ಆಪ್ಟಿಕಲ್ ಇಲ್ಯೂಷನ್ ಚಿತ್ರ ಕ್ರೆಡಿಟ್ ಮೂಲ: Twitter
ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಭ್ರಮೆ) ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದಿದ್ದೇ ತಿಳಿಯುವುದಿಲ್ಲ. ಕೆಲವು ಕ್ಷಣಾರ್ಧದಲ್ಲಿ ಇಂತಹ ಒಗಟುಗಳನ್ನು ಬಿಡುತ್ತಾರೆ. ಆದರೆ, ಟ್ರಿಕ್ಕಿ ಒಗಟಿನ ಚಿತ್ರ ಬಿಡಿಸುವುದು ಅಷ್ಟು ಸುಲಭವಲ್ಲ. ಸೋಶಿಯಲ್ ಮೀಡಿಯಾದಲ್ಲಿ (ಸಾಮಾಜಿಕ ಮಾಧ್ಯಮ) ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ವೃತ್ತಾಕಾರದ ಚಿತ್ರದಲ್ಲಿ ಸಂಖ್ಯೆ ಇದೆ. ಆ ಸಂಖ್ಯೆ ಎಷ್ಟೆಂದು ಹೇಳಬೇಕು. ನೀವು 10 ಸೆಕೆಂಡುಗಳ ಒಳಗೆ ಸರಿಯಾದ ಉತ್ತರವನ್ನು ಹೇಳಿದರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ಅತ್ಯುತ್ತಮವಾಗಿದೆ ಎಂದರ್ಥ.
benonwine ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ನಲ್ಲಿ ಟ್ರಿಕ್ಕಿ ಒಗಟಿನ ಚಿತ್ರವಿದೆ. ಕಪ್ಪು ಬಿಳುಪಿನ ಈ ವೃತ್ತಾಕಾರದಲ್ಲಿ ಗುಪ್ತ ಸಂಖ್ಯೆಯು ಅಡಗಿದೆ. ಈ ಸಂಖ್ಯೆಯನ್ನು ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಈ ಪದ ಬಿಡಿಸಿ ಸರಿಯಾದ ಉತ್ತರವನ್ನು ಹೇಳಲು ಪ್ರಯತ್ನಿಸಿ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
ನೀವು ಸಂಖ್ಯೆಯನ್ನು ನೋಡುತ್ತೀರಾ?
ಹಾಗಿದ್ದಲ್ಲಿ, ಯಾವ ಸಂಖ್ಯೆ? pic.twitter.com/wUK0HBXQZF
– ಬೆನೊನ್ವೈನ್ (@ಬೆನನ್ವೈನ್) ಫೆಬ್ರವರಿ 16, 2022
ಇದನ್ನೂ ಓದಿ:ಒಗಟು ಬಿಡಿಸೋದ್ರಲ್ಲಿ ನೀವು ಪಂಟರೇ, ಈ ಚಿತ್ರದಲ್ಲಿರುವ ಆನೆಯನ್ನು ಗುರುತಿಸಿ
ಸರಿಯಾದ ಸಂಖ್ಯೆ ಕಂಡು ಹಿಡಿಯಲು ಸಾಧ್ಯವಾಯಿತೇ?
ಈ ಒಗಟಿನ ಚಿತ್ರದಲ್ಲಿರುವ ಗುಪ್ತ ಸಂಖ್ಯೆಯನ್ನು ಕಂಡು ಹಿಡಿಯಲು ಅನೇಕರು ಪ್ರಯತ್ನಿಸಿದ್ದಾರೆ. ಹಲವಾರು ಸಂಖ್ಯೆಗಳನ್ನು ಟೈಪ್ ಮಾಡುವ ಮೂಲಕ ಈ ಒಗಟಿಗೆ ಸರಿಯಾದ ಉತ್ತರ ಹೇಳಿದ್ದಾರೆ. ಆದರೆ ಈ ವೃತ್ತಾಕಾರದ ಚಿತ್ರದಲ್ಲಿ ಅಡಗಿರುವ ಸಂಖ್ಯೆ ಎಷ್ಟು ಎಂದು ಹೇಳಲು ನಾವು ನಿಮಗೆ ಸುಳಿವು ನೀಡಬೇಕಾಗಿದೆ. ಸರಿಯಾದ ಉತ್ತರವು ಮೂರರಿಂದ ಎಂಟು ಸಂಖ್ಯೆಗಳವರೆಗೆ ಇರಬಹುದು. ಆ ಸಂಖ್ಯೆ ಯಾವುದು ಎಂದು ಗುರುತಿಸಲು ಸಾಧ್ಯವಾಗಿಲ್ಲವೇ, ಚಿಂತಿಸಬೇಡಿ, ನಾವೇ ನಿಮಗೆ ಉತ್ತರವನ್ನು ಹೇಳುತ್ತೇವೆ. ಈ ವೃತ್ತದಲ್ಲಿರುವ ಸಂಖ್ಯೆ 3452839.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ