Headlines

ಪ್ರವಾಸದ ಆಸೆಯಲ್ಲಿ ಕೆಂಪೇಗೌಡ ಏರ್​​ಪೋರ್ಟ್​​ಗೆ ಬಂದವರು ಅತಂತ್ರ, ಪ್ಲ್ಯಾನ್​​ಗಳೆಲ್ಲ ಉಲ್ಟಾ

ಪ್ರವಾಸದ ಆಸೆಯಲ್ಲಿ ಕೆಂಪೇಗೌಡ ಏರ್​​ಪೋರ್ಟ್​​ಗೆ ಬಂದವರು ಅತಂತ್ರ, ಪ್ಲ್ಯಾನ್​​ಗಳೆಲ್ಲ  ಉಲ್ಟಾ


ಬೆಂಗಳೂರು, (ಡಿಸೆಂಬರ್ 04): ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದು (ಡಿಸೆಂಬರ್ 04) ಸಹ ವಿಮಾನಗಳು ಹಾರಾಟದಲ್ಲಿ ವ್ಯತ್ಯಯ ಮುಂದುವರೆದಿದೆ. ಇದರಿಂದ ಪ್ರಯಾಣಿಕರು ಪರದಾಡಿದ್ದಾರೆ. ಇಂಡಿಗೋ ವಿಮಾನಗಳ ವ್ಯತ್ಯಯದಿಂದ 6 ದಿನದ ಟ್ರಿಪ್ 5 ದಿನಕ್ಕೆ ಮೊಟಕುಗೊಂಡಿದೆ. ಇದರಿಂದ ವಿದೇಶ ಪ್ರವಾಸಕ್ಕೆಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಅತಂತ್ರವಾಗಿದ್ದು, ಏನು ಮಾಡಬೇಕೆಂದು ದಿಕ್ಕುತೋಚದೆ ಪರದಾಡುತ್ತಿದ್ದಾರೆ. ದೆಹಲಿಯಲ್ಲಿ ಇಂಡಿಗೋ ವಿಮಾನ 12 ಗಂಟೆ ವಿಳಂಬವಾಗಿದೆ. ಇದರಿಂದ ಬೆಂಗಳೂರಿನಿಂದ ಶ್ರೀಲಂಕಾಗೆ ತೆರಳುವ ವಿಮಾನ ಮಿಸ್ ಆಗಿದ್ದು. 100ಕ್ಕೂ ಹೆಚ್ಚು ಜನರು ಕಂಗಾಲಾಗಿದ್ದಾರೆ. ಇನ್ನು 6 ದಿನ ಪ್ರವಾಸದ ಪ್ಲ್ಯಾನ್‌ ಮಾಡಿಕೊಂಡು ಜೈಪುರದಿಂದ ಬಂದಿದ್ದ ತಂಡ ಸಹ ಪ್ಲೈಟ್ ಮಿಸ್ ಆದ ಕಾರಣ ಬಸ್ ಮೂಲಕ ವಿವಿಧೆಡೆ ಪ್ರಯಾಣ ಬೆಳೆಸಿದೆ. ಇನ್ನು ಕೆಲ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಲಗೇಜ್ ಹಿಡಿದುಕೊಂಡು ಪರದಾಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *