ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಇನ್ನೂ ಕೆಲವು ಪ್ರಮುಖ ಕಲಾವಿದರು ನಟಿಸಿರುವ ‘ಲ್ಯಾಂಡ್ ಲಾಾರ್ಡ್’ ಸಿನಿಮಾ ಒಟಿಟಿಗೆ ಬರುತ್ತಿದೆ. ಆದರೆ ಈ ವಾರ ಅಲ್ಲ ಬದಲಾಗಿ ಮುಂದಿನ ಮಾರ್ಚ್ 15ಕ್ಕೆ ಸಿನಿಮಾ ಜೀ5 ನಲ್ಲಿ ವೀಕ್ಷಣೆ ಲಭ್ಯ ವಾರ.
ಮಹಿಳೆ ಮತ್ತು ಒಂದು ನಾಯಿಯ ಕಥೆಯನ್ನು ಒಳಗೊಂಡಿರುವ ಹಾಸ್ಯಮಯ ಸಾಮಾಜಿಕ ಸಿನಿಮಾ ‘ಪೊನ್ನುಂ-ಪೋರಾಟಂ’. ಮಲಯಾಳಂನ ಈ ಸಿನಿಮಾ ಈ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದೆ. ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳನ್ನು ಹಾಸ್ಯಮಯವಾಗಿ ತೋರಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
ಭರ್ತ ಮಹಾಶಯುಲಕು ವಿಜ್ಞಪ್ತಿ ಇದು ಕಳೆದ ಸಂಕ್ರಾಂತಿಗೆ ಬಿಡುಗಡೆ ಆಗಿದ್ದ ಸಿನಿಮಾ. ಹಲವು ದೊಡ್ಡ ಸಿನಿಮಾಗಳ ಜೊತೆಗೆ ಬಿಡುಗಡೆ ಆದ ಈ ಹಾಸ್ಯಮಯ ಆಕ್ಷನ್ ಸಿನಿಮಾ ಸಂಕ್ರಾಂತಿಯ ಇತರೆ ಸಿನಿಮಾಗಳ ಅಬ್ಬರದಲ್ಲಿ ಕಳೆದು ಹೋಯ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಲಾಗಿದೆ. ಸಿನಿಮಾದಲ್ಲಿ ರವಿತೇಜ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ.
ಟಿವಿಎಫ್ ಅವರ ಜನಪ್ರಿಯ ವೆಬ್ ಸರಣಿಗಳಲ್ಲಿ ಆಸ್ಪೈರೆಂಟ್. ಇದೀಗ ಇದರ ಮೂರನೇ ಸೀಸನ್ ಬಿಡುಗಡೆಯಾಗಿದೆ. ಯುಪಿಎಸ್ ಸಿ ಓದುವ ವಿದ್ಯಾರ್ಥಿಗಳು ಮತ್ತು ಓದುವ ಇನ್ ಸ್ಟಿಟ್ಯೂಟ್ ಅದರ ರಾಜಕೀಯ ಇತರ ವಿಷಯಗಳು ಈ ವೆಬ್ ಸರಣಿಯನ್ನು ಒಳಗೊಂಡಿದೆ.
ತೆಲುಗು ನಟ ವಿಶ್ವಕ್ ಸೇನ್ ನಟಿಸಿರುವ ‘ಫಂಕಿ’ ಸಿನಿಮಾ ಕಳೆದ ತಿಂಗಳಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಅನುದೀಪ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಕಾಮಿಡಿ ಸಿನಿಮಾ ಆಗಿದ್ದು, ಚಿತ್ರಮಂದಿರದಲ್ಲಿ ಸಾಮಾನ್ಯ ಪ್ರದರ್ಶನ ಕಂಡಿತ್ತು. ಇದೀಗ ಈ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗಿದೆ.
ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಯಶಸ್ಸು ಗಳಿಸಿದ್ದ ತಮಿಳು ಸಿನಿಮಾ ‘ಪೂಕಿ’ ಇದೀಗ ಒಟಿಟಿಗೆ ಬಂದಿದೆ. ಪ್ರೇಮಿಗಳಿಬ್ಬರೂ ರೋಡ್ ರೇಜ್ ಘಟನೆಯೊಂದರಲ್ಲಿ ಜಗಳ ಮಾಡಿಕೊಂಡು ದೂರವಾಗುತ್ತಾರೆ. ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಮತ್ತೆ ಹೇಗೆ ಮರಳಿ ಸಂಧಿಸುತ್ತಾರೆ ಎಂಬುದು ಸಿನಿಮಾದ ಕತೆ. ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಲಾಗಿದೆ.
ತಾಜ್ ಮಹಲ್ನ ಇತಿಹಾಸವನ್ನು ಕೆದಕುವ ಕಥೆ ಹೊಂದಿರುವ ಸಿನಿಮಾ ‘ದಿ ತಾಜ್ ಸ್ಟೋರಿ’. ತುಷಾರ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಪರೇಶ್ ರಾವಲ್ ನಟಿಸಿದ್ದಾರೆ. ತಾಜ್ ಮಹಲ್, ಹಿಂದೂ ದೇವಾಲಯ ಎಂದು ಪರೇಶ್ ರಾವಲ್ ಪಾತ್ರ ನ್ಯಾಯಾಲಯದಲ್ಲಿ ವಾದ ಮಾಡುವುದೇ ಈ ಸಿನಿಮಾದ ಕತೆ. ಈ ಸಿನಿಮಾ ಲಯನ್ಸ್ ಗೇಟ್ ಒಟಿಟಿಯಲ್ಲಿ ಬಿಡುಗಡೆ ಆಗಿದೆ.






