
ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಭ್ರಮೆ) ಹಾಗೂ ಬ್ರೈನ್ ಟೀಸರ್ ನಂತಹ ಒಗಟಿನ ಚಿತ್ರಗಳೇ ಹಾಗೆ. ಕ್ಷಣಾರ್ಧದಲ್ಲಿ ಈ ಒಗಟು ಬಿಡಿಸಿ ಉತ್ತರಿಸಲು ಅಸಾಧ್ಯ. ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಬಿಡಿಸಲು ಹೋಗಿ ಕೈ ಚೆಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಈ ಟ್ರಿಕ್ಕಿ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸಲು ಸಹಾಯ ಮಾಡುತ್ತವೆ. ಈ ಉದ್ಯಾನವನದಲ್ಲಿ ಹೂವುಗಳ ನಡುವೆ ಗಂಟೆಯೊಂದಿದೆ. ನೀವು ಒಗಟು ಬಿಡಿಸೋದ್ರಲ್ಲಿ ಪಂಟರಾಗಿದ್ರೆ ಕೇವಲ ಹತ್ತು ಒಳಗೆ ಈ ವಸ್ತುವನ್ನು ಪತ್ತೆ ಹಚ್ಚಿ ನೋಡಿ.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನೋಡುವುದಕ್ಕೆ ಕಲರ್ ಫುಲ್ ಆಗಿದ್ದು, ತುಂಬಾನೇ ಟ್ರಿಕ್ಕಿಯಾಗಿದೆ. ಉದ್ಯಾನವನ ಕಾಣಿಸಿಕೊಂಡಿದೆ. ಉದ್ಯಾನವನದಲ್ಲಿ ವರ್ಣರಂಜಿತ ಹೂವುಗಳಿವೆ. ಆದರೆ ಹೂವುಗಳ ಮಧ್ಯದಲ್ಲಿ ಒಂದು ಗಂಟೆಯೂ ಇದೆ. ಈ ಫೋಟೋದಲ್ಲಿರುವ ಗಂಟೆ ಸವಾಲು ಎಲ್ಲಿದೆ ಎಂದು ಪತ್ತೆ ಹಚ್ಚುವುದು. 10 ಸೆಕೆಂಡುಗಳ ಒಳಗೆ ಗಂಟೆಯನ್ನು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಶಕ್ತಿಗೆ ಹ್ಯಾಟ್ಸ್ ಆಫ್ ಹೇಳುತ್ತೇವೆ.
ಇದನ್ನೂ ಓದಿ:ಹದ್ದಿನ ಕಣ್ಣು ನಿಮ್ಮದಾಗಿದ್ರೆ ಮರಳಿನ ರಾಶಿಯಲ್ಲಿ ಅಡಗಿ ಕುಳಿತಿರುವ ಹಾವನ್ನು ಕಂಡು ಹಿಡಿಯುವಿರಾ
ಗಂಟೆ ನಿಮ್ಮ ಕಣ್ಣಿಗೆ ಕಾಣಿಸಿತೇ?
ಎಷ್ಟು ಹುಡುಕಿದರೂ ಚಿತ್ರದಲ್ಲಿ ಮರೆ ಮಾಡಲಾದ ಗಂಟೆಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಳ್ಳಬೇಡಿ. ಹೂವುಗಳ ನಡುವೆ ಇರುವ ಈ ಗಂಟೆಯನ್ನು ಹುಡುಕಲು ನೀವು ಈ ಚಿತ್ರವನ್ನು ವಿಭಾಗಗಳಾಗಿ ವಿಂಗಡಿಸುವುದು ಉತ್ತಮ. ಇಷ್ಟು ಮಾಡಿದ ಮೇಲೆ ಈ ವಸ್ತುವನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ಈ ಕೆಳಗಿನ ಚಿತ್ರದ ಗಂಟೆಯನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ