
ದಿ ಹಂಡ್ರೆಡ್ ಲೀಗ್‌ನ ಫೈನಲ್ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಸೋಲುಣಿಸಿ ಓವಲ್ ಇನ್ವಿನ್ಸಿಬಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಈ ಪಂದ್ಯದಲ್ಲಿ ಟಾಸ್ ಗೆದ್ದ ಓವಲ್ ಇನ್ವಿನ್ಸಿಬಲ್ಸ್ ತಂಡದ ಸ್ಯಾಮ್ ಬಿಲ್ಲಿಂಗ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಬ್ಯಾಟ್ ಮಾಡಿದ ಓವಲ್ ಇನ್ವಿನ್ಸಿಬಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವಿಲ್ ಜ್ಯಾಕ್ಸ್ 41 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ 72 ಚಚ್ಚಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಓವಲ್ ಇನ್ವಿನ್ಸಿಬಲ್ಸ್ ತಂಡ 100 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ಕಲೆಹಾಕಿತು.
169 ರನ್ ಗುರಿ ಬೆನ್ನತ್ತಿದ ಟ್ರೆಂಟ್ ರಾಕೆಟ್ಸ್ ಪರ ಮಾರ್ಕಸ್ ಸ್ಟೊಯಿನಿಸ್ 38 ಎಸೆತಗಳಲ್ಲಿ 64 ಬಾರಿಸಿದರೂ ಉಳಿದ ಬ್ಯಾಟರ್ ಗಳು ನಿರೀಕ್ಷಿತ ನೀಡುವಲ್ಲಿ. ಪರಿಣಾಮ ಟ್ರೆಂಟ್ ರಾಕೆಟ್ಸ್ 100 ಎಸೆತಗಳಲ್ಲಿ 142 ಗಳಿಸಲಷ್ಟೇ ಶಕ್ತರಾದರು. ಈ ಓವಲ್ ಇನ್ವಿನ್ಸಿಬಲ್ಸ್ ತಂಡವು 26 ರನ್ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಹ್ಯಾಟ್ರಿಕ್ ಚಾಂಪಿಯನ್ಸ್:
ದಿ ಹಂಡ್ರೆಡ್ ಲೀಗ್‌ನಲ್ಲಿ ಸತತ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಓವಲ್ ಇನ್ವಿನ್ಸಿಬಲ್ಸ್ ಹೊಸ ಬರೆದಿದೆ. ಇದಕ್ಕೂ 23 2023 ಮತ್ತು 2024 ರಲ್ಲಿ ಓವಲ್ ಇನ್ವಿನ್ಸಿಬಲ್ಸ್ ಟ್ರೋಫಿ ಎತ್ತಿ ಹಿಡಿದಿದ್ದರು. ಇದೀಗ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಹೊಸ ಇತಿಹಾಸ ನಿರ್ಮಿಸಿದ್ದಾರೆ.