
ಲಾಹೋರ್, ಎ. 04: ಪಾಕಿಸ್ತಾನದ ಪಂಜಾ ತೆರಿಗೆ ಪ್ರಾಂತ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಎಷ್ಟು ತಾರಕಕ್ಕೇರಿದೆ ಎಂದರೆ, ಅಲ್ಲಿನ ಸರ್ಕಾರ ಈಗ ಜಾನುವಾರುಗಳ ತ್ಯಾಜ್ಯಕ್ಕೂ ವಿಧಿಸಲು ಮುಂದಾಗಿದೆ. ಮುಖ್ಯಮಂತ್ರಿ ಮರಿಯಮ್ ನವಾಜ್ ನೇತೃತ್ವದ ಆಡಳಿತವು ಎಮ್ಮೆಗೆ ದಿನಕ್ಕೆ 30 ಪಾಕಿಸ್ತಾನಿ ರೂಪಾಯಿ (PKR 30) ‘ಗೋಬರ್ ಟ್ಯಾಕ್ಸ್’ (ಸಗಣಿ ತೆರಿಗೆ) ವಿಧಿಸಿದೆ ಎಂದು ಘೋಷಿಸಲಾಗಿದೆ.
ಸರ್ಕಾರವು ಈ ಕ್ರಮವನ್ನು ‘ಸೂತ್ರ ಪಂಜಾಬ್’ (ಸ್ವಚ್ಛ ಪಂಜಾಬ್) ಬಯೋಗ್ಯಾಸ್ ಕಾರ್ಯಕ್ರಮದ ಅಡಿಯಲ್ಲಿ ಜಾರಿಗೆ ತರುತ್ತಿದೆ. ಪ್ರಾಂತದಾದ್ಯಂತ ಇರುವ 168 ಜಾನುವಾ ಕಾಲನಿಗಳನ್ನು ಗುರುತಿಸಲಾಗಿದೆ, ಅಲ್ಲಿಯ ಎಮ್ಮೆಯ ಸಗಣಿಯನ್ನು ಸಂಗ್ರಹಿಸಿದ ಬಯೋಗ್ಯಾಸ್ ಮತ್ತು ನಗರದ ನೈರ್ಮಲ್ಯ ಕಾಪಾಡಲು ಈ ತೆರಿಗೆಯನ್ನು ಬಳಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಈ ಹೊಸ ತೆರಿಗೆಯು ರೈತರಿಗೆ ಭಾರಿ ಹೊರೆಯಾಗಲಿದೆ. ಒಂದು ಎಮ್ಮೆಗೆ ದಿನಕ್ಕೆ 30 ರೂಪಾಯಿಯಂತೆ ಲೆಕ್ಕ ಹಾಕಿದರೆ, ವರ್ಷಕ್ಕೆ ಸುಮಾರು 11,000 ರೂಪಾಯಿ ತೆರಿಗೆ ಪಾವತಿಸಲಾಯಿತು. ಪಶು ಆಹಾರದ ಬೆಲೆ ಏರಿಕೆ, ವಿದ್ಯುತ್ ದರ ಮತ್ತು ಹಣದುಬ್ಬರದಿಂದ ಕಂಗಾಲಾದ ರೈತರು ಈ ನಿರ್ಧಾರದಿಂದ ಕಂಗೆಟ್ಟಿದ್ದಾರೆ.
ಇದನ್ನೂ ಓದಿ: ಆಮೇಲೆ ಶಾಂತಿ ಜಪ ಮಾಡಿ, ಮೊದಲು ನಮ್ಮ ಸಾಲ ವಾಪಸ್ ಕೊಡಿ ಎಂದು ಪಾಕಿಸ್ತಾನವನ್ನು ಕೇಳಿದ ಯುಎಇ
“ಇದು ಸರ್ಕಾರದ ದಿವಾಳಿತನದ ಪರಮಾವಧಿ” ಎಂದು ವಿರೋಧ ಪಕ್ಷಗಳು ಟೀಕಿಸಿವೆ. ರಾಜ್ಯದಲ್ಲಿ ಆದಾಯ ಸಂಗ್ರಹಿಸಲು ಬೇರೆ ಯಾವುದೇ ದಾರಿ ಇಲ್ಲದೆ ಈಗ ಎಮ್ಮೆಗಳ ಸಗಣಿಯನ್ನು ಅಳತೆ ಮಾಡುವ ಸ್ಥಿತಿಗೆ ಸರ್ಕಾರ ತಲುಪಿದೆ ಎಂದು ಲೇವಡಿ ಮಾಡಲಾಗಿದೆ. ಶ್ರೀಮಂತ ರಾಜಕಾರಣಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಬಡ ರೈತನ ಮೇಲೆ ಈ ರೀತಿ ತೆರಿಗೆ ಹೇರಿರುವುದು ವೈಫಲ್ಯಕ್ಕೆ ಸಾಕ್ಷಿ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ