Video: ಟೊಮೊಟೊ ಕೊಡಲ್ಲ ಎಂದಿದ್ದಕ್ಕೆ ಮನೆಯೊಡತಿಗೆ ಬೆದರಿಕೆ ಹಾಕಿದ ಸಾಕು ಗಿಳಿ

Video: ಟೊಮೊಟೊ ಕೊಡಲ್ಲ ಎಂದಿದ್ದಕ್ಕೆ ಮನೆಯೊಡತಿಗೆ ಬೆದರಿಕೆ ಹಾಕಿದ ಸಾಕು ಗಿಳಿ


ಗಿಳಿ (ಗಿಳಿ) ಬುದ್ದಿವಂತ ಪಕ್ಷಿಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಮನುಷ್ಯರಂತೆ ಮಾತನಾಡಬಲ್ಲದು ಕೂಡ. ಹೀಗಾಗಿ ಎಲ್ಲರೂ ಈ ಗಿಳಿಯನ್ನು ಸಾಕು ಇಷ್ಟ ಪಡುತ್ತಾರೆ. ಆದರೆ ಇಲ್ಲೊಂದು ಸಾಕು ಗಿಳಿಯೂ ಮನೆ ಒಡತಿಗೆ (ಮಾಲೀಕರು) ಬೆದರಿಕೆ ಹಾಕಿದೆ. ಟೊಮೊಟೊ ಕೊಡದಿದ್ದರೆ ಪೊಲೀಸರನ್ನು ಕರೆಯುತ್ತೇನೆ ಎಂದು ಹೆದರಿಸಿದೆ. ಗಿಳಿಯ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

@aalianadim ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಮನೆಯ ಸಾಕು ಗಿಳಿಯದ್ದಾಗಿದೆ. ಪಂಜರದಲ್ಲಿರುವ ಗಿಳಿಯೂ ಮಹಿಳೆಯ ಬಳಿ ಪಕ್ಕದಲ್ಲಿ ಕೇಳುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಮನೆಯೊಡತಿಯೂ ನಿರಾಕರಿಸಿದ್ದಕ್ಕೆ, ಕೋಪಗೊಂಡ ಗಿಳಿ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ನಾನು ಪೊಲೀಸರನ್ನು ಕರೆಯುತ್ತೇನೆ ಎಂದೆಂದೂ ಪೊಲೀಸ್ ಪೋಲೀಸ್ ಎಂದು ಜೋರಾಗಿ ಕೂಗುವುದು ಕಾಣಿಸಿತು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ

ಜನವರಿ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಹದಿನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಗಿಳಿಗಳು ಮಾತನಾಡುವಾಗ ತುಂಬಾ ಮುದ್ದಾಗಿ ಕಾಣುತ್ತವೆ. ಮತ್ತೊಬ್ಬರು ಗಿಳಿಗೂ ಹೆದರುವ ಕಾಲ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮಹಿಳೆಗೆ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:13 pm, ಗುರುವಾರ, 8 ಜನವರಿ 26





Source link

Leave a Reply

Your email address will not be published. Required fields are marked *