Headlines

ಪತಿಗೆ ಡಿವೋರ್ಸ್ ಕೊಟ್ಟಿದ್ದೇಕೆ ಪದ್ಮಜಾ ರಾವ್? ವಿವರಿಸಿದ ಹಿರಿಯ ನಟಿ

ಪತಿಗೆ ಡಿವೋರ್ಸ್ ಕೊಟ್ಟಿದ್ದೇಕೆ ಪದ್ಮಜಾ ರಾವ್? ವಿವರಿಸಿದ ಹಿರಿಯ ನಟಿ


ಪತಿಗೆ ಡಿವೋರ್ಸ್ ಕೊಟ್ಟಿದ್ದೇಕೆ ಪದ್ಮಜಾ ರಾವ್? ವಿವರಿಸಿದ ಹಿರಿಯ ನಟಿ

ಪದ್ಮಜಾ ರಾವ್ (ಪದ್ಮಜಾ ರಾವ್) ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಇದರ ಜೊತೆಗೆ ಧಾರಾವಾಹಿಯಲ್ಲಿ ಪದ್ಮಜಾ ನಟಿಸಿದ್ದಾರೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾಳ ಅತ್ತೆ ಪಾತ್ರ ಮಾಡುತ್ತಿದ್ದಾರೆ. ಖಡಕ್ ಅತ್ತೆಯಾಗಿ, ಮಗ ತಪ್ಪಾಗಿ ಶಿಕ್ಷೆ ಕೊಡುವಾಗ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಪದ್ಮಜಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮೊದಲ ಮದುವೆ ಹಾಗೂ ಅದರ ವಿಚ್ಛೇದನದ ಬಗ್ಗೆ ಪದ್ಮಾಜಾ ಹೇಳಿದ್ದಾರೆ.

ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪದ್ಮಜಾ ಹೇಳಿದ್ದಾರೆ. ‘ನಾನು ಸಣ್ಣ ವಯಸ್ಸಿಗೆ ಮದುವೆ ಆದೆ. ಖುಷಿಯಿಂದಲೇ ಮದುವೆ ಆದೆ. ಧಾರಾವಾಹಿ ಮಾಡಲು ಅಮ್ಮ ಅವಕಾಶ ಕೊಡ್ತಾ ಇರಲಿಲ್ಲ. ಮದುವೆ ಆದ ಬಳಿಕ ನಟಿಸಬಹುದು ಎಂದುಕೊಂಡಿದ್ದೆ. ಆದರೆ, ಇಲ್ಲ’ ಎಂದರು ಪದ್ಮಜಾ.

‘ಮೊದಲ ಮದುವೆ ಯಶಸ್ಸು ಕಾಣಲಿಲ್ಲ. ಮೊದಲ ಮದುವೆಯಿಂದ ಸಂಜೀವ್ ಜನಿಸಿದರು. ಆ ಬಳಿಕ ನಟಿಯಾಗಲು ಪ್ರಯತ್ನಿಸಿದೆ. ನಾನು ಆ ನೋವಿನಿಂದ ಹೊರ ಬಂದಿದ್ದೇನೆ. ನನ್ನ ಮಗ ಸಂಜೀವ್ ಅನ್ನು ನೋಡಿದರೆ ಎಲ್ಲಾ ನೋವು ಮಾಯವಾಗುತ್ತದೆ. ಅವನಲ್ಲಿ ಆ ಶಕ್ತಿ ಇದೆ’ ಪದ್ಮಜಾ.

ನಂತರ ಪದ್ಮಜಾ ರಾವ್ ಅವರು ನಿಧಾನವಾಗಿ ಕಿರುತೆರೆಯಲ್ಲಿ ಅವಕಾಶ ಪಡೆಯುತ್ತಾ ಬಂದರು. ದೂರದರ್ಶನದಲ್ಲಿ ಕಾರ್ಯಕ್ರಮಗಳನ್ನು ಕೂಡ ನಿರ್ಮಾಣ ಮಾಡಿದರು ಪದ್ಮಜಾ ರಾವ್. ನಂತರ ಅವರಿಗೆ ನಟನೆಯಲ್ಲಿ ಹಲವು ಅವಕಾಶಗಳನ್ನು ಪಡೆದರು. ‘ಮೂಡಲ ಮನೆ’ ಅವರ ಬದುಕು ಬದಲಿಸಿತು.

ಇದನ್ನೂ ಓದಿ: ಕನ್ನಡದ ಹಿರಿಯ ನಟಿ ಪದ್ಮಜಾ ರಾವ್‌ಗೆ ಮೂರು ತಿಂಗಳ ಜೈಲು ಶಿಕ್ಷೆ, 40 ಲಕ್ಷ ರೂ. ದಂಡ

ರಿಲೇಶನ್ ಶಿಪ್ ಬಗ್ಗೆ ಪದ್ಮಜಾ ರಾವ್ ಸಲಹೆ. ‘ಸಂಬಂಧಗಳಲ್ಲಿ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಮಲಗುವುದಕ್ಕೂ ಮೊದಲು ಯೋಚಿಸಿ. ಲಿವಿನ್ ಅಲ್ಲಾದರೂ ಇರಿ ಅಥವಾ ಮದುವೆ ಆಗಿ ಅದು ನಿಮಗೆ ಬಿಟ್ಟಿದ್ದು. ಆದರೆ, ಅದಕ್ಕೆ ಹೋಗೋದಕ್ಕೂ ಮೊದಲು ಅವರ ಜೊತೆ ಸುತ್ತಾಡಿ, ಅವರು ಹೇಗೆ ತಿಳಿದುಕೊಳ್ಳಿ’ ಎಂದು ಪದ್ಮಜಾ ರಾವ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *