ರೊಮ್ಯಾಂಟಿಕ್ ಕಾಮಿಡಿಯಿಂದ ಸಸ್ಪೆನ್ಸ್ ಥ್ರಿಲ್ಲರ್‌ವರೆಗೆ, ಒಟಿಟಿಯಲ್ಲಿರುವ ಟಾಪ್ 10 ಸಿನಿಮಾಗಳಿವು

ಇದು ಜಾನ್ ಅಬ್ರಹಾಂ ನಟಿಸಿರುವ ಬಾಲಿವುಡ್ ಸಿನಿಮಾ. ಇದರಲ್ಲಿ ಮಾನುಷಿ ಚಿಲ್ಲರ್, ನೀರು ಬಜ್ವಾ ಕೂಡ ಈ ಸಿನಿಮಾಲ್ಲಿ ನಟಿಸಿದ್ದಾರೆ. ಅರುಣ್ ಗೋಪಾಲನ್ ನಿರ್ದೇಶನದ ಈ ಸಿನಿಮಾವು 2012 ರಲ್ಲಿ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ಸತ್ಯವನ್ನು ಕಂಡುಕೊಳ್ಳುವ ಪೊಲೀಸ್ ಅಧಿಕಾರಿಯ ಕಥೆಯಾಗಿದೆ. ಆದರೆ ಈ ಪ್ರಯತ್ನದಲ್ಲಿ ದೇಶವು ಅವನನ್ನು ಏಕಾಂಗಿಯಾಗಿ ಬಿಡುತ್ತದೆ ಮತ್ತು ಅವನು ಇರಾನ್‌ನ ಗುರಿಯಾಗುತ್ತಾನೆ.

ಈ ತಮಿಳು ಭಾಷೆಯ ಸಿನಿಮಾವನ್ನು ಸುಧೀಶ್ ಶಂಕರ್ ನಿರ್ದೇಶಿಸಿದ್ದಾರೆ. ವೈದಿವೇಲು, ಫಹದ್ ಫಾಜಿಲ್ ನಟಿಸಿರುವ ಈ ಸಿನಿಮಾದ ಕಥೆಯು ದಯಾ ಎಂಬ ಕಳ್ಳನ ಸುತ್ತ ಸುತ್ತುತ್ತದೆ. ದಯಾ ಆಲ್ಝೈಮರ್‌ನಿಂದ ಬಳಲುತ್ತಿರುವ ವಲಯುಧಮ್ ಜೊತೆ ದರೋಡೆ ಮಾಡುವ ಉದ್ದೇಶದಿಂದ ಪ್ರಯಾಣ ಬೆಳೆಸುತ್ತಾನೆ, ಅವನ ಜೀವನ ಶಾಶ್ವತವಾಗಿ ಬದಲಾಗುತ್ತದೆ.

ವಿಜಯ್ ದೇವರಕೊಂಡ ಸಿನಿಮಾವಿದು. ಇದನ್ನು ಗೋವರ್ಧನ್ ತಿನ್ನಮುರಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆಯು ಒಬ್ಬ ರಹಸ್ಯ ಕಾನ್ಸ್ಟೇಬಲ್ ಶ್ರೀಲಂಕಾಕ್ಕೆ ಸಿಂಡಿಕೇಟ್ ಅನ್ನು ನಿರ್ಮೂಲನೆ ಮಾಡಲು ರಹಸ್ಯ ಕಾರ್ಯಾಚರಣೆಗೆ ಹೋಗಿ ಅಲ್ಲಿ ತನ್ನಿಂದ ದೂರ ಆದ ಸಹೋದರನನ್ನು ಭೇಟಿಯಾಗುವುದರ ಬಗ್ಗೆ ಈ ಸಿನಿಮಾವಿದೆ.

ಇದು ವಿಶಾಲ್ ಫ್ಯೂರಿಯಾ ನಿರ್ದೇಶನದ ಪೌರಾಣಿಕ ಹಾರರ್ ಸಿನಿಮಾವಾಗಿದೆ. ಕಾಜೋಲ್ ಅಭಿನಯದ ಈ ಸಿನಿಮಾವು ತನ್ನ ಮಗಳನ್ನು ರಕ್ಷಿಸಲು ತಾಯಿ ಕಾಳಿಯಾಗುವ ತಾಯಿಯ ಕಥೆಯನ್ನು ಹೇಳುತ್ತದೆ, ರಾಕ್ಷಸನ ವಿರುದ್ಧ ಹೋರಾಡುತ್ತದೆ.

ಇದು ದಕ್ಷಿಣ ಕೊರಿಯಾದ ಲವ್ ಕಾಮಿಡಿ ಸಿನಿಮಾವಾಗಿದೆ. ಈ ಸಿನಿಮಾದ ಕಥೆಯು ಪ್ರೇಯಸಿಯಾದ ಹದಿಹರೆಯದ ಹುಡುಗಿಯೊಬ್ಬಳು ತನ್ನ ಗುಂಗುರು ಕೂದಲನ್ನು ನೇರಗೊಳಿಸುವ ಮೂಲಕ ಇಡೀ ಶಾಲೆಯ ಅತ್ಯಂತ ಸುಂದರ ಹುಡುಗನ ಹೃದಯವನ್ನು ಗೆಲ್ಲಲು ಪ್ರಯತ್ನಪಡುತ್ತಾಳೆ

ಇದು ಬ್ರಿಟಿಷ್ ಹಾಸ್ಯ ಅಪರಾಧ ಚಿತ್ರವಾಗಿದ್ದು, ಇದರಲ್ಲಿ ನಾಲ್ವರು ನಿವೃತ್ತ ಜನರು ಮನರಂಜನೆಗಾಗಿ ಹಳೆಯ ಕೊಲೆ ಪ್ರಕರಣಗಳನ್ನು ಪರಿಹಾರ ಮಾಡೋದರಲ್ಲಿ ಸಮಯವನ್ನು ಕಳೆಯುತ್ತಾರೆ. ಆದರೆ ಅವರು ನಿಜವಾದ ನಿಗೂಢ ಜಗತ್ತಿನಲ್ಲಿ ತಾವಿದ್ದೇವೆ ಎಂದು ಗೊತ್ತಾದಾಗ ಸಿನಿಮಾ ಕಥೆಯು ತಿರುವು ಪಡೆಯುತ್ತದೆ.

ಇದು ಅಮೇರಿಕನ್ ಮಾರ್ಷಲ್ ಆರ್ಟ್ಸ್ ಡ್ರಾಮಾ ಸಿನಿಮಾವಾಗಿದೆ. ಕುಂಗ್ ಫೂ ಪ್ರತಿಭೆ ಲೀ ಫಾಂಗ್ ತನ್ನ ತಾಯಿಯೊಂದಿಗೆ ನ್ಯೂಯಾರ್ಕ್‌ಗೆ ಹೋಗುತ್ತಾನೆ, ಅಲ್ಲಿ ಹೊಸ ಸಹಪಾಠಿಗಳೊಂದಿಗೆ ಬೆರೆತು, ಹಿಂದಿನದನ್ನು ಮರೆಯಲು ಪ್ರಯತ್ನಿಸುತ್ತಾನೆ. ಈ ಸಮಯದಲ್ಲಿ, ಅವನು ಕರಾಟೆ ಸ್ಪರ್ಧೆಗೆ ಸೇರುತ್ತಾನೆ. ಆದರೆ ಅವನಿಗೆ ತಿಳಿದಿರುವುದು ಈ ಸ್ಪರ್ಧೆಗೆ ಸಾಕಾಗುವುದಿಲ್ಲ. ಲೀ ಹೇಗೆ ಮುಂದುವರಿಯುತ್ತಾನೆ, ಸ್ಪರ್ಧೆಗೆ ಹೇಗೆ ಸಿದ್ಧನಾಗುತ್ತಾನೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಈ ಜರ್ಮನ್ ಕಾ*ಮಪ್ರಚೋದಕ ಥ್ರಿಲ್ಲರ್ ಕಥೆಯ ಪ್ರಕಾರ, ಲಿಲಿ ತನ್ನ ಸಹೋದರಿ ವಲೇರಿಯಾವನ್ನು ಭೇಟಿಯಾಗಲು ಹೋಗುತ್ತಾಳೆ, ಫ್ರೆಂಚ್ ಪ್ರಜೆ ಮನು ಜೊತೆ ಸಹೋದರಿ ನಿಶ್ಚಿತಾರ್ಥವಾಗಿದೆ ಎಂದು ತಿಳಿದು ಆಘಾತಕ್ಕೊಳಗಾಗುತ್ತಾಳೆ. ಅವಳು ಮನು ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಾಳೆ, ಆದರೆ ಈ ಮಧ್ಯೆ ಅವಳು ತುಂಬಾ ಆಕರ್ಷಕ ಟಾಮ್‌ನನ್ನು ಭೇಟಿಯಾಗುತ್ತಾಳೆ. ಇದರ ನಂತರ ಪ್ರೀತಿ, ಉತ್ಸಾಹ ಮತ್ತು ದ್ರೋಹದ ಕಥೆ ಪ್ರಾರಂಭವಾಗುತ್ತದೆ.

ಇದು ಬ್ರಿಟಿಷ್ ಹಾಸ್ಯ ಅಪರಾಧ ಚಿತ್ರವಾಗಿದ್ದು, ಇದರಲ್ಲಿ ನಾಲ್ವರು ನಿವೃತ್ತ ಜನರು ಮನರಂಜನೆಗಾಗಿ ಹಳೆಯ ಕೊಲೆ ಪ್ರಕರಣಗಳನ್ನು ಪರಿಹಾರ ಮಾಡೋದರಲ್ಲಿ ಸಮಯವನ್ನು ಕಳೆಯುತ್ತಾರೆ. ಆದರೆ ಅವರು ನಿಜವಾದ ನಿಗೂಢ ಜಗತ್ತಿನಲ್ಲಿ ತಾವಿದ್ದೇವೆ ಎಂದು ಗೊತ್ತಾದಾಗ ಸಿನಿಮಾ ಕಥೆಯು ತಿರುವು ಪಡೆಯುತ್ತದೆ.

Source link
Top 10 Movies on Netflix: ಕುರ್ಚಿ ತುತ್ತ ತುದಿ ತಂದು ಕೂರಿಸೋ 10 ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಒಟಿಟಿಗೆ ಬಂತು!