Headlines

Optical Illusion: ಜಸ್ಟ್ 15 ಸೆಕೆಂಡುಗಳಲ್ಲಿ ಈ ಉದ್ಯಾನವನದಲ್ಲಿ ಅಡಗಿರುವ ಶ್ವಾನವನ್ನು ಹುಡುಕಿ

Optical Illusion: ಜಸ್ಟ್ 15 ಸೆಕೆಂಡುಗಳಲ್ಲಿ ಈ ಉದ್ಯಾನವನದಲ್ಲಿ ಅಡಗಿರುವ ಶ್ವಾನವನ್ನು ಹುಡುಕಿ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಅಥವಾ ಒಗಟಿನ ಆಟಗಳು ತುಂಬಾ ಜನಪ್ರಿಯವಾಗಿವೆ. ಕಣ್ಣು ಹಾಯಿಸಿದ್ದೆಲ್ಲ ಮೆದುಳಿಗೆ ವ್ಯಾಯಾಮ ನೀಡುವ ಒಗಟಿನ ಆಟಗಳೇ. ಇದು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಹಾಕುವುದಲ್ಲದೇ, ಒಗಟು ಬಿಡಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆಯೇ ಎಂದು ಪರೀಕ್ಷಿಸುತ್ತದೆ. ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲೊಡ್ಡುವ ಟ್ರಿಕ್ಕಿ ಒಗಟು ಇಲ್ಲಿದೆ. ಈ ಉದ್ಯಾನವನದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ನಾಯಿಯನ್ನು ಪತ್ತೆ ಹಚ್ಚಬೇಕು. ಈ ಕಠಿಣ ಒಗಟನ್ನು ಬಿಡಿಸಲು ಇರುವ ಕಾಲಾವಕಾಶ 15 ಸೆಕೆಂಡುಗಳು ಮಾತ್ರ ನೆನಪಿರಲಿ.

ಈ ಚಿತ್ರ ಏನು ಹೇಳುತ್ತದೆ?

ಆಪ್ಟಿಕಲ್ ಇಲ್ಯೂಷನ್ ಚಿತ್ರ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳೇ ಹಾಗೆ, ನಮಗೆ ಕಾಣುವುದೇ ಒಂದು. ಅದರಲ್ಲಿ ಅಡಗಿರುವುದೇ ಇನ್ನೊಂದು ಆಗಿರುತ್ತದೆ. ಈ ಚಿತ್ರವನ್ನು ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಉದ್ಯಾನವನವೊಂದು ಕಾಣಿಸುತ್ತದೆ. ರೆಂಬೆ ಕೊಂಬೆಗಳನ್ನು ಚಾಚಿ ನಿಂತಿರುವ ಎರಡು ಮರವನ್ನು ಕಾಣಬಹುದಾಗಿದೆ. ಈ ಮರದ ಎಲೆಗಳು ಒಣಗಿ ಉದುರಿ ಹೋಗಿವೆ. ನೆಲದ ಮೇಲೆ ಬಿದ್ದಿರುವ ಒಣ ಎಲೆಗಳ ರಾಶಿಯನ್ನು ಕಾಣಬಹುದು. ಇದೆಲ್ಲದರ ನಡುವೆ ನಾಯಿಯೊಂದು ಅಡಗಿ ಕುಳಿತಿದೆ. ಈ ಶ್ವಾನವನ್ನು ಹುಡುಕುವುದೇ ನಿಮ್ಮ ಮುಂದಿರುವ ಸವಾಲು. ಕಣ್ಣು ಬಿಟ್ಟು ಚಿತ್ರ ನೋಡಿ ನಾಯಿಯನ್ನು ಪತ್ತೆ ಹಚ್ಚಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ವ್ಯಕ್ತಿಯ ಪತ್ತೆ ಹಚ್ಚಬಲ್ಲಿರಾ

ನಿಮ್ಮ ಕಣ್ಣಿಗೆ ನಾಯಿ ಕಾಣಿಸಿತೇ?

ಟ್ರಿಕ್ಕಿ ಒಗಟುಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರಗಳನ್ನು ನೋಡಿದಾಗ ಹಾಗೇ ಅನಿಸುತ್ತದೆ. ಈ ಉದ್ಯಾನವನದಲ್ಲಿರುವ ಶ್ವಾನವನ್ನು ಹುಡುಕುವುದು ಸುಲಭವೆನಿಸಿದರೂ ಟ್ರಿಕ್ಕಿಯಾಗಿದೆ. ನೀವು ಈ ಒಗಟು ಬಿಡಿಸುವಲ್ಲಿ ಸೋತಿದ್ದೀರಾ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಉತ್ತರವನ್ನು ನಾವೇ ಹೇಳುತ್ತೇವೆ. ಈ ಕೆಳಗಿನ ಚಿತ್ರ ನೋಡಿ ಉದ್ಯಾನವನದಲ್ಲಿ ನಾಯಿ ಎಲ್ಲಿದೆ ಎಂದು ನಿಮಗೆ ತಿಳಿಯುತ್ತದೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *