ಆಪ್ಟಿಕಲ್ ಇಲ್ಯೂಷನ್ಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಮೋಜಿನ ಆಟಗಳು ಎಲ್ಲರಿಗೂ ಇಷ್ಟನೇ. ಆದರೆ ಈ ಆಪ್ಟಿಕಲ್ ಇಲ್ಯೂಷನ್ (ಆಪ್ಟಿಕಲ್ ಭ್ರಮೆ) ಸಂಬಂಧಿತ ಚಿತ್ರಗಳನ್ನು ಬಿಡಿಸುವುದು ಕಷ್ಟಕರ. ಹೀಗಾಗಿ ಇಂತಹ ಚಿತ್ರಗಳನ್ನು ಕಣ್ಣಾಯಿಸಿದರೂ ಮೊದಲ ಪ್ರಯತ್ನದಲ್ಲೇ ವಿಫಲರಾಗುವವರೇ ಹೆಚ್ಚು. ಅದಲ್ಲದೆ, ಒಗಟಿನ ಚಿತ್ರಗಳನ್ನು ಬಿಡಿಸುವಾಗ ಹತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಕ್ಷಣಾರ್ಧದಲ್ಲಿ ಉತ್ತರ ಹೇಳಲು ಸಾಧ್ಯ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಜಾಣತನದಿಂದ ಮರೆಮಾಚಲಾಗಿದೆ ಮೊಲವನ್ನು 15 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದರೆ, ಈ ಚಿತ್ರದತ್ತ ಕಣ್ಣಾಯಿಸಿ.
ಈ ಚಿತ್ರದಲ್ಲಿ ಏನು ಕಾಣಿಸುತ್ತದೆ?

ಇಲ್ಯೂಷನ್ ಚಿತ್ರವು ನಿಮ್ಮ ಮೆದುಳಿಗೆ ವ್ಯಾಯಾಮ ನೀಡುವುದಿಲ್ಲ, ನಿಮ್ಮ ದೃಷ್ಟಿ ಸಾಮರ್ಥ್ಯ, ಯೋಚನಾ ಸಾಮರ್ಥ್ಯ ಎಷ್ಟು ಪರೀಕ್ಷಿಸುತ್ತದೆ. ಇದೇ ತರಹದ ಚಿತ್ರ ಇದಾಗಿದ್ದರೆ, ಇಲ್ಲಿ ಯುವಕ ಯುವತಿಯರು ಹಾಗೂ ಪುಟಾಣಿಗಳು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಕಸವನ್ನು ಗೋಣಿ ಚೀಲಕ್ಕೆ ತುಂಬಿಸುತ್ತಿದ್ದರೆ, ಇನ್ನು ಕೆಲವು ಗುಡಿಸಿ ಉತ್ಪಾದನೆಯಲ್ಲಿ ಬ್ಯೂಸಿಯಾಗಿದೆ. ಇಲ್ಲಿ ಮನೆಯ ಮುದ್ದಿನ ಶ್ವಾನವಿರುವುದನ್ನು ಕಾಣಬಹುದಾಗಿದೆ. ಇದೆಲ್ಲದರ ನಡುವೆ ಮೊಲವೊಂದು ಅಡಗಿ ಕುಳಿತಿದ್ದು, ಈ ಪ್ರಾಣಿ ಎಲ್ಲಿದೆ ಎಂದು ಹುಡುಕುವ ಸವಾಲು ಇಲ್ಲಿದೆ.
ಇದನ್ನೂ ಓದಿ: ಒಣಗಿದ ಎಲೆಗಳ ನಡುವೆ ಕುಳಿತಿರುವ ಹಾವನ್ನು ಗುರುತಿಸಬಲ್ಲೆರಾ
ಮೊಲವನ್ನು ಗುರುತಿಸಲು ಸಾಧ್ಯವಾಯಿತೇ?
ಕೇವಲ ಹದಿನೈದು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಮೊಲವನ್ನು ಗುರುತಿಸುವುದು ಅಸಾಧ್ಯ. ಆದರೆ ವೀಕ್ಷಣಾ ಸಾಮರ್ಥ್ಯ ಹೊಂದಿದವರು ಮಾತ್ರ ಈ ಒಗಟನ್ನು ಸಲೀಸಾಗಿ ಬಿಡಿಸಲು ಸಾಧ್ಯವಾಗಿದೆ. ನಿಮ್ಮ ಕಣ್ಣಿಗೆ ಮೊಲ ಕಾಣಿಸುವುದಿಲ್ಲ ಎಂದಾದರೆ ಟೆನ್ಶನ್ ಮಾಡಿಕೊಳ್ಳಬೇಡಿ, ನಾವೇ ಈ ಮುದ್ದಾದ ಪ್ರಾಣಿ ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಫೋಟೋವನ್ನು ನೋಡಿ. ಇಲ್ಲಿ ಮೊಲವನ್ನು ಗುರುತಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ