‘ಧುರಂಧರ’ ನಾಯಕಿ ಸಾರಾ ಅರ್ಜುನ್ ನಟನೆಯ ತೆಲುಗು ಸಿನಿಮಾ ‘ಯುಫೋರಿಯಾ’ ಈ ವಾರ ಒಟಿಟಿಗೆ ಬಂದಿದೆ. ವಾಸುದೇವ್ ಮೆನನ್, ಭೂಮಿಕಾ ಚಾವ್ಲಾ ಇನ್ನೂ ಕೆಲವು ಪ್ರಮುಖ ನಟ-ನಟಿಯರು ನಟಿಸಿರುವ ಸಿನಿಮಾ ಇದಾಗಿದೆ. ಸಿನಿಮಾವನ್ನು ಇಟಿವಿ ವಿನ್ ನಲ್ಲಿ ವೀಕ್ಷಿಸಲಾಗಿದೆ.
ಭಾರತದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿರುವ ‘ಮಾಮ್ಲಾ ಲೀಗಲ್ ಹೈ’ನ ಎರಡನೇ ಸೀಸನ್ ಇದೀಗ ಬಿಡುಗಡೆಯಾಗಿದೆ. ರವಿಕಿಶನ್ ಸೇರಿದಂತೆ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ಈ ವೆಬ್ ಸರಣಿಯ ಲಾಯರ್ಗಳ ಕುರಿತಾದ ಕಥೆ ಒಳಗೊಂಡಿದೆ. ವೆಬ್ ಸರಣಿಯನ್ನು ನೆಟ್ಫ್ಲಿಕ್ಸ್ನಲ್ಲಿ ನೋಡಲಾಗುವುದಿಲ್ಲ.
ಅಮೀರ್ ಖಾನ್ ನಿರ್ಮಾಣ ಮಾಡಿ, ಕಾಮಿಡಿಯನ್ ವೀರ್ ದಾಸ್ ನಟಿಸಿ, ನಿರ್ದೇಶನ ಮಾಡಿರುವ ಹಾಸ್ಯಮಯ ಥ್ರಿಲ್ಲರ್ ಸಿನಿಮಾ ‘ಹ್ಯಾಪಿ ಪಟೇಲ್’ ಸಿನಿಮಾ ಇದೇ ವಾರ ಒಟಿಗೆ ಬಂದಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ತಕ್ಕ ಮಟ್ಟಿಗೆ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗಿದೆ.
ಅಮೀರ್ ಖಾನ್ ನಟಿಸಿ ಆರ್ ಎಸ್ ಪ್ರಸನ್ನ ನಿರ್ದೇಶನ ಮಾಡಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಯ್ತು. ಬಳಿಕ ಯುಟ್ಯೂಬ್ ನಲ್ಲೂ ಬಿಡುಗಡೆ ಆಯ್ತು. ಇದೀಗ ಈ ಸಿನಿಮಾ ಸೋನಿ ಲಿವ್ ನಲ್ಲಿ ಬಿಡುಗಡೆ ಆಗಿದೆ.
‘ಸಾಂಪ್ರದಾಯಿನಿ ಸುಪ್ಪಿನಿ ಸುದ್ದಪೂಸನಿ’ ಹೆಸರಿನ ತೆಲುಗು ಸಿನಿಮಾ ಇದೀಗ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದೆ. ಶಿವಾಜಿ, ಲಯಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಹಾಸ್ಯಮಯ ಕುಟುಂಬ ಕಥೆಯನ್ನು ಒಳಗೊಂಡಿದೆ. ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗಿದೆ.




