Headlines

Parijatha Plant: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

Parijatha Plant: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ


ಪ್ರಕೃತಿಯಲ್ಲಿರುವ ಎಲ್ಲಾ ಸಸ್ಯವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಆಧ್ಯಾತ್ಮಿಕವಾಗಿ ಮತ್ತು ಸಾಮಾನ್ಯವಾಗಿ ಅನೇಕ ಗಿಡಗಳು ನಮ್ಮ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ತುಳಸಿ, ಬಿಲ್ವಪತ್ರೆಯಂತೆ, ಪಾರಿಜಾತ ಗಿಡವು ವಿಶೇಷ ಸ್ಥಾನವನ್ನು ಹೊಂದಿದೆ. ಇದನ್ನು ದೇವಲೋಕದ ಗಿಡ, ದೈವಿಕ ವೃಕ್ಷ ಎಂದೂ ಕರೆಯಲಾಗುತ್ತದೆ. ಮನೆಯ ಹತ್ತಿರ ಪಾರಿಜಾತವನ್ನು ಬೆಳೆಸುವುದು ಉತ್ತಮ, ಇದರ ನಿರ್ವಹಣೆ ಹೇಗೆ, ಇದರವೇನು ಮತ್ತು ಇದರ ಹಿಂದಿನ ಇತಿಹಾಸವೇನು ಗಿಡದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ಸ್ತುತಿ ನಿಬಂಧನೆಗಳು ಡಾ. ಬಸವರಾಜ್ ಗುರೂಜಿಅವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ.

ಗುರೂಜಿಯವರು ಹೇಳುವಂತೆ, ಪಾರಿಜಾತ ಗಿಡವು ಭಗವಂತನಿಗೆ ಹೂವುಗಳನ್ನು ಅರ್ಪಿಸಲು ಬಳಸಲಾಗುವ ಒಂದು ಪವಿತ್ರ ಸಸ್ಯ. ಇದರ ಹೂವುಗಳು ಮನಸ್ಸಿಗೆ ಧನಾತ್ಮಕ ಚಿಂತನೆಗಳನ್ನು ನೀಡುತ್ತವೆ. ಮನೆಯ ಸುತ್ತಲೂ ಪಾರಿಜಾತ ಗಿಡವನ್ನು ಬೆಳೆಸುವುದರಿಂದ ಹಲವು ಪ್ರಯೋಜನಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಉತ್ತರ-ಈಶಾನ್ಯ ದಿಕ್ಕಿನಲ್ಲಿ ಅಥವಾ ಸಾಧ್ಯವಾದರೆ ದಕ್ಷಿಣ-ನೈರುತ್ಯ ದಿಕ್ಕಿನಲ್ಲಿ ಬೆಳೆಸುವುದು ಅತ್ಯಂತ ಶುಭಕರ. ಇದು ವಾಸ್ತು ದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ, ಮನೆಯ ಮೇಲೆ ಬೀಳುವ ಯಾವುದೇ ನಕಾರಾತ್ಮಕ ದೃಷ್ಟಿ ಅಥವಾ ಮಾಟ ಮಂತ್ರದಂತಹ ಪ್ರಭಾವಗಳನ್ನು ಹೆಚ್ಚಿಸುವ ಶಕ್ತಿ ಈ ಗಿಡಕ್ಕಿದೆ ಎಂದು ನಂಬಲಾಗಿದೆ.

ಪುರಾಣಗಳ ಪ್ರಕಾರ, ಪಾರಿಜಾತ ಗಿಡವು ಮಂಥನದ ಸಮಯದಲ್ಲಿ ಉದ್ಭವಿಸಿದ ಹದಿನಾಲ್ಕು ರತ್ನಗಳಲ್ಲಿ ಕಂಡುಬರುತ್ತದೆ. ಈ ಕಾರಣಕ್ಕಾಗಿ, ಇದನ್ನು ಮಹಾಲಕ್ಷ್ಮಿಯ ಸಹೋದರ ಎಂದೂ ಕರೆಯಲಾಗುತ್ತದೆ. ಮನೆಯಲ್ಲಿ ಪಾರಿಜಾತ ಗಿಡವಿದ್ದರೆ, ಮಹಾಲಕ್ಷ್ಮಿ, ಮಹಾಸರಸ್ವತಿ ಮತ್ತು ಮಹಾಕಾಳಿ ಈ ತ್ರಿಶಕ್ತಿಗಳ ಅನುಗ್ರಹ ಸದಾ ಇರುತ್ತದೆ ಎಂದು ಹೇಳದಿದ್ದರೆ. “ದರ್ಶನಂ ಪುಣ್ಯಂ, ಸ್ಪರ್ಶನಂ ಪಾಪನಾಶನಂ” ಎಂಬ ಮಾತು ಈ ಗಿಡಕ್ಕೆ ಅನ್ವಯಿಸುತ್ತದೆ. ರಾತ್ರಿಯ ಸಮಯದಲ್ಲಿ ಈ ಗಿಡದ ಸುತ್ತಲೂ ಹರಡುವ ಸುಗಂಧವು ಮನಸ್ಸಿಗೆ ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ!

ಪಾರಿಜಾತ ಗಿಡಕ್ಕೆ ಸೂರ್ಯನ ಕಿರಣಗಳು ಚೆನ್ನಾಗಿ ಬೀಳುವುದು ಅತ್ಯವಶ್ಯಕ. ಸೂರ್ಯನ ಕಿರಣಗಳಿಲ್ಲದೆ ಗಿಡದ ಬೆಳವಣಿಗೆ ಕಷ್ಟವಾಗಬಹುದು. ಇದರ ವಿಶೇಷವೆಂದರೆ, ಸಾಮಾನ್ಯವಾಗಿ ನಾವು ಗಿಡಗಳಿಂದ ನೇರವಾಗಿ ಹೂವುಗಳನ್ನು ಬಿಡಿಸಿಕೊಳ್ಳುತ್ತೇವೆ. ಆದರೆ ಪಾರಿಜಾತದ ಹೂವುಗಳು ಮರದಿಂದ ಉದುರಿ ನೆಲಕ್ಕೆ ಬಿದ್ದ ನಂತರವೂ ಪೂಜೆಗೆ ಬಳಸಬಹುದು. ಇದು ಇಂದ್ರನ ನಂದನವನದಲ್ಲಿದ್ದ ಗಿಡವಾಗಿದ್ದು, ಶ್ರೀಕೃಷ್ಣ ಭಗವಾನರು ಇಂದ್ರನೊಂದಿಗೆ ಇದನ್ನು ಭೂಲೋಕಕ್ಕೆ ತಂದರು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಪ್ರೀತಿ, ಭಕ್ತಿ, ಭಾವನೆ, ತ್ಯಾಗ ಮತ್ತು ಆತ್ಮವಿಶ್ವಾಸದಿಂದ ಈ ಗಿಡವನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳು ಕಾರ್ಯನಿರ್ವಹಿಸುತ್ತವೆ ಎಂಬ ನಂಬಿಕೆ ಇದೆ. ಆಯುರ್ವೇದದಲ್ಲಿಯೂ ಸಹ ಪಾರಿಜಾತದ ಮಹತ್ವವನ್ನು ವಿವರಿಸಲಾಗಿದೆ. ಮನೆಯಂಗಳದಲ್ಲಿ, ತೋಟದಲ್ಲಿ ಅಥವಾ ಹೊಲಗಳಲ್ಲಿ ಕನಿಷ್ಠ ಒಂದು ಪಾರಿಜಾತ ಗಿಡವನ್ನು ಬೆಳೆಸುವುದು ಬಹಳಷ್ಟು ಶುಭವನ್ನು ತರುತ್ತದೆ ಎಂದು ಗುಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 9:44 am, ಮಂಗಳವಾರ, 10 ಫೆಬ್ರವರಿ 26



Source link

Leave a Reply

Your email address will not be published. Required fields are marked *