕಠಿಣ ಸವಾಲಿನದ್ದಾಗಿದ್ದು, ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಮೂವರು ಕಾಡಿನಲ್ಲಿ ಕೆಲಸ ಮಾಡುತ್ತಿರುವಂತೆ ಕಾಣಿಸಿಕೊಂಡಿದ್ದಾರೆ. ನಾಲ್ಕನೇ ವ್ಯಕ್ತಿಯೂ ಇಲ್ಲಿ ಅಡಗಿ ಕುಳಿತಿದ್ದಾನೆ. ಈ ವ್ಯಕ್ತಿಯನ್ನು ಗುರುತಿಸುವುದೇ ಇಲ್ಲಿರುವ ಸವಾಲು. ಏಳು ಸೆಕೆಂಡುಗಳಲ್ಲಿ ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ.

ಇದನ್ನೂ ಓದಿ: ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರಗಳ ನಡುವಿನ ಮೂರು ವ್ಯತ್ಯಾಸಗಳನ್ನು ಗುರುತಿಸಲಾಗಿದೆ

ನಾಲ್ಕನೇ ವ್ಯಕ್ತಿ ನಿಮ್ಮ ಕಣ್ಣಿಗೆ ಬಿದ್ದನೇ?

ಎಷ್ಟು ಹುಡುಕಿದರೂ ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಾಲ್ಕನೇ ವ್ಯಕ್ತಿಯನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರವನ್ನು ನೇರವಾಗಿ ನೋಡಬೇಡಿ. ನಿಮ್ಮ ಫೋನ್ ಅನ್ನು ತಿರುಗಿಸಿ ಅಥವಾ ಬೇರೆ ದೃಷ್ಟಿ ಕೋನದಿಂದ ನೋಡಲು ಪ್ರಯತ್ನಿಸಿ. ಮರಗಳ ನಡುವಿನ ಸ್ಥಳಗಳು ಮತ್ತು ನೆರಳುಗಳಿಂದ ರಚಿಸಲಾದ ಆಕಾರಗಳ ಮೇಲೆ ಕೇಂದ್ರೀಕರಿಸಿ. ಆಗ ಮಾತ್ರ ಮನುಷ್ಯನ ಆಕೃತಿಯನ್ನು ಕಾಣಲು ಸಾಧ್ಯ. ಈ ಎಲ್ಲಾ ಸುಳಿವು ನೀಡಿದರೂ ನಾಲ್ಕನೇ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ನಾವೇ ಉತ್ತರವನ್ನು ಹೇಳುತ್ತೇವೆ. ಮರದ ಕಾಂಡಗಳ ನಡುವಿನ ಖಾಲಿ ಜಾಗದಲ್ಲಿ ನಾಲ್ಕನೇ ವ್ಯಕ್ತಿಯನ್ನು ಜಾಣತನದಿಂದ ಇರಿಸಲಾಗಿದೆ. ನಾವು ನಾಲ್ಕನೇ ವ್ಯಕ್ತಿಯನ್ನು ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *