Headlines

ನಮ್ಮ ಸೋಲಿಗೆ ಕೋಚ್ ಕಾರಣ: ಬಂಡಾಯವೆದ್ದ ಪಾಕ್ ಆಟಗಾರರು

ನಮ್ಮ ಸೋಲಿಗೆ ಕೋಚ್ ಕಾರಣ: ಬಂಡಾಯವೆದ್ದ ಪಾಕ್ ಆಟಗಾರರು


T20 World Cup 2026: T20 ಇತ್ನಲ್ಲಿನ ಹೀನಯಾ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್‌ನಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ. ಈ ಅಲ್ಲೋಲ ಕಲ್ಲೋಲದ ನಡುವೆ ಟಿ20 ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ 50 ಲಕ್ಷ ರೂ. (PKR) ದಂಡ ವಿಧಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ. ಇದರ ನಡುವೆ ಸೋಲಿಗೆ ನಾವಲ್ಲ ಕಾರಣ, ಕೋಚ್ ಮೈಕ್ ಹೆಸ್ಸನ್ ಎಂದು ಪಾಕ್ ಆಟಗಾರರು ಬಂದಿದ್ದಾರೆ.

ಟಿ20 ನಿಂದ ಪಾಕಿಸ್ತಾನ ತಂಡ ಹೊರಬಿದ್ದ ನಂತರ, ಆಟಗಾರರು ಮುಖ್ಯ ಕೋಚ್ ಮೈಕ್ ಹೆಸ್ಸನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ನಾಯಕ ಸಲ್ಮಾನ್ ಅಲಿ ಅಘಾ ನೇತೃತ್ವದ ಆಟಗಾರರು ಮೈಕ್ ಹೆಸ್ಸನ್ ಅವರ ಕಾರ್ಯವೈಖರಿಯ ಬಗ್ಗೆ ಪಿಸಿಬಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ.

ಕೋಚ್ ಹೆಸ್ಸನ್ ಅವರು ನಾಯಕ ಅಥವಾ ಆಯ್ಕೆ ಸಮಿತಿಯನ್ನು ಸಂಪರ್ಕಿಸಲು ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ನಡವಳಿಕೆ ತುಂಬಾ ಕಠಿಣವಾಗಿತ್ತು ಎಂದು ಆಟಗಾರರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಹೀಗಾಗಿ ಟಿ20 ಅಲ್ಲನಲ್ಲಿನ ಸೋಲಿಗೆ ಆಟಗಾರರು ಕಾರಣ. ಇದಕ್ಕೆ ಮುಖ್ಯ ಕಾರಣ ಕೋಚ್ ಮೈಕ್ ಹೆಸ್ಸನ್ ಎಂದು ಪಾಕ್ ಆಟಗಾರರು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ ಮೈಕ್ ಹೆಸ್ಸನ್ ಅವರ ಅತಿಯಾದ ಪ್ರಭಾವದಿಂದಾಗಿ ರಾಷ್ಟ್ರೀಯ ಆಯ್ಕೆಗಾರ ಅಲೀಮ್ ದಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಭಾರತದ ವಿರುದ್ಧ ಆಟದ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮತ್ತು ತಂಡದ ಆಯ್ಕೆಯ ತಪ್ಪುಗಳು ಸೋಲಿಗೆ ಕಾರಣವೆಂದು ಆಟಗಾರರು ದೂರಿದ್ದಾರೆ. ಇಲ್ಲಿ ತಂಡವನ್ನು ಆಯ್ಕೆ ಮಾಡಿರುವುದು ಮೈಕ್ ಹೆಸ್ಸನ್.

ಅವರ ಕೆಲ ನಿರ್ಧಾರಗಳು ಇಡೀ ತಂಡದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಪಾಕ್ ತಂಡದ ಕಳಪೆ ಪ್ರದರ್ಶನಕ್ಕೆ ಮುಖ್ಯ ಕೋಚ್ ಮೈಕ್ ಹೆಸ್ಸನ್ ಕೂಡ ಕಾರಣಕರ್ತರು ಎಂದು ಪಾಕಿಸ್ತಾನ್ ಆಟಗಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: VIDEO: ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಸಿಕ್ತು 20 ಸಾವಿರ ರೂ..!

ಸದ್ಯ ಆಟಗಾರರು ದೂರು ನೀಡಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಟೇಬಲ್ ಮೇಲಿದ್ದು, ಈ ದೂರಿನ ವೇಳೆ ಮೈಕ್ ಹೆಸ್ಸನ್ ಅವರನ್ನು ಪದಚ್ಯುತಗೊಳಿಸುವ ಸಾಧ್ಯತೆಯಿಲ್ಲದೆ ಅವರ ನಡವಳಿಕೆಯ ಬಗ್ಗೆ ಕಠಿಣ ಎಚ್ಚರಿಕೆ ನೀಡಲಾಗುವುದು ಎಂದು ವರದಿಯಾಗಿದೆ.



Source link

Leave a Reply

Your email address will not be published. Required fields are marked *