Headlines

ತನ್ನದೇ ಟೆಂಪೋದಲ್ಲಿ ಶವವಾಗಿ ಪತ್ತೆಯಾದ ಮಾಲೀಕ: ಸಾವಿನ ಸುತ್ತ ಅನುಮಾನದ ಹುತ್ತ

ತನ್ನದೇ ಟೆಂಪೋದಲ್ಲಿ ಶವವಾಗಿ ಪತ್ತೆಯಾದ ಮಾಲೀಕ: ಸಾವಿನ ಸುತ್ತ ಅನುಮಾನದ ಹುತ್ತ


ತನ್ನದೇ ಟೆಂಪೋದಲ್ಲಿ ಶವವಾಗಿ ಪತ್ತೆಯಾದ ಮಾಲೀಕ: ಸಾವಿನ ಸುತ್ತ ಅನುಮಾನದ ಹುತ್ತ

ಚಿಕ್ಕಬಳ್ಳಾಪುರ, ಏಪ್ರಿಲ್ 01: ಅಶೋಕ್ ಲೇಲ್ಯಾಂಡ್ ಮಿನಿ ಟೆಂಪೋ ಮಾಲೀಕ ಕಂ ಚಾಲಕನೋರ್ವ ತನ್ನ ಟೆಂಪೋವನ್ನು ನಂಬಿಕೊಂಡು ಬಾಡಿಗೆಗೆ ಹೋಗುವುದರ ಮೂಲಕ ಜೀವನ ಸಾಗಿಸುತ್ತಿದ್ದ. ಬಾಡಿಗೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಟೆಂಪೋದಲ್ಲೇ ಶವವಾಗಿ ಇದ್ದಿದ್ದು (ಸಾವು)ಕೊಲೆ ಶಂಕೆ ಇದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಗ್ರಾಮದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಬೆಂಗಳೂರು ಗ್ರಾಮಾಂತರ ನಿವಾಸಿ ದೇವನಹಳ್ಳಿ ತಾಲೂಕಿನ ಕುರುಬರಕುಂಟೆಯ ಕಾಲೋನಿ 48 ವರ್ಷದ ಸುಬ್ರಮಣಿ, ಶನಿವಾರ ಮನೆಯಿಂದ ಬಾಡಿಗೆಗೆ ಹೋಗಿ ಬರ್ತೀನಿ ಎಂದವನು ವಾಪಸ್ ಬಂದಿಲ್ಲ. ಅನುಮಾನಗೊಂಡು ರಸ್ತೆಯಲ್ಲಿ ವಾಹನ ಹುಡುಕಿಕೊಂಡು ಬಂದಾಗ ಸುಬ್ರಮಣ್ಯ ವಾಹನ ಹಾಗೂ ಶವ ಇದೆ.

ಇದನ್ನೂ ಓದಿ: ಕೆಲಸದಿಂದ ತೆಗೆದ ಸಿಟ್ಟಿಗೆ ಮ್ಯಾನೇಜರ್‌ಗೆ ಚಾಕುವಿನಿಂದ 10 ಬಾರಿ ಇದ್ದ, ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಕೃತ್ಯ

ಇನ್ನು ಸುಬ್ರಮಣಿಗೆ ಚಿಕ್ಕಬಳ್ಳಾಪುರ ತಾಲೂಕಿನ ಪರೇಸಂದ್ರ ಗ್ರಾಮದ ಪರಿಚಯಸ್ಥ ಮಹಿಳೆಯ ಜೊತೆ ಅನೈತಿಕ ಸಂಬಂಧ ಇತ್ತಂತೆ. ಆಕೆಯನ್ನು ನೋಡಿಕೊಂಡು ವಾಪಸ್ ಬರುವಾಗ ಏನೋ ನಡೆದಿದೆ ಅಂತ ಸುಬ್ರಮಣಿ ಸಾವಿನ ಬಗ್ಗೆ ಆತನ ತಮ್ಮ ಮುನಿರಾಜು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೆರೇಸಂದ್ರ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಬ್ರಮಣಿ ಟೆಂಪೋದಲ್ಲೇ ಶವವಾಗಿದ್ದು, ಸಹಜ ಸಾವಾ, ಇಲ್ಲಾ ಯಾರಾದರೂ ಕೊಂದು ಶವ ಹಾಗೂ ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತನಿಖೆಯಿಂದ ತಿಳಿಯಬೇಕಿದೆ.

ಹಿಂಬದಿಯಿಂದ ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿಯೊಂದು ಹಿಂಬದಿಯಿಂದ ಬಂದು ಡಿಕ್ಕಿ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯನಗರ ಬಳಿ ಹೊಸಪೇಟೆ ತಾಲೂಕಿನ ಡಣಾಪುರ ನಡೆದಿದೆ. ಗುಂಡ ತಾಂಡಾದ ನಿವಾಸಿ ಕಿರಣ್ (27) ಮೃತ ಬೈಕ್ ಸವಾರ. ಹಗರಿಬೊಮ್ಮನ ಹಳ್ಳಿ ಸಿಪಿಐ, ವಿಕಾಸ್ ಲಮಾಣಿ, ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಾರಾಬಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ ಆಪ್ತನ ಹತ್ಯೆ ಯತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗುಂಡ ತಾಂಡದಿಂದ, ಹೊಸಪೇಟೆಗೆ ಮಾತ್ರ ತರಲು ಬೈಕ್ ಸವಾರ ಕಿರಣ ಹೊರಟ್ಟಿದ್ದರು. ಬೆಂಗಳೂರಿನಿಂದ ಅಹಮದಾಬಾದ್ ಕಡೆ ಹೋಗುತ್ತಿದ್ದ ಲಾರಿ, ಬೈಕ್ ಸವಾರನಿಗೆ ಗುದ್ದಿದೆ. ತಲೆ ಮತ್ತು ಬೆನ್ನು, ಮುಖಕ್ಕೆ ಬಲವಾದ ಗಾಯವಾದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಚಾಲಕನನ್ನು ಮರಿಯಮ್ಮನ ಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *