ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವನ್ನಪ್ಪಿದ ಪಾಕಿಸ್ತಾನದ ಖ್ಯಾತ ಕಂಟೆಂಟ್​ ಕ್ರಿಯೆಟರ್

ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವನ್ನಪ್ಪಿದ ಪಾಕಿಸ್ತಾನದ ಖ್ಯಾತ ಕಂಟೆಂಟ್​ ಕ್ರಿಯೆಟರ್


ಪಾಕಿಸ್ತಾನದ ಜನಪ್ರಿಯ ಸೋಶಿಯಲ್ ಮೀಡಿಯಾ ಕಾಂಟೆಂಟ್ ಕ್ರಿಯೆಟರ್ ಪ್ಯಾರಿ ಮರ್ಯಮ್ (ಪರಿ ಮರ್ಯಮ್ ಸಾವು) ಅವರು ಎರಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅವರು 26ನೇ ವಯಸ್ಸಿನಲ್ಲಿ ನಿಧನರಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸಿಯಾಸತ್ ಡೈಲಿ ವರದಿ ಮಾಡಿದೆ. ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಸ್ವಲ್ಪ ಸಮಯದ ನಂತರ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಮರಿಯಮ್ ಡಿಸೆಂಬರ್ 4 ಗುರುವಾರ ಲಾಹೋರ್‌ನಲ್ಲಿ ನಿಧನರಾದರು ಎಂದು ಅವರ ಪತಿ ಅಹ್ಸಾನ್ ಅಲಿ ಹೇಳಿದ್ದಾರೆ

ಪತಿ ಅಹ್ಸಾನ್ ಅಲಿ ಹೇಳಿದ್ದೇನು?

ಅಲ್ಲಾಹನು ಅವರನ್ನು ಕ್ಷಮಿಸಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸಿ” ಎಂದು ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅವರು ಹಂಚಿಕೊಂಡಿರುವ ಫೋಟೋದಲ್ಲಿ ಒಂದು ಫೋಟೋದಲ್ಲಿ ಅವರ ಪತ್ನಿ ಹಿಜಾಬ್ ಹಾಕಿರುವುದನ್ನು ನೋಡಬಹುದು, ಮತ್ತೊಂದು ಫೋಟೋದಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವುದನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಇನ್ಸ್ಟಾಲ್ ಸ್ಟೋರಿಯಲ್ಲಿ ಅವರ ಅವಳಿ ಮಕ್ಕಳ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದುಬೈನಲ್ಲಿ ಅಮ್ಮನ 60ನೇ ಹುಟ್ಟುಹಬ್ಬ: ‘ಇದು ನಿನ್ನ ಮದುವೆಯಂತೆ ಭಾಸವಾಯಿತು ಅಮ್ಮ’

ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ಅಲ್ಹಮುದ್ಲಿಲ್ಲಾಹ್ ನನ್ನ ಎರಡು ಮಕ್ಕಳನ್ನು ರಕ್ಷಿಸುತ್ತಾರೆ ಎಂದು ಹೇಳಿದ್ದಾರೆ. ಯಾರೂ ಕೂಡ ಈ ಬಗ್ಗೆ ಸುಳ್ಳು ವದಂತಿ ಹರಡಬೇಡಿ. ಈ ಮಕ್ಕಳಿಗೆ ನೀವು ಹಾರೈಸಿ ಎಂದು ಹೇಳಿದ್ದಾರೆ. ಪ್ಯಾರಿ ಮರ್ಯಮ್ ಪಾಕಿಸ್ತಾನಿ ವ್ಲಾಗರ್ ಆಗಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಒಳಗೆ ಮತ್ತು ಹೊರಗೆ, ಭಾರತದಲ್ಲಿಯೂ ದೊಡ್ಡ ಅಭಿಮಾನಿಗಳು ಕೂಡ ಇವರು. ದಿ ಸಿಯಾಸತ್ ಪ್ರಕಾರ, ಅವರು ಇನ್‌ಸ್ಟಾಗ್ರಾಮ್‌ನಲ್ಲಿ 1.4 ಲಕ್ಷ ಮತ್ತು ಟಿಕ್‌ಟಾಕ್‌ನಲ್ಲಿ ಸುಮಾರು ಎರಡು ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ. ಇನ್ನು ಇವರ ನಂತರ ಅವರ ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಸಾವಿಗೆ ಸಂತಾಪ ಕೂಡ ಸೂಚಿಸಲಾಗಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *